ಪೋಸ್ಟ್‌ಗಳು

2016 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ
💐ಪ್ರತಿಮಾನಾಟಕದ ಒಂದು ಪುಷ್ಪ💐 *तप:सङ्ग्रामकवचं नियमद्विरदाङ्कुश: । खलीनमिन्द्रियाश्वानां गृह्यतां धर्मसारथि: ।।* _ಲಕ್ಷ್ಮಣ ಎಷ್ಟು ಹೇಳಿದರೂ ಕೇಳದೇ ರಾಮನ ಪಾದಸೇವೆಗಾಗಿ ತಾನೂ ಕಾಡಿಗೆ ಬರುತ್ತೇನೆಂದು ಸೀತೆಯ ಬಳಿಯೂ ನಿವೇದಿಸಿಕೊಳ್ಳುತ್ತಾನೆ. ಸೀತೆ ಅವನ ಆಗಮನಕ್ಕೆ ಒಪ್ಪಿಗೆ ನೀಡಿದಾಗ ಇಬ್ಬರ ಮನದಿಚ್ಛೆಯಂತೆ ರಾಮನೂ ಸಮ್ಮತಿಸಿ ಅವನಿಗೆ ನಾರುಬಟ್ಟೆ ಕೊಡುತ್ತಾ ನುಡಿಯುವ ಮಾತು. ಈ ವಲ್ಕಲವು ತಪಸ್ಸೆಂಬ ಯುದ್ಧದಲ್ಲಿ ಶೂರನು ಧರಿಸಬೇಕಾದ ಕವಚ. ತೊಡು ಇದನ್ನು, ಅನಂತರ ವನದಲ್ಲಿ ತಪಸ್ಸಿಗೆ ತೊಡಗುವಿಯಂತೆ. ಈ ಯುದ್ಧದಲ್ಲಿ ಆನೆಯನ್ನು ವಶಪಡಿಸಿಕೊಳ್ಳಲು ಮುಖ್ಯವಾಗಿ ಬೇಕಾದ ಅಂಕುಶ ಯಾವುದೆಂದರೆ ಅದು ಮನಸ್ಸಿನ ಸಂಯಮ. ಅದನ್ನು ರೂಢಿಸಿಕೊ. ಇಂದ್ರಿಯಗಳೆಂಬ ಕುದುರೆಗಳನ್ನು ನಿಯಂತ್ರಿಸಲು ಬಳಸುವ ಹಗ್ಗ ಅದೂ ಸಂಯಮವೇ. ಇಂದ್ರಿಯಗಳ ನಿಗ್ರಹಕ್ಕೆ ಅಥವಾ ಕುದುರೆಗಳಂತೆ ಎಲ್ಲೆಲ್ಲೋ ಓಡುವ ಅವುಗಳಿಗೆ ಸಂಯಮವೆಂಬ ಹಗ್ಗದ ನಿಯಂತ್ರಣ ಬೇಕು. ಧರ್ಮವೆಂಬ ರಥದ ಸಾರಥಿಯಾಗಿ ಈ ಸಂಯಮದ ಪ್ರತಿನಿಧಿಯಾಗಿರುವ ಈ ನಾರುಬಟ್ಟೆಗಳನ್ನು ತೆಗೆದುಕೊ. ಇಲ್ಲಿ ಸಂಗ್ರಾಮದ ಉಲ್ಲೇಖ ಯುದ್ಧದಂತೆ ಇಲ್ಲೂ ಏಕಾಗ್ರತೆ ತಾಳ್ಮೆ ಬೇಕಾಗುತ್ತದೆ ಎಂಬ ಸೂಚನೆ ಕೊಡಲು. ಇಲ್ಲದಿದ್ದರೆ ತಪಸ್ಸು ಕೆಟ್ಟು ಹೋಗುವುದು. ನಿಯಮಗಳು ಆನೆಗಳಂತೆ ಸ್ವಚ್ಛಂದತೆಯನ್ನು ಪಡೆದು ನಮಗೆ ಬೇಕಾದ ಹಾಗೇ ಮಾಡಿಕೊಳ್ಳದಿರಲು ಸಂಯಮವೆಂಬ ಅಂಕುಶ. ಇಂದ್ರಿಯಗಳನ್ನು ಅಶ್ವಕ್ಕೆ ಹೋಲಿಸಿರುವ...
📃ವೇದ- ಧರ್ಮ ಭಾಗ-೫ ವೇದದ ದೇವತೆಗಳು. ಮುಂದುವರಿದ ಭಾಗ..... ೭._ಅಶ್ವಿನೀ ದೇವತೆಗಳು= ಹೆಸರೇ ಸೂಚಿಸುವಂತೆ ಅಶ್ವೀ ಎಂದರೆ ಹೆಣ್ಣು ಕುದುರೆಯಿಂದ ಜನಿಸಿದ ಅವಳಿ ದೇವತೆಗಳು. ಸೂರ್ಯನು ತ್ವಷ್ಟೃವಿನ ಮಗಳಾದ ಸಂಜ್ಞೆಯು ಅಶ್ವರೂಪದಲ್ಲಿರುವಾಗ ಸೇರಿ ಜನಿಸಿದ ವೀರರು. ಸ್ವರ್ಗ ಇವರ ಸ್ಥಾನ. ಋಗ್ವೇದದ ಸುಮಾರು ೫೦ ಸೂಕ್ತಗಳಲ್ಲಿ ಇವರ ವರ್ಣನೆ ಕಂಡುಬರುತ್ತದೆ. ಇವರ ಸ್ತುತಿ, ವರ್ಣನೆ ಎಲ್ಲವೂ ಒಟ್ಟಿಗೇ ಕಂಡುಬರುತ್ತದೆ. ಆಹುತಿ ನೀಡುವುದು ಕೂಡ ಇಬ್ಬರಿಗೂ ಸೇರಿ ಒಂದೇ. ಇವರು ಭೂಮಿ ಹಾಗೂ ಅಂತರಿಕ್ಷಗಳನ್ನು ಪ್ರತಿನಿಧಿಸುವರೆಂದೂ, ಹಗಲು ರಾತ್ರಿಗಳನ್ನು ಪ್ರತಿನಿಧಿಸುವರೆಂದೂ, ಸೂರ್ಯ ಚಂದ್ರರನ್ನು ಪ್ರತಿನಿಧಿಸುವರೆಂದೂ ವಿಧ ವಿಧವಾಗಿ ವರ್ಣಿಸಿದೆ ವೇದ. ಒಟ್ಟಾರೆ ಎರಡು ಶಕ್ತಿಗಳ ಪ್ರತಿನಿಧಿಗಳು ಇವರು. ವೇದದಲ್ಲಿ ಉಳಿದ ದೇವತೆಗಳೊಡನೆಯೂ ಇವರ ಸ್ತುತಿ ಇದೆ. ಅವಿಭಕ್ತ ರೂಪದಲ್ಲೇ ಅನುಗ್ರಹಿಸುವ ದೇವತೆಗಳು. ನಿತ್ಯ ಯುವಕರಿವರು. ಇಬ್ಬರೂ ದೇದೀಪ್ಯಮಾನರಾಗಿ ಬೆಳಗುತ್ತಾ ಕಮಲದ ಹಾರವನ್ನು ಧರಿಸಿ ವೇಗದಿಂದ ಸಂಚರಿಸುತ್ತಾರೆ. ದಸ್ರ , ನಾಸತ್ಯಾ, ಹಿರಣ್ಯವರ್ತನ್, ಸುದಾನೂ, ಮಧುಯುವಾ, ಮಧವಾನಾ, ತುವಿಷ್ಯಾ, ಅಧ್ರಿಗೂ ಎಂದೆಲ್ಲಾ ನಾನಾ ಹೆಸರುಗಳಿಂದ ಸ್ತುತಿಸಿವೆ ವೇದಗಳು. ಹೆಸರಿನಂತೆ ಜೇನಿನ ಕೊಡವನ್ನು ಧರಿಸಿದ್ದಾರೆ. ಇವರ ರಥ ಅಂಕುಶ ಎಲ್ಲ ಮಧುಮಯವೇ ಆಗಿದೆ.      ಉಷಾ ಮತ್ತು ಸೂರ್ಯರ ಮಕ್ಕಳೆಂದೂ ಕೆಲವೆಡೆ ಉಲ್ಲೇಖಿಸಲಾಗಿದೆ. ಇ...
🌹ಶಾಕುಂತಲದ ಒಂದು ಕುಸುಮ🌹 *इदमुपनतमेवं रूपमक्लिष्टकान्ति प्रथमपरिगृहीतं स्यान्न वेति व्यवस्यन् । भ्रमर इव विभाते कुन्दमन्तस्तुषारं न च खलु परिभोक्तुं नैव शक्नोमि हातुम् ।।* _ಪತಿಗಾಗಿ ಬಂದ ಶಕುಂತಲೆಯನ್ನು ದುಷ್ಯಂತ ಪತ್ನಿ ಎಂದು ಒಪ್ಪದಿದ್ದಾಗ ಗೌತಮಿಯು ಒಂದು ಕ್ಷಣ ಮುಖದ ಪರದೆಯನ್ನು ಸರಿಸುತ್ತೇನೆ, ಆಗಲಾರದೂ ರಾಜ ಗುರುತು ಹಿಡಿಯಬಹುದು ಎಂದು ಅವಳ ಪರದೆಯನ್ನು ಸರಿಸುತ್ತಾಳೆ. ಆಗ ಅವಳ ಮನಮೋಹಕ ಸೌಂದರ್ಯವನ್ನು ನೋಡಿದ ದುಷ್ಯಂತನ ಮಾತು. ನಿಷ್ಕಲ್ಮಶವಾದ ಕಾಂತಿಯಿಂದ ಕೂಡಿರುವ ತಾನೇ ತಾನಾಗಿ ನನಗೆ ಬಂದೊದಗಿರುವ ಈ ರೂಪಸಿಯನ್ನು ಹಿಂದೆ ಸ್ವೀಕರಿಸಿದ್ದೆನೊ ಇಲ್ಲವೊ ಎಂಬುದನ್ನು ನಿರ್ಧರಿಸಲಾಗದೆ , ಬೆಳಗಿನ ಜಾವದ ಮಂಜು ತುಂಬಿದ ಮಲ್ಲಿಗೆ ಹೂವನ್ನು ಕಂಡ ದುಂಬಿಯಂತೆ ಕಷ್ಟದ ಪರಿಸ್ಥಿತಿ ನನಗೂ ಆಗುತ್ತಿದೆ. ದುಂಬಿ ಹೂವನ್ನು ಕಂಡ ಕ್ಷಣವೇ ಮಕರಂದ ಹೀರಲು ಧಾವಿಸುತ್ತದೆ. ಆದರೆ ಬೆಳಿಗ್ಗೆಯ ಸಮಯದಲ್ಲಿ ಮಲ್ಲಿಗೆ ಹೂವಿನ ಮೇಲೆ ಮಂಜು ಬಿದ್ದು ಮಕರಂದ ಹೀರಲು ಅಡ್ಡಿಯಾಗುವುದು. ಎದುರಿಗೆ ಸುಂದರ ಪುಷ್ಪ ಇದ್ದರೂ ಅನುಭವಿಸಲಾರದ ಸ್ಥಿತಿ ಆ ದುಂಬಿಗೆ. ಪ್ರಕೃತ ರಾಜನ ಸ್ಥಿತಿಯೂ ಹಾಗೇ ಆಗಿದೆ. ಬಯಸದೆಯೇ ಅಪರೂಪದ ರೂಪಸಿ ಕಣ್ಣೆದುರು ನಿಂತಿರುವಳು. ತಾನೇ ಅವಳ ಪತಿ ಎಂದೂ ನುಡಿಯುತ್ತಿದ್ದಾಳೆ. ಆದರೆ ಮಂಜಿನಂತೆ ತಡೆಯಾಗಿರುವುದು ಅವಳನ್ನು ವರಿಸಿದ್ದೆನೊ ಇಲ್ಲವೋ ಎಂಬ ಮನಸ್ಥಿತಿ. ಮನವು ಅವಳ ಪರಿಣಯವನ್ನು ನಿಶ್ಚಯಿಸ...
💐ಪ್ರತಿಮಾನಾಟಕದ ಒಂದು ಸುಮ💐 *निर्योगाद् भूषणान्माल्यात् सर्वेभ्योर्धं प्रदाय मे । चिरमेकाकिनाबद्धं चीरे खल्वसि मत्सरी ।।* _ರಾಮ ಸೀತೆಯರು ವನಕ್ಕೆ ನಾರು ಮಡಿ ಉಟ್ಟು ಹೊರಟಿದ್ದಾರೆ.ಲಕ್ಷ್ಮಣನಿಗೆ ರಾಮನು ನಿರಾಕರಿಸಿದ್ದಾನೆ.ಆಗ ಅವನಾಡುವ ನುಡಿ- ಹೊಸ ವಸ್ತ್ರಗಳನ್ನು ಧರಿಸುವ ಸಂದರ್ಭದಲ್ಲಿ ನನಗೆ ನೀಡಿಯೇ ನೀನು ಧರಿಸುತ್ತಿದ್ದಿ. ಆಭರಣಗಳನ್ನು ಧರಿಸುವ ಸಂದರ್ಭದಲ್ಲೂ ನನಗೂ ಕೆಲವನ್ನು ನೀಡಿ ಧರಿಸುತ್ತಿದ್ದಿ.ಪುಷ್ಪ ಮಾಲೆಗಳನ್ನು ಹಾಕಿಕೊಳ್ಳುವಾಗಲೂ ಲಕ್ಷ್ಮಣನಿಗೆ ಕೊಟ್ಟೇ ಹಾಕಿಕೊಳ್ಳುತ್ತಿದ್ದಿ. ಆದರೆ ಈಗ ಅತ್ಯಂತ ಕಡಿಮೆ ಬೆಲೆಯ ಈ ನಾರುಮಡಿಯನ್ನುಡುವ ಸಂದರ್ಭದಲ್ಲಿ ನಿನಗೆ ನನ್ನ ನೆನಪಾಗಲಿಲ್ಲವೇ? ಈ ಸಾಮಾನ್ಯ ವಸ್ತುವಿನಲ್ಲಿ ನಿನಗೆ ಮತ್ಸರ ಭಾವ ಬಂದುಬಿಟ್ಟಿತಲ್ಲ ಇದು ನಿಜಕ್ಕೂ ಆಶ್ಚರ್ಯ. ಒಬ್ಬನೇ ಉಟ್ಟುಕೊಳ್ಳುತ್ತಿರುವುದು ನ್ಯಾಯವೇ? ಅಂತಹ ಬೆಲೆಬಾಳುವ ಬಟ್ಟೆಗಳನ್ನು, ಆಭರಣಗಳನ್ನು, ಹಾರಗಳನ್ನು ಧರಿಸುವ ಸಂದರ್ಭದಲ್ಲಿ ಎಂದೆಂದಿಗೂ ನೆನಪಾಗುತ್ತಿದ್ದ, ಅವನೊಡನೆ ಹಂಚಿಕೊಳ್ಳುತ್ತಿದ್ದ ನೀನು ಈ ತುಂಬಾ ಕಡಿಮೆ ಬೆಲೆಯ ನಾರು ಬಟ್ಟೆಯನ್ನು ಧರಿಸುವಾಗ ನನಗೆಂದು ಎತ್ತಿಟ್ಟಲಿಲ್ಲವೇ? ಅಥವಾ ಈ ವಸ್ತುವಿನಲ್ಲಿ ನಿನಗೆ ಮತ್ಸರವೇ? ನನಗೆ ತಿಳಿಯುತ್ತಿಲ್ಲ. ಇಲ್ಲಿ ರಾಮ - ಲಕ್ಷ್ಮಣರ ಗೆಳೆತನ ಎಷ್ಟು ಹೃದ್ಯವಾಗಿತ್ತು ಎನ್ನುವುದನ್ನು ಗಮನಿಸಬಹುದು. ರಾಮ ತನ್ನ ತಮ್ಮನಿಗೆ ನೀಡದೇ ಯಾವ ಸುಖವನ್ನೂ ಅನುಭವಿಸುತ್ತಿರಲಿಲ್...
🌹ಶಾಕುಂತಲದ ಸುಂದರ ಪುಷ್ಪ🌹 *सतीमपि ज्ञातिकुलैकसंश्रयां जनोन्यथा भर्तृमतीं विशङ्कते । अत: समीपे परिणेतुरिष्यते प्रियाsप्रिया वीा प्रमदा स्वबन्धुभि: ।।* _ಶಾಂರ್ಗರವನು ದುಷ್ಯಂತನ ನಡೆಯನ್ನು ಆಕ್ಷೇಪಿಸುತ್ತಿದ್ದಾನೆ. ಪತ್ನಿಯ ವಾಸ ಎಲ್ಲೆಂದು ಲೌಕಿಕರಾದ ನಿಮಗೆ ತಿಳಿದಿಲ್ಲವೇನು? ಅದನ್ನು ನಾವು ಹೇಳಿಕೊಡಬೇಕೇ ನಿಮಗೆ? ಗಂಡನಿದ್ದವಳು ಅಥವಾ ವಿವಾಹಿತ ಮಹಿಳೆ ತವರು ಮನೆಯಲ್ಲಿಯೇ ಬಹಳ ದಿನಗಳ ಕಾಲ ಉಳಿದರೆ ಜನರು ಅವಳ ವಿಷಯದಲ್ಲಿ ಕೆಟ್ಟದ್ದನ್ನೇ ಅಥವಾ ಬೇರೆ ರೀತಿಯಲ್ಲಿಯೇ ಯೋಚಿಸುತ್ತಾರೆ. ಹಾಗಾಗಿ ಗಂಡನಿಗೆ ಅಪ್ರಿಯಳಾದರೂ ಅವಳ ಬಂಧುಗಳು ತಮ್ಮ ಹುಡುಗಿ ಮದುವೆಯಾದವನ ಹತ್ತಿರವೇ ಇರಬೇಕೆಂದು ಅಪೇಕ್ಷಿಸುತ್ತಾರೆ. ಪತಿ ಬದುಕಿರುವಾಗಲೇ ಪತ್ನಿ ತವರು ಮನೆಯಲ್ಲಿಯೇ ಉಳಿದರೆ ಅದು ಜನರ ನಾನಾ ವಿಧದ ಸಂಶಯಗಳಿಗೆ ಕಾರಣವಾಗುತ್ತದೆ. ಅವರ ನಡುವೆ ಸರಿಯಿಲ್ಲವೇನೋ, ಅಥವಾ ಇವಳಿಗೋ/ ಅವನಿಗೋ ಬೇರೆ ಸಂಬಂಧಗಳಿವೆಯೆಂದೋ , ಸ್ವೈರಿಣಿ ಎಂದೋ ಹೀಗೆಲ್ಲ ಶಂಕಿಸುತ್ತಾರೆ. ಪತಿಯ ಮನೆಯಲ್ಲಿಲ್ಲದ ಕ್ಷಣವೇ ಜನರ ಬಾಯಿಗೆ ಅಂತಹ ಮಹಿಳೆ ಆಹಾರವಾಗುವಳು. ಹಾಗಾಗಿ ಗಂಡ ಅವಳನ್ನು ಇಷ್ಟಪಡುತ್ತಿರಲಿ ಇಲ್ಲದಿರಲಿ ಮದುವೆಯಾದ ಕಾರಣ ಅವನ ಮನೆಯಲ್ಲೇ ಅವಳಿರಬೇಕು.ಇದನ್ನೇ ಅವಳ ಬಂಧುಗಳು  ಬಯಸುವರು.ಪ್ರಕೃತ ನೀನು ವನದಲ್ಲಿ ಇವಳನ್ನು ವರಿಸಿದ್ದಿ. ಇನ್ನು ಈ ಶಕುಂತಲೆ ನಿನ್ನ ಬಳಿ ಇರಬೇಕಾದವಳು ಹೊರತು ಅಪ್ಪನ ಮನೆಯಲ್ಲಿ ಅಲ್ಲ. ಹಾಗಾಗಿ ನಿನಗೆ...
💐ಪ್ರತಿಮಾನಾಟಕದ ಒಂದು ಸುಮ💐 *अनुचरति शशाङ्कं राहुदोषेपि तारा पतति च वनवृक्षे याति भूमिं लता च । त्यजति न च करेणु: पङ्कलग्नं गजेन्द्रं व्रजतु चरतु धर्मं भर्तृनाथा हि नार्य: ।।* _ವನವಾಸ ನಿಶ್ಚಿತವಾದ ಮೇಲೆ ರಾಮನು ತಾನು ಹೊರಡಲು ಅನುವಾಗಿ ಸೀತೆಗೆ ಇಲ್ಲೇ ಅತ್ತೆ ಮಾವಂದಿರೊಡನೆ ಇರುವಂತೆ ಹೇಳುತ್ತಾನೆ. ಅದಕ್ಕವಳು ಒಪ್ಪದಿದ್ದಾಗ ಲಕ್ಷ್ಮಣ ನೀನಾದರೂ ಕಾಡಿನ ಬಗ್ಗೆ ಅತ್ತಿಗೆಗೆ ತಿಳಿಹೇಳು ಎನ್ನುತ್ತಾನೆ ರಾಮ. ಆಗ ಲಕ್ಮ್ಷಣ ಸೀತೆಯ ಅಭಿಪ್ರಾಯವನ್ನೇ ತಾನೂ ಸಮರ್ಥಿಸುತ್ತಾನೆ. ಪತಿಯನ್ನು ಹಿಂಬಾಲಿಸುವ ಶುಭ ಕಾರ್ಯದಲ್ಲಿ ತೊಡಗುತ್ತಿರುವ ಇವಳನ್ನು ಯಾಕೆ ನಾನು ತಡೆಯಲಿ? ಲೋಕದ ಸ್ಥಿತಿ ಹೀಗಿದೆ. ಚಂದ್ರನ ಮಡದಿ ತಾರೆ ತನ್ನ ಪತಿ ರಾಹುವಿನಿಂದ ನುಂಗಲ್ಪಡುತ್ತಿದ್ದರೂ ಅವನನ್ನೇ ಹಿಂಬಾಲಿಸುತ್ತಾಳೆ. ಮರವೊಂದು ಭುವಿಗೆ ಬಿದ್ದಾಗ ಜೊತೆಗಾತಿ ಬಳ್ಳಿಯೂ ಅವನೊಡನೆ ತಾನೂ ನೆಲವನ್ನು ಆಶ್ರಯಿಸುವುದು. ಮರವನ್ನು ಬಿಟ್ಟು ಹೋಗದು ವೃಕ್ಷ. ಅಂತೆಯೇ ಹೆಣ್ಣು ಆನೆಯು ಕೆಸರಿನಲ್ಲಿ ಮುಳುಗುತ್ತಿರುವ ತನ್ನ ಪತಿಯನ್ನು ಬಿಟ್ಟು ಎಂದಿಗೂ ಮುಂದುವರಿಯಲಾರದು. ಹೀಗೆ ದೇವತೆಗಳಲ್ಲಿ, ಮರಗಿಡಗಳಲ್ಲಿ, ಪ್ರಾಣಿಗಳಲ್ಲೇ ಇಂತಹ ಅನ್ಯೋನ್ಯತೆ ಕಂಡುಬರುತ್ತಿರುವಾಗ ಭಾವನೆಗಳ ಜೊತೆಗೆ ಬದುಕು ಸಾಗಿಸುವ ಮನುಷ್ಯ ಮಾತ್ರಳಾದ ಈ ನಿನ್ನ ಸತಿ ನಿನ್ನನ್ನು ಹಿಂಬಾಲಿಸಲಿ, ಧರ್ಮದ ಕಾರ್ಯಗಳನ್ನು ಜೊತೆಗೆ ನಡೆಸಲಿ. ಎಷ್ಟೆಂದರೂ ಪತ್ನಿಯರು ಪತಿಯನ್ನೇ...
🌹ಶಾಕುಂತಲದ ಒಂದು ಸುಮ🌹 *भवन्ति नम्रास्तरव: फलागमै: नवाम्बुभिर्दूरविलम्बिनो घना: । अनुद्धता: सत्पुरुषा: समृद्धभि: स्वभाव एवैष परोपकारिणाम् ।।* _ಶಾಂರ್ಗರವನು ದುಷ್ಯಂತನ ಕುರಿತು ನುಡಿಯುವ ಸುಂದರ ಮಾತು. ರಾಜನು ನಿಮಗಾಗಿ ನಿಂತು ಕಾಯುತ್ತಿದ್ದಾನೆ ಎಂದು ಪ್ರತೀಹಾರಿ ಹೇಳುವಾಗ ಈ ಮಾತು ನುಡಿಯುವನು. ಮರಗಳು ತಮ್ಮಲ್ಲಿ ಹಣ್ಣು ತುಂಬಿದಾಗ ಅದರ ಭಾರಕ್ಕೆ ಬಾಗುತ್ತವೆ. ತಾವು ಸಮೃದ್ಧವಾಗಿ ಇದ್ದಾಗಲೂ ಎದೆಯುಬ್ಬಿಸದೇ ತಗ್ಗಿ ನಡೆಯುತ್ತವೆ. ಕಪ್ಪು ಮೋಡಗಳು ನೀರು ತುಂಬಿಕೊಂಡಾಗ ಭೂಮಿಗೆ ಮೊದಲಿಗಿಂತ ಸಮೀಪ ಬರುತ್ತವೆ. ತಾವು ತುಂಬಿದವರೆಂದು ಮೇಲೆ ತೇಲುವುದಿಲ್ಲ. ಹೀಗೆಯೇ ಸತ್ಪುರುಷರು ಸಮೃದ್ಧಿಯಿಂದ ನಿರಹಂಕಾರಿಗಳಾಗುವರು. ತಮ್ಮಲ್ಲಿ ದುಡ್ಡು ಇದೆ, ಜ್ಞಾನ ಇದೆ, ಅಧಿಕಾರ ಇದೆ ಎಂದು ಅಹಂಕಾರ ಪಡದೆ ವಿನಯ ತೋರುತ್ತಾರೆ. ಇದು ಲೋಕದಲ್ಲಿ ಪರೋಪಕಾರಿಗಳ ಸ್ವಭಾವ. ಮರ ತಾನು ಸಂಪಾದಿಸಿದ ಹೂವು ಹಣ್ಣುಗಳನ್ನೆಲ್ಲವನ್ನೂ ದಾನ ಮಾಡಲು ತನ್ನ ದೇಹವನ್ನೇ ತಗ್ಗಿಸಿ ಸ್ವಾಗತಿಸುತ್ತದೆ. ಮೋಡ ದೇಹ ತುಂಬಿದ ಮೇಲೆ ಜನರ ಉಪಯೋಗಕ್ಕೆ ಮಳೆ ಸುರಿಸಲು ಮತ್ತಷ್ಟು ಕೆಳಗಿಳಿದು ಬರುತ್ತದೆ. ಸಜ್ಜನರು ತಮಗೆ ಒದಗಿದ ವಿವಿಧ ರೀತಿಯ ಸಮೃದ್ಧಿಯ ಸಮಯದಲ್ಲಿ ಇನ್ನಷ್ಟು ವಿನೀತರಾಗುವರು ಹೊರತು ಅಹಂಕಾರಿಗಳಲ್ಲ. ರಾಜನ ಸ್ವಭಾವವೂ ಉತ್ತಮವಾದ್ದರಿಂದ ಪ್ರಕೃತ ಅವನ ನಡತೆ ಸಹಜವಾಗಿಯೇ ವಿನಯದಿಂದ ಕೂಡಿದೆ ಎಂಬ ಭಾವ. ನಾವೂ ಸಮೃದ್ಧಿಯಲ್ಲಿ ಅಹಂಕಾರ ಪಡದ...
📃ವೇದ-ಧರ್ಮ ಭಾಗ-೪ ೫. ರುದ್ರ= *ರುಜಂ ದ್ರಾವಯತಿ* ರೋಗಗಳನ್ನು ಪರಿಹರಿಸುವವನು, *ರೋದಯತಿ ಇತಿ* ಹುಟ್ಟುವಾಗಲೇ ಅಳುತ್ತಿದ್ದವನನ್ನು ಬ್ರಹ್ಮ ವರಗಳನ್ನು ಕೊಟ್ಟು ಸಮಾಧಾನ ಮಾಡಿದ ಕಥೆ ಪುರಾಣಗಳಲ್ಲಿರುವಂತೆ, ಅಥವಾ ರೋಗಗಳ ದುಷ್ಟಶಕ್ತಿಗಳ ನಿಯಂತ್ರಕ ಎಂಬೆಲ್ಲಾ ಅರ್ಥಗಳು ಇವೆ. ಬ್ರಹ್ಮನ ಕೋಪದಿಂದ ಸೃಷ್ಟಿಯ ಕಾಲದಲ್ಲಿ ಹುಬ್ಬುಗಳ ಮಧ್ಯದಿಂದ ಜನಿಸಿದ ದೇವತೆ. ಅಂತರಿಕ್ಷ ಇವನ ಸ್ಥಾನ. ಋಗ್ವೇದದ ೩ ಸೂಕ್ತಗಳಲ್ಲಿ ಇವನನ್ನು ಸಂಪೂರ್ಣವಾಗಿ, ಇನ್ನು ಕೆಲವೆಡೆ ಬೇರೆ ದೇವತೆಗಳೊಡನೆ ಸ್ತುತಿಸಿದ್ದಾರೆ.  ಇವನು ಬೂದುಬಣ್ಣದ ದೇವತೆ. ಹೀಗಾಗಿಯೇ *ಬಭ್ರು* ಹೆಸರಿನಿಂದ ಕರೆದಿದೆ ವೇದ. ಇಂದ್ರನಿಗೂ ರುದ್ರನಿಗೂ ತುಟಿಗಳ ಸೌಂದರ್ಯದ ಕಾರಣ *ಸುಶಿಪ್ರ* ಎಂಬ ಹೆಸರೂ ಕಂಡುಬರುವುದು. ಶುಕ್ಲ ಯಜುರ್ವೇದವು ರುದ್ರನನ್ನು ರಕ್ತವರ್ಣದಿಂದ ಪ್ರಕಾಶಿಸುವನೆಂದೂ , ಬೇರೆ ಬೇರೆ ರೂಪಗಳನ್ನು ಧರಿಸಿ ಸೂರ್ಯನಂತೆ ಶೋಭಿಸುತ್ತಾನೆಂದೂ ವರ್ಣಿಸಿದೆ. ಚರ್ಮವೇ ಇವನ ಅಂಬರ. ಪರ್ವತವೇ ಮನೆ. ಭಸ್ಮವೇ ಲೇಪನ. ಸದಾ ಧ್ಯಾನವೇ ಕಾರ್ಯ. *ಧನುರಾತನೋಮಿ ಬ್ರಹ್ಮದ್ವಿಷೇ ಶರವೇ ಹಂತ ವಾ ಉ* ಲಕ್ಷ್ಮಿಯು ನಾಸ್ತಿಕರ ಅಥವಾ ಅಧರ್ಮಿಗಳ  ಸಂಹಾರಕ್ಕೆಂದು ರುದ್ರನಿಗೆ ಧನುಸ್ಸನ್ನು ನೀಡಿದ್ದಾಳೆ. ರುದ್ರನು ಕೆಲವೊಮ್ಮೆ ಚಕ್ರ, ವಜ್ರ ,ಕತ್ತಿ ಹೀಗೆ ವಿವಿಧ ಆಯುಧ ಧರಿಸಿರುವ ವರ್ಣನೆ ಇದೆ. ರುದ್ರನ ಖಡ್ಗ ಮಿಂಚಿನಿಂದ ತಯಾರಿಸಿದ್ದು. ಗಾಳಿಗಿಂತಲೂ ವೇಗದ ಚಲನೆ ಇವನ ಖಡ್ಗಕ್ಕೆ. ರುದ್ರನ...
💐ಪ್ರತಿಮಾನಾಟಕದ ಒಂದು ಕುಸುಮ💐 *मङ्गलार्थेsनया दत्तान् वल्कलांस्तावदानय । करोम्यन्यैर्नृपैर्धर्मं नैवाप्तं नोपपादितम् ।।* _ಹದಿನಾಲ್ಕು ವರ್ಷ ವನವಾಸ ಮಾಡುವ ಬಗ್ಗೆ ನನಗೆ ದು:ಖವಾಗುತ್ತಿರುವುದು, ರಾಜ್ಯ ನಿನ್ನಿಂದ ತಪ್ಪಿಹೋಗುತ್ತದೆ ಎಂದಲ್ಲ , ನಿಷ್ಕಾರಣವಾಗಿ ನಿನಗೆ ಯಾಕೆ ಈ ಶಿಕ್ಷೆ ಎಂದು ಲಕ್ಷ್ಮಣ ಮರುಗಿದಾಗ ರಾಮನ ಸಹಜ ಮಾತು. ಮೈಥಿಲಿ, ಲಕ್ಷ್ಮಣ ಮೂರ್ಛೆ ಹೊಂದಿದ. ಇರಲಿ ಪಿತನ ಆಜ್ಞೆ ನನ್ನ ಕರ್ತವ್ಯ. ತಂದೆಯ ಆಜ್ಞೆಯ ಪಾಲನೆ ಎಂಬ ಮಂಗಳ ಕಾರ್ಯಕ್ಕಾಗಿ ಈ ನಿನ್ನ ಸಖಿ ಕೊಟ್ಟ ನಾರುಬಟ್ಟೆಗಳನ್ನು ಬೇಗ ತಾ. ( ಅಂಕದ ಆದಿಯಲ್ಲಿ ಸಖಿ ಸೀತೆಯ ಒತ್ತಾಯದಂತೆ ತಮಾಷೆಗಾಗಿ ನಾರು ಬಟ್ಟೆ ತಂದಿರುತ್ತಾಳೆ) ಇದು ನನಗೆ ಅತ್ಯಂತ ಮಂಗಳ ಕಾರ್ಯ.ಏಕೆಂದರೆ ಬೇರೆ ನೃಪರು ಈವರೆಗೆ ಮಾಡದಿರುವ ಅಥವಾ ಅವರಿಗೆ ಒದಗಿಬರದ ಬಾಲ್ಯದಲ್ಲೇ ವನವಾಸವೆಂಬ ಉತ್ತಮ ಕೆಲಸ ನನ್ನ ಪಾಲಿಗೆ ಒದಗಿದೆ.ಇದೊಂದು ಸದವಕಾಶ. ನಮ್ಮ ವಂಶದ ನೃಪರೆಲ್ಲರೂ ವಾರ್ಧಕ್ಯದಲ್ಲಿ ಮಾತ್ರ ವನವಾಸ ಕೈಗೊಳ್ಳುತ್ತಿದ್ದರು.ನನಗಾದರೋ ಈ ತರುಣ ವಯಸ್ಸಿನಲ್ಲಿಯೇ ಅದು ಒದಗಿದೆ.ಎಂದಾದರೂ ಮಾಡಲೇಬೇಕಾದ ಕಾರ್ಯ ಇಷ್ಟು ಬೇಗ ಒದಗಿಬಂದಿರುವುದು ನನ್ನ ಪಾಲಿನ ಅದೃಷ್ಟ.ಹಾಗಾಗಿ ತಡಮಾಡದೆ ಕೇವಲ ಹದಿನಾಲ್ಕು ವರ್ಷಗಳಷ್ಟು ಕಾಲದ ಈ ಉತ್ತಮ ಕಾರ್ಯವನ್ನು ಪೂರೈಸಿಬಿಡೋಣ. ಎಂತಹ ಧನಾತ್ಮಕ ಮಾತು. ಕಷ್ಟಗಳು ಬಂದಾಗಲೆಲ್ಲ ನಮ್ಮ ಚಿಂತನೆ ಈ ದಿಕ್ಕಿನಲ್ಲಿ ಸಾಗಿದರೆ ನಮ್ಮ ಪಾಲಿನ ಸುದಿನಗಳೇ ಎಲ...
🌹ಶಾಕುಂತಲದ ಒಂದು ಕುಸುಮ🌹 *अभ्यक्तमिव स्नात: शुचिरशुचिमिव प्रबुद्ध इव सु्प्तम् । बद्धमिव स्वैरगतिर्जनमिह सुखसङ्गिनमवैमि ।।* _ಕಣ್ವರ ಶಿಷ್ಯನಾದ ಶಾರದ್ವತನ ಮಾತು. ಅವರ ಸಂದೇಶವನ್ನು ರಾಜನಿಗೆ ನಿವೇದಿಸಲು ನಗರಕ್ಕೆ ಬಂದಿದ್ದಾನೆ.ನಗರದ ಧಾವಂತದ ಬದುಕನ್ನು ನೋಡಿ ಅವನಿಗನ್ನಿಸಿದ ಭಾವವೇ ಈ ಶ್ಲೋಕ. ನಗರ ಪ್ರವೇಶ ಮಾಡಿದಾಗಿನಿಂದ ನನಗೆ ವಿಚಿತ್ರವೆನಿಸುತ್ತಿದೆ. ಸುಖಲೋಲುಪರಾದ ಈ ಜನರನ್ನು ಕಂಡು ಸ್ನಾನ ಮಾಡಿದವನು  ಎಣ್ಣೆ ಮೆತ್ತಿಕೊಂಡು ಅಭ್ಯಂಗಕ್ಕೆ ಸಿದ್ಧನಾಗಿರುವವನನ್ನು ಕಂಡಂತೆ, ಪರಿಶುದ್ಧನಾದವನು ಅಶುಚಿಯಾದವನ ಕಂಡಂತೆ, ಎಚ್ಚೆತ್ತವನು ಮಲಗಿದವನನ್ನು ಕಂಡಂತೆ, ಸ್ವತಂತ್ರವಾಗಿರುವವನು ಬಂಧನದಲ್ಲಿದ್ದವನನ್ನು ಕಂಡಂತೆ ಅನುಭವ ಎನಗಾಗುತ್ತಿದೆ. ಹಿಂದೆ ಶಾರ್ಙರವನಿಗೂ ನಗರವು ಹೊತ್ತಿ ಉರಿಯುತ್ತಿರುವಂತೆ ತೋರಿತ್ತು.ಈಗ ಶಾರದ್ವತನಿಗೂ ಅದೇ ಭಾವ.ನಗರದ ಧಾವಂತದ ಬದುಕಲ್ಲಿ ಸ್ನಾನ ಪಾನ ಭೋಜನಗಳಿಗೆ ನಿಯಮಿತ ಸಮಯ ಹೊಂದಿಸಿಕೊಳ್ಳುವುದು ಬಹಳ ಕಷ್ಟ. ಒಬ್ಬ ಸ್ನಾನ ಮಾಡಿ ಸಿದ್ಧನಾಗುವ ಸಮಯದಲ್ಲಿ ಇನ್ನೊಬ್ಬ ಕೆಲಸ ಮುಗಿಸಿ ಬಂದು ಸ್ನಾನಕ್ಕೆಂದು ಹೊರಡುತ್ತಿರುತ್ತಾನೆ.ಅಥವಾ ತಾನು ನಿದ್ರೆ ಮಾಡಲು ತಯಾರಾಗುತ್ತಾನೆ. ಇನ್ನು ಭಾರೀ ಸುಗಂಧದ್ರವ್ಯ ಪೂಸಿಕೊಂಡು ಗರಿಗರಿ ಬಟ್ಟೆ ಹಾಕಿಕೊಂಡು ಹೊರಟ ಕ್ಷಣದಲ್ಲಿಯೇ ಯಾವ ವಾಹನದ ಕೆಸರು ಅಂಟುವುದೋ ತಿಳಿಯುವುದಿಲ್ಲ. ಅಥವಾ ಬೇಗನೆ ಎದ್ದು ನಿತ್ಯಕರ್ಮ ಮಾಡುವವನು ಸೂರ್ಯ ಮೇಲೆ ಬಂ...
💐ಪ್ರತಿಮಾನಾಟಕದ ಒಂದು ಸುಮ💐 *ताते धनुर्न मयि सत्यमवेक्षमाणे मुञ्चानि मातरि शरं स्वधनं हरन्त्याम् । दोषेषु बाह्यमनुजं भरतं हनानि किं रोषणाय रुचिरं त्रिषु पातकेषु ।।* _ರಾಮನ ಗಂಭೀರ ವಾಣಿ. ದಶರಥ ನೀಡಿದ ವರಗಳಿಂದ ರಾಮನ ಅಭಿಷೇಕ ತಪ್ಪಿದೆ.ಲಕ್ಷ್ನಣನಿಗೆ ತಡೆಯಲಾರದಷ್ಟು ಸಿಟ್ಟುಬಂದು ಕೈಕೇಯಿಯನ್ನು ತಂದೆಯನ್ನು ನಿಂದಿಸುತ್ತಾನೆ , ರಾಮನಿಗೂ ಏನು ಮಾಡದೇ ಸುಮ್ಮನಿರುವ ನಿನ್ನ ವರ್ತನೆಗೆ ಅರ್ಥವೇನು ಎಂದೆಲ್ಲಾ ಪ್ರಶ್ನಿಸುತ್ತಾನೆ. ಆಗ ರಾಮನ ಮಾತು - ನೀನು ಹೇಳಿದಂತೆ ಮಾಡಿದರೆ ನಾನು ಪಾಪಿಯಾದೇನು. ಅಪ್ಪನ ವಚನ ಸತ್ಯ ಮಾಡಿಕೊಡುವ ಮಗನಾದ ನಾನು ಅಪ್ಪನ ಮೇಲೆಯೇ ಧನುಸ್ಸನ್ನು ಪ್ರಯೋಗಮಾಡಲೇ? ನಾನು ಅವನಂದಂತೆ ನಡೆದರೆ ಅವನ ಮಾತು ಸತ್ಯವೆನಿಸುತ್ತದೆ.ಅಪ್ಪನ ಮಾತಿಗೆ ಗೌರವ ಕೊಡುವುದನ್ನು ಬಿಟ್ಟು ಅಪ್ಪನ ಮೇಲೆಯೇ ಕೈಮಾಡಲೇ? ತಾನು ಹಿಂದೆ ಕೊಟ್ಟ ಮಾತಿನಂತೆ ವರಗಳನ್ನು ನೀಡಿದ್ದಾನೆ ಅದರಲ್ಲಿ ಅವನ ತಪ್ಪೇನಿದೆ! ಇನ್ನು ಕೈಕೇಯಿ ವಿವಾಹ ಸಮಯದಲ್ಲಿ ಕೊಡಲ್ಪಟ್ಟ ರಾಜ್ಯ ಲಕ್ಷ್ಮಿಯನ್ನು  ಈಗ ಪಡೆದುಕೊಂಡಿರುವಳು.ಅವಳ ಮೇಲೆ ಶರಪ್ರಯೋಗಿಸಲೇ? ಅವಳು ಅವಳದ್ದೇ ಧನವನ್ನು ಈಗ ಪಡೆದುಕೊಂಡಿದ್ದಾಳೆ. ಹಾಗಾಗಿ ಅವಳ ತಪ್ಪೊಂದೂ ಕಾಣುತ್ತಿಲ್ಲ. ಇನ್ನು ಈ ವಿಷಯಗಳ ಬಗ್ಗೆ ಗೊತ್ತೇ ಇರದ ಭರತನ ಮೇಲೆ ಅಸ್ತ್ರ ಬಿಡಲೇ? ಅವನಿಗೆ ಇಲ್ಲಿ ನಡೆಯುತ್ತಿರುವ ವಿಷಯಗಳೊಂದೂ ತಿಳಿದಿಲ್ಲ.ಅಷ್ಟೇ ಅಲ್ಲ ಯಾವೊಂದು ದೋಷಗಳೂ ಅವನ ಒಳಗಿಲ್ಲ.ಯ...
🌹ಶಾಕುಂತಲದ ಒಂದು ಶ್ಲೋಕ🌹 *स्वसुखनिरभिलाष: खिद्यसे लोकहेतो: प्रतिदिनमथवा ते वृत्तिरेवं विधैव । अनुभवति हि मूर्ध्ना पादपस्तीव्रमुष्णं शमयति परितापं छायया संश्रितानाम् ।।* _ವೈತಾಲಿಕರಾಡುವ ಮಾತು. ಹೊಗಳುಭಟರನ್ನು ಸಂಸ್ಕೃತದಲ್ಲಿ ವೈತಾಲಿಕ ಎನ್ನುತ್ತಾರೆ. ರಾಜನೇ, ನೀನು ನಿನ್ನ ಸುಖದ ಅಭಿಲಾಷೆಯನ್ನು ತ್ಯಜಿಸಿ ಪ್ರಜೆಗಳ ಸುಖಕ್ಕಾಗಿ ದಿನವೂ ಪರಿಶ್ರಮಪಡುವೆ. ಇದು ನಿನ್ನ ಪ್ರತಿದಿನದ ಕೆಲಸವೇ ಆಗಿದ್ದರೂ ಕಷ್ಟವೇ ಸರಿ.ಹೇಗೆಂದರೆ ವೃಕ್ಷವು ತನ್ನ ತಲೆಯಲ್ಲಿ ತೀವ್ರವಾದ ಬಿಸಿಲಿನ ತಾಪವನ್ನು ಅನುಭವಿಸಿದರೂ ತನ್ನನ್ನು ನೆರಳಿಗಾಗಿ ಆಶ್ರಯಿಸಿದವರಿಗೆ ಮಾತ್ರ ತಂಪನ್ನೇ ಕೊಡುವುದು. ಮರ ತಾನು ಎಷ್ಟು ಬಿಸಿಲಿನ ತಾಪದಿಂದ ಕಷ್ಟ ಅನುಭವಿಸಿದರೂ ಬಿಸಿಲಿನಿಂದ ಬಳಲಿ ತನ್ನನ್ನು ಯಾರು ಆಶ್ರಯಿಸುವರೊ ಅವರ ಸಂತಾಪವನ್ನು ಎಂದಿಗೂ ಪರಿಹರಿಸುತ್ತದೆ. ರಾಜನ ಕಾರ್ಯವೂ ಹೀಗೆಯೇ ಇರುತ್ತದೆ. ತಾನು ಎಷ್ಟೇ ಕಷ್ಟ ಅನುಭವಿಸಿದರೂ ತನ್ನನ್ನು ನಂಬಿದ ಪ್ರಜೆಗಳ ಬದುಕಲ್ಲಿ ಸುಖವನ್ನೇ ಕರುಣಿಸುತ್ತಾನೆ. ನಮ್ಮ ರಾಜನ ಆಡಳಿತ ಹೀಗೆಯೇ ಇದೆ ಎಂದು ಸ್ತುತಿಸುವ ಮಾತು. ಆಕ್ಷೇಪ ಮತ್ತು ದೃಷ್ಟಾಂತ ಅಲಂಕಾರ. ನಾವು ನಮ್ಮ ಬದುಕನ್ನು ಹೀಗೆಯೇ ನಡೆಸಬೇಕು. ನಾವು ಕಷ್ಟ ಪಟ್ಟರೂ ಇನ್ನೊಬ್ಬರಿಗೆ ಒಳಿತನ್ನೇ ಬಯಸಬೇಕು. ಧರ್ಮರಾಜನು ತಾನು ಎಷ್ಟು ಕಷ್ಟ ಅನುಭವಿಸಿದರೂ ಇನ್ನೊಬ್ಬರ ಕಷ್ಟಕ್ಕೆ ಸದಾ ಸ್ಪಂದಿಸುತ್ತಿದ್ದ. ಹಾಗಾಗಿಯೇ ಅವನು ಉತ್ತಮನೆನಿ...
📃ವೇದ- ಧರ್ಮ ಭಾಗ -೩ *ವೇದದ ದೇವತೆಗಳು* ಮುಂದುವರೆದ ಭಾಗ- ಸವಿತೃ. ಸೂರ್ಯನನ್ನು ಹೃದ್ರೋಗವನ್ನು ಪರಿಹರಿಸು ಎಂದೂ ಸ್ತುತಿಸಿದೆ ವೇದ. *ಹೃದ್ರೋಗಂ ಮಮ ಸೂರ್ಯ ಹರಿಮಾಣಂ ಚ ನಾಶಯ* ಮಂತ್ರದಲ್ಲಿ. *ದ್ವಿಷಂತಂ ಮಮ ರಂಧಯನ್ ಮೋ ಅಹಂ ದ್ವಿಷತೇ ರಧಮ್* ಎಂಬ ಮಂತ್ರವಂತೂ ಸುಂದರವಾಗಿದೆ. ನನ್ನ ಶತ್ರುಗಳನ್ನು ಅಥವಾ ನನ್ನ ದ್ವೇಷಿಗಳನ್ನು ನಿಗ್ರಹಿಸು,  ನಾನು ಕೂಡ  ದ್ವೇಷ ಬಿಟ್ಟು ಪ್ರೀತಿ ಬೆಳೆಸಿಕೊಳ್ಳುವಂತೆ ಬುದ್ಧಿ ನೀಡು ಎಂಬ ಪ್ರಾರ್ಥನೆ. ಸೂರ್ಯ ನಮಸ್ಕಾರವಂತೂ ಸರ್ವಾಂಗೀಣ ಆರೋಗ್ಯದ ಸಾಧನ. ಮಂತ್ರ ಅಥವಾ ಶ್ಲೋಕಗಳನ್ನು ಅಥವಾ ಹೆಸರುಗಳನ್ನು ಹೇಳಿ ಮಾಡಿದಾಗ ದೇವನ ಕೃಪೆಗೆ ಕಾರಣವಾಗುತ್ತದೆ. ೩.ವಿಷ್ಣು. ಸ್ವರ್ಗದಲ್ಲಿನ ದೇವತೆ. ಹೆಸರೇ ಹೇಳುವಂತೆ ಸರ್ವವ್ಯಾಪಕ.ಆದಿದೇವ ಇವನು. *ಪೂರ್ವೋ ಯೋ ದೇವೇಭ್ಯೋ ಜಾತ:* ಎಂಬ ಪುರುಷಸೂಕ್ತದ ಉತ್ತರ ಭಾಗ ಇದನ್ನೇ ಹೇಳುತ್ತದೆ. ಸುಮಾರು ೫ ಸೂಕ್ತಗಳು ಇವನನ್ನು ಸ್ತುತಿಸಿವೆ. *ವಿಚಕ್ರಮಾಣಸ್ತ್ರೇಧೋರುಗಾಯ:* *ಯಸ್ಯೋರುಷು ತ್ರಿಷು ವಿಕ್ರಮಣೇಷು* *ಉರುಕ್ರಮಸ್ಯ ಸ ಹಿ ಬಂಧುರಿತ್ಥಾ* *ಸಧಸ್ಥಮೇಕೋ ತ್ರಿಭಿರಿತ್ಪದೇಭಿ:* *ತ್ರೀಣಿ ಪದಾ ವಿಚಕ್ರಮೇ* ಇತ್ಯಾದಿ ಮಂತ್ರಗಳಲ್ಲಿ ವಾಮನಾವತಾರದ ವರ್ಣನೆಯೊಂದೇ ಪ್ರಮುಖವಾಗಿ ಕಂಡುಬರುವುದು ವಿಶೇಷ. ತನ್ನ ಮೂರು ಕಾಲುಗಳಿಂದ ಲೋಕವ್ಯಾಪಿಯಾದ ಆ ವಿಷ್ಣುವು ನಮ್ಮನ್ನು ಹರಸಲಿ ಎಂಬ ಮಾತು ಸುಮಾರು ಹದಿನೈದು ಮಂತ್ರಗಳಲ್ಲಿ ಕಂಡುಬರುವುದು. ಇವನ ವಾಸ ಜೇನಿನ ಸರ...
💐ಪ್ರತಿಮಾ ನಾಟಕದ ಒಂದು ವೀರರಸದ ಶ್ಲೋಕ💐 *यदि न सहसे राज्ञो मोहं धनु: स्पृशा मा दया स्वजननिभृत: सर्वोप्येवं मृदु: परिभूयते । अथ न रुचितं मुञ्च त्वं मामहं कृतनिश्चयो युवतिरहितं लोकं कर्तुं यतश्छलिता वयम् ।।* _ಕಂಚುಕಿಯು ರಾಜನು ಮೂರ್ಛೆ ಹೊಂದಿದನು ಕೈಕೇಯಿಯ ಕಾರಣದಿಂದ ಎಂದು ರಾಮನ ಬಳಿ ನುಡಿಯುತ್ತಾನೆ. ಆಗ ಸಮೀಪದಲ್ಲಿದ್ದ ಲಕ್ಷ್ಮಣನು ಕೋಪದಿಂದ ಈ ಮಾತನ್ನಾಡುವನು. ಶ್ರೀರಾಮ , ನೀನು ಒಂದು ವೇಳೆ  ರಾಜನ ಈ ದುರವಸ್ಥೆಯನ್ನು ಸಹಿಸುವುದಿಲ್ಲ ಎಂದಾದರೆ ಈ ಕೂಡಲೇ ಧನುಸ್ಸನ್ನು ಸಜ್ಜುಗೊಳಿಸು.ದಯೆಯನ್ನು ದೂರ ಇಡು.ಯಾರು ರಾಜನ ಈ ಅವಸ್ಥೆಗೆ ಕಾರಣರೋ ಅವರ ಮೇಲೆ ಬಾಣ ಬಿಡಲು ಸಜ್ಜಾಗು. ನಮ್ಮವರೆನಿಸಿಕೊಂಡವರು ಅಪಕಾರ ಎಸಗಿದಾಗ , ಅವರ ಬಗ್ಗೆ ಕ್ರಮ ತೆಗೆದುಕೊಳ್ಳದೆ ಸ್ವಜನರೆಂದು ಕ್ಷಮಿಸುವ ಜನರನ್ನು ಅಥವಾ ಅವರ ವಿಷಯದಲ್ಲಿ ಕ್ರಮ ತೆಗೆದುಕೊಳ್ಳದ ಮೃದುಜನರನ್ನು ಪ್ರಜೆಗಳು ತಿರಸ್ಕರಿಸುವರು.ಅಂಥಹವರು ಜನರ ಅನಾದರಕ್ಕೆ ಪಾತ್ರರಾಗುತ್ತಾರೆ. ಅಣ್ಣ ಒಂದು ವೇಳೆ ನಿನಗೆ ಈ ಕಾರ್ಯ ಇಷ್ಟವಿಲ್ಲದಿರೆ ಪೇಳೆನಗೆ , ನೀನು ಚಿಂತಿಸದಿರು , ನನಗೆ ಸ್ವಾತಂತ್ರ್ಯ ನೀಡು. ಈ ಲೋಕವನ್ನು ಯುವತಿಯರಿಲ್ಲದಂತೆ ಮಾಡಲು ನಿಶ್ಚಯಿಸಿದ್ದೇನೆ. ಏಕೆಂದರೆ ಸ್ತ್ರೀಯ ಕಾರಣದಿಂದಲೇ ನಾವೂ ವಂಚನೆಗೊಳಗಾಗಿದ್ದೇವೆ. ಲಕ್ಮಣ ಭಾವೋದ್ವೇಗದಲ್ಲಾಡುವ ಮಾತು.ನಾಟಕದಲ್ಲಿ ಭಾವ ತೀವ್ರತೆ ಪ್ರೇಕ್ಷಕನ ಮನಕ್ಕೆ ಮುದ ನೀಡುತ್ತದೆ. ಇಲ್ಲೂ ರ...
🌹ಶಾಕುಂತಲದ ಸುಂದರ ಶ್ಲೋಕ🌹 *औत्सुक्यमात्रमवसाययति प्रतिष्ठा क्लिश्नाति लब्धपरिपालन वृत्तिरेनम् । नातिश्रमापनयनाय यथा श्रमाय राज्यं स्वहस्तधृतदणडमिवातपत्रम् ।।* _ದುಷ್ಯಂತನ ಮಾತು.ವಾಸ್ತವವೂ ಹೌದು. ಅಧಿಕಾರದ ಆಯಾಸ ಯಾವ ರೀತಿಯೆಂದರೆ - ಕಾರ್ಯಸಿದ್ಧಿಯು ಆ ಕಾರ್ಯದ ಉತ್ಸಾಹವನ್ನು ತಣಿಸುತ್ತದೆ. ಕಾರ್ಯದಿಂದ ಆದ ಲಾಭದ ರಕ್ಷಣೆಯು ಆಯಾಸವನ್ನೇ ಉಂಟುಮಾಡುತ್ತದೆ. ರಾಜ್ಯದ ಅಧಿಕಾರವು ನಮ್ಮ ಕೈಯಲ್ಲಿ ಹಿಡಿದ ಭಾರವಾದ ದಂಡವಿರುವ ಛತ್ರದಂತೆ ಶ್ರಮವನ್ನು ಪರಿಹರಿಸುವುದಕ್ಕಿಂತ ಹೆಚ್ಚು ಶ್ರಮಕ್ಕೇ ಕಾರಣವಾಗುತ್ತದೆ. ಬಿಸಿಲಿನಲ್ಲಿ ನೆರಳಿಗಾಗಿ ಛತ್ರಿ ಆಶ್ರಯಿಸಬೇಕು.ಆದರೆ ಆ ಛತ್ರಿಯ ದಂಡ ತುಂಬಾ ಭಾರವಿದ್ದರೆ ಬಿಸಿಲಿನಿಂದ ಆಗುವ ಆಯಾಸಕ್ಕಿಂತ ಹೆಚ್ಚು ಆಯಾಸ ಛತ್ರಿಯನ್ನು ಹಿಡಿಯುವುದರಿಂದ ಆಗುತ್ತದೆ.ಅದನ್ನು ನೋಡಿದಾಗ ಛತ್ರಿಯೇ ಬೇಡವೆಂದೆನಿಸುತ್ತದೆ. ರಾಜನ ಅಧಿಕಾರವೂ ಹಾಗೆಯೇ ಇದೆ. ಸ್ವಂತ ಕೈಯಲ್ಲಿ ಹಿಡಿದ ಕೊಡೆ ಬಿಸಿಲು ಅಥವಾ ಮಳೆಯ ಶ್ರಮವನ್ನು ಪರಿಹರಿಸಿದರೂ ಹಿಡಿದು ಕೊಳ್ಳುವ ಶ್ರಮ ಹೆಚ್ಚಾದರೆ ಕಷ್ಟ. ರಾಜ್ಯದಂಡವು ಪ್ರಜೆಗಳಿಗೆ ಶತ್ರುಗಳ ಭಯ ಹೋಗಲಾಡಿಸಿದರೂ. ಜನಪ್ರಿಯತೆ ತಂದುಕೊಟ್ಟರೂ ನಡೆಯಿಸಿಕೊಂಡುಹೋಗುವ ಶ್ರಮವನ್ನೇ ಉಂಟುಮಾಡುತ್ತದೆ. ನಮ್ಮ ಬದುಕೂ ಹೀಗೆಯೇ ಅಲ್ಲವೇ! ಏನಾದರೂ ಕಾರ್ಯ ಕೈಗೊಂಡು ಯಶಸ್ವಿಯಾದರೆ ಆ ಕಾರ್ಯದಲ್ಲಿನ ಉತ್ಸಾಹ ತಣಿಯುತ್ತದೆ. ಸಂಪತ್ತನ್ನು, ಕೀರ್ತಿಯನ್ನು, ಗೌರವವನ್ನು, ಪ್ರ...
📃ವೇದ-ಧರ್ಮ ಭಾಗ-೨ _ವೇದದ ದೇವತೆಗಳು_ ನಮ್ಮ ಹಿರಿಯರು ಒಂದೊಂದು ಕ್ರಿಯೆಗೆ ಸಂಬಂಧಪಟ್ಟಂತೆ ಮೂಲಶಕ್ತಿಯನ್ನು ಅಥವಾ ಕಾರಣಶಕ್ತಿಯನ್ನು ದೇವತೆಗಳ ರೂಪದಲ್ಲಿ ಪ್ರತಿಪಾದಿಸಿದರು. ದೇವತೆಗಳ ರೂಪ ಸಾಕಾರವೂ ಹೌದು ನಿರಾಕಾರವೂ ಹೌದು. ನಮ್ಮ ಮನದಲ್ಲಿ ಧ್ಯಾನಕಾಲದಲ್ಲಿ ಜ್ಯೋತಿಯೊಂದು ಮೂಡಿದರೆ ಅದೇ ದೇವರ ರೂಪ. ಪ್ರಕೃತಿಯ ಪರಿಣಾಮಗಳಲ್ಲೂ ಅದನ್ನೇ ಕಾಣಬಹುದು.ಅದಕ್ಕೆ ನಮ್ಮ ರೂಪವನ್ನು ಕಲ್ಪಿಸಿಕೊಂಡಾಗ ಅಂದರೆ ಸ್ತ್ರೀ ಅಥವಾ ಪುರುಷನ ಆಕಾರ ಕಲ್ಪಿಸಿದಾಗ ಅದು ಮೂರ್ತಿ ಅಥವಾ ವಿಗ್ರಹರೂಪದಲ್ಲಿ ಗೋಚರಿಸುತ್ತದೆ. *ದಾನಾತ್, ದ್ಯೋತನಾತ್, ದೀಪನಾತ್ ವಾ ದೇವತಾ* ಎಂದು ಪದದ ನಿಷ್ಪತ್ತಿ. ನಮಗೆ ಬೆಳಕು ತೋರುವ ಅಥವಾ ನಮ್ಮ ಅಗತ್ಯಗಳನ್ನು ಕರುಣಿಸುವ ಶಕ್ತಿ, ಅಥವಾ ಸ್ವತ: ಬೆಳಗುವ ಶಕ್ತಿ ಹೀಗೆ ಅರ್ಥ ಹೇಳಬಹುದು. ಒಟ್ಟಾರೆ ಯಾವುದೇ ಅಪೇಕ್ಷೆ ಇಲ್ಲದೆ ಅನುಗ್ರಹಿಸುವ ಒಂದು ಅಲೌಕಿಕ ಶಕ್ತಿಯೇ ದೇವತೆ. ಹಾಗಾದರೆ ಹೋಮ ಪೂಜೆ ಅರ್ಚನೆ ಅಲಂಕಾರ ಅಭಿಷೇಕ ಅವೆಲ್ಲವೂ ಯಾಕೆ ಎಂದಾಗ ಅವೆಲ್ಲ ನಮ್ಮ ಮನಸ್ಸಂತೋಷಕ್ಕೆ ,ಭಗವಂತನಿಗೆ ಕೃತಜ್ಞತೆ ತಿಳಿಸುವ ಕ್ರಮಗಳಷ್ಟೇ ಅವುಗಳು. ದೇವ ಶಬ್ದಕ್ಕೆ ಸ್ವಾರ್ಥದಲ್ಲಿ *ತತ್* ಪ್ರತ್ಯಯ ಬಂದಿದೆ. ಆರಾಧಿಸಲ್ಪಡುವ ಮೂರ್ತಿ ಎಂದು ಅರ್ಥ. *ದೀವ್ಯತಿ* ಮಂತ್ರೇಣ ದ್ಯೋತ್ಯತೇ ಮಂತ್ರದಿಂದ ಕಾಣಿಸಲ್ಪಡುವುದು ಅಥವಾ ಸ್ತುತಿಸಲ್ಪಡುವುದು. *ದೇವನಾದ್ವೈ ದೇವತಾತ್ವಂ* ಸಾನ್ನಿಧ್ಯ ಹೊಂದುವುದರಿಂದ ದೇವತೆಯೆಂದೂ ಕರೆಸಲ್ಪಡುತ್ತದೆ. ಮಂತ್ರದ ...
💐ಪ್ರತಿಮಾನಾಟಕದ ಒಂದು ಸುರಭಿ💐 *शुल्के विपणितं राज्यं पुत्रार्थे यदि याच्यते । तस्यालोभोsत्र नास्माकं भ्रातृराज्यापहारिणाम् ।।* _ಕಂಚುಕಿಯು ಕೈಕೇಯಿಯು ನಿನಗೆ ಅನ್ಯಾಯ ಮಾಡಿದ್ದಾಳೆ ಎಂದು ನುಡಿದಾಗ ರಾಮನಾಡುವ ಮಾತು. ಅವಳು ಕೇಳಿದ್ದು ಸರಿಯಾಗಿಯೇ ಇದೆ.ಅಮ್ಮನ ತಪ್ಪೊಂದೂ ನನಗೆ ಕಾಣುತ್ತಿಲ್ಲ. ಏಕೆಂದರೆ ದಶರಥನು ವಿವಾಹದ ಸಮಯದಲ್ಲಿ ವಿಶೇಷವಾಗಿ ದಕ್ಷಿಣೆಯ ರೂಪದಲ್ಲಿ ಮಾತುಗಳಲ್ಲಿ ಕೊಡಲ್ಪಟ್ಟ ರಾಜ್ಯವನ್ನು ಮಗನಿಗಾಗಿ ಕೇಳಿದರೆ ಅದು ಅವಳ ಕರ್ತವ್ಯ. ಅದು ನನಗೆ ವಂಚನೆ ಮಾಡಲೆಂಬ ಕಾರಣದಿಂದಲ್ಲ.ಮದುವೆಯ ಸಮಯದಲ್ಲಿಯೇ ಮುಂದೆ ಇವಳ ಮಗನು ರಾಜ್ಯವನ್ನಾಳುವನು ಎಂದು ಒಪ್ಪಿಯೇ ನನ್ನ ತಂದೆ ಅಮ್ಮನ ಕೈ ಹಿಡಿದದ್ದಲ್ಲವೇ! ಈ ವಿಷಯದಲ್ಲಿ ಅವಳ ಲೋಭ ಎಂದು ಹೇಳಲಾಗದು.ಅದಕ್ಕೆ ಹೊರತಾಗಿ ಸಹೋದರನ ರಾಜ್ಯವನ್ನು ನಾನು ಅಪೇಕ್ಷಿಸಿದರೆ ಅದು ಲೋಭವಾಗುತ್ತದೆ ಅಥವಾ ಸಹೋದರನಿಗೆ ನ್ಯಾಯವಾಗಿ ದೊರೆಯಬೇಕಿದ್ದ ರಾಜ್ಯದ ಅಧಿಕಾರ ನನ್ನಿಂದ ಅಪಹರಿಸಲ್ಪಂಟ್ಟಂತೆ ಆಗುವುದು. ಹಾಗಾಗಿ ಅಭಿಷೇಕದಲ್ಲಿ ನನ್ನ ಬಯಕೆಯೇ ತಪ್ಪು. ಕೈಕೇಯಿಯ ವರಯಾಚನೆಯಲ್ಲಿ ಅಲ್ಲ.ಇನ್ನೂ ಮುಂದುವರೆಯುತ್ತಾ ಅಮ್ಮನ ನಿಂದನೆಯ ಮಾತೊಂದೂ ಆಡಬೇಡ ಎಂದು ಗದರಿಸುತ್ತಾನೆ ರಾಮ.ಇಲ್ಲಿ ರಾಮನ ಹೃದಯ ವೈಶಾಲ್ಯವನ್ನು ನಾವು ಗುರುತಿಸಬಹುದು. ತಮ್ಮನಿಗೆ ರಾಜ್ಯ ದೊರಕುವುದರಲ್ಲಿ ಅವನಿಗೆ ಸಂತೋಷವೇ ಇದೆ.ಹಾಗೆಯೇ ಕೈಕೇಯಿಯ ಬಗೆಗೆ ಅಸಮಾಧಾನ ಎಳ್ಳಷ್ಟೂ ಕಂಡುಬರುವುದಿಲ್ಲ.ಇದೇ ಧರ್ಮ.ಪ...
🌹ಶಾಕುಂತಲದ ಸುಂದರ ಸುಮ🌹 *प्रजा: प्रजा: स्वा इव तन्त्रयित्वा निषेवतेsशान्तमना विविक्तम् । यूथानि सञ्चार्य रविप्रतप्त: शीतं दिवा स्थानमिव द्विपेन्द्र: ।।* _ಕಂಚುಕಿಯು ರಾಜನ ಜವಾಬ್ದಾರಿಯ ಬಗ್ಗೆ ನುಡಿಯುವ ಮತ್ತೊಂದು ಅಣಿಮುತ್ತು.ಉಪಮಾಲಂಕಾರ ಪ್ರಯೋಗದಲ್ಲಿ ಕಾಳಿದಾಸನಿಗೆ ಇರುವ ಕೌಶಲ್ಯ ಇಲ್ಲಿ ಕಾಣಬಹುದು. ಈ ನಮ್ಮ ರಾಜನು ಪ್ರಜೆಗಳನ್ನು ತನ್ನ ಮಕ್ಕಳಂತೆ ಕಾಪಾಡಿ ತಾನು ದಣಿದಿದ್ದಾನೆ.ಇದು ಹೇಗಿದೆಯೆಂದರೆ ತನ್ನ ಹಿಂಡನ್ನು ಜತನದಿಂದ ಓಡಾಡಿಸಿ ಅವರಿಗೆಲ್ಲ ಆಹಾರಾದಿ ಒದಗಿಸಿ ಬಿಸಿಲಿನಿಂದ ಬಳಲಿದ ಮದ್ದಾನೆಯು ಮಧ್ಯಾಹ್ನದ ವೇಳೆಯಲ್ಲಿ ತಂಪಾದ ಸ್ಥಾನವನ್ನು ಆಶ್ರಯಿಸುವಂತೆ ಈ ನಮ್ಮ ರಾಜನು ಏಕಾಂತದಲ್ಲಿ ವಿರಮಿಸಿದ್ದಾನೆ.  ತನ್ನ ಮಕ್ಕಳೊಡನೆ ಹೇಗೆ ಸಮಾಧಾನದಿಂದ ವ್ಯವಹರಿಸಿ ಅವರ ಬೇಕು ಬೇಡಗಳನ್ನು ವಿಚಾರಿಸುತ್ತಾಯೋ ಹಾಗೆಯೇ ಪ್ರಜೆಗಳ ವಿಷಯದಲ್ಲಿ ರಾಜನ ನಡತೆ ಇರಬೇಕು. *ಪ್ರಜಾರಂಜಕಾತ್ ರಾಜ:* ಎಂಬಂತೆ ಪ್ರಜೆಗಳಿಗೆ ಆನಂದ   ಉಂಟುಮಾಡುವುದು ಉತ್ತಮ ಆಡಳಿತದ ಮೂಲಕ ಅದು ರಾಜನ ಕರ್ತವ್ಯ. ಸಲಗವೊಂದು ಹೇಗೆ ತನ್ನ ಗುಂಪನ್ನು ಜಾಗೃತೆಯಿಂದ ಸುತ್ತಿಸಿ ಹಿಂತಿರುಗಿ ತಾನೂ ಬಳಲಿ ವಿರಮಿಸುವುದೋ ಹಾಗೆಯೇ ರಾಜನ ಪ್ರಕೃತ ಸ್ಥಿತಿ.ಸಲಗದಂತೆ ಪರಾಕ್ರಮ ಜವಾಬ್ದಾರಿ ತನ್ನ ನಂಬಿದ ಜನರ ಬಗ್ಗೆ , ಕಾಳಜಿ ಇವೆಲ್ಲಾ ರಾಜನ ಮುಖ್ಯ ಲಕ್ಷಣಗಳು. ನಾವೂ ನಮ್ಮ ರಾಜರ ಆಯ್ಕೆಯಲ್ಲಿ ಜಾಗರೂಕರಾಗೋಣ. ಭಾಗ್ಯವು ಹೇಗೆ ಹೇಗೊ ದೊ...
💐ಪ್ರತಿಮಾ ನಾಟಕದ ಒಂದು ಕುಸುಮ💐 *वनगमननिवृत्ति: पार्थिवस्यैव तावन्मम पितृपरवत्ता बालभाव: स एव । नवनृपतिविमर्शे नास्ति शङ्का प्रजानां अथ च न परिभोगैर्वञ्चिता भ्रातरो मे ।।* _ರಾಮನ ಮಾತು.ಕೈಕೇಯಿಯಿಂದಾಗಿ ನಿನ್ನ ಪಟ್ಟಾಭಿಷೇಕ ನಿಂತು ಹೋಯಿತು , ಇದು ಅನರ್ಥವಲ್ಲದೆ ಮತ್ತೇನು ಎಂದು ಕಂಚುಕಿಯು ನುಡಿದಾಗ ರಾಮನಾಡುವ ಸುಂದರ ಮಾತು. ಕೈಕೇಯಿಯ ಈ ನಿರ್ಧಾರ ನನಗಂತೂ ಅನುಕೂಲಕರವೇ ಆಗಿದೆ,ಇದರಲ್ಲಿ ಯಾವ ದೋಷವೂ ಕಂಡುಬರುತ್ತಿಲ್ಲ.ಹೇಗೆಂದರೆ ನಾನು ರಾಜನಾದರೆ ದಶರಥನು ಇಕ್ಷ್ವಾಕು ವಂಶದ ಪರಂಪರೆಯಂತೆ ಆಡಳಿತದ ಎಲ್ಲಾ ಜವಾಬ್ದಾರಿಗಳನ್ನು ನನಗೆ ವಹಿಸಿ ತಾನು ಕಾಡಿಗೆ ತೆರಳಬೇಕಿತ್ತು.ಆದರೆ ನನ್ನ ಅಭಿಷೇಕ ನಿಂತ ಕಾರಣ ದಶರಥನ ವನಗಮನವು ನಿವೃತ್ತವಾಯಿತು. ಎರಡನೆಯದಾಗಿ ನಾನಿನ್ನೂ ಹೆಚ್ಚು ಜವಾಬ್ದಾರಿ ವಹಿಸಿಕೊಳ್ಳದೆ ಅಪ್ಪನ ಪಾಲಿಗೆ ಮಗುವಾಗಿಯೇ ಉಳಿಯುವಂತಾಯಿತು.ರಾಜನಾಗಿದ್ದರೆ ಆ ಸಲುಗೆ , ಪ್ರೀತಿ, ಮುದ್ದಾಟ ಸಾಧ್ಯವಾಗುತ್ತಿರಲಿಲ್ಲ. ಮೂರನೆಯದಾಗಿ ಪ್ರಜೆಗಳು ಹೊಸ ರಾಜನ ಆಡಳಿತ ಹೇಗೆ ಇರುತ್ತದೆಯೋ ಏನೋ, ನಮ್ಮ ಪಾಲಿಗೆ ಪ್ರತಿಕೂಲವೋ ಅನುಕೂಲವೋ ಇತ್ಯಾದಿ ಚಿಂತಿಸುವುದೂ ನಿಂತಿತು.ಅವರಿಗೆ ಮೊದಲಿನಂತೆ ಉತ್ತಮ ಆಡಳಿತ ದಶರಥನ ನೇತೃತ್ವದಲ್ಲಿ ದೊರಕಿತು.ನಾಲ್ಕನೆಯದಾಗಿ ನಾವೆಲ್ಲ ಅಣ್ಣತಮ್ಮಂದಿರು ರಾಜಕುಮಾರರಾಗಿಯೇ ಉಳಿದು ಭೋಗಗಳಿಂದ ವಂಚಿತರಾಗಿಲ್ಲ.ನಾನು ರಾಜನಾಗಿದ್ದರೆ ನನ್ನ ತಮ್ಮಂದಿರು ಕೆಲವು ಜವಾಬ್ದಾರಿ ಹೊಂದ...
🌹ಶಾಕುಂತಲದ ಒಂದು ಸುಮ🌹 *भानु: सकृद्युक्ततुरङ्ग एव रात्रिं दिवं गन्धवह: प्रयाति । शेष: सदैवाहितभूमिभार: षष्ठांशवृत्तेरपि धर्म एष: ।।* _ಕಂಚುಕಿಯು ರಾಜನ ಬಗ್ಗೆ ನುಡಿಯುವ ಮಾತು. ರಾಜನ ಕೆಲಸ ಅವಿಶ್ರಾಂತವಾದುದು ಎನ್ನುತ್ತಾ ಹೀಗೆ ನುಡಿಯುತ್ತಾನೆ. ಸೂರ್ಯನು ಒಮ್ಮೆ ಮಾತ್ರ ತನ್ನ ರಥಕ್ಕೆ ಕುದುರೆಗಳನ್ನು ಹೂಡಿದ್ದು.ಅನಂತರ ಅವನ ರಥ ಮೂರು ಲೋಕಗಳನ್ನು ನಿರಂತರವಾಗಿ ಬೆಳಗಿಸುತ್ತಾ ಸುತ್ತುತ್ತಿದೆ.ಅವನೆಂದೂ ವಿರಾಮ ಬಯಸಿಲ್ಲ. ವಾಯುದೇವನು ಅಹರ್ನಿಶಿ ಬೇಸರವಿಲ್ಲದೆ ಬೀಸುತ್ತಾನೆ.ಅವನ ಗತಿ ನಿಂತರೆ ಉಳಿದವರ ಗತಿ ನಿಲ್ಲುತ್ತದೆ.ದೇವನ ಆಣತಿಯಂತೆ ಭೂಮಿಯ ಭಾರವನ್ನು ಹೊತ್ತ ಆದಿಶೇಷನು ಶ್ರಮವೆಂದು ಎಂದಿಗೂ ಇಳಿಸಲಿಲ್ಲ. ಪ್ರಜೆಗಳ ಪಾಪ ಪುಣ್ಯ ಧನ ಮುಂತಾದವುಗಳ ಆರನೇ ಒಂದು ಭಾಗವನ್ನು ಸ್ವೀಕರಿಸುವ ರಾಜನ ಕರ್ತವ್ಯವೂ ಹೀಗೆಯೇ ಇದೆ.ಪ್ರಜೆಗಳಿಗಾಗಿ ಸದಾ ಕರ್ತವ್ಯದಲ್ಲೇ ಇರಬೇಕು. ಆ ಪದವಿ ಪಡೆದ ಮೇಲೆ ಅವನಿಗೆ ಒದಗಿ ಬಂದ ಜವಾಬ್ದಾರಿ. ಲೋಕಕಾರ್ಯ ನಿರ್ವಹಿಸುವ ಅವನ ಅಧಿಕಾರಕ್ಕೆ ವಿಶ್ರಾಂತಿ ನಿಷಿದ್ಧ.ಸೂರ್ಯ ವಾಯು ಶೇಷ ಮತಾದವರು ಹೇಗೆ ವಿಶ್ರಾಂತಿ ಇಲ್ಲದೇ ಕಾರ್ಯನಿರ್ವಹಿಸುವರೋ ಹಾಗೆಯೇ ರಾಜನೂ ವಿಶ್ರಾಂತಿ ಇಲ್ಲದೇ ಪ್ರಜಾ ರಕ್ಷಣೆಯ ಕಾರ್ಯದಲ್ಲಿ ನಿರತನಾಗಿರಬೇಕಾಗುವುದು ಎಂದು ಅಭಿಪ್ರಾಯ. ಮಾಲಾಪ್ರತಿವಸ್ತೂಪಮಾ ಅಲಂಕಾರ. ನಮ್ಮ ಈಗಿನ ಪ್ರಧಾನಿಯ ಕಾರ್ಯ ವೈಖರಿ ಕವಿಯ ಆಶಯಕ್ಕೆ ಅನುಗುಣವಾಗಿದೆ.ರಾಜನು ತನ್ನ ಕರ್ತವ್ಯ ನಿ...
💐ಪ್ರತಿಮಾನಾಟಕದ ಸುಂದರ ಸುಮ💐 *शरीरे‌sरि: प्रहरति हृदये स्वजनस्तथा । कस्य स्वजनशब्दो मे लज्जामुत्पादयिष्यति ।।* _ರಾಮನಾಡುವ ಮಾತು. ಕಂಚುಕಿ ಬಂದು ಅನರ್ಥವಾಯಿತು, ರಾಜನಿಗೆ ಎಂದು ಭೀತಿಯಿಂದ ನುಡಿದಾಗ ರಾಮನು ಯಾರಿಂದ ಎಂದು ಪ್ರಶ್ನಿಸುತ್ತಾನೆ.ಆಗ ತನ್ನವರಿಂದಲೇ ಅಂದರೇ ಸ್ವಜನರಿಂದಲೇ ಎನ್ನುತ್ತಾನೆ. ಆಗ ಹೇಳುವ ಮಾತು. ಶತ್ರುವು ಯುದ್ಧಭೂಮಿಯಲ್ಲಿ ಬಾಣಗಳಿಂದ ಅಥವಾ ಆಯುಧಗಳಿಂದ ಶರೀರವನ್ನು ಪ್ರಹರಿಸುತ್ತಾನೆ.ಆದರೆ ಸ್ವಜನರು ನಮ್ಮವರೆನಿಸಿಕೊಂಡವರು ಹೃದಯಕ್ಕೆ ಆಘಾತ ಕೊಡುತ್ತಾರೆ.ಹೃದಯಕ್ಕೆ ಹೊಡೆಯುತ್ತಾರೆ.ಮನಸ್ಸು ನೋಯಿಸುತ್ತಾರೆ.ಅಂತಹ ಆಘಾತ ಉಂಟುಮಾಡಿದ ರಾಜನ ಮನಸ್ಸನ್ನು ನೋಯಿಸಿದ ಯಾವ ವ್ಯಕ್ತಿಯನ್ನಾದರೂ ನಾನು ಸ್ವಜನ ಎಂಬ ಶಬ್ದದಿಂದ ಹೇಗೆ ಕರೆಯಲಿ! ಅದಕ್ಕೂ ನನಗೆ ನಾಚಿಕೆ ಆಗುತ್ತಿದೆ.ಅವರು ಸ್ವಜನರು ಹೌದೋ ಅಲ್ಲವೋ ಆ ಪದದಿಂದ ವ್ಯವಹಾರಕ್ಕೂ ಯೋಗ್ಯರಲ್ಲ. ರಾಜನ ಮನೋವೇದನೆಗೆ ಕಾರಣರಾದ ವ್ಯಕ್ತಿ ನಮ್ಮವರೆಂದು ಕರೆಸಿಕೊಳ್ಳಲು ಕೂಡ ಅನರ್ಹರು.ಅವರು ಶತ್ರುಗಳಿಗಿಂತಲೂ ಹೆಚ್ಚು ನಮ್ಮನ್ನು ಬಾಧಿಸುತ್ತಾರೆ.ಶತ್ರುಗಳ ಪ್ರಹಾರದ ಗಾಯ ದಿನಗಳೆದ ಹಾಗೆ ಮಾಸಬಹುದು.ಆದರೆ ಮನಕ್ಕಾದ ನೋವು ಆಪ್ತರೆನಿಸಿಕೊಂಡವರು ಕೊಟ್ಟ ವೇದನೆ ಅದು ಹೃದಯವನ್ನೇ ಸೀಳುವಂತಹದು.ನಮ್ಮ ಸುತ್ತಲೂ ಎಷ್ಟೋ ಸಲ ಇಂತಹ ಜನರಿರುತ್ತಾರೆ.ದಶರಥನಂತೆ ಮೈ ಮರೆತು ನಂತರ ದು:ಖಿಸುತ್ತೇವೆ.ಅವರು ಸ್ವಜನರೋ ಶ್ವಜನರೋ ಎಂಬ ಸಂಶಯ ಆ ಕಾಲದಲ್ಲಿ ಉದ್ಭವಿಸುತ್ತದೆ...
🌹ಶಾಕುಂತಲದ ಸುಂದರ ಕುಸುಮ🌹 *रम्याणि वीक्ष्य मधुरांश्च निशम्य शब्दान् पर्युत्सुकीभवति  यत्सुखितोपि जन्तु: । तच्चेतसा स्मरति नूनमबोधपूर्वं भावस्थिराणि जननान्तरसौहृदानि ।।* _ದುಷ್ಯಂತನ ಮಧುರ ಮಾತು.ಹಂಸಪದಿಕೆಯ ಮಧುರಸ್ವರದಲ್ಲಿ ಗಾನವೊಂದನ್ನು ಆಲಿಸಿದ ರಾಜ ಚಿಂತಿಸುತ್ತಿದ್ದಾನೆ. ಈ ಹಾಡನ್ನು ಕೇಳಿ ಪ್ರಿಯರ ವಿರಹ ಇಲ್ಲದಿದ್ದರೂ ಉದ್ವಿಗ್ನನಾಗುತ್ತಿದ್ದೇನೆ.ಏನು ಕಾರಣ. "ಸುಂದರವಾದ ವಸ್ತುಗಳನ್ನು ನೋಡಿ ಅಥವಾ ಮಧುರವಾದ ಧ್ವನಿಯನ್ನು ಕೇಳಿ ಸುಖವಾಗಿರುವ ವ್ಯಕ್ತಿಯೂ ನನ್ನಂತೆ ತುಂಬ ಭಾವುಕನಾದರೆ ಅಥವಾ ಉದ್ವಿಗ್ನನಾದರೆ , ಬಹುಶ: ಅವನು ತನಗೆ ತಿಳಿಯದಂತೆ ಸಂಸ್ಕಾರ ರೂಪದಲ್ಲಿ ಮನದಲ್ಲಿ ಅಚ್ಚೊತ್ತಿದ ಜನ್ಮ ಜನ್ಮಾಂತರದ ಯಾವುದೋ ಸ್ನೇಹವನ್ನು ಸ್ಮರಿಸುತ್ತಿರುತ್ತಾನೆ.ದುಷ್ಯಂತನಿಗೆ ಅವನ ಭಾವುಕತೆಗೆ ಕಾರಣ ತಿಳಿಯುತ್ತಿಲ್ಲ.ಆದರೂ ಯಾರನ್ನೋ ಬಿಟ್ಟವನಂತೆ ಅವನಿಗೆ ತೋರುತ್ತಿದೆ.( ನಿಜಕ್ಕಾದರೆ ಶಕುಂತಲೆ ಪರಿತ್ಯಕ್ತಳು ಆದರೆ ದೂರ್ವಾಸರ ಶಾಪದಿಂದ ಅದು ರಾಜನಿಗೆ ನೆನಪಿಲ್ಲ.) ಸಂಗೀತ ಶಾಲೆಯ ಹಂಸಪದಿಕೆಯ ಧ್ವನಿಯನ್ನು ಕೇಳಿದೊಡನೆ ದುಷ್ಯಂತನಿಗೆ ಅದೇಕೋ ಕಳವಳವುಂಟಾಯಿತು. ಮಧುರವಾದ ಹಾಡನ್ನು ಕೇಳಿ ಮನದಲ್ಲಿ ಕಳವಳವೇಕೆಂದು ಅವನು ಚಿಂತಿಸುತ್ತಿದ್ದಾನೆ. ಯಾವುದೋ ಪೂರ್ವಜನ್ಮದ ಘಟನೆ ಈ ಕಳವಳಕ್ಕೆ ಕಾರಣವಿರಬಹುದೆಂದು ಅವನ ಸಂಶಯ. ಪ್ರೀತಿಸಿರುವ ಶಕುಂತಲೆಯನ್ನು ಶಾಪದಿಂದಾಗಿ ಮರೆತಿರುವುದರಿಂದ ಅದು ಪೂರ್ವಜ...
🌹ಶಾಕುಂತಲದ ಸುಂದರ *आचार इत्यवहितेन मया गृहीता या वेतृयष्टिरवरोधगृहेषु राज्ञ: । काले गते बहुतिथे मम सैव जाता प्रस्थानविक्लवगतेरवलम्बनार्था ।।* _ಕಾಳಿದಾಸನ ಒಂದು ಮಾರ್ಮಿಕ ಮಾತು. ಕಂಚುಕಿ ನುಡಿಯುತ್ತಿದ್ದಾನೆ. ರಾಜನ ಅಂತ:ಪುರದಲ್ಲಿ ನಿಯಮಿಸಲ್ಪಟ್ಟವರು ಹಿಡಿದುಕೊಳ್ಳಬೇಕೆಂಬ ಸಂಪ್ರದಾಯವನ್ನನುಸರಿಸಿ ಯಾವ ಬೆತ್ತದ ದಂಡ ಇಷ್ಟು ಕಾಲ ಹಿಡಿದೆನೋ ಅದೇ ದಂಡವು ಬಹಳ ಸಮಯದ ನಂತರ ಈಗ ನಡೆಯುವಾಗ ತಡವರಿಸುವ ನನಗೆ ಊರಿಕೊಳ್ಳಲು ಆಧಾರವಾಗಿ ಇಟ್ಟುಕೊಳ್ಳಲು ಬೇಕಾಗಿದೆ.ಬಿದಿರಿನ ಕೋಲು ಅಂತ:ಪುರದ ಅಧಿಕಾರಿ ಹಿಡಿಯುವುದು ರಾಜರ ಮನೆಯ ಪದ್ಧತಿ.ಈಗಲೂ ದೇವಸ್ಥಾನಗಳ ಉತ್ಸವಗಳಲ್ಲಿ ಇಬ್ಬರು ದಂಡಧಾರಿಗಳಿರುತ್ತಾರೆ. ಹೆಚ್ಚು ಸನಿಹ ಯಾರೂ ಬರದಂತೆ ತಡೆಯುವ ಕೋಲೂ ಹೌದದು. ಈಗ ನಡಿಗೆಯ ಕಂಪನದಿಂದಾಗಿ ( ಹೆಚ್ಚು ವಯಸ್ಸಾದದ್ದರಿಂದ) ಬೀಳುವೇನೋ ಎಂದೆನಿಸಿದಾಗ ಆಧಾರವಾಗಿ ಈ ಕೋಲೇ ಉಪಯೋಗಿ ಆಗಿದೆ. ಈಗ ಅದರ ಪ್ರಯೋಜನ ಅವಲಂಬನೆಯೇ ಆಗಿದೆ.ಹಿಂದೆ ಯಾರನ್ನಾದರೂ ಗದರಿಸಲು ಸಾಧ್ಯವಾಗುತ್ತಿತ್ತೇನೋ ಆದರೆ ಈಗ ನನ್ನ ಪರಿಸ್ಥಿತಿಗೆ ಸಹಾಯಕವಾಗಿ ನಿಂತಿದೆ ಈ ದಂಡ.ನಮ್ಮ ಆಚರಣೆಗಳನೇಕ ಕಂಚುಕಿಯ ದಂಡಧಾರಣೆಯಂತೆಯೇ ಇವೆ.ನಮಸ್ಕಾರ ಮಾಡುತ್ತೇವೆ.ಯಾರಿಗೆ ಮಾಡುವೆವೋ ಅವರ ಬಗ್ಗೆ ಯಾವ ಭಾವನೆಯೂ ಇಲ್ಲದೇ ಕಾಟಾಚಾರಕ್ಕೆಂಬಂತೆ ಮಾಡುತ್ತೇವೆ.ದೇವರಿಗೆ ನಮನ ಸಲ್ಲಿಸುವಾಗಲೂ ಭಕ್ತಿಯ ಕೊರತೆ ಕಾಡುತ್ತದೆ. ಪ್ರಸಾದದಲ್ಲಿ ರುಚಿ ಹುಡುಕುತ್ತೇವೆ, ಹೇಗೆ ಇರಲ...
💐ಪ್ರತಿಮಾನಾಟಕದ ಸುಂದರ ಸುಮ💐 *नारीणां पुरुषाणां च निर्मर्यादो यदा ध्वनि: । सुव्यक्तं प्रभवामीति मूले दैवेन ताडितम् ।।* _ಹಿನ್ನೆಲೆಯಲ್ಲಿ ಅಯ್ಯೋ ಮಹಾರಾಜ ಎಂಬ ಧ್ವನಿ ಕೇಳಿಬರುತ್ತಿದೆ. ರಾಮಾದಿಗಳು ಸಂತೋಷದಿಂದ ತಮಾಷೆ ಮಾಡುತ್ತಿರುವ ಸಂದರ್ಭದಲ್ಲಿ ಕೇಳಿಬರುವ ಈ ಮಾತು ಎಲ್ಲರಿಗೂ ಗಾಬರಿಯನ್ನುಂಟುಮಾಡುತ್ತದೆ. ಸ್ತ್ರೀಯರ ಹಾಗೂ ಪುರುಷರ ಧ್ವನಿ ಯಾವಾಗ ಸೀಮೆಯನ್ನು ದಾಟುವುದೋ ಆಗ ಖಂಡಿತವಾಗಿ ಮೂಲದಲ್ಲಿಯೇ ಏನೋ ಅನಾಹುತ ಉಂಟಾಗಿದೆಯೆಂದು ಭಾವಿಸುವೆನು. ಜೋರಾದ ದು:ಖದ ಧ್ವನಿಯನ್ನು ಕೇಳಿದ ರಾಮನು ಹೀಗೆ ಅನುಮಾನ ಪಡುತ್ತಾನೆ. ಸ್ತ್ರೀಯರಾಗಲಿ ಅಥವಾ ಪುರುಷರಾಗಲಿ ತುಂಬಾ ಗಾಬರಿಯಿಂದ ಜೋರಾಗಿ ಅರಚಿದರೆ ಅಥವಾ ಕೂಗಿದರೆ ಏನೋ ಮಹತ್ತರವಾದ ಅನಾಹುತ ಸಂಭವಿಸಿದೆಯೆಂದು ಶಂಕಿಸುತ್ತೇನೆ ಅಥವಾ ತರ್ಕಿಸುತ್ತೇನೆ. ಅದಕ್ಕೆ ಕಾರಣ ವಿಧಿ.ಹಾಗಾಗಿಯೇ ದೈವೇನ ತಾಡಿತಮ್ ಎನ್ನುವ ಮಾತು. "ಸರ್ವಸಾಮರ್ಥ್ಯಶಾಲೀ ಮತ್ಪ್ರಭಾವ:" ಎನ್ನುವ ವಿಧಿಯ ಮಾತು ರಾಮನ ನಿರೂಪಣೆಯಲ್ಲಿ ಕಂಡುಬರುತ್ತದೆ. ರಾಮನಾಗಲಿ ಕೃಷ್ಣನಾಗಲಿ ವಿಧಿಯ ನಿರ್ಣಯದ ಮುಂದೆ ನಿಂತವರಲ್ಲ.ನಾವು ನೀವು ಯಾವ ಲೆಕ್ಕ ವಿಧಿಗೆ. ರಾಜನಿಗೆ ಏನೋ ಆಪತ್ತು ನಡೆದಿರುವ ಶಂಕೆ ಸೂಕ್ಷ್ಮವಾಗಿ ಕಂಡುಬರುತ್ತದೆ.ನಿರ್ಮರ್ಯಾದೋ ಎನ್ನುವ ಪದ ದು:ಖದಾಯಕ, ಕಳವಳದ ಸಂಕೇತ ಇತ್ಯಾದಿ ಅರ್ಥ ತಂದುಕೊಡುತ್ತದೆ.ನಾವೂ ಯಾರ ಕೂಗಿಗಾದರೂ ಒಂದು ಕ್ಷಣ ಓಗೊಟ್ಟು ಗಾಬರಿ ಪಡುವುದಿಲ್ಲವೇ ಹಾಗೆಯೇ ...
💐ಪ್ರತಿಮಾನಾಟಕದ ಒಂದು ಸುಮ💐 *मा स्वयं मन्युमुत्पाद्य परिहासे विशेषत: । शरीरार्धेन मे पूर्वमाबद्धा हि यदा त्वया ।।* _ರಾಮನಾಡುವ ಮಾತಿದು.ಸೀತೆ ತಮಾಷೆಗೆಂದು ನಾರುಬಟ್ಟೆ ಉಟ್ಟಾಗ ರಾಮ ಇದೇನು ಸನ್ಯಾಸಿನಿಯ ಭಾವವೋ ಅಥವಾ ಸುಮ್ಮನೆ ಉಟ್ಟುಕೊಂಡಿಯೋ ಎಂದು ಕೇಳುವನು.ಅನಂತರ ಸೀತೆ ಈಗೇನು ನಾನು ಸುಂದರವಾಗಿ ಕಾಣುವೆನೇ ಇಲ್ಲವೇ ಎಂದು ಪ್ರಶ್ನಿಸುವಳು.  ಆಗ ರಾಮನು ಇಕ್ಷ್ವಾಕುಗಳ ಮುದಿತನದ ಅಲಂಕಾರ ಕಾಣುವುದು ಎನ್ನುತ್ತಾನೆ. ಆಗ   ಸೀತೆ ಬೇಡ ಅಭಿಷೇಕದ ಸಮಯದಲ್ಲಿ ಅಮಂಗಳ ನುಡಿಯಬೇಡ ಎಂದು ವಿನಂತಿಸುತ್ತಾಳೆ. ಆಗ ರಾಮನಾಡುವ ಮಾತು. 'ಸೀತೆ, ನಾನು ತಮಾಷೆ ಮಾಡಿದಾಗ ನೀನೇ ಸ್ವತ: ಸಿಟ್ಟು ಮಾಡಿಕೊಂಡು ಅಮಂಗಳವನ್ನು ಸಂದೇಹಿಸುತ್ತಿದ್ದಿ. ಆದರೆ ನನ್ನ ಅರ್ಧಾಂಗಿಯಾದ ನೀನು ನಾರುಬಟ್ಟೆ ಉಟ್ಟಾಗ ನಾನೂ ಉಟ್ಟಂತೆ ಅಲ್ಲವೇ! ಎಷ್ಟೊಂದು ಪ್ರೀತಿ ತುಂಬಿದ ಮಾತು.ನಾನು ಉಟ್ಟರೇನು ನೀನು ಉಟ್ಟರೇನು ದೇಹವೆರಡು ಮನವು ಒಂದು ಎಂದು ವಿವಾಹ ಮಾಡಿಕೊಂಡಿರುವಾಗ ನೀನು ಅಮಂಗಳ ಸೂಚಕ ನಾರುಬಟ್ಟೆ ಉಟ್ಟಿದ್ದು ನನಗೂ ಉಡಿಸಿದಂತೇ ಆಯಿತಲ್ಲವೇ! ಹಾಗಾಗಿಯೇ ನನ್ನ ತಮಾಷೆಗೆ ಸಿಟ್ಟು ಮಾಡಿಕೊಳ್ಳದಿರು. ತಮಾಷೆಯ ಸಂದರ್ಭದಲ್ಲಿ ನಕ್ಕು ಹಗುರಾಗಿಸು ನಿನ್ನ ಮನದ ತುಮುಲವನ್ನು. ನಾನೂ ಧರಿಸಿದಂತೆ ಆಗುವುದೆಂದು ನೀನು ಯಾಕೆ ಯೋಚಿಸಲಿಲ್ಲ. ಚಿಂತೆ ಮಾಡದಿರು. 'ಅರ್ಧೋ ವಾ ಏಷ ಆತ್ಮನೊ ಯತ್ ಪತ್ನೀ ' ಎಂಬ ವೇದದ ಮಾತಿನಂತೆ ಪತಿ ಪತ್ನಿಯರು ಅರ್ಧ ...
🌹ಶಾಕುಂತಲದ ಸುಂದರ ಕುಸುಮ🌹 *अभिनवमधुलोलुपो भवान् तथा परिचुम्ब्य चूतमञ्जरीम् । कमलवसतिमात्रनिर्वृत्तो विस्मृतोस्येनां कथम् ।।* _ಶಕುಂತಲೆ ನಿರ್ಗಮಿಸಿದ್ದಾಳೆ ರಾಜನ ಹೃದಯದ ಅರಮನೆಯಿಂದ. ರಾಜನು ಸುಮ್ಮನೆ ಕುಳಿತು ಏನನ್ನೋ ಚಿಂತಿಸುತ್ತಿದ್ದಾನೆ. ಸಂಗೀತ ಶಾಲೆಯಿಂದ ಒಂದು ರಾಗ ಕೇಳುತ್ತಿದೆ‌.ಆ ಕಡೆಗೆ ಗಮನ ಕೊಟ್ಟು ಮಧುರವಾದ ಅವಳ ಧ್ವನಿಯನ್ನು ಆಲಿಸುತ್ತಿದ್ದಾನೆ.ಆ ಶ್ಲೋಕ ಹೀಗಿದೆ. ದುಂಬಿಯೇ, ಹೊಸ ಜೇನಿನ ಆಸೆಯಿಂದ ಮಾವಿನ ಹೂವಿನ ಗೊಂಚಲನ್ನು ಅಷ್ಟೊಂದು ಚುಂಬಿಸಿ, ಈಗ ನೋಡಿದರೆ ಕಮಲದ ರಸದಲ್ಲಿ ಮುಳುಗಿದವನಾಗಿ ಅವಳನ್ನು ( ಮಾವಿನ ಹೂವನ್ನು ) ಹೇಗೆ ಮರೆತೆ? ದುಂಬಿಯ ಸ್ವಭಾವ ಹೂವಿನಿಂದ ಹೂವಿಗೆ ಹಾರಿ ಮಕರಂದ ಹೀರುವುದು.ರಾಜನೂ ಅದೇ ಮಾಡುತ್ತಿದ್ದಾನೆಂಬ ಧ್ವನಿ ಅವಳ ಮಾತಿನಲ್ಲಿ ಇದೆ. ಶಕುಂತಲೆಯ ಮೇಲೆ ಹಿಂದೆ ಸಾಕಷ್ಟು ಪ್ರೀತಿ ತೋರಿ ಅವಳಲ್ಲೇ ಅನುರಕ್ತನಾಗಿ ಈಗ ನೋಡಿದರೆ ಅರಮನೆಗೆ ಬಂದು ರಾಣಿಯ ಮುಖವನ್ನು ನೋಡುತ್ತಾ ಅವಳನ್ನು ಮರೆತಿರುವೆಯಲ್ಲಾ! ದುಂಬಿಯಂತೆ ನೀನು ಕೃತಘ್ನತೆಯನ್ನು ತೋರಬಹುದೇ? ಮಾಡುತ್ತಿರುವುದು ಸರಿಯೇ ಎಂಬ ಭಾವ‌. ಹೇತು ಎಂಬ ಅಲಂಕಾರ ಇಲ್ಲಿ ಕಾಣುತ್ತದೆ.ಕಮಲದ ಹೂವಿನ ಮೇಲಿನ ಪ್ರೀತಿಯ ಕಾರಣ ಅವಳ ನೆನಪು ಮಾಸಿದೆ. ಶಕುಂತಲೆಯನ್ನು ಅಷ್ಟೆಲ್ಲ ಪ್ರೇಮಿಸಿ ಅವಳನ್ನು ಕೂಡಿ ಈಗ ತ್ಯಾಗ ಮಾಡುವುದು ಸರಿಯಲ್ಲ ಎಂಬ ಧ್ವನಿಯೂ ಸೇರಿದೆ.ರಾಜನ ಚಂಚಲತೆಯನ್ನೂ ಮರೆವಿನ ಸ್ವಭಾವವನ್ನೂ ಲೋಲುಪತೆಯನ್ನೂ ಇದು...
💐ಪ್ರತಿಮಾನಾಟಕದ ಒಂದು ಸುಮ💐 *कर्णौ त्वरापहृतभूषणभुग्नपाशौ संस्रंसिताभरणगौरतलौ च हस्तौ । एतानि चाभरणभारनतानि गात्रे स्थानानि नैव समतामुपयान्ति तावत् ।।* _ಸೀತೆ ನಾರುಬಟ್ಟೆ ಧರಿಸಿದರೆ ಹೇಗೆ ಕಾಣುವೆನೆಂದು ತರ್ಕಿಸಿ ಅದನ್ನು ಧರಿಸಲು ತೊಟ್ಟ ಆಭರಣಗಳನ್ನು ಕಳಚಿ ಸಖಿಯ ಕೈಯಲ್ಲಿ ನೀಡುತ್ತಾಳೆ.ಆ ಸಮಯದಲ್ಲಿ ಬಂದ ಶ್ರೀರಾಮನು ಅವಳ ಅಲಂಕಾರ ರಹಿತ ಸೌಂದರ್ಯವನ್ನು ಪ್ರಶಂಸಿಸಿ ಸನ್ಯಾಸಿನಿಯಂತೆ ಇರುವುದಕ್ಕೆ ಆಕ್ಷೇಪಿಸುತ್ತಾನೆ.ಹಾಗೆಯೇ ಮುಂದುವರೆಯುತ್ತಾ ಈಗ ತಾನೇ ಈ ಆಭರಣಗಳು ತೆಗಯಲ್ಪಂಟಂತಿವೆ ಎಂದು ಈ ಮಾತನ್ನು ನುಡಿಯುವನು. ಕಿವಿಗಳು ಸದ್ಯದಲ್ಲೇ ಕಳಚಿದ ಓಲೆಗಳನ್ನು ಸೂಚಿಸುತ್ತಿವೆ.ಅವುಗಳ ರಂಧ್ರ ಬೇಗನೇ ತೆಗೆದಿದ್ದರಿಂದ ಸ್ವಲ್ಪ ತಿರುಗಿದೆ.ಎರಡೂ ಕಿವಿಗಳ ರಂಧ್ರಗಳೂ ವಕ್ರವಾಗಿರುವುದು ಈಗ ಸ್ವಲ್ಪ ಮುಂಚೆ ಆಭರಣ ತೆಗೆದ ಸಂಕೇತ. ಕೈಗಳಲ್ಲಿ ಬಳೆಗಳ ಇರುವಿಕೆಯಿಂದ ಉಂಟಾದ ಬಿಳಿಬಣ್ಣ ಇನ್ನೂ ಮಾಸಿಲ್ಲ. ನಿರಂತರ ಧರಿಸುವಿಕೆ ಅಲ್ಲಿ ಚರ್ಮದ ವರ್ಣವನ್ನು ಬದಲಾಯಿಸುತ್ತದೆ.ನಿನ್ನ ಕೈಗಳಿನ್ನೂ ಬಿಳಿಯಾಗಿಯೇ ಇವೆ. ಆಭರಣಗಳಿಂದ ಬಾಗಿದ ದೇಹದ ಭಾಗಗಳ ಗುರುತು ಇನ್ನೂ ಹಾಗೆಯೇ ಇದೆ. ಇನ್ನೂ ಅವುಗಳು ಸಹಜ ಸ್ಥಿತಿಯನ್ನು ಪಡೆದಿಲ್ಲ. ಹೀಗಾಗಿ ನೀನು ಕೆಲ ನಿಮಿಷಗಳ ಮುಂಚೆ ಅಲಂಕಾರಮುಕ್ತಳಾಗಿದ್ದಿ ಎಂಬುದು ನಿನ್ನ ದೇಹದ ಅವಸ್ಥೆಯಿಂದಲೇ ತಿಳಿಯುವುದು.ಕವಿಯ ಚಾತುರ್ಯ ಗಮನಿಸಿ.ವರ್ಣನೆಯಲ್ಲಿಯೂ ಒಂದು ನಿಯಮವಿದೆ. ಕಂಠದಲ್ಲಿ ಸ...
🌹ಶಾಕುಂತಲದ ಒಂದು ಸುಮ🌹 *अर्थो हि कन्या परकीय एव तामद्य सम्प्रेष्य परिग्रहीतु: । जातो ममायं विशद: प्रकामं प्रत्यर्पितन्यास इवान्तरात्मा ।।* _ಶಕುಂತಲೆ ಮರಗಳ ಸಾಲಿನಲ್ಲಿ ಮರೆಯಾಗಿದ್ದಾಳೆ.ಕಣ್ವರು ಒಂದೆಡೆ ದು:ಖಪಡುತ್ತಿದ್ದಾರೆ.ಮತ್ತೊಂದೆಡೆ ಸಂತೋಷವೂ ಆಗಿದೆ.ಅವರದೇ ಮಾತಿನಿಂದ ಅದು ಅಭಿವ್ಯಕ್ತವಾಗಿದೆ. ಕನ್ಯೆ ಎಂದಿಗಾದರೂ ಪರರ ಸ್ವತ್ತೇ. ಹಡೆದ ಮಗಳೆಂದು ಮನೆಯಲ್ಲೇ ಇಟ್ಟುಕೊಳ್ಳಲು ಸಾಧ್ಯವಿಲ್ಲ.ಯಾವತ್ತಿದ್ದರೂ ಯೋಗ್ಯನ ಜೊತೆ ವಿವಾಹ ಮಾಡಿಕೊಡಬೇಕು. ಅವಳನ್ನು ಇಂದು ಪತಿಯ ಮನೆಗೆ  ಕಳುಹಿಸಿ ನನ್ನ ಮನಸ್ಸು ಬೇರೆಯವರು ನನ್ನಲ್ಲಿ ಇಟ್ಟ 'ನ್ಯಾಸ' ವನ್ನು ಅವರಿಗೆ ಹಿಂತಿರುಗಿ ಕೊಟ್ಟಷ್ಟು ಹಗುರಾಗಿದೆ.ನಿಕ್ಷೇಪವಾಗಿ ಇಟ್ಟ ನಿಧಿಯನ್ನು ಅದರ ಒಡೆಯನಿಗೆ ಹಿಂದಿರುಗಿಸಿದಾಗ ಆಗುವ ಋಣಮುಕ್ತತೆಯ ಭಾವಕ್ಕೂ ಮಗಳನ್ನು  ಪತಿಯ ಮನೆಗೆ ಕಳುಹಿಸಿದ ಮೇಲೆ ಜವಾಬ್ದಾರಿ ಪೂರೈಸಿದ ತಂದೆಯ ಮನಸ್ಸಿನಲ್ಲಿ ಉಂಟಾಗುವ ಕೃತಕೃತ್ಯಭಾವಕ್ಕೂ ಸಾಮ್ಯವನ್ನು ಮನೋಹರವಾಗಿ ಕಲ್ಪಿಸಲಾಗಿದೆ. ಹೀಗೆ ಕಣ್ವರ ಮನಸ್ಸು ಹಗುರವಾಗಿ ಆನಂದ ಅನುಭವಿಸುತ್ತಿದ್ದಾರೆ. ಜವಾಬ್ದಾರಿ ಪೂರೈಸಿದ ತೃಪ್ತಿಯೂ ಇದೆ. ಅದರೂ ಮಗಳ ಅಗಲುವಿಕೆ ಕೆಲವೊಮ್ಮೆ ಮನಕ್ಕೆ ಕಳವಳ ತಂದುಕೊಡುತ್ತದೆ._ 📜ಸಂಗ್ರಹ ✍ಶ್ರೀನಿಧಿ ಅಭ್ಯಂಕರ್.
*ವೇದಧರ್ಮ ಭಾಗ-೧* _ವೇದ ಎನ್ನುವುದು ಭಾರತೀಯ ಸಂಸ್ಕೃತಿಯ ಅಥವಾ ಪರಂಪರೆಯ ಬಹುಮುಖ್ಯ ಅಂಗ. *ಇಷ್ಟಪ್ರಾಪ್ತಿ ಅನಿಷ್ಟಪರಿಹಾರಯೋ: ಅಲೌಕಿಕಮುಪಾಯಂ ಯೋ ಗ್ರಂಥೋ ವೇದಯತಿ ಸ ವೇದ:*  ಎಂದರು ಸಾಯಣಾಚಾರ್ಯರು. ಯಾವ ಜ್ಞಾನವು ಬೇಕಾದ್ದನ್ನು ತರುವಲ್ಲಿ ಬೇಡವಾದ್ದನ್ನು ನಿರಾಕರಿಸುವಲ್ಲಿ ಸಹಕಾರಿಯೋ ಅವುಗಳೇ ವೇದಗಳು. *ಧರ್ಮೋ ವಿಶ್ವಸ್ಯ ಜಗತ: ಪ್ರತಿಷ್ಠಾ* ಎಂಬ ಮಾತಿನಂತೆ ಧರ್ಮವೇ ಜಗತ್ತಿನ ಎಲ್ಲದರ ಅಳಿವು ಉಳಿವಿಗೆ ಕಾರಣ.ಆಸ್ತಿಕ ಹಾಗೂ ನಾಸ್ತಿಕ ದರ್ಶನಗಳೆರಡರ ಮೂಲವೂ ಇವೇ ವೇದಗಳು.ದೇಹಕ್ಕೆ ಹೇಗೆ ತಲೆಯು ಮುಖ್ಯವೋ ನಮ್ಮ ಎಲ್ಲಾ ಆಚಾರ ವಿಚಾರಗಳಲ್ಲಿ ವೇದಗಳೇ ಮುಖ್ಯ. ಅವುಗಳಿಂದಲೇ ಸಂಸ್ಕೃತಿ ಜನಿಸಿತು. ಇದಕ್ಕಾಗಿಯೇ ಏನೋ *ವೇದೋಖಿಲೋ ಧರ್ಮ ಮೂಲಂ* ಎನ್ನುವ ಮಾತು.ಎಲ್ಲಾ ಧರ್ಮಗಳ ಮೂಲವೂ ವೇದವೆನ್ನುವುದು ಇದರ ಅರ್ಥ. ಹಾಗಾದರೆ ವೇದ ಎಂದರೇನು?ಇದು ಸಾಮಾನ್ಯರ ಪ್ರಶ್ನೆ. ಸರಳವಾಗಿ ಹೇಳುವುದಾದರೆ ವೇದ= ಜ್ಞಾನ ಅಷ್ಟೇ. *ವಿದಂನ್ತ್ತ್ಯೇಭೀ ಧರ್ಮಬ್ರಹ್ಮಣೀ ಕ್ರಿಯಾಜ್ಞಾನಮಯಂ ವೇದ:* ಅಂದರೆ ಧರ್ಮ ಹಾಗೂ ಭಗವಂತನ ಬಗ್ಗೆ ತಿಳಿಸಿಕೊಡುವ ಜ್ಞಾನ. ಯಜ್ಞದ ಅಂಗ ಎಂಬುದು ಇನ್ನೊಂದು ಅರ್ಥ.ನಮ್ಮ ಕರ್ಮಗಳೆಲ್ಲವೂ ಯಜ್ಞ ಅಂದರೆ ತ್ಯಾಗದ ರೂಪವಾದಾಗ ವೇದೋಕ್ತ ಕರ್ಮ ಮಾಡಿದಂತೆ  ಆಗುತ್ತದೆ.ಇದು ಅಪೌರುಷೇಯ.ಋಷಿಗಳು ವೇದಗಳನ್ನು ಸಾಕ್ಷಾತ್ಕರಿಸಿಕೊಂಡಿದ್ದು  ಹೊರತು ಈ ಲೇಖನದಂತೆ ಕೂತು ಬರೆದದ್ದಲ್ಲ.ಬರೆದ ಲಿಪಿ ಹಾಳಾಗಬಹುದೇ ಹೊರತು ಒಳಗಿನ ಜ್ಞಾ...
💐ಪ್ರತಿಮಾನಾಟಕದ ಒಂದು ಸುಮ💐 *शत्रुघ्नलक्ष्मणगृहीतघटाभिषेके छत्रे स्वयं नृपतिना रुदता गृहीते । सम्भ्रान्तया किमपि मन्थरया च कर्णै: राज्ञ: शनैरभिहितं च न चास्मि राजा ।।* _ಭಾಸನ ಕಥನಶೈಲಿ ಇಂತಹ ಸಂದರ್ಭಗಳಲ್ಲಿ ಹೆಚ್ಚು ಇಷ್ಡವಾಗುತ್ತದೆ.ಮೂಲರಾಮಾಯಣಕ್ಕೆ ವಿರೋಧ ಬರದಂತೆ ಕೆಲವನ್ನು ಮಾತ್ರ ವ್ಯತ್ಯಾಸ ಮಾಡಿ ಹೇಳುತ್ತಾನೆ. ರಾಮನು ಅಭಿಷೇಕ ಒಪ್ಪದಿದ್ದಾಗ ದಶರಥ ವಯಸ್ಸಿನ ಕಾರಣ ಹೇಳಿ ಒಪ್ಪಿಸುತ್ತಾನೆ. ಅನಂತರ ಲಕ್ಷ್ಮಣ ಶತ್ರುಘ್ನರು ತೀರ್ಥ ತುಂಬಿದ ಕೊಡಗಳನ್ನು ಕೈಗಳಲ್ಲಿ ಹಿಡಿದು ಅಭಿಷೇಕ ಮಾಡಲು ಸಿದ್ಧರಾಗಿರುವಂತೆ, ಆನಂದ ಬಾಷ್ಪ ಸುರಿಸುತ್ತಿರುವ ರಾಜ ದಶರಥ ತಾನೇ ಸ್ವತ: ಬಿಳಿಯ ಬಣ್ಣದ ದೊಡ್ಡ ರಾಜರಿಗೆ ಯೋಗ್ಯವಾದ ಛತ್ರವನ್ನು ಹಿಡಿದು ಇನ್ನೇನು ರಾಜನಾದೆ ಎನ್ನುವಷ್ಟರಲ್ಲಿ , ಬೇಗ ಬೇಗನೇ ಬಂದು ದಶರಥನನ್ನು ಸಮೀಪಿಸಿದ ಮಂಥರೆ ಅವನ ಕಿವಿಯಲ್ಲಿ ಏನನ್ನೋ ಗುಟ್ಟಾಗಿ ಹೇಳಲಾಗಿ ರಾಜನು  ಮೆಲ್ಲನೆ ನಿಟ್ಟುಸಿರು ಬಿಡುತ್ತಾ ನುಡಿದ ಆಗ ತಿಳಿಯಿತು ನಾನು ರಾಜನಲ್ಲ, ಅಥವಾ ಆಗ ಅರುಹಿದಳು ಮಂಥರೆ ನೀನು ರಾಜನಾಗಲಾರೆ ಎಂದು. ರಾಮಾಯಣದಲ್ಲಿ ಇಲ್ಲದ ದೃಶ್ಯ ಸೃಷ್ಟಿಸಿ ಭಾಸ ಅದಕ್ಕೊಂದು ಹಠಾತ್ ತಿರುವು ಕಲ್ಪಿಸಿದ್ದಾನೆ.ಚಲನಚಿತ್ರಗಳಲ್ಲಿ ಸಾಮಾನ್ಯವಾಗಿ ಬಳಸುವ ಅನಿರೀಕ್ಷಿತ ಬದಲಾವಣೆಯ ತಂತ್ರ ಭಾಸನು ಇಲ್ಲೇ ಒಂದನೇ ಶತಮಾನದಷ್ಟು ಹಿಂದಿನ ಕಾಲದಲ್ಲಿ ಬಳಸಿದ್ದಾನೆ.ಎಲ್ಲರೂ ನಿರೀಕ್ಷಿಸುತ್ತಿದ್ದಾರೆ ರಾಮಾಭಿಷೇಕವ...
🌹ಶಾಕುಂತಲದ ಮತ್ತೊಂದು ಸೌರಭ🌹 *भूत्वा चिराय चतुरन्तमहीसपत्नी दौष्यन्तिमप्रतिहतं तनयं निवेश्य । भर्त्रा तदर्पितकुटुम्बभरेण  सार्धं शान्ते करिष्यसि पदं पुनराश्रमेस्मिन् ।।* _ಶಕುಂತಲೆ ತಂದೆಗೆ ನಮಸ್ಕರಿಸಿ ಅಳುತ್ತಿದ್ದಾಳೆ.ಕಣ್ವರು ಮಗಳನ್ನು ಸಮಾಧಾನ ಮಾಡುತ್ತಿದ್ದಾರೆ.ಇನ್ನು ಯಾವಾಗ ಆಶ್ರಮಕ್ಕೆ ನಾನು ಕಾಲಿಡುವುದು ಎಂದು ಶಕುಂತಲೆ ಪ್ರಶ್ನಿಸಿದಾಗ ಕಣ್ವರ ಮನೋಹರವಾದ ಮಾತು.ಮಗಳೇ- ನಾಲ್ಕು ದಿಕ್ಕಿನಲ್ಲಿ ಸಮುದ್ರದಿಂದ ಸುತ್ತುವರೆದ ಭೂಮಿಗೆ ಬಹುಕಾಲ ಸವತಿಯಾಗಿ  , ತನಗೆ ಪ್ರತಿಯಾಗಿ ನಿಲ್ಲಬಲ್ಲ ಮಹಾರಥಿಕನಿಲ್ಲದ ದುಷ್ಯಂತನಿಂದ ಪಡೆದ ನಿನ್ನ ಮಗನನ್ನು ಪಟ್ಟಕಟ್ಟಿ, ಅವನಿಗೆ ಕುಟುಂಬದ ಭಾರವನ್ನು ಒಪ್ಪಿಸಿದ ನಿನ್ನ ಪತಿಯೊಡನೆ ಶಾಂತವಾದ ಈ ಆಶ್ರಮದಲ್ಲಿ ಮತ್ತೆ ಹೆಜ್ಜೆಯನ್ನಿಡುವೆ.ಇದು ಆಶೀರ್ವಾದವೂ ಹೌದು,ಕಿವಿಮಾತೂ ಹೌದು,ಬಯಕೆಯೂ ಹೌದು, ಲೋಕಕ್ಷೇಮವನ್ನು ಬಯಸುವ ಋಷಿಯ ಮನದ ಮಾತೂ ಹೌದು. ರಾಜನಿಗೆ ಮೊದಲ ಪತ್ನಿ ರಾಜ್ಯಲಕ್ಷ್ಮಿ.ಭೂಮಿಯೇ ಅವನ ರಾಣಿ.ಉಳಿದವರೇನಿದ್ದರೂ ಸವತಿಯರು.ರಾಜ್ಯಲಕ್ಷ್ಮಿಗಾಗಿ ಹೋರಾಡುತ್ತಲೇ ಇರುತ್ತಾನೆ.ಅವಳಿಲ್ಲವಾದರೆ ರಾಜಪದವಿ ಎಲ್ಲಿ? ಹಾಗಾಗಿಯೇ ಕಣ್ವರ ಮಾತು ಭೂಮಿಗೆ ಸವತಿಯಾಗಿ ಬಹುಕಾಲ ಇರು.ನಿಮ್ಮ ಜೋಡಿ ಬೇರ್ಪಡದೆ ರಾಜನು ನಿನ್ನನ್ನು ರಾಣಿಯಂತೆ ನೋಡಿಕೊಳ್ಳಲಿ.ದಾಂಪತ್ಯ ಅವಕಾಶವಾದಿ ಆಗದಿರಲಿ. ಎರಡನೆಯ ಮಾತು ಶತ್ರುಗಳ ಶಕ್ತಿ ಬೆಳೆಯದಿರುವ ಮಾತು.ದುಷ್ಯಂತನಷ್ಟೇ ಮ...
ಮಹಾಭಾರತದ ಕೆಲವು ಶ್ಲೋಕಗಳು📃 *ರಾಜಾನಂ ಪ್ರಥಮಂ ವಿಂದೇತ್ ತತೋ ಭಾರ್ಯಾಂ ತತೋ ಧನಮ್.ತ್ರಯಸ್ಯ ಸಂಚಯೇ ಚಾಸ್ಯ ಜ್ಞಾತೀನ್ಪುತ್ರಾಂಶ್ಚ ಧಾರಯೇತ್.* ಏಕಚಕ್ರದ ಬ್ರಾಹ್ಮಣನಾಡುವ ಮಾತು.ಬುದ್ಧಿವಂತನು ಮೊದಲು ಒಳ್ಳೆಯ ರಾಜನನ್ನು ಪಡೆಯಬೇಕು.ಅಥವಾ ಒಳ್ಳೆಯ ರಾಜನಿದ್ದೆಡೆ ವಾಸಿಸಬೇಕು. ಆಮೇಲೆ ಪತ್ನಿಯನ್ನೂ ಅದಾದ ಮೇಲೆ ಧನವನ್ನೂ ಸಂಪಾದಿಸಬೇಕು.ಈ ಮೂರನ್ನೂ ಪಡೆದ ಮೇಲೆ ಬಂಧುಗಳನ್ನೂ ಮಕ್ಕಳನ್ನೂ ರಕ್ಷಿಸಬೇಕು.ಅದರೆ ನಾನು ಇದಕ್ಕೆ ವಿರುದ್ಧವಾಗಿ ಮಾಡಿ ಈಗ ಪಶ್ಚಾತ್ತಾಪ ಪಡುತ್ತಿರುವೆ.ನಾವೂ ಬ್ರಾಹ್ಮಣನಂತೆ ಮೊದಲು ಧನಕ್ಕೆ ಆದ್ಯತೆ ಅಲ್ಲವೇ! ಆಮೇಲೆ ಏನಾದರೂ ಘಟಿಸಿದಾಗ ಯಾರಮೇಲಾದರೂ ದೂರು ಹಾಕುತ್ತೇವೆ.ಆಯ್ಕೆ ಸರಿ ಇರಲಿಲ್ಲವೆಂದು ನಮ್ಮನ್ನು ತೆಗಳುವುದಿಲ್ಲ ಎಂದಿಗೂ. *ಬ್ರಹ್ಮವಧ್ಯಾ ಪರಂ ಪಾಪಂ ನಿಷ್ಕೃತಿರ್ನಾತ್ರ ವಿದ್ಯತೇ.ಅಬುದ್ಧಿಪೂರ್ವಂ ಕೃತ್ವಾಪಿ ಶ್ರೇಯೋ ಆತ್ಮವಧೋ ಮಮ.* ಬ್ರಾಹ್ಮಣನು ಕುಂತಿಯ ಮಕ್ಕಳಿಗಿಂತ ತನ್ನ ಸಾವೇ ಲೇಸು ಎಂದು ಹೇಳುವ ಮಾತು. ಬ್ರಹ್ಮಹತ್ಯೆ ಬಹಳ ದೊಡ್ದ ಪಾಪ.( ಬ್ರಹ್ಮನನ್ನು ಅರಿತವನ ಹತ್ಯೆ ಯಾವುದೇ ಜಾತಿಯವರದ್ದಲ್ಲ) ಇದಕ್ಕೆ ಪ್ರಾಯಶ್ಚಿತ್ತವೂ ಇಲ್ಲ.ಅವಿವೇಕದಿಂದ ತನ್ನ ಪ್ರಾಣ ಬಿಟ್ಟರೂ ಬ್ರಹ್ಮಹತ್ಯೆಗಿಂತ  ಆತ್ಮವಧೆಯೇ ಶ್ರೇಯಸ್ಕರವೆಂದು ತೋರುತ್ತದೆ.ಹಿಂಸೆಯ ಬಗೆಗೆ ಧರ್ಮದ ನಡೆಯನ್ನು ಇದು ಎತ್ತಿಹಿಡಿಯುತ್ತದೆ. *ಆಗತಸ್ಯ ಗೃಹೇ ತ್ಯಾಗಸ್ತಥೈವ ಶರಣಾರ್ಥಿನ: ಯಾಚಮಾನಸ್ಯ ಚ ವಧೋ ನೃಶಂಸಂ ಪರಮಂ ಮತಮ್.* ...
💐ಪ್ರತಿಮಾನಾಟಕದ ಒಂದು ಚಿಕ್ಕ ಸುಮ💐 *समं बाष्पेण पतता तस्योपरि ममाप्यध: । पितुर्मेक्लेदितौ पादौ ममापि क्लेदितं शिर: ।।* _ಸೀತೆಗೆ ರಾಮ ಹೇಳುವ ಮಾತು.ದಶರಥನ ಕರೆಯಂತೆ ಅವನ ಬಳಿ ಸಾಗಿದಾಗ ಪಟ್ಟಕ್ಕೇರಲು ನಿರ್ದೇಶಿಸಿದರು ನನ್ನ ತಂದೆ.ಅನಂತರ ಇಬ್ಬರ ಸ್ಥಿತಿಯೂ ಒಂದೇ ಆಯಿತು.ಹೇಗೆಂದರೆ ಅವರ ಪಾದಗಳಿಗೆ ನಮಸ್ಕರಿಸಲು ತಲೆ ಬಾಗಿದಾಗ ನನ್ನ ತಲೆ ಆರ್ದ್ರವಾಯಿತು.ಅದೇ ಕ್ಷಣ ಅವರ ಕಾಲುಗಳೂ ಆರ್ದ್ರವಾದವು. ಪುತ್ರನ ಮೇಲಿನ ವಾತ್ಸಲ್ಯವು ದಶರಥನ ಕಣ್ಣುಗಳಲ್ಲಿ ಆನಂದಬಾಷ್ಪವನ್ನು ತರಿಸಿ ನಮಸ್ಕರಿಸುತ್ತಿದ್ದ ರಾಮನ ತಲೆಯನ್ನು ಸೋಕಿದವು.ಅವನ ತಲೆ ತಂದೆಯ ಪ್ರೀತಿಯ ಕಡಲಿನಲ್ಲಿ ಒದ್ದೆಯಾಯಿತು.ಅದೇ ಸಂದರ್ಭದಲ್ಲಿ ತಂದೆ ತನ್ನ ಮೇಲೆ ತೋರಿದ ಪ್ರೀತಿಯು ರಾಮನ ಕಣ್ಣುಗಳಲ್ಲಿಯೂ ಆನಂದಾಶ್ರುಗಳನ್ನು ಸುರಿಸಿತು.ಆಗ ದಶರಥನ ಪಾದಗಳು ಪುತ್ರನ ವಾತ್ಸಲ್ಯದ ಪಾದ್ಯದಿಂದ ಆರ್ದ್ರವಾದವು.ಹೀಗೆ ಇಬ್ಬರ ಸ್ಥಿತಿಯೂ ದೈಹಿಕವಾಗಿ ಭಿನ್ನವಿದ್ದರೂ ಮಾನಸಿಕವಾಗಿ ಒಂದೇ ಆಗಿತ್ತು.ಹರಿವೇ ಉಸಿರಾಗಿರುವ ನೀರಿನ ಗುಣದಂತೆ ಅತಿಶಯವಾದ ಪ್ರೀತಿಯೂ ಕೂಡ.ನಾವು ಒಬ್ಬರಲ್ಲಿ ಹೆಚ್ಚು ಪ್ರೀತಿ ತೋರಿದಷ್ಟೂ ನಮ್ಮಲ್ಲೂ ಅವರ ಪ್ರೀತಿ ಹೆಚ್ಚುತ್ತಲೇ ಹೋಗುವುದು ಎಂಬ ಮಧುರ ಸಂದೇಶ ಕವಿಯ ಮಾತಿನ ಭಾವ._ 📜ಸಂಗ್ರಹ✍ಶ್ರೀನಿಧಿ ಅಭ್ಯಂಕರ್.
🌹ಶಾಕುಂತಲದ ಸುಂದರ ಕುಸುಮ 🌹 *शुश्रूषस्व गुरून् कुरु प्रियसखीवृत्तिं सपत्नीजने भर्तुर्विप्रकृतापि रोषणतया मा स्म प्रतीपं गम: । भूयिष्ठं भव दक्षिणा परिजने भाग्येष्वनुत्सेकिनी यान्त्येवं गृहिणीपदं युवतयो वामा: कुलस्याधय: ।।* _ಕಣ್ವರು ಶಕುಂತಲೆಗೆ ಬೋಧಿಸುವ ಮಧುರ ಶ್ಲೋಕ. ಪತಿಗೃಹದಲ್ಲಿ ಹೇಗಿರಬೇಕೆಂದು ನವಿರಾಗಿ ಉಪದೇಶಿಸುತ್ತಿದ್ದಾರೆ.ಮೊದಲನೇ ಮಾತೇ ಗುರುಹಿರಿಯರನ್ನು ಗೌರವಿಸು. ಅದು ಎಲ್ಲರ ಸ್ನೇಹಕ್ಕೆ ಕಾರಣ.(ಈಗಿನ ಹೆಣ್ಣುಮಕ್ಕಳು ಹಿರಿಯರೇ ಇರದಿರಲಿ ಎಂದು ಬಯಸುತ್ತಿದ್ದಾರೆ. ) ಗುರುಹಿರಿಯರ ಸೇವೆ ಅವರ ಮನವನ್ನು ಗೆಲ್ಲುವ ಪರಿಣಾಮಕಾರಿ ಅಸ್ತೃ. ರಾಜಾನೋ ಬಹುವಲ್ಲಭಾ: ಎಂಬಂತೆ ಅವನಿಗೆ ಅನೇಕ ಪತ್ನಿಯರಿರಬಹುದು.ನೀನು ಅವರೆಲ್ಲರಲ್ಲೂ ಪ್ರಿಯಸಖಿಯಂತೆ ವರ್ತಿಸು.ಅಸೂಯಾರಹಿತಳಾಗಿ ಅವರೊಡನೆ ಸ್ನೇಹ ಮಾಡಿದರೆ ಅದೇ ನಿನ್ನ ಒಳಿತನ್ನು ಸಾರುವುದು. ಪತಿಯು ಕೋಪಗೊಂಡಾಗ ಅಥವಾ ತಿರಸ್ಕಾರ ಮಾಡಿದಾಗ ನೀನು ಅದನ್ನೇ ಮಾಡದೇ ಪ್ರೀತಿಯನ್ನೇ ತೋರು.ಕೋಪ ಜೊತೆಗೂಡಿ ಅನಾಹುತವಾಗಬಹುದು.ಇಂದು ತಿರಸ್ಕಾರ ಮಾಡಿದರೂ ನಿನ್ನ ಪ್ರೀತಿಗೆ ಮುಂದೆ ಮಣಿದು ಪ್ರೀತಿಸಬಹುದು.ಹಾಗಾಗಿ ವಿರೋಧಿಸದಿರು ಪತಿಯನ್ನು. ಸೇವಕರ ವಿಷಯದಲ್ಲಿ ಸೌಜನ್ಯದಿಂದಿರಲಿ ನಿನ್ನ ವರ್ತನೆ.ಅವರು ಅಹಂಕಾರ ತೋರಿದೆಯೆಂದು ಚಾಡಿ ಹೇಳುವುದೋ, ಕೇಡು ಮಾಡುವುದೋ ಮಾಡಬಹುದು.ಅವರೊಡನೆಯ ನಯದ ವರ್ತನೆ ಅವರ ವಿಶ್ವಾಸವನ್ನು ಸಂಪಾದಿಸುತ್ತದೆ. ಐಶ್ವರ್...
📃ಮಹಾಭಾರತದ ಕೆಲವು ಉತ್ತಮ ಶ್ಲೋಕಗಳು💦 *ಅವಧ್ಯಾ: ಸ್ತ್ರಿಯ ಇತ್ಯಾಹು: ಧರ್ಮಜ್ಞಾ ಧರ್ಮನಿಶ್ಚಯೇ |ಧರ್ಮಜ್ಞಾನ್ರಾಕ್ಷಸಾನಾಹುರ್ನಹನ್ಯಾತ್ಸಚ ಮಾಮಪಿ ||* ಏಕಚಕ್ರನಗರದ ಬ್ರಾಹ್ಮಣನ ಪತ್ನಿಯಾಡುವ ಮಾತು- ಸ್ತ್ರೀಯರನ್ನು ಕೊಲ್ಲಬಾರದೆಂದು ಧರ್ಮಜ್ಞರು ಹೇಳಿದ್ದಾರೆ.ಧರ್ಮವನ್ನು ನಿಶ್ಚಯಿಸುವಾಗ ರಾಕ್ಷಸರೂ ಧರ್ಮಜ್ಞರಾಗಿರುವರೆಂದು ಹೇಳುವರು.ಆದುದರಿಂದ ಅವನು ನನ್ನನ್ನು ಕೊಲ್ಲದೆ ಬಿಡಬಹುದು. ರಾಮನು ತಾಟಕಿಯನ್ನು ಕೊಲ್ಲುವ ಮೊದಲು ಏಕೆ ವಿಶ್ವಾಮಿತ್ರರನ್ನು ಪ್ರಶ್ನಿಸಿದನೆಂಬುದಕ್ಕೆ ಇಲ್ಲಿ ಉತ್ತರವಿದೆ.ಸ್ತ್ರೀಯರು ಸಾಮಾನ್ಯವಾಗಿ ವಧಾರ್ಹರಲ್ಲ. *ನಿ:ಸಂಶಯೋ ವಧ: ಪುಂಸಾಂ ಸ್ತ್ರೀಣಾಂ ಸಂಶಯಿತೋ ವಧ: | ಅತೋ ಮಾಮೇವ ಧರ್ಮಜ್ಞ ಪ್ರಸ್ಥಾಪಯಿತುಮರ್ಹಸಿ ||* ಪುರುಷರನ್ನು ಕೊಲ್ಲುವ ವಿಷಯದಲ್ಲಿ ಹೆಚ್ಚು ಸಂಶಯವಿಲ್ಲ. ಆದರೆ ಸ್ತ್ರೀಯರನ್ನು ಕೊಲ್ಲುವುದು ಸಂಶಯಾಸ್ಪದ.ಹಾಗಾಗಿ ನನ್ನನ್ನೇ ಅವನ ಬಳಿಗೆ ಕಳುಹಿಸು ಎಂದು  ಆ ಸ್ತ್ರೀ ಹೇಳುತ್ತಾಳೆ.ಇಲ್ಲಿಯೂ ವ್ಯಾಸರ ಮಾತು ಧರ್ಮಸೂಕ್ಷ್ಮವನ್ನು ತಿಳಿಸುತ್ತದೆ. *ನ ಚಾಪ್ಯಧರ್ಮ: ಕಲ್ಯಾಣ ಬಹುಪತ್ನೀಕತಾ ನೃಣಾಮ್ | ಸ್ತ್ರೀಣಾಮಧರ್ಮ: ಸುಮಹಾನ್ಭರ್ತು: ಪೂರ್ವಸ್ಯ ಲಂಘನೇ ||* ಈ ಶ್ಲೋಕ ಈಗಿನ ಸಮಕಾಲೀನ ವಿವಾದದ ಕೇಂದ್ರಬಿಂದು.ಅನೇಕ ಮಂದಿ ಪತ್ನಿಯರನ್ನು  ಹೊಂದಿರುವುದು ಪುರುಷರಿಗೆ ಅಧರ್ಮವಲ್ಲ. ಆದರೆ ಮೊದಲಿನ ಪತಿಯನ್ನು ಅತಿಕ್ರಮಿಸುವುದು ಸ್ತ್ರೀಯರಿಗೆ ಅಧರ್ಮ.ಇದು ಪತಿ ಸಜ್ಜನನಾಗಿರುವಾಗ...
💐ಪ್ರತಿಮಾನಾಟಕದ ಒಂದು ಕುಸುಮ💐 *छत्रं सव्यजनं सनन्दिपटहं भद्रासनं कल्पितं न्यस्ता हेममया: सदर्भकुसुमास्तीर्थाम्बुपूर्णा घटा:। युक्त: पुष्यरथश्च मन्त्रिसहिता: पौरा: समभ्यागता: सर्वस्यास्य हि मङ्गलं स भगवान् वेद्यां वसिष्ठ: स्थित: ।।* _ರಾಮಾಭಿಷೇಕದ ಸಿದ್ಧತೆಗಳನ್ನು ವರ್ಣಿಸುವ ಶ್ಲೋಕ. ರಾಜರಿಗೆ ಹಿಡಿಯುವ ಬೃಹದಾಕಾರದ ಛತ್ರಿ ಅಲಂಕೃತಗೊಂಡು ಸಿದ್ಧವಾಗಿದೆ.ಅಭಿಷೇಕವಾದ ಮೇಲೆ ಹಿಡಿಯುವುದು ವಾಡಿಕೆ.ಸುತ್ತಲೂ ಹವಳ ಮುತ್ತುಗಳನ್ನು ಪೋಣಿಸಿ ಶ್ರೀಮಂತ ಛತ್ರ ತಯಾರಾಗಿದೆ.ಜೊತೆಗೆ ರಾಜನು ಬೆವರದಿರುವಂತೆ ಬೀಸಣಿಗೆಯು ಸಿದ್ಧವಾಗಿದೆ.ಬೀಸುವವರು ಅಲಂಕಾರ ಮಾಡಿಕೊಂಡು ನಿಂತಿರುವರು.ಸುತ್ತಲೂ ತಂಪಿದ್ದರೂ ಜನಜಂಗುಳಿ ಹಾಗೂ ರಾಜನ ಕಾರ್ಯದ ಒತ್ತಡದಿಂದಾಗಿ ಉಂಟಾಗುವ ಸೆಕೆಯ ನಿವಾರಣೆಗೆ ಈ ಬೀಸುವ ಕಾಯಕ.ಸಿಂಹಾಸನವು ಬಣ್ಣಗಳನ್ನು ಲೇಪಿಸಿಕೊಂಡು, ಹಳೆಯ ಕುಸುರಿಗಳನ್ನು ಇನ್ನಷ್ಟು ನವೀಕರಿಸಿಕೊಂಡು ರಾಜನನ್ನೇ ನಿರೀಕ್ಷಿಸುತ್ತಿದೆ.ಪಕ್ಕದಲ್ಲೇ ರಾಜನ ಆಗಮನದ ಕಾಲದಲ್ಲಿ ನುಡಿಸಲು ಸಿದ್ದವಾದ ಒಂದು ವಿಧದ ಮಂಗಲವಾದ್ಯದೊಡನೆ ಸೇವಕ ಸಿದ್ಧನಾಗಿರುವನು.ಪಟಹ ಒಂದು ಬಗೆಯ ವಾದ್ಯ.ಪಾವಿತ್ಯ್ರದ ಕುರುಹಾದ ದರ್ಭೆಗಳು ಹಾಗೂ ಸುವಾಸಿತ ಪುಷ್ಪಗಳೊಡಗೂಡಿದ ಚಿನ್ನದ ಕಲಶಗಳು ನಾನಾ ನದಿಗಳ ಹಾಗೂ ಸಪ್ತ ಸಮುದ್ರಗಳ ತೀರ್ಥದಿಂದ ತುಂಬಿ ಯಾವಾಗ ರಾಮನ ಶಿರವನ್ನು ಸ್ಪರ್ಶಿಸುವೆವೊ ಎಂದು ಕಾತರಗೊಂಡು ಕಾಯುತ್ತಿವೆ. ಪಟ್ಟಾಭಿಷೇಕ...
🌹ಶಾಕುಂತಲದ ಸುಂದರ ಕುಸುಮ🌹 *अस्मान्साधु विचिन्त्य संयमधनानुच्चै: कुलं चात्मन: त्वय्यास्या: कथमप्यबान्धवकृतां स्नेहप्रवृत्तिं च ताम् । सामान्यप्रतिपत्तिपूर्वकमियं दारेषु दृश्या त्वया भाग्यायत्तमत: परं न खलु तद्वाच्यं वधूबन्धुभि: ।।* _ಕಣ್ವಮಹರ್ಷಿಗಳು ದುಷ್ಯಂತನಿಗೆ ಶಿಷ್ಯನ ಮೂಲಕ ಈ ಸಂದೇಶ ಕಳುಹಿಸುತ್ತಿದ್ದಾರೆ.ಕನ್ಯೆ ಹೆತ್ತವರ ಜವಾಬ್ದಾರಿ ಮತ್ತೆ ಮತ್ತೆ ಸೂಚಿಸುತ್ತಿರುವಂತಿದೆ ಈ ಸುಮ.'ದುಷ್ಯಂತ ' ಇವಳನ್ನು ಹೀಗೆ ನೋಡಿಕೊ.ಸಂಯಮವೇ ನಮ್ಮ ಧನ ಎಂಬುದನ್ನು ಅರ್ಥಮಾಡಿಕೊಂಡು, ತನ್ನ ಕುಲದ ದೊಡ್ಡಸ್ತಿಕೆಯನ್ನೂ, ಬಂಧುಗಳ ಮಧ್ಯಸ್ಥಿಕೆ ಇಲ್ಲದೆ ಇವಳಲ್ಲಿ ತಾನು ಅನುರಾಗ ತಾಳಿದುದನ್ನೂ ಆಲೋಚಿಸಿ, ತನ್ನ ಪತ್ನಿಯರಿಗೆ ಸಾಮಾನ್ಯವಾಗಿ ಸಲ್ಲಬೇಕಾದ ಆದರದಿಂದ ಇವಳನ್ನು ನೋಡಿಕೊಳ್ಳಬೇಕು.ಇದಕ್ಕಿಂತ ಹೆಚ್ಚಿನದು ಅವಳ ಭಾಗ್ಯಕ್ಕೆ ಬಿಟ್ಟದ್ದು.ಅದನ್ನು ವಧುವಿನ ಬಂಧುಗಳು ಹೇಳಬಾರದು.ವಧುವಿನ ತಂದೆಯಾಗಿ ಅಳಿಯನಿಗೆ ಕಣ್ವರಾಡುವ ಮಾತಿದು.ನಮ್ಮ ಸಂಪತ್ತು ಸಹನೆ ಅಥವಾ ತಾಳ್ಮೆ. ಅದನ್ನು ಬಿಟ್ಟು ಹೆಚ್ಚಿನ ಸಂಪತ್ತಿಲ್ಲ.ತವರುಮನೆಯಿಂದ ಅದು ತಾ ಇದು ತಾ ಎಂದು ಕಳುಹಿಸಿದರೆ ತರಲು ಏನೂ ಇಲ್ಲ ಎಂಬ ಗೂಢಾರ್ಥ.ಇನ್ನೊಂದು ಅರ್ಥದಲ್ಲಿ ತಾಳ್ಮೆ ನಮ್ಮ ಬಳಿ ಉಳಿಯುವಂತೆ ಮಾಡು.ಅವಳ ಯೋಗಕ್ಷೇಮ ಹಾಳುಗೆಡವಿ ನಮ್ಮ ತಾಳ್ಮೆ ಕೆಡಿಸದಿರು.ಅದು ನಿನಗೂ ಕ್ಷೇಮ.ನಿನ್ನ ಪುರುವಂಶದ ಶ್ರೇಷ್ಠತೆಗೆ ಅನುಸಾರ ಅವಳನ್...
ದೇವಿಯ ಏಳನೇ ರೂಪ ಕಾತ್ಯಾಯನಿ.ಕತ ವಂಶದಲ್ಲಿ ಕಾಲಾಂತರದಲ್ಲಿ ಜನಿಸಿದವಳು.ಒಂದು ಕೈಯಲ್ಲಿ ಕಮಲ,ಇನ್ನೊಂದು ಕೈಯಲ್ಲಿ ಖಡ್ಗ ಹಿಡಿದ ಈಗೆ ದುಷ್ಟ ಶಿಕ್ಷೆ,ಶಿಷ್ಟ ರಕ್ಷೆ ಎರಡನ್ನೂ ಏಕಕಾಲದಲ್ಲಿ ನಡೆಸುವಳು.ಒಳ ಹೊರ ಶತ್ರುಗಳ ನಾಶ,ಹಾಗೂ ಕಮಲದಂತೆ ನಿರ್ಮಲವಾದ ಬುದ್ಧಿ ನೀಡಲೆಂದು ಪ್ರಾರ್ಥಿಸೋಣ.ಇವಳು ಯುದ್ಧ ದೇವತೆಯೂ ಹೌದು. ಪತಂಜಲಿ ಮಹರ್ಷಿಗಳು ಇವಳನ್ನು ಯೋಗಜ್ಞೆ ಎಂದು ಯೋಗಶಾಸ್ತ್ರದಲ್ಲಿ ಹೊಗಳಿದ್ದಾರೆ.ವೇದ ಪ್ರತಿಪಾದ್ಯಳೂ ಹೌದು ಈಕೆ.( ಯಜುರ್ವೇದ ಆರಣ್ಯಕ) ಶ್ರುತಿ ಸ್ಮೃತಿ ಪ್ರತಿಪಾದ್ಯ ಈ ದೇವಿ ಅದರ ಸಾರವನ್ನು ನಮಗೆ ಕರುಣಿಸಲಿ. ಶ್ರೀನಿಧಿ ಅಭ್ಯಂಕರ್.
ದೇವಿಯ ಆರನೆ ರೂಪ ಕಾಲರಾತ್ರಿ.ಬ್ರಹ್ಮನ ರಾತ್ರಿ ಕಾಲ.ಪ್ರಳಯಕಾಲದ ರಾತ್ರಿಯೂ ಹೌದು.ಇವಳು ವಿದ್ಯಾ ದೇವತೆಯೆಂದೂ ದೇವೀಮಾಹಾತ್ಮ್ಯ ಕೊಂಡಾಡುತ್ತದೆ.ರಾತ್ರಿ ಎನ್ನುವುದು ಕತ್ತಲೆಯ ಸಂಕೇತ.ಅದು ನಮ್ಮ ಪಾಲಿಗೆ ಕರಾಳವಾಗದೇ ಇರುವಂತೆ ದೇವಿ ಸುಜ್ಞಾನ ನೀಡಲೆಂದು ಪ್ರಾರ್ಥಿಸೋಣ.ನಮ್ಮ ಅಜ್ಞಾನಗಳೆಲ್ಲ ಪ್ರಳಯವಾಗಿ ನಮ್ಮ ಪಾಲಿನ ಹೊಸ ವಿಚಾರದ ಸೃಷ್ಟಿ ದೇವಿಯ ಕರುಣೆಯಿಂದ ಒದಗಿಬರಲಿ ಎಂದು ಸ್ತುತಿಸೋಣ. ಶ್ರೀನಿಧಿ ಅಭ್ಯಂಕರ್.
🌺ಪ್ರತಿಮಾನಾಟಕಸ ಒಂದು ಸುರಭಿ 🌺 *सीताभव: पातु सुमन्त्रतुष्ट: सुग्रीवराम: सहलक्ष्मणश्च । यो रावणार्यप्रतिमश्च देव्या विभीषणात्मा भरतोनुसर्गम् ।।* _ಭಾಸನ ನಾಟಕಗಳಲ್ಲಿ ಹೆಚ್ಚು ಪ್ರಸಿದ್ಧವಾದ ನಾಟಕ ಪ್ರತಿಮಾನಾಟಕ.ಮಂಥರೆಯ ದುರ್ಬೋಧೆಯ ಪರಿಣಾಮ ರಾಮನ ವನಗಮನ ನಡೆಯುತ್ತದೆ. ಅವನು ವನಕ್ಕೆ ಹೊರಡುವ ಮುಂಚಿನ ಘಟನೆಗಳಿಂದ ಈ ನಾಟಕ ಪ್ರಾರಂಭವಾಗುವುದು.ಇದರ ವಿಶೇಷತೆ ಪ್ರತಿಮಾಗೃಹದ ಕಲ್ಪನೆ. ರಾಮಾಯಣದಲ್ಲಿ ಇಲ್ಲದ ರಾಜರ ಪ್ರತಿಮೆಗಳನ್ನಿಡುವ  ಒಂದು ಸಂಗ್ರಹಾಲಯ ಇವನ ಹೊಸ ಕಲ್ಪನೆ. ನಾಟಕಕ್ಕೂ ಅದೇ ಹೆಸರಾಗಿದೆ.ಭರತನಿಗೆ ಎಲ್ಲಾ ವಿಷಯ ತಿಳಿಯುವುದು ಅವನು ಹಾಗೆಯೇ ಕಾಡಿಗೆ ರಾಮನಿಗಾಗಿ ತೆರಳುವುದು ಇತ್ಯಾದಿ ಕವಿಯ ಕಥೆ ಹೇಳುವ ಶೈಲಿ ನಿಜಕ್ಕೂ ಸುಂದರ.ಒಂದೊಂದು ಶ್ಲೋಕಗಳು ಕರುಣಾರಸವನ್ನು ಸುಂದರವಾಗಿ ಬಿಂಬಿಸುತ್ತವೆ.ಕೆಲವು ಶ್ಲೋಕಗಳನ್ನು ಓದಿದಾಗ ನಮಗರಿವಿಲ್ಲದೇ ಕಣ್ಣೀರು ಹರಿಯುವುದು ಕವಿಯ ಚಾತುರ್ಯ. ಉತ್ತರರಾಮಚರಿತದಂತೆ ಕರುಣಾರಸ ಹೆಚ್ಚು ಪರಿಣಾಮಕಾರಿಯಾಗಿ ಪ್ರತಿಪಾದಿಸಲ್ಪಟ್ಟದ್ದು ಇಲ್ಲಿಯೇ ಎನ್ನಬಹುದು. ಅಂತಹ ಕೆಲವು ಉತ್ತಮ ಶ್ಲೋಕಗಳ ಯಥಾಮತಿ ಪರಿಚಯ ಮಾಲಿಕೆ ಇಂದಿನಿಂದ ಆರಂಭಿಸುತ್ತಿದ್ದೇನೆ.ತಪ್ಪು ತಿದ್ದಿ ಮುನ್ನಡೆಸಬೇಕು ಗುರು ಹಿರಿಯರು. _ಸೀತೆಯ ಪತಿ ಅಥವಾ ಜನಕನ ಅಳಿಯನಾದ ಶ್ರೀರಾಮನು ನಮ್ಮನ್ನು ಸಲಹಲಿ.ಸುಮಂತ್ರ ಹೆಸರಿನ ಮಂತ್ರಿಯನ್ನು ಹೊಂದಿದವನು ಅಥವಾ ಮಂತ್ರಾಲೋಚನೆಯಲ್ಲಿ ಪಳಗಿದ ಮಂತ್ರಿಗಳುಳ...
🌹ಶಾಕುಂತಲದ ಸುಂದರ ಕುಸುಮ 🌹 *एषापि प्रियेण विना गमयति रजनीं विषाददीर्घतराम् । गुर्वपि विरहदु:खमाशाबन्ध: साहयति ।।* _ಶಕುಂತಲೆ ಸಖಿಯ ಬಳಿ ಚಕ್ರವಾಕವನ್ನು ತೋರಿಸಿ ಜೊತೆಗಾರನನ್ನು ಕಾಣದೇ ಹೆಣ್ಣು ಚಕ್ರವಾಕ ಜೋರಾಗಿ ಅರಚುತ್ತಿದೆ ನಾನು ಮಾತ್ರ ಪ್ರಿಯನ ಬಗ್ಗೆ ಅಷ್ಟು ಉತ್ಸುಕಳಾಗಿಲ್ಲ ಎಂದಾಗ ಅನಸೂಯೆ ಆಡುವ ಮಾತು.ಗೆಳತಿ ಹಾಗನ್ನಬೇಡ - ಈ ಚಕ್ರವಾಕವೂ ಪ್ರಿಯಕರನನ್ನು ಅಗಲಿ ದು:ಖದಿಂದ ದೀರ್ಘವಾದ ರಾತ್ರಿಯನ್ನು ಕಳೆಯುತ್ತದೆ.ಏಕೆಂದರೆ ಆಶೆಯ ಬಂಧನವು ದು:ಖವು ಬಲವಾಗಿದ್ದರೂ ತಡೆದುಕೊಳ್ಳಯವಂತೆ ಮಾಡುವುದು.ಎಂತಹ ಮಾರ್ಮಿಕ ನೈಜ ಮಾತು.ವಿರಹದು:ಖದಿಂದ ರಾತ್ರಿ ತುಂಬಾ ದೀರ್ಘವೆಂಬಂತೆ ತೋರುತ್ತಿದೆ ಆ ಪಕ್ಷಿಗೆ.ದು:ಖಿತರಿಗೆ ಕ್ಷಣವೊಂದು ಯುಗದಂತೆ ಕಾಣುವುದು. ( ಕನ್ನಡದ ಒಂದು ಚಿತ್ರದಲ್ಲಿ ಹೀಗೆ ಪದ್ಯವೂ ಇದೆ ಕ್ಷಣವೊಂದು ಯುಗವಾಗಿ ನಿನಗಿಂತ ಮಿಗಿಲಾಗಿ ಇತ್ಯಾದಿ) ಅವರಿಗೆ ಕಾಲ ಹೋಗುವುದೇ ಕಷ್ಟ.ಸುಖದಲ್ಲಿದ್ದಾಗ ದೀರ್ಘಕಾಲವೂ ಕ್ಷಣದಂತೆ ಕಳೆದುಹೋಗುತ್ತದೆ.ಮಿಲನದಲ್ಲಿ ಕಾಳಿದಾಸನ ರಘುವಂಶದ ಮಾತು - ರಾಮನಾಡುವುದು ಸೀತೆಯೊಡನೆ ಕಳೆದ ನೆನಪುಗಳ ಬಗ್ಗೆ  ರಾತ್ರಿರೇವ ವ್ಯರಂಸೀತ್ ರಾತ್ರಿ ಕಳೆದುದೇ ತಿಳಿಯಲಿಲ್ಲ. ಆದರೆ ಆಸೆಯೆಂಬ ಬಂಧವು ಆ ನೋವನ್ನು ಸಹಿಸುವ ಶಕ್ತಿ ನೀಡುವುದು.ನಿನಗೂ ಮುಂದೆ ದುಷ್ಯಂತ ದೊರಕುವನು ಎಂಬ ಆಸೆಯಿರುವುದರಿಂದಲೇ  ವಿವರವನ್ನು ಸಹಿಸಿಕೊಂಡಿದ್ದಿ.ಅದೇ ನಿನಗೆ ಔಷಧಿಯಂತೆ ನೆರವಾಗಿದೆ.ಜೀವನ...
🌺ಅವಿಮಾರಕದ ಚಿಕ್ಕ ಸುವಾಸಿತ ಮೊಗ್ಗು🌺 *भवन्त्वरजसो गाव: परचक्रं प्रशाम्यतु  । इमामपि महीं कृत्स्नां राजसिंह: प्रशास्तु न: ।।* _ಅವಿಮಾರಕ  ನಾಟಕದ ಭರತವಾಕ್ಯ.ನಾಟಕದ ಕೊನೆಗೆ ನಾಟ್ಯಶಾಸ್ತ್ರದ ರಚನೆ ಮಾಡಿದ ಭರತನಿಗೆ ಗೌರವ ಸೂಚಿಸುವ, ಲೋಕದ ಕ್ಷೇಮವನ್ನು ದೇವರಲ್ಲಿ ಬೇಡುವ ವಾಕ್ಯ.ಹೆಚ್ಚಾಗಿ ನಾಂದಿಯೊಂದಿಗೆ ನಾಟಕಕ್ಕೆ ಚಾಲನೆ ಕೊಟ್ಟ ಸೂತ್ರಧಾರನೇ ಈ ಮಾತನ್ನು ಹೇಳುತ್ತಾನೆ. ಇಂದ್ರಿಯಗಳು ರಜೋಗುಣವನ್ನು ತ್ಯಜಿಸಲಿ.ಏಕೆಂದರೆ ಆರಂಭದಲ್ಲಿ ಅಮೃತದಂತೆ ಕಂಡರೂ ಪರಿಣಾಮದಲ್ಲಿ ವಿಷದಂತಿರುವ ವಿಷಯಾನುಭವದ ಸುಖ ರಾಜಸ.( ವಿಷಯೇಂದ್ರಿಯಸಂಯೋಗಾದ್  ..... ಪರಿಣಾಮೇ ವಿಷಮಿವ = ಗೀತೆ) ಹಾಗಾಗಿ ರಜೋಗುಣ ಇಂದ್ರಿಯಗಳನ್ನು ಬಿಟ್ಟು ಬಿಡಲಿ.ಕರ್ಮಫಲ,ಕೀರ್ತಿ ಬಯಸುವುದು,ಲೋಭ,ಪರಪೀಡನೆ,ಬಾಹ್ಯಾಂತರ ಅಶುದ್ಧಿ,ಫಲ ದೊರೆತಾಗ ಅತಿ ಸಂತೋಷ, ಇಲ್ಲದಿದ್ದರೆ ಅತಿ ದು:ಖ ಇವೆಲ್ಲ ರಾಜಸ ಲಕ್ಷಣಗಳು.( ಗೀತೆ) ಅವೆಲ್ಲ ನಮ್ಮನ್ನಾಳದಿರಲಿ.ನಮ್ಮ ಶತ್ರುಗಳೆನಿಸಿದವರೆಲ್ಲ  ಕ್ಷೀಣಿಸಲಿ ಅಥವಾ ನಾಶ ಹೊಂದಲಿ.ಈ ಸಂಪೂರ್ಣ ಭೂಮಿಯನ್ನು ಸಿಂಹದ ಗಾಂಭೀರ್ಯ, ಶಕ್ತಿ,ಬೇಟೆಯಲ್ಲಿನ ನಿಷ್ಠೆ, ಪರಿವಾರದ ಮೇಲಿನ ಪ್ರೀತಿ ಉಳ್ಳ ರಾಜನು ಆಳಲಿ.ಇಂದ್ರಿಯಗಳನ್ನು ಪ್ರಜೆಗಳು ಜಯಿಸಿ ಜಿತೇಂದ್ರಿಯರಾದಾಗ ರಾಗದ್ವೇಷಗಳಿಗೆ ಆಸ್ಪದವಿಲ್ಲದೆ,ಅಂತರಂಗ ಬಹಿರಂಗ ಶತ್ರುಗಳು ನಶಿಸಿಹೋದಾಗ,ಈ ಪೃಥ್ವಿಯನ್ನು ಶ್ರೇಷ್ಠನೊಬ್ಬ ಆಳಿದಾಗ ಲೋಕ ಸುಭಿಕ್ಷವೆನಿಸುತ...
🌹ಶಾಕುಂತಲದ ಸುಂದರ ಪುಷ್ಪ 🌹 *उत्पक्ष्मणोर्नयनयोरुपरुद्धवृत्तिं  बाष्पं कुरु स्थिरतया विहतानुबन्धम् । अस्मिन्नलक्षितनतोन्नतभूमिभागे  मार्गे पदानि खलु ते विषमीभवन्ति ।।* _ಮತ್ತೊಂದು ಭಾವನಾತ್ಮಕ ಶ್ಲೋಕ. ಕಾಶ್ಯಪರ ಎಚ್ಚರಿಕೆಯ ಪ್ರೀತಿಯ ಮಾತು.ಶಕುಂತಲೆ ಗಮನಕ್ಕೆ ಹೆಜ್ಜೆ ಇಡುತ್ತಿದ್ದಾಳೆ.ಶಕುಂತಲೆ- ರೆಪ್ಪೆಗಳನ್ನು ಮೇಲಕ್ಕೆತ್ತಿದ ನಿನ್ನ ಕಣ್ಣುಗಳ ಕಾರ್ಯವನ್ನು ಪ್ರತಿಬಂಧಿಸುತ್ತಿರುವ  ಕಣ್ಣೀರನ್ನು ಗಟ್ಟಿ ಮನಸ್ಸಿನಿಂದ ತಡೆದುಕೋ.ತಗ್ಗು ದಿನ್ನೆಗಳಿರುವ ಈ ಮಾರ್ಗದಲ್ಲಿ ಅವುಗಳನ್ನು ಕಾಣದೇ ನಿನ್ನ ಹೆಜ್ಜೆಗಳು ಎಡವುತ್ತಿವೆ.ಮಗಳಿಗೆ ತಿಳಿಹೇಳುವ ಹೀಗೊಂದು ಬಗೆ ಕಾಳಿದಾಸನ ಅದ್ಭುತ ಶೈಲಿ.ಸರಳ ವಾಕ್ಯ ವಿಶಾಲ ಅರ್ಥ.ಶಕುಂತಲೆ ಆಶ್ರಮದ ಅಗಲುವಿಕೆಯನ್ನು ನೆನೆದು ಅಳುತ್ರಿದ್ದಾಳೆ.ಆಗ ಅಪ್ಪನ ಮಾತು.ಪ್ರಯಾಣದ ಪೂರ್ವದಲ್ಲಿ ಕಣ್ಣೀರು ತರವಲ್ಲ.ಅದನ್ನು ದೃಢ ಮನಸ್ಸಿನಿಂದ ತಡೆದುಕೊ.ಈ ಕಾನನದ ದಾರಿಯಲ್ಲಿ ಸಹಜವಾಗಿ ತಗ್ಗು ಕೆಲವೆಡೆ,ದಿನ್ನೆ ಕೆಲವೆಡೆ ಇದೆ.ಕಣ್ಣೀರುಗೈಯುತ್ತಿದ್ದರೆ ನೀನು ಬೀಳಬಹುದು.ಹೆಜ್ಜೆಗಳು ಎಡವಿ ಜಾರಬಹುದು.ಹಾಗಾಗಿ ಕಣ್ಣೀರನ್ನು ದೃಷ್ಟಿ ಸುಗಮವಾಗಲು ಪ್ರತಿಬಂಧಿಸು.ಅಳು ಅಮಂಗಲ‌,ಹಾಗಾಗಿ ಈಗ ಅಳು ಬೇಡ ಎನ್ನುವ ಭಾವ.ನೀನು ಜೀವನವೆಂಬ ದಾರಿಯನ್ನು ಇನ್ನೂ ತುಂಬಾ ಸವೆಸಲಿಕ್ಕಿದೆ.ಅದರ ಮಧ್ಯದ ಅನೇಕ ಘಟನೆಗಳಲ್ಲಿ ಕಣ್ಣೀರು ಹಾಕದೇ ಮುಂದುವರೆ.ಹಾಗೆ ಮಾಡದಿದ್ದರೆ ತಗ್ಗು ದಿನ್ನ...
ಇಂದಿನ ದೇವಿಯ ರೂಪ ಕೂಷ್ಮಾಂಡಾ ಅಥವಾ ಕೂಷ್ಮಾಂಡಿನೀ.ಶಕ್ತಿಯ ಇನ್ನೊಂದು ರೂಪಧಾರಿ ದೇವಿ.ಸೂರ್ಯನಿಗೆ ಜಗವನ್ನು ಬೆಳಗಲು ಒಡಲೊಳಗೆ ಶಕ್ತಿಯನ್ನು ಕರುಣಿಸುವ ತಾಯಿ.ಕು ಎಂದರೆ ಸಣ್ಣದು,ಶ್ಮಾ ಎಂದರೆ ಶಕ್ತಿ,ಅದನ್ನು ಅಂಡ ರೂಪದಲ್ಲಿ ಲೋಕಕ್ಕೆ ಬಿಡುಗಡೆಗೊಳಿಸುವ ತಾಯಿ.ಸಣ್ಣರೂಪದ ಅಂಡದಿಂದ ದೊಡ್ಡ ಬ್ರಹ್ಮಾಂಡ ಉತ್ಪತ್ತಿಯಾಯಿತು,ಹೀಗೆ ಉತ್ಪತ್ತಿಕಾರಕ ಮಾತೆ ಅವಳು.ಕೂಷ್ಮಾಂಡ ಅಂದರೆ ಕುಂಬಳಕಾಯಿಯ ಬಲಿ ಅವಳಿಗೆ ಪ್ರಿಯವೂ ಹೌದು.ಅಂತಹ ತಾಯಿ ಕೂಷ್ಮಾಂಡದಂತೆ ನಮ್ಮ ಮೈ ಮನಗಳೆರಡನ್ನೂ ಶುದ್ಧವಾಗಿಸಲಿ.ಕುಂಬಳ ಒಳಗೂ ಹೊರಗೂ ಬೆಳ್ಳಗೆ ಇರುವಂತೆ ಕಾಯಾ ವಾಚಾ ಮನಸಾ ಶುದ್ಧಿ, ಭಗವದ್ಭಕ್ತಿ ನಮ್ಮಲ್ಲಿ ಆ ಮಹಾಮಾಯೆ ಉಂಟು ಮಾಡಲೆಂದು ಪ್ರಾರ್ಥಿಸೋಣ. ಶ್ರೀನಿಧಿ ಅಭ್ಯಂಕರ್.
ಅರ್ಧಾಕೃತಿಯ ಚಂದ್ರನನ್ನು ಶಿರದಲ್ಲಿ ಧರಿಸಿದ ದುರ್ಗೆಯ ರೂಪ.ಅದು ಗಂಟೆಯಂತೆ ಕಾಣುವುದರಿಂದ ಅವಳು ಚಂದ್ರಘಂಟಾ ಎಂದೇ ಪ್ರಸಿದ್ಧಳಾಗಿದ್ದಾಳೆ.ಗಂಟೆಯು ಪೂಜೆಗೆ ಅತ್ಯಂತ ಮುಖ್ಯವಾದುದು.ದೇವತೆಗಳ ಆಗಮನ ಅಸುರರ ನಿರ್ಗಮನ ಎರಡೂ ಏಕಕಾಲದಲ್ಲಿ ಗಂಟೆಯ ನಾದದಿಂದಲೇ ನಡೆಯುವುದು.( ಆಗಮಾರ್ಥಂ ತು . . .) ನಮ್ಮ ಮನದ ಕೊಳಕುಗಳನ್ನು ನಿವಾರಿಸಿಕೊಂಡು ಭಕ್ತಿಯನ್ನು ತುಂಬಿಕೊಳ್ಳುವುದರ ಸಂಕೇತ ಈ ಗಂಟೆ.( ಸಂಸ್ಕೃತದಲ್ಲಿ ಘಂಟೆ) ಹಾಗೆ ಭಕ್ತಿತುಂಬಿಕೊಂಡಾಗ  ಚಂದ್ರನ ಬೆಳದಿಂಗಳಿನಂತೆ ನಮಗೆ ಶುಭವನ್ನು ಕರುಣಿಸುತ್ತಾಳೆ ಆ ಮಹಾಮಾತೆ.ಈ ರೂಪ ಅವಳ ಯುದ್ಧಕ್ಕೆ ಹೊರಟ ರೂಪವೂ ಹೌದು.ನಮ್ಮ ಒಳ ಹಾಗೂ ಹೊರಶತ್ರುಗಳನ್ನು ಆ ದೇವಿ ನಾಶಮಾಡಿ ನಮ್ಮ ಪಾಲಿನ ಸುದಿನದ ಆರಂಭದ ಗಂಟೆ ನುಡಿಸಲೆಂದು,ಬಾಳಿನಲ್ಲಿ ಚಿಂತೆಗಳಿಲ್ಲದ ತಂಪನ್ನು ನೀಡಲೆಂದು ಪ್ರಾರ್ಥಿಸೋಣ. ಶ್ರೀನಿಧಿ ಅಭ್ಯಂಕರ್.
🌺ಅವಿಮಾರಕದ ಸುಂದರ ಕುಸುಮ🌺 *यज्ञै: शुभै: हरिसमो भव नित्ययुक्तै: सत्यैर्दृढैर्दशरथप्रतिमो भव त्वम् । नित्यार्पितै: पितृसमो भव सम्प्रदानै: स्वेनात्मना सुसदृशेन पराक्रमेण ।।* _ಅಳಿಯನಾದ ಅವಿಮಾರಕ  ಕುರಂಗಿಯ ತಂದೆ ತನ್ನ ಮಾವ ಕುಂತಿಭೋಜನಿಗೆ ನಮಸ್ಕರಿಸುತ್ತಿದ್ದಾನೆ. ಆಗ ಅವನು ನುಡಿಯುವ ಆಶೀರ್ವಚನ. ನಿತ್ಯವೂ ಯಜ್ಞಗಳನ್ನು ಆಚರಿಸಿ ನೀನೂ ಕೂಡ ಇಂದ್ರನಂತೆ ಶ್ರೇಯಸ್ಸನ್ನು ಪಡೆ.( ಹರಿ ಶಬ್ದಕ್ಕೆ ಇಂದ್ರ ಎಂಬ ಅರ್ಥವೂ ಇದೆ.) ಇಂದ್ರನು ನಾನಾ ಯಜ್ಞಗಳಿಂದ ಆ ಮಹತರವಾದ ಸ್ಥಾನ ಪಡೆದಿರುವನು.ಶತಕ್ರತು ಎಂಬ ಅವನ ಹೆಸರು ನೂರು ಯಾಗ ನಡೆಸಿದವನು ಎಂಬುದನ್ನೇ  ಹೇಳುವುದು.ಯಜ್ಞಗಳಿಂದ ಈ ಲೋಕದಲ್ಲಿ ಅನೇಕರನ್ನು ಅನ್ನ ವಸ್ತ್ರ ಧನ ಕನಕ ಗೋ ಮುಂತಾದ ದಾನಗಳಿಂದ ಸಂತೋಷಪಡಿಸುವುದು.ಹಾಗೆಯೇ ದೇವತೆಗಳ ಪ್ರೀತ್ಯರ್ಥವಾಗಿ ಹವಿಸ್ಸನ್ನು ನೀಡಿ ಅವರನ್ನೂ ತೃಪ್ತಿಪಡಿಸಿ ಕಾಲಕಾಲಕ್ಕೆ ಮಳೆ ಬೆಳೆ ಸಮೃದ್ಧಿ ಉಂಟಾಗುವಂತೆ ಮಾಡುವುದು. ಇಂತಹ ಕರ್ಮಗಳನ್ನು ಆಚರಿಸು ಎಂಬ ಭಾವ.ಸತ್ಯದ ದಾರಿಯಿಂದ ಎಂದಿಗೂ ತಪ್ಪಿ ನಡೆಯಬೇಡ.ಪರಾಕ್ರಮಿಯಾದ ದಶರಥ ಶಾಪದ ಮೂಲಕ ತನ್ನ ಪ್ರಾಣ ಹೋದರೂ ಸರಿ ಎಂದು ನಿಶ್ಚಯಿಸಿ ಮಗನನ್ನು ಕೊಂದೆ ಎಂದು ಸತ್ಯವನ್ನು ಋಷಿಯ ಮುಂದೆ ನುಡಿಯುವನು ಹೊರತು ಸುಳ್ಳನ್ನಲ್ಲ.ಹೀಗೆ ಸತ್ಯಂ ವದ ಎಂಬ ಉಪನಿಷದ್ವಾಣಿ ಮರೆಯದಿರು.ದಿನವೂ ಪ್ರಜೆಗಳ ಅಪೇಕ್ಷೆಯಂತೆ ಬೊಕ್ಕಸದ ಧನವನ್ನು ಉಪಯೋಗಿಸಿ ತಂದೆ ಸೌವೀರರಾಜನಂತೆ ...
ಬ್ರಹ್ಮಣಿ = ವೇದೇ ,ಚರತೀತಿ = ಸ್ತುತಿರೂಪೇಣ ವರ್ತತೇ ಎಂಬಂತೆ ವೇದಗಳಲ್ಲಿ ಸ್ತುತಿಸಲ್ಪಟ್ಟವಳು  ದುರ್ಗೆ.ಅಥವಾ ವೇದಗಳ ಸಾರವೇ ಅವಳು.ನವರಾತ್ರಿಯ ಎರಡನೇ ದಿನದ ದುರ್ಗೆಯ ರೂಪ ವೇದಪ್ರತಿಪಾದ್ಯ ದೇವಿಯ ರೂಪ.ಇನ್ನೊಂದು ಅರ್ಥ= ಬ್ರಹ್ಮಚರ್ಯ ವ್ರತದಲ್ಲೇ ಇರುವವಳು.ಅಂದರೆ ಗುಣಗಳ ನಿಯಂತ್ರಣ ಹೊಂದಿದವಳು.ಬ್ರಹ್ಮಚಾರಿಣಿ ಸ್ತ್ರೀ ಉತ್ತಮ ಪತ್ನಿ ಎಂಬ ಮನುವಿನ ಮಾತಿನಂತೆ ಸ್ತ್ರೀಯರಿಗೆಲ್ಲ ಆಕೆ ಆದರ್ಶಳು.(೫ಅಧ್ಯಾಯ ).ಕ್ರೋಧ ದುಷ್ಟರ ನಿಗ್ರಹ ಕಾಲದಲ್ಲಿ ಮಾತ್ರ.ವೇದಗಳಲ್ಲಿ ನಾನಾ ಮಂತ್ರಗಳಿಂದ ಸ್ತುತಿಸಲ್ಪಟ್ಟ ಆ ದೇವಿ ನಮಗೆ ವೇದ ಅಂದರೆ ಪರಮಾರ್ಥ ಸತ್ಯದ ಜ್ಞಾನ ತಂದುಕೊಡಲಿ.ವಸಿಷ್ಟರು ವಿವಾಹಿತರಾಗಿದ್ದರೂ  ತನ್ನ ಕರ್ಮಗಳನ್ನೆಲ್ಲ ಭಗವಂತನಿಗೆ ಅರ್ಪಿಸಿ ಬ್ರಹ್ಮಚಾರಿ,ನಿತ್ಯೋಪವಾಸಿಗಳಾಗಿದ್ದರಂತೆ.ಹಾಗೆ ಬ್ರಹ್ಮಚರ್ಯದ  ಅಂದರೆ ದೇವರೆಡೆಗೆ ಸದಾ ತುಡಿಯುವ ಮನ ನಮ್ಮದಾಗಲಿ. ಅಂತಹ ಪ್ರೇರಣೆ ಬ್ರಹ್ಮಚಾರಿಣಿ ಆ ಮಾತೆ ನಮ್ಮೆಲ್ಲರಿಗೂ ನೀಡಲಿ. ಶ್ರೀನಿಧಿ ಅಭ್ಯಂಕರ್.
ಶೈಲ =ಶಿಲೆಯಿಂದ ಉಂಟಾದ ಪರ್ವತ.ಪರ್ವತರಾಜನ ಮಗಳು. ಪಾರ್ವತಿ.ಅವಳೇ ಶೈಲಪುತ್ರೀ.ದೇವಿಯ ಸೌಮ್ಯರೂಪ.ಪರ್ವತದಂತೆ ಮಳೆಗಾಳಿಗೆ ಜಗ್ಗದೆ ಕುಗ್ಗದೆ ತಪವನ್ನಾಚರಿಸಿ ಶಿವನನ್ನು ಪಡೆದವಳು ಆಕೆ.ನಾವು ಶಿವ ಅಂದರೆ ಮಂಗಳವನ್ನು ಹೊಂದಲು ತಪಸ್ಸು ಮಾಡಬೇಕು.ಹೊರಗಿನ ನಿಂದೆ ಅವಮಾನ ಸೋಲು ದು:ಖ ಇಷ್ಟರ ಸಾವು ಮುಂತಾದವುಗಳಿಗೆ ಕುಗ್ಗದೆ ಜಗ್ಗದೆ ಮಂಗಳ ನಮ್ಮ ಜೀವನದಲ್ಲಿ ಪಡೆಯೋಣ ಎಂಬ ಪ್ರಾರ್ಥನೆ ಆ ದೇವಿಯಲ್ಲಿ.ನಮ್ಮ ನಿಮ್ಮೆಲ್ಲರಿಗೂ ದೇವಿ ಜೀವನವೆಂಬ ಕತ್ತಲೆಗೆ ದೀವಿಗೆಯಾಗಲಿ. 👏ಶ್ರೀನಿಧಿ ಅಭ್ಯಂಕರ್.
🌹ಶಾಕುಂತಲದ ಒಂದು ಮಧುರ ಶ್ಲೋಕ🌹 *उद्गलिदर्भकवला मृग्य: परित्यक्तनर्तना मयूरा: । अपसृतपाण्डुपत्रा मुञ्चन्त्यश्रूणीव लता: ।।* _ತಪೋವನವನ್ನು ಬಿಡಲು ಶಕುಂತಲೆಗೆ ಮನಸ್ಸೇ ಬರುತ್ತಿಲ್ಲ.ಅವಳಂತೆಯೇ ಆಶ್ರಮದ ಪ್ರಾಣಿಗಳ ಪರಿಸ್ಥಿತಿಯೂ ಆಗಿದೆ. ಅದನ್ನೇ ಪ್ರಿಯಂವದೆ ವ್ಯಕ್ತಪಡಿಸುತ್ತಿರುವಳು. ಜಿಂಕೆಗಳ ಬಾಯಿಯಿಂದ ದರ್ಭೆಯ ತುತ್ತುಗಳು ಕೆಳಗುದುರುತ್ತಿವೆ.ಅವು ತಿನ್ನುವುದನ್ನು ಮರೆತು ಶಕುಂತಲೆ ಹೊರಟುಹೋಗುವಳು ನಮಗಿನ್ಯಾರು ತುತ್ತು ಕೊಡುವರೆಂದು ದು:ಖಿಸುತ್ತಿವೆ. ಸಂತೋಷದಿಂದ ಆಶ್ರಮದ ಪರಿಸರದಲ್ಲಿ ನಲಿಯುತ್ತಿದ್ದ ಮಯೂರಗಳು ತಮ್ಮ ನರ್ತನವನ್ನು ನಿಲ್ಲಿಸಿ ಕ್ಲೇಶಪಡುತ್ತಿವೆ.ಬಳ್ಳಿಗಳು ಉದುರುವ ಎಲೆಗಳಿಂದ ಕಣ್ಣೀರು ಸುರಿಸುತ್ತಿರುವಂತೆ  ಕಾಣುತ್ತಿವೆ.ಹೀಗೆ ಗಿಡ ಮರಗಳು, ಪ್ರಾಣಿ ಪಕ್ಷಿಗಳ ದು:ಖದಲ್ಲಿನ ಸಹಭಾಗಿತ್ವ ಕವಿಯ ಮಾತಿನಲ್ಲಿ ಕಂಡುಬರುತ್ತಿದೆ.ದಿನವೂ ಶಕುಂತಲೆ ಗಿಡಮರಗಳಿಗೆ ನೀರುಣಿಸುತ್ತಿದ್ದಳು.ಈಗ ಅವಳ ವಿರಹ ಅವುಗಳನ್ನು ಬಾಧಿಸುತ್ತಿದೆ.ನವಿಲು ಹಾಗೂ ಜಿಂಕೆಗಳಿಗೆ ಎಳೆ ಹುಲ್ಲಿನ ತುತ್ತನ್ನು ನೀಡಿ ಮುದ್ದಿಸುತ್ತಿದ್ದಳು. ಇನ್ನು ಆ ಪ್ರೇಮಸ್ಪರ್ಶ ಆರೈಕೆ ತಪ್ಪಿಹೋಗುವುದಲ್ಲ ಎಂಬ ಚಿಂತೆ ಅವುಗಳಿಗೆ.ಹೀಗಾಗಿಯೇ ತಮ್ಮ ಕಾರ್ಯ ಬಿಟ್ಟು ಚಿತ್ರದಂತೆ ಸ್ತಬ್ಧವಾಗಿವೆ.ಉತ್ಪ್ರೇಕ್ಷಾ ಅಲಂಕಾರ.ಎಲೆಗಳು ಉದುರುವುದು ಬಳ್ಳಿಯ ಸಹಜತೆ ಕವಿ ಅದನ್ನೂ ಶಕುಂತಲೆಯ ಪ್ರಯಾಣದ ದು:ಖದಿಂದ ಮಾಡುತ್ತಿರುವ ಕ್ರಿಯೆಯೆಂಬಂತೆ ...
🌺ಅವಿಮಾರಕದ ಸುಂದರ ಕುಸುಮ🌺 *क्षमया जय विप्रेन्द्रान् दयया जय संश्रितान् । तत्वबुध्या जयात्मानं तेजसा जय पार्थिवान् ।।* _ಅವಿಮಾರಕನು ಮಾವ ಕುಂತಿಭೋಜನಿಗೆ ನಮಸ್ಕರಿಸುತ್ತಿದ್ದಾನೆ. ಅವನ ಆಶೀರ್ವಾದದ ಮಾತಿದು.ಬ್ರಾಹ್ಮಣ ಶ್ರೇಷ್ಠರನ್ನು ಕ್ಷಮಾಗುಣದಿಂದ ಜಯಿಸು.ಕ್ಷಮಿಸುವ ಗುಣದಿಂದಲೇ ಬ್ರಾಹ್ಮಣರು ಪ್ರಸಿದ್ಧರು.ಶಮೀಕನೆಂಬ ಶ್ರೇಷ್ಠ ಋಷಿ ತನ್ನ ತಪಸ್ಸಿನ ಕಾಲದಲ್ಲಿ ರಾಜನು ಸತ್ತ ಸರ್ಪವನ್ನು ಮೈಗೆ ಹಾಕಿದರೂ ಕ್ಷಮಿಸಿದನಂತೆ. ನಿಜವಾದ ಬ್ರಹ್ಮ ಚಿಂತನೆ ಇರುವ ನರನಿಗೆ ಸರ್ವಂ ಬ್ರಹ್ಮಾತ್ಮಕಂ ಎಂಬ ಉಪನಿಷತ್ತಿನ ವಾಕ್ಯದಂತೆ ಎಲ್ಲೂ ತಪ್ಪು ಕಂಡುಬರಲಾರದು.ಹಾಗಾಗಿ ಅವನು ಕೋಪಗೊಳ್ಳದೆ ಕ್ಷಮಿಸುವ ಗುಣ ಅಳವಡಿಸಿಕೊಂಡಿರುತ್ತಾನೆ. ನೀನು ಬ್ರಾಹ್ಮಣರಂತೆ ಕ್ಷಮಾಶೀಲನಾಗಿ ಅವರಿಗಿಂತಲೂ ಔನ್ನತ್ಯವನ್ನು ಹೊಂದು ಎಂಬ ಭಾವ.ನಿನ್ನನ್ನು ನಂಬಿಕೊಂಡಿರುವ ಜನರನ್ನು ಕರುಣೆಯಿಂದ ಗೆಲ್ಲು.ಸೇವಕರಿರಲಿ, ಸೈನಿಕರಿರಲಿ,ಸಾಮಾನ್ಯರಿರಲಿ,ಸಾಧುಗಳಿರಲಿ ಅವರೆಲ್ಲರಲ್ಲಿ  ದಯೆ ತೋರಿ ವಿಶ್ವಾಸವನ್ನು ಸಂಪಾದಿಸು.ಅಹಂಕಾರದಿಂದ ಅಥವಾ ದರ್ಪದಿಂದ,ಪರಾಕ್ರಮದಿಂದ ಕೆಲವು ಕಾಲ ಗೆಲ್ಲಬಹುದು ಆದರೆ ದಯೆಯಿಂದ ಯಾವಾಗಲೂ ಗೆಲ್ಲಬಹುದು.ಇದನ್ನೇ ಬಸವಣ್ಣನವರ ವಚನ ಹೇಳುವುದು ದಯವೇ ಧರ್ಮದ ಮೂಲವಯ್ಯ ಎಂಬುದಾಗಿ.ಧರ್ಮದ ಮೂಲವೇ ದಯೆ.ಹಾಗಾಗಿ ಪ್ರತಿಯೊಂದು ಜೀವಿಗಳಲ್ಲಿ ದಯೆ ತೋರು. ಇನ್ನು ನಿನ್ನನ್ನು ನೀನು ತತ್ವಬುದ್ಧಿಯಿಂದ ಜಯಿಸು.ಸರಿ ತಪ್ಪುಗಳ,ಧರ್ಮ ಅಧ...
🌹ಶಾಕುಂತಲದ ಸುಂದರ ಸುಮ🌹 *पातुं न प्रथमं व्यवस्यति जलं युष्मास्वपीतेषु या नादत्ते प्रियमण्डनापि भवतां स्नेहेन या पल्लवम् । आद्ये व: कुसुमप्रसूतिसमये यस्या भवत्युत्सव: सेयं याति शकुन्तला पतिगृहं सर्वैरनुज्ञायताम् ।।* _ಶಕುಂತಲೆಯ ಗಮನವನ್ನು ಕಣ್ವರು ಆಶ್ರಮದ ತರುಲತೆಗಳಿಗೆ ತಿಳಿಸುತ್ತಿದ್ದಾರೆ. ಓ ತಪೋವನವೃಕ್ಷಗಳೇ, ತರುಲತೆಗಳೇ, ನಿಮಗೆ ನೀರು ಉಣಿಸುವ ಮೊದಲು ಯಾರು ಸ್ವತಃ ನೀರು ಕುಡಿಯುತ್ತಿದ್ದಿಲ್ಲವೋ , ಯಾರಿಗೆ ಅಲಂಕಾರ ಮಾಡಿಕೊಳ್ಳುವ ಪ್ರೀತಿಯಿದ್ದರೂ ನಿಮ್ಮ ಮೇಲಿನ ಸ್ನೇಹದಿಂದ ಯಾರು ಚಿಗುರೆಲೆಗಳನ್ನೂ ಕಿತ್ತುಕೊಳ್ಳುತ್ತಿರಲಿಲ್ಲವೋ,ನಿಮಗೆ ಮೊದಲನೆಯ ಸಲ ಹೂ ಬಿಟ್ಟಾಗ ಯಾರಿಗೆ ಹಬ್ಬವೆನಿಸುತ್ತಿತ್ತೋ  ಆ ಶಕುಂತಲೆ ನಿಮ್ಮನ್ನಗಲಿ ಪತಿಯ ಮನೆಗೆ ಹೊರಟಿದ್ದಾಳೆ.ದಯವಿಟ್ಟು ಅವಳಿಗೆ ಅನುಮತಿ ಕೊಡಿ.ಎಷ್ಟು ಸುಂದರ ಕಾವ್ಯ.ಪ್ರಕೃತಿಯ ಆರಾಧನೆ ನಮ್ಮ ಕ್ರಿಯೆಗಳಲ್ಲಿರಬೇಕು  ಹೊರತು ಭಾಷಣ ಬರಹಗಳಲ್ಲಿ ಅಲ್ಲ.ಕಣ್ವರ ಮಾತು ಅದನ್ನೇ ತಿಳಿಸುತ್ತದೆ.ಶಕುಂತಲೆ ಪ್ರತಿ ದಿನವೂ ಗಿಡಗಳಿಗೆ ನೀರುಣಿಸಿಯೇ ತಾನು ನೀರು ಕುಡಿಯುತ್ತಿದ್ದಳು.ಅಷ್ಟು ಮಮತೆ ಅವುಗಳಲ್ಲಿ. ಬಗೆಬಗೆಯ ಚಿಗುರು ಹಾಗೂ ಪುಷ್ಪಗಳನ್ನು ಅಲಂಕರಿಸಿಕೊಳ್ಳುವ ಇಚ್ಛೆ ಇದ್ದರೂ ಗಿಡಗಳು ಎಲ್ಲಿ ದು:ಖಿಸುತ್ತವೆಯೋ ಅವುಗಳ ಸೌಂದರ್ಯ ಎಲ್ಲಿ ಮಾಸಿಹೋಗುವುದೋ ಎಂಬ ಆತಂಕದಿಂದ ಚಿಗುರೆಲೆಗಳನ್ನು ಕೀಳದೇ ಹಾಗೇ ಬಿಟ್ಟು ಸುಖಿಸುತ್ತಿದ್ದಳ...
ಸ್ತ್ರೀಯರ ಬಗ್ಗೆ ವ್ಯಾಸರ ದೃಷ್ಟಿಕೋನ ಎಷ್ಟು ವಿಶಾಲವಾಗಿತ್ತು ಎನ್ನುವುದರ ಬಗ್ಗೆ ಕೆಲವು ಶ್ಲೋಕಗಳು. ತಥಾಕಥಿತರು ಸ್ತ್ರೀಯರ ಬಗ್ಗೆ ಪುರಾಣಗಳ ಭಾವನೆ ಅರಿಯಲಿ ಎಂಬ ಉದ್ದೇಶ. *क्रुद्धोपि पुरुषव्याघ्र भीम मा स्म स्त्रियं वधी: । शरीरगुप्त्याभ्यधिकं धर्मं  गोपय पाण्डव ।।* ಯುಧಿಷ್ಠಿರ ಭೀಮಸೇನ ನಿಗೆ ಹೇಳುವ ಮಾತು.ನೀನು ಕೋಪಗೊಂಡಿದ್ದರೂ ಸ್ತ್ರೀಯನ್ನು ಕೊಲ್ಲಕೂಡದು.ಶರೀರ ರಕ್ಷಣೆಗಿಂತಲೂ ಹೆಚ್ಚಾಗಿ ಧರ್ಮವನ್ನು ರಕ್ಷಿಸು.ಹಿಡಿಂಬನ ವಧೆಯ ನಂತರ ಅವನ ತಂಗಿಯನ್ನು ಸಾಯಿಸಲು ಹೊರಟ ಭೀಮನಿಗೆ ಹೇಳುವ ಮಾತು.ಅಧರ್ಮ ಆಚರಿಸದ ಸ್ತ್ರೀಯ ವಧೆ ಅಧರ್ಮವಾಗುವುದು.ಹಾಗಾಗಿ ಶರೀರ ನಾಶವಾಗುವ ಸ್ಥಿತಿ ಇದ್ದರೂ ಸ್ತ್ರೀ ವಧೆ ಸಲ್ಲದು. *कुत एव परित्यक्तुं सुतां शक्ष्याम्यहं सुतम् । बालामप्राप्तवयसमजातव्यञ्जनाकृतिम् ।। भर्तुरर्थाय निक्षिप्तां  न्यासं धात्रा महात्मना । यस्यां दौहित्रजाल्लोकानाशंसे पितृभि: सह । स्वयमुत्पाद्य तां बालां कथमुत्स्रष्टुमुत्सहे ।।* ಏಕಚಕ್ರನಗರದ ಸಂಕಷ್ಟಕ್ಕೊಳಗಾದ ಬ್ರಾಹ್ಮಣ ಹೇಳುವ ಮಾತು.ಇನ್ನೂ ಹುಡುಗಿಯಾಗಿರುವ ವಯಸ್ಸಿಗೆ ಬಾರದ ಯೌವನದ ಗುರುತುಗಳು ಸ್ಪಷ್ಟವಾಗಿ ಕಾಣದಿರುವ ನನ್ನ ಮಗಳನ್ನು ನಾನಾಗಿಯೇ ಹೇಗೆ ತಾನೇ ರಾಕ್ಷಸನಿಗಾಗಿ ಪರಿತ್ಯಜಿಸಲಿ? ಮಹಾತ್ಮನಾದ ಬ್ರಹ್ಮನು ಒಬ್ಬ ವರನಿಗಾಗಿಯೇ ಅವಳನ್ನು ನನ್ನ ಬಳಿ ನ್ಯಾಸ ವಾಗಿ ಇಟ್ಟಿದ...