ಪೋಸ್ಟ್‌ಗಳು

2022 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಧರ್ಮಾಚರಣೆ ೧೫೭

ಧರ್ಮಾಚರಣೆ-೧೫೭ ವೇದಾಭ್ಯಾಸರತಂ ಕ್ಷಾಂತಂ ಪಂಚಯಜ್ಞಕ್ರಿಯಾಪರಮ್ | ನ ಸ್ಪೃಶಂತೀಹ ಪಾಪಾನಿ ಮಹಾಪಾತಕಜಾನ್ಯಪಿ|| ಯಾಜ್ಞವಲ್ಕ್ಯ ಸ್ಮೃತಿ|| ನಿತ್ಯವೂ ವೇದಪಾರಾಯಣ-ವೇದಾಧ್ಯಾಪನ, ವೇದೊಕ್ತ ವಿಷಯಗಳ ಚಿಂತನೆ ನಡೆಸುವವರಿಗೆ,ದೇವಪೂಜೆ-ಸ್ವಾಧ್ಯಾಯ-ತರ್ಪಣ-ಅತಿಥಿ ಸತ್ಕಾರ ಮಾಡುತ್ತಾ ಪ್ರಾಣಿಪಕ್ಷಿಗಳಲ್ಲಿ ಪ್ರೀತಿ ತೋರುತ್ತಾ-ಅಪಾರ ಸಹನೆ ಮೈಗೂಡಿಸಿಕೊಂಡವರನ್ನು ಯಾವ ಪಾಪಗಳೂ ಬಾಧಿಸಲಾರವು. ವೇದ ಮರೆತು,ಪಂಚಯಜ್ಞ ತೊರೆದು, ಷಡ್ವೈರಿಗಳಿಗೆ ಶರಾಣಾದಾಗ ನಮ್ಮ ಪ್ರತಿಯೊಂದು ಕರ್ಮವೂ ಪಾಪವನ್ನೇ ಉಂಟುಮಾಡುತ್ತದೆ.ಹಾಗಾಗಿ ವೇದದ ಹಾದಿ ತುಳಿದು ಅದರಲ್ಲಿ ಹೇಳಿದ ಕರ್ಮ ಮಾಡಿ ಕ್ರೋಧಾದಿಗಳನ್ನು ದೂರವಿಟ್ಟಾಗ ಪಾಪವು ನಮ್ಮನ್ನು ತೊರೆಯುವುದು. ಸಂಗ್ರಹ: ಶ್ರೀನಿಧಿ ಅಭ್ಯಂಕರ್ http://shreenidhiabhyankar.blogspot.com/?m=1

ಧರ್ಮಾಚರಣೆ ೧೫೬

ಧರ್ಮಾಚರಣೆ-೧೫೬ ನಿಶಾಯಾಂ‌ ವಾ ದಿವಾ ವಾಪಿ ಯದಜ್ಞಾನಕೃತಂ‌ ಭವೇತ್| ತ್ರೈಕಾಲ್ಯಸಂಧ್ಯಾಕರಣಾತ್ತತ್ಸರ್ವಂ ವಿಪ್ರಣಶ್ಯತಿ|| ಯಾಜ್ಞವಲ್ಕ್ಯ ಸ್ಮೃತಿ|| ರಾತ್ರಿಯಾಗಲಿ ಹಗಲಾಗಲಿ ನಮಗೆ ತಿಳಿಯದೇ ನೂರಾರು ಪಾಪಗಳು ನಮ್ಮಿಂದ ಘಟಿಸುತ್ತವೆ.ಪ್ರಕೀರ್ಣಕ-ಮಾನಸಿಕ-ವಾಚಿಕವಿಧದ ಉಪಪಾತಕಗಳೆಲ್ಲವೂ ಮೂರು ಹೊತ್ತು ಸಂಧ್ಯಾವಂದನೆ ಮಾಡುವುದರಿಂದ ನಾಶ ಹೊಂದುತ್ತವೆ. ಹಾಗಾಗಿ ಸಂಧ್ಯಾವಂದನೆ ತ್ರೈವರ್ಣ್ಯರಿಗೆ ಅವಶ್ಯವಾಗಿ ಮಾಡಬೇಕಾದ ಕರ್ಮವಾಗಿದೆ. ಉಳಿದವರು ಸೂರ್ಯನನ್ನು ಮೂರು ಹೊತ್ತು ಧ್ಯಾನಿಸಿ ಈ ಫಲ ಪಡೆಯಬಹುದು. ಸಂಗ್ರಹ: ಶ್ರೀನಿಧಿ ಅಭ್ಯಂಕರ್ http://shreenidhiabhyankar.blogspot.com/?m=1

ಧರ್ಮಾಚರಣೆ ೧೫೫

ಧರ್ಮಾಚರಣೆ-೧೫೫ ಕಾಲೋಗ್ನಿಃ ಕರ್ಮಮೃದ್ವಾಯುರ್ಮನೋ ಜ್ಞಾನಂ ತಪೋ ಜಲಮ್ | ಪಶ್ಚಾತ್ತಾಪೋ ನಿರಾಹಾರಃ ಸರ್ವೇಮೀ ಶುದ್ಧಿಹೇತವಃ || ಯಾಜ್ಞವಲ್ಕ್ಯ ಸ್ಮೃತಿ|| ಉತ್ತಮ ಮುಹೂರ್ತ, ಅಗ್ನಿ, ನಿತ್ಯಕರ್ಮ, ಗಾಳಿ, ಮಣ್ಣು, ಸದ್ವಿಚಾರಯುಕ್ತ ಮನಸ್ಸು, ಒಳ್ಳೆಯ ವಿಷಯದ ಜ್ಞಾನ, ತಪಸ್ಸು, ನೀರು, ಇನ್ನು ತಪ್ಪು ಮಾಡಲಾರೆ ಎಂಬ ಅನನ್ಯ ಭಾವ, ಉಪವಾಸ ಇವೆಲ್ಲವೂ ಅಶೌಚವಿರಲಿ ಯಾವ ಬಗೆಯ ಅಶುದ್ಧಿ ಇರಲಿ ಎಲ್ಲವನ್ನೂ ಶುದ್ಧಗೊಳಿಸುವ ಸಾಧನವಾಗಿವೆ. ಗ್ರಹಸ್ಥಿತಿ ಸರಿಯಾಗಿರುವ ಮುಹೂರ್ತ, ತುಳಸಿ-ಕೊಟ್ಟಿಗೆ ಮೊದಲಾದ ಪ್ರದೇಶದ ಮಣ್ಣು, ತೀರ್ಥಗಳ ನೀರು, ಪರಿಶುದ್ಧ ಚಿಂತನೆ, ತನ್ನ ಕರ್ಮದಲ್ಲಿ ಪೂರ್ಣನಿಷ್ಠೆ, ಯಜ್ಞದ ಬೆಂಕಿ, ನಿರಾಹಾರನಾಗಿರುವುದು ನಮ್ಮ ಎಲ್ಲಾ ಪಾಪಗಳನ್ನು ತೊಳೆಯುತ್ತವೆ. ಹಾಗಾಗಿ ಬದುಕಿನಲ್ಲಿ ಇವುಗಳನ್ನು ರೂಢಿಸಿಕೊಳ್ಳುವುದು ನಮ್ಮನ್ನು ನಾವು ಸ್ವಚ್ಛ ಮಾಡಿಕೊಂಡಂತೆ ಸರಿ. ಸಂಗ್ರಹ: ಶ್ರೀನಿಧಿ ಅಭ್ಯಂಕರ್ http://shreenidhiabhyankar.blogspot.com/?m=1

ಧರ್ಮಾಚರಣೆ ೧೫೪

ಧರ್ಮಾಚರಣೆ-೧೫೪ ನಿರಾಶಾಃ ಪಿತರೋ ಯಾಂತಿ ವಸ್ತ್ರನಿಷ್ಪಿಡನೇ ಕೃತೇ | ತಸ್ಮಾನ್ನ ಪಿಡಯೇದ್ವಸ್ತ್ರಮಕೃತ್ವಾ ಪಿತೃತರ್ಪಣಮ್ || ಪರಾಶರ|| ನದಿ-ಸರೋವರ-ಕೆರೆ-ಸಮುದ್ರ-ಕಾಲುವೆ-ತೀರ್ಥಗಳಲ್ಲಿ ಸ್ನಾನ ಮಾಡಿದ ನಂತರ ಉಟ್ಟ ಬಟ್ಟೆಯ ನೀರು ಹಿಂಡುವ ಮುನ್ನ ಗತಿಸಿದ ಪಿತೃಗಳಿಗೆ ತರ್ಪಣ ನೀಡಬೇಕು. ಹಾಗೆ ಕೊಡದೇ ಹೋದರೆ ನಮ್ಮ ಪಿತೃಗಳು ನಿರಾಶರಾಗಿ ಹೊರಟುಹೋಗುತ್ತಾರೆ. ಹಾಗಾಗಿ ಸ್ನಾನ ಮಾಡುವ ಪ್ರದೇಶ ನೋಡಿಕೊಂಡು ತರ್ಪಣಗಳನ್ನು ಅವಶ್ಯವಾಗಿ ಕೊಡಬೇಕು. ಸಂಗ್ರಹ: ಶ್ರೀನಿಧಿ ಅಭ್ಯಂಕರ್ http://shreenidhiabhyankar.blogspot.com/?m=1

ಧರ್ಮಾಚರಣೆ ೧೫೩

ಧರ್ಮಾಚರಣೆ-೧೫೩ ಪಾಖಂಡ್ಯನಾಶ್ರಿತಾಃ ಸ್ತೇನಾ ಭರ್ತೃಘ್ನ್ಯಃ ಕಾಮಗಾದಿಕಾಃ | ಸುರಾಪ್ಯ ಆತ್ಮತ್ಯಾಗಿನ್ಯೋ ನಾಶೌಚೋದಕಭಾಜನಾಃ || ಯಾಜ್ಞವಲ್ಕ್ಯ ಸ್ಮೃತಿ|| ಬ್ರಹ್ಮಚಾರಿಯನ್ನು ಬಿಟ್ಟು ಉಳಿದವರೆಲ್ಲರೂ ಒಬ್ಬರು ಮೃತರಾದರೆ ಸಪಿಂಡ-ಸಗೋತ್ರರಂತೆ ತಾಯಿಯ ತಂದೆ, ಗುರು, ಮಿತ್ರ,ಮದುವೆಯಾದ ಮಗಳು, ಸಹೋದರಿ ಹಾಗೂ ಅವಳ ಮಗ, ಮಾವ, ಕುಲಪುರೋಹಿತ ಇವರನ್ನು ಉದ್ದೇಶಿಸಿ ಜಲಾಂಜಲಿಯನ್ನು ನೀಡಬೇಕು. ಹಚ್ಚೆ ಮೊದಲಾದ ವೇದನಿಷಿದ್ಧ ಚಿಹ್ನಾಧಾರಿ-ಉಚಿತ ಸೌಲಭ್ಯ ಇದ್ದರೂ  ಉಪಯೋಗಿಸದೇ ತಿರುಗುವವನು, ಬಂಗಾರ ಮೊದಲಾದವನ್ನು ಕದ್ದವನು, ಪತಿಗೆ ಅಥವಾ ಪತ್ನಿಗೆ ದ್ರೋಹ ಬಗೆದವರು, ಗರ್ಭಪಾತ ಹಾಗೂ ಬ್ರಹ್ಮಹತ್ಯೆ ಮಾಡುವವರು, ಮದ್ಯಪಾನ ಮೊದಲಾದ ದುರಾಚಾರಿ, ಆತ್ಮಹತ್ಯೆ ಮಾಡಿಕೊಂಡವರು ಸತ್ತರೆ ಅಶೌಚವೂ ಬೇಡ. ಜಲಾಂಜಲಿಯೂ ಬೇಡ. ಅಂತಹವರ ವಿಷಯದಲ್ಲಿ ಸುಮ್ಮನಿದ್ದರೇ ಹೆಚ್ಚು ಪುಣ್ಯ. ಸಂಗ್ರಹ: ಶ್ರೀನಿಧಿ ಅಭ್ಯಂಕರ್ http://shreenidhiabhyankar.blogspot.com/?m=1

ಧರ್ಮಾಚರಣೆ ೧೫೨

ಧರ್ಮಾಚರಣೆ-೧೫೨ ಊನದ್ವಿವರ್ಷಂ ನಿಖನೇನ್ನಕುರ್ಯಾದುದಕಂ ತತಃ ಅಸ್ಮಶಾನಾದನುವ್ರಜ್ಯ ಇತರೋ ಜ್ಞಾತಿಭಿರ್ವ್ರತಃ  ಯಮಸೂಕ್ತಂ ತಥಾ ಗಾಥಾ ಜಪದ್ಭಿರ್ಲೌಕಿಕಾಗ್ನಿನಾ ಸ ದಗ್ಧವ್ಯಉಪೇತಶ್ಚೇದಾಹಿತಾಗ್ನ್ಯಾ ವೃತಾರ್ಥವತ್ ಯಾಜ್ಞವಲ್ಕ್ಯ ಸ್ಮೃತಿ ಎರಡು ವರ್ಷ ತುಂಬುವ ಮೊದಲು ಮಕ್ಕಳು ಮರಣ ಹೊಂದಿದರೆ ಅವರನ್ನು ಸುಡದೆ ಹೂಳಬೇಕು. ಅಂತ್ಯಕರ್ಮಗಳನ್ನು ಮಾಡಬಾರದು. ಸ್ಮಶಾನವಲ್ಲದ ಉತ್ತಮ ಸ್ಥಳದಲ್ಲಿ ತಗ್ಗು ತೆಗೆದು ಹೂಳಬೇಕು. ಎರಡು ದಾಟಿದ ಮಗುವಾದರೆ ಸ್ಮಶಾನಕ್ಕೆ ಯಮಸೂಕ್ತ ಪಠಿಸುತ್ತಾ ತೆಗೆದುಕೊಂಡು ಹೋಗಿ ಸಾಮಾನ್ಯ ಬೆಂಕಿಯಿಂದ ಸುಡಬೇಕು. ಉಪನಯನದ ಮೊದಲು ಅಥವಾ ಶಾಲೆಗೆ ಸೇರುವ ಮೊದಲ ಮರಣವಾದಲ್ಲಿ ಅಮಂತ್ರಕವಾಗಿ ಅಂತ್ಯಕ್ರಿಯೆ ನಡೆಸಬೇಕು. ಬುದ್ಧಿ ಹಾಗೂ ದೇಹದ ಬೆಳವಣಿಗೆ ಹೊಂದದ ಮಕ್ಕಳ ಸಾವಿನಲ್ಲಿ ಪೋಷಕರು ಮೊದಲೇ ದುಃಖಿಸುತ್ತಿರುತ್ತಾರೆ.‌ಇನ್ನೂ ಸರಿಯಾಗಿ ಆಟ ಪಾಠವಾಡದ ಆ ಮಕ್ಕಳ ಮರಣವೇ ಸಹಿಸಲು ಅಶಕ್ಯ. ಸಂಸ್ಕಾರ ಆದವರು ಮರಣ ಹೊಂದಿದರೆ ಮರಣಕ್ಕೂ ಸಂಸ್ಕಾರ ಎಂಬ ನಮ್ಮ ಋಷಿಗಳ ಚಿಂತನೆ ಅದ್ಭುತ. ಸಂಗ್ರಹ: ಶ್ರೀನಿಧಿ ಅಭ್ಯಂಕರ್ http://shreenidhiabhyankar.blogspot.com/?m=1

ಧರ್ಮಾಚರಣೆ ೧೫೧

ಧರ್ಮಾಚರಣೆ-೧೫೧ ಶ್ಲೇಷ್ಮಾಶ್ರುಬಾಂಧವೈರ್ಮುಕ್ತಂ ಪ್ರೇತೋ ಭುಂಕ್ತೇ ಯತೋವಶಃ| ಅತೋ ನ ರೋದಿತವ್ಯಂ ಹಿ ಕ್ರಿಯಾಃ ಕಾರ್ಯಾ ಸ್ವಶಕ್ತಿತಃ || ಯಾಜ್ಞವಲ್ಕ್ಯ ಸ್ಮೃತಿ|| ಯಾರಾದರೂ ಸತ್ತರೆಂದು ನಾವು ಬಹಳ ಕಾಲ ಅಳುತ್ತಾ ಕೂತರೆ ಹಾಗೆ ಅಳುವವರ ಕಣ್ಣೀರು ಹಾಗೂ ದುಃಖವನ್ನು ಆ ಸತ್ತ ಆತ್ಮವು ತಿನ್ನುತ್ತದೆ. ಆ ಆತ್ಮಕ್ಕೆ ಆ ಕಾಲದಲ್ಲಿ ಶಾಸ್ತ್ರೀಯವಾದ ಅಂತ್ಯಕ್ರಿಯೆಯನ್ನು ಮಾಡುವುದೇ ಸತ್ತವರ ಸುಖಕ್ಕೆ ಕಾರಣವಾಗುವುದು. ಇದಕ್ಕೆ ಹೊರತಾಗಿ ಅಳುವುದೇ ಮೊದಲಾದ ಕ್ರಿಯೆಗಳು ಆ ಆತ್ಮಕ್ಕೆ ಇನ್ನಷ್ಟು ತೊಂದರೆಯನ್ನು ತಂದುಕೊಡುತ್ತದೆ. ಬದುಕಿದ್ದಾಗ ಆದರಿಸಿ ಸತ್ತ ನಂತರ ಕರ್ಮಗಳ ಮೂಲಕ ಆದರಿಸುವುದು ಸರಿಯಾದ ರೀತಿಯಾಗಿದೆ. ಸಂಗ್ರಹ: ಶ್ರೀನಿಧಿ ಅಭ್ಯಂಕರ್ http://shreenidhiabhyankar.blogspot.com/?m=1

ಧರ್ಮಾಚರಣೆ ೧೫೦

ಧರ್ಮಾಚರಣೆ-೧೫೦ ದುರ್ಭಿಕ್ಷೇ ಧರ್ಮಕಾರ್ಯೇ ಚ ವ್ಯಾಧೌ ಸಂಪ್ರತಿಶೋಧನೇ| ಗೃಹೀತಂ ಸ್ತ್ರೀಧನಂ ಭರ್ತಾ ನ ಸ್ತ್ರಿಯೈ ದಾತುಮರ್ಹತಿ|| ಯಾಜ್ಞವಲ್ಕ್ಯ ಸ್ಮೃತಿ|| ದುರ್ಭಿಕ್ಷೆ ಕಂಡುಬಂದಾಗ,ಧರ್ಮಕಾರ್ಯಗಳಿಗಾಗಿ, ರೋಗದ ಔಷಧೋಪಚಾರಕ್ಕಾಗಿ, ಶಿಕ್ಷೆ-ನಿಗ್ರಹಗಳಿಗಾಗಿ ಪತಿಯು ಪತ್ನಿಯ ಧನವನ್ನು ಉಪಯೋಗಿಸಿದರೆ ಹಿಂತಿರುಗಿ ಕೊಡಬೇಕಾಗಿಲ್ಲ. ಸೂಕ್ತ ಕಾರಣವಿದ್ದಾಗ ಸ್ತ್ರೀಧನವು ವಿನಿಯೋಗ ಆಗಬಹುದು. ಪತ್ನಿ ಬದುಕಿರುವ ತನಕ ಪತಿಯನ್ನು ಬಿಟ್ಟು ಉಳಿದವರಿಗೆ ಅವಳ ಧನದ ಉಪಯೋಗದ ಹಕ್ಕು ಇರುವುದಿಲ್ಲ. ದಾಯಾದಿಗಳೂ ಕೂಡ ಸ್ತ್ರೀಧನವನ್ನು ಪಾಲುಮಾಡಿ ತೆಗೆದುಕೊಳ್ಳುವಂತಿಲ್ಲ. ಸ್ತ್ರೀಯರ ವಿಷಯದಲ್ಲಿ ನಮ್ಮ ಸ್ಮೃತಿಗಳು ತುಂಬಾ ಸೂಕ್ಷ್ಮವಾಗಿ ಉದಾರವಾಗಿ ವ್ಯವಹರಿಸಿವೆ. ಸಂಗ್ರಹ: ಶ್ರೀನಿಧಿ ಅಭ್ಯಂಕರ್ http://shreenidhiabhyankar.blogspot.com/?m=1

ಧರ್ಮಾಚರಣೆ ೧೪೯

ಧರ್ಮಾಚರಣೆ-೧೪೯ ಮೃತಾಂಗಲಗ್ನವಿಕ್ರೇತುರ್ಗುರೋಸ್ತಾಡಯಿತುಸ್ತಥಾ | ರಾಜಯಾನಾಸನಾರೋಢುರ್ದಂಡ ಉತ್ತಮಸಾಹಸಃ || ದ್ವಿನೇತ್ರಭೇದಿನೋ ರಾಜದ್ವಿಷ್ಟಾದೇಶಕೃತಸ್ತಥಾ | ವಿಪ್ರತ್ವೇನ ಚ ಶೂದ್ರಸ್ಯ ಜೀವತೋಷ್ಟಶತೋ ದಮಃ || ಯಾಜ್ಞವಲ್ಕ್ಯ ಸ್ಮೃತಿ|| ಮೃತ ಶರೀರದ ಮೇಲಿನ ವಸ್ತ್ರ-ಹೂವು-ಆಭರಣ ಮೊದಲಾದವನ್ನು ಮಾರುವವರಿಗೆ ( ಪಟ್ಟಣಗಳಲ್ಲಿ ಸಹಜ ಪ್ರಕ್ರಿಯೆ) , ತಂದೆ ತಾಯಿ ಗುರುಗಳಿಗೆ ನಿಂದಿಸುವುದು- ಹೊಡೆಯುವುದು ಮಾಡುವವರಿಗೆ, ರಾಜನ ಅನುಮತಿ ಇಲ್ಲದೆ ಅವನ ವಾಹನಾದಿ ಏರುವವರಿಗೆ, ಕೋಪದಿಂದ ಇನ್ನೊಬ್ಬರ ದೃಷ್ಟಿಗೆ ಹಾನಿ ಮಾಡುವವಗೆ, ರಾಜನ ಅನಿಷ್ಟ ಸಾರುವವನಿಗೆ, ಊಟಕ್ಕಾಗಿ ಉಪವೀತ- ಮಣಿ-ಗೋಪೀ,ಭಸ್ಮ ಮೊದಲಾದವನ್ನು ಪ್ರದರ್ಶಿಸುವವನಿಗೆ ಹೆಚ್ಚಿನ ಶಿಕ್ಷೆ ವಿಧಿಸಬೇಕು.   ಸಂಗ್ರಹ: ಶ್ರೀನಿಧಿ ಅಭ್ಯಂಕರ್ http://shreenidhiabhyankar.blogspot.com/?m=1

ಅನುವಾದಿತ ಕಥೆ ೩೬

अनूदितकथावलिः-३६ उपकारधीः गिरिवननामकं विपिनमेकं प्रसिद्धमासीत् । तत्र बहुसंख्याकाः चन्दनपादपाः आसन्। वृक्षस्येकस्योपरि शुकसंसारः वसति  स्म।  एकदा ग्रीष्मकाले अंशुभिः जनिततापेन मन्दवातेन च वृक्षेषु लघुघट्टनं, तेन च वह्निः जातः । अचिरादेव तृणं व्याप्य अरण्यं भक्षयन्निव भासमानः सः शुकवसतेः वृक्षस्य समीपम् आगच्छत्। तत्समये शुकपितरौ आहारार्थं सुदूरं गतवन्तौ आस्ताम् । एकः शावकः एव वृक्षमाश्रित्य स्थितः ।  सः वृक्षराजः करुणया तं शुकशावकं प्रति अवोचत्- हे शिशो, वह्निः सर्वं भक्षयन् ज्वालाभिः प्रसृतः समीपमागतः । अहं तु स्थविरः । अद्य वा श्वः वा मृतः भवामि। भवान् न तादृशः, वह्निना एकैका मम शाखा व्याप्ता खादिता च भवति। मम काण्डस्यापि अचिरादेव अग्निः प्रसरति। मम कृते चिंतां मा कुरु। भवतः जीवनं बहु दीर्घम् अस्ति। तथा च भवान् मां त्यक्त्वा क्षणाद्दूरं गच्छतु इति।  सः शावकः आश्रयदातुः वृक्षस्य नाशम् असहमानः दुःखितः बभूव। उपकृतस्य कष्टे प्राप्ते प्रत्युपकारः कर्तव्य एव, आपदि एनं त्यक्त्वा कुत्र  वा कथं गच्छामि इति विचिन्त्य समीपस्थे ह्रदे निमज्य पक्षाभ्यां जलमानीय वह्नेरुपरि सि...

ವಿಕ್ರಮೋರ್ವಶೀಯ ೪

📔👳‍♀️💛👩‍🦱📒 *ವಿಕ್ರಮೋರ್ವಶೀಯ*  ಪದ್ಯ-೪ *अस्याः सर्गविधौ प्रजापतिरभूच्चन्द्रो नु कान्तप्रभः । शृङ्गारैकरसः स्वयं नु मदनो मासो नु पुष्पाकरः । वेदाभ्यासजडः कथं नु विषयव्यावृत्तकौतुहलो निर्मातुं प्रभवेन्मनोहरमिदं रूपं पुराणो मुनिः ।।* _ಊರ್ವಶಿಯನ್ನು ಕಂಡ ಪುರೂರವನ ಮನದ ಭಾವನೆ ಹೊರಹೊಮ್ಮಿದ ಬಗೆ. ನಾರಾಯಣ ಮುನಿಯ ಮಗಳೇ ಇವಳು! ಇರಲಾರಳು. ಬಹುಶಃ ಚಂದ್ರನೇ ಸೃಷ್ಟಿಕರ್ತನಾಗಿ ತನ್ನ ಕಾಂತಿಯಿಂದ ಇವಳನ್ನು ಸೃಷ್ಟಿ ಮಾಡಿದನೋ! ಅಥವಾ ಶೃಂಗಾರವೇ ಮುಖ್ಯವಾದ ರಸವಾಗಿರುವ ಮನ್ಮಥನು ಇವಳನ್ನು ನಿರ್ಮಿಸಿದನೋ! ಅಥವಾ ಮಾಸಗಳಲ್ಲೆಲ್ಲ ಸೊಗಸಾದ ಪ್ರಕೃತಿಯ ಯೌವ್ವನವನ್ನು ಹೆಚ್ಚಿಸುವ ವಸಂತನು ತನ್ನ ಸೃಷ್ಟಿಯ ಸೊಬಗನ್ನು ಹೀಗೆ ಉಣಬಡಿಸಿದನೋ! ಏಕೆಂದರೆ ನಿರಂತರ ವೇದ-ಶಾಸ್ತ್ರ-ಪುರಾಣಗಳು ಅಭ್ಯಾಸದಿಂದ ಶಬ್ದ ಸ್ಪರ್ಶ ಮೊದಲಾದ ಇಂದ್ರಿಯಗಳ ಸೆಳೆತದ ವಿಷಯಗಳಿಂದ ದೂರವಾದ ಪರಮಸ್ವರೂಪವೇ ಪ್ರಧಾನ ರೂಪವಾದ ಆ ಮುನಿಯು ಇಂತಹ ಸೌಕುಮಾರ್ಯದ-ತ್ರಿಲೋಕಗಳ ಸೌಂದರ್ಯವನ್ನು ನಾಚಿಸುವ-ಜಗದ ಸೊಬಗೆಲ್ಲವೂ ಒಂದೆಡೆ ಮಡುಗಟ್ಟಿದಂತಿರುವ ಈ ಮನೋಹರ ರೂಪವನ್ನು ಹೇಗೆ ಸೃಷ್ಟಿಸಿಯಾನು! ಚಂದ್ರನ ಬೆಳದಿಂಗಳು, ಮನ್ಮಥನ ಮೋಹಕ-ಆಕರ್ಷಕ ರೂಪ, ವಸಂತದ ನವೋಲ್ಲಾಸ ಎಲ್ಲವೂ ಒಂದಡೆ ಮೇಳೈಸಿದಂತೆ. ಅಬ್ಬಾ ನಿಜಕ್ಕೂ ಮುನಿಯ ಮಗಳೆಂದು ತಿಳಿದು ಆಶ್ಚರ್ಯವು ಮತ್ತೆ ಮತ್ತೆ ಮೂಡುತ್ತಿದೆ. ಊರ್ವಶಿಯ ಸೌಂದರ್ಯವನ್ನು ಕಂಡು ಕಣ್ಣು ತುಂಬಿಕೊಂ...

ರಾಮಾಯಣ ೧೮೫

📖🏝ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು ಭಾಗ-೧೮೫🏝📖  *ಅಪ್ಸರಸ್ಸು ಚ ಮುಖ್ಯಾಸು ಗಂಧರ್ವೀಣಾಂ ತನೂಷು ಚ| ಯಕ್ಷಪನ್ನಗಕನ್ಯಾಸು ಋಕ್ಷೀವಿದ್ಯಾಧರೀಷು ಚ|| ಕಿನ್ನರೀಣಾಂ ಚ ಗಾತ್ರೇಷು ವಾನರೀಣಾಂ ತನೂಷು ಚ| ಸೃಜಧ್ವಂ ಹರಿರೂಪೇಣ ಪುತ್ರಾಂಸ್ತುಲ್ಯಪರಾಕ್ರಮಾನ್||* _ರಾಕ್ಷಸರ ಸಂಹಾರ ಕಾರ್ಯದಲ್ಲಿ ಭಗವಂತನಿಗೆ ಸಹಾಯಕರಾಗಿ ಅಪ್ಸರೆಯರಲ್ಲಿ, ಗಂಧರ್ವಸ್ತ್ರೀಯರಲ್ಲಿ, ಯಕ್ಷ-ಪನ್ನಗ ಕನ್ಯೆಯರಲ್ಲಿ, ಋಕ್ಷಿ ಮತ್ತು ವಿದ್ಯಾಧರ ಕನ್ಯೆಯರಲ್ಲಿ( ಋಕ್ಷಿ=ಹೆಣ್ಣು ಕರಡಿ), ಕಿನ್ನರ ಸ್ತ್ರೀಯರಲ್ಲಿ, ವಾನರಸ್ತ್ರೀಯರಲ್ಲಿ ಉಪಾಯಜ್ಞರಾದ (ಸಾಮ-ದಾನ-ಭೇದ-ದಂಡ) ಸಿಂಹ ಸದೃಶ ಬಲಿಷ್ಠರಾದ ದೀರ್ಘಾಯುಗಳಾದ ಸರ್ವಾಸ್ತ್ರಗಳ ಶಕ್ತಿತುಂಬಿರುವ ಮಕ್ಕಳನ್ನು ಹುಟ್ಟಿಸಿ ಎಂದು ನುಡಿದನು ಬ್ರಹ್ಮ. ಹಾಗೆ ಹುಟ್ಟಿದ ವೀರರ ಹೆಸರು- ಇಂದ್ರನು ವಾಲಿಯನ್ನು, ಸೂರ್ಯನು ಸುಗ್ರೀವನನ್ನೂ, ಬೃಹಸ್ಪತಿಯು ತಾರನನ್ನೂ, ಕುಬೇರನು ಗಂಧಮಾದನನನ್ನೂ, ವಿಶ್ವಕರ್ಮನು ನಲನನ್ನೂ,( ಸೇತುವೆಯ ಮುಖ್ಯ ರಚನಕಾರ ವಿಶ್ವಕರ್ಮನ ಮಗ) ಅಗ್ನಿಯು ನೀಲನನ್ನೂ, ಅಶ್ವಿನಿಗಳು ಮೈಂದ-ದ್ವಿವಿದರನ್ನೂ, ವರುಣನು ಸುಷೇಣನನ್ನೂ, ಪರ್ಜನ್ಯನು ಶರಭನನ್ನೂ, ವಾಯುವು ಹನುಮನನ್ನೂ ಹುಟ್ಟಿಸಿದರು. ಕಾಮರೂಪಿಗಳೂ, ಮಹಾಬಲಶಾಲಿಗಳೂ, ಇಚ್ಛಿಸಿದಲ್ಲಿಗೆ ಕೂಡಲೇ ತೆರಳುವ ಸಾಮರ್ಥ್ಯ ಉಳ್ಳವರೂ,ಉಳಿದ ಪ್ರಾಣಿಗಳನ್ನು ಸೋಲಿಸುವ ಸಾಮರ್ಥ್ಯವುಳ್ಳ ಲಕ್ಷ ಲಕ್ಷ ವಾನರರು ಜನಿಸಿದರು. ನಂದೀಶ್ವರನ ಶಾಪವನ್ನು ಸತ್ಯ ಮಾಡಲು ಹೀಗೆ ಬ...

ವಿಕ್ರಮೋರ್ವಶೀಯ ೩

📔👳‍♀️💛👩‍🦱📒 *ವಿಕ್ರಮೋರ್ವಶೀಯ*  ಪದ್ಯ-3 *आविर्भूते शशिनि तमसा मुच्यमानेव रात्रिः नैशस्यार्चिर्हुतभुज इव च्छिन्नभूयिष्ठधूमा। मोहेनान्तर्वरतनुरियं लक्ष्यते मुक्तकल्पा गङ्गा रोधः पतनकलुषो गृह्णतीव प्रसादम् ।।* _ಊರ್ವಶಿಯು ಅಸುರರಿಂದ ಆಕ್ರಮಣಕ್ಕೊಳಗಾದಾಗ ಪುರೂರವನು ಪೊರೆದಿದ್ದಾನೆ. ಅವಳನ್ನು ಅಡರಿದ ಭಯ ಇನ್ನೂ ಅಸುರರೊಡನೆ ಹೊರನಡೆದಿಲ್ಲ. ನಿಧಾನವಾಗಿ ಚೇತರಿಸಿಕೊಂಡು ಉಸಿರುಬಿಡುತ್ತಿದ್ದಾಳೆ. ಕವಿ ಅದನ್ನು ಸುಂದರವಾಗಿ ನಾಯಕನ ಮಾತನ್ನಾಗಿಸಿದ್ದಾನೆ. ಸುತ್ತಲೂ ಕತ್ತಲಿಂದ ಮುಚ್ಚಿಹೋಗಿದ್ದ ರಾತ್ರಿಯು ತಂಗದಿರನ ಕಿರಣದ ಸ್ಪರ್ಶದಿಂದ ಈಗ ತಾನೇ ಕಣ್ಣುಬಿಡುವಂತೆ, ರಾತ್ರಿಕಾಲದಲ್ಲಿ ಆವರಿಸಿದ ಹೊಗೆಯೆಲ್ಲ ಸರಿದು ಬಂಗಾರದ ಕಾಂತಿಯ ಅಗ್ನಿಶಿಖೆಯು ಹೊಳೆವಂತೆ, ಮಳೆಯ ಸಾಂಗತ್ಯದಲ್ಲಿ ತೀರದ ಮಣ್ಣಿನಿಂದ ಕಲುಷಿತಳಾಗಿದ್ದ ಗಂಗೆ ಈಗ ತಾನೇ ನಿರ್ಮಲವಾಗಿ ಹರಿವಂತೆ, ಅಸುರ-ಕ್ಷಿತಳಾಗಿ ಭಯವೆಂಬ ಭಾವದಲ್ಲಿ ಮುಳುಗಿದ್ದ ಈ ಸುಂದರಿಯು ಈ ಕ್ಷಣದಲ್ಲಿ ಸಾವರಿಸಿಕೊಂಡು ಅತ್ತಿತ್ತ ಕಣ್ಣುಹಾಯಿಸುತ್ತಾ ಬೆಳಕಾಗುತ್ತಿದ್ದಾಳೆ. ಸಖಿಯು ಅರೇ, ಗೆಳತಿ ಸಾವರಿಸಿಕೊ ಎಂದು ಅವಸರ ಮಾಡಿದಾಗ ನಾಯಕನಾಡುವ ಮಾತು. ಕವಿ ಇಲ್ಲಿ ಸುಂದರ ಚಿತ್ರವನ್ನೇ ಪದಗಳ ಮೂಲಕ ರಚಿಸಿದ್ದಾನೆ. ಒಂದೆಡೆ ಬೆಳದಿಂಗಳು, ಮತ್ತೊಂದೆಡೆ ಕತ್ತಲಲ್ಲೂ ಹೊಳೆಯುತ್ತಿರುವ ಬೆಂಕಿಯ ಜ್ವಾಲೆ, ಮತ್ತೊಂದೆಡೆ ನಿರ್ಮಲವಾದ ಗಂಗೆ ಈ ಮೂರರ ಸಾಕಾರವೆನಿಸಿದ ಹೆಣ್...

ರಾಮಾಯಣ ೧೮೪

📖🏝ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು ಭಾಗ-೧೮೪🏝📖  *ಪುತ್ರತ್ವಂ ತು ಗತೇ ವಿಷ್ಣೌ ರಾಜ್ಞಸ್ತಸ್ಯ ಮಹಾತ್ಮನಃ | ಉವಾಚ ದೇವತಾಃ ಸರ್ವಾಃ ಸ್ವಯಂಭೂರ್ಭಗವಾನಿದಮ್ ||   ವಿಷ್ಣೋಃ ಸಹಾಯಾನ್ಬಲಿನಃ ಸೃಜಧ್ವಂ ಕಾಮರೂಪಿಣಃ || ಮಾಯಾವಿದಶ್ಚ ಶೂರಾಂಶ್ಚ ವಾಯುವೇಗಸಮಾಂಜವೇ|* _ಭಗವಂತನ ಅವತಾರ ದಶರಥನ ಪುತ್ರನಾಗಿ ಆಗುತ್ತಿರಲು ಬ್ರಹ್ಮನು ದೇವತೆಗಳನ್ನು ಕುರಿತು ನುಡಿದನು- ದೇವತೆಗಳೇ ನೀವೆಲ್ಲರೂ ವಿಷ್ಣುವಿನ ಸಹಾಯಕ್ಕೆ ಇಚ್ಛೆ ಬರುವ ರೂಪಧಾರಿಗಳಾದ ಪ್ರಾಣಿಗಳನ್ನು ನಿಮ್ಮ ಪ್ರಭಾವದಿಂದಾಗಿ ಹುಟ್ಟಿಸಿರಿ.  ಶೂರರೂ, ವಾಯುವೇಗದವರೂ, ನೀತಿಜ್ಞರೂ, ಬುದ್ಧಿವಂತರೂ ಆಗಿ ವಿಷ್ಣುವಿಗೆ ಸಮಾನ ಪರಾಕ್ರಮ ಉಳ್ಳವರಾಗಿ ಸಾಮಾದಿ ಚತುರೋಪಾಯಗಳನ್ನು ಅರಿತವರೂ,ಸಿಂಹಸದೃಶ ಬಲಿಷ್ಠರೂ,ದೀರ್ಘಾಯುಷಿಗಳಾಗಿಯೂ ಇರುವರಾಗಿರಬೇಕು. ಶ್ರೇಷ್ಠ ಅಪ್ಸರೆಯರಿಂದಲೂ,ಗಂಧರ್ವಸ್ತ್ರೀಯರಿಂದಲೂ, ಯಕ್ಷ-ಪನ್ನಗ ಸ್ತ್ರೀಯರಿಂದಲೂ, ವಿದ್ಯಾಧರ ಕನ್ಯೆಯರಿಂದಲೂ, ಕಿನ್ನರ-ವಾನರ ಸ್ತ್ರೀಯರಿಂದಲೂ, ನಿಮ್ಮಷ್ಟೇ ಬಲಿಷ್ಠರಾದ ವಾನರರೂಪಿಗಳನ್ನು ಸೃಷ್ಟಿಸಿರಿ ಎಂದು ಆಜ್ಞಾಪಿಸಿದನು._ _ಇಲ್ಲಿ ತಮ್ಮ ತಮ್ಮ ಮಡದಿಯರಲ್ಲಿ ಮಕ್ಕಳನ್ನು ಪಡೆಯದಿರಲು  ಪಾರ್ವತಿಯ ಶಾಪ ಕಾರಣವಾಗಿತ್ತು. ಹಾಗಾಗಿ ತಮ್ಮ ಕ್ಷೇತ್ರದಲ್ಲಿ ದೇವತೆಗಳು ಮಕ್ಕಳನ್ನು ಪಡೆಯುವುದು ಸಾಧ್ಯವಾಗದ ಸಂಗತಿ. ಹಾಗಾಗಿ ಅಪ್ಸರೆ-ಗಂಧರ್ವ ಹೀಗೆ ನಾನಾ ಸ್ತ್ರೀಯರನ್ನು ಆಶ್ರಯಿಸಿ ವಾನರರನ್ನು ಸೃಷ್ಟಿಸಿದರು. ನಂದ...

ವಿಕ್ರಮೋರ್ವಶೀಯ ೨

📔👳‍♀️💛👩‍🦱📒 *ವಿಕ್ರಮೋರ್ವಶೀಯ*  ಪದ್ಯ-೨ *अग्रे यान्ति रथस्य रेणुपदवीं चूर्णीभवन्तो घनाः चक्रभ्रान्तिररान्तरेषु जनयत्यन्यामिवारावलीम् । चित्रन्यस्तमिवाचलं हयशिरस्यायामवच्चामरं यष्ट्यग्रे च समं स्थितो ध्वजपटः प्रान्ते च वेगानिलात् ।।* _ಕಾಳಿದಾಸನ ಒಂದು ಸುಂದರ ಕಲ್ಪನೆ. ಹಿಂದೆ ಈಗಿನಂತೆ ನೂರು ನೂರೈವತ್ತು ಕಿಲೋಮೀಟರ್ ವೇಗದಲ್ಲಿ ಹೋಗುವ ದ್ವಿಚಕ್ರ ಅಥವಾ ಚತುಶ್ಚಕ್ರ ವಾಹನಗಳಿರಲಿಲ್ಲ‌. ಆಗ ಇದ್ದ ವೇಗದ ವಾಹನಗಳು ರಥಗಳು. ರಥ ಓಡಿಸುವ ಕೆಲವು ಪರಿಣತ ಸಾರಥಿಗಳು ಬಹಳ ವೇಗದಿಂದ ಆಕಾಶದಲ್ಲಿ ಹೋಗುತ್ತಿರುವಂತೆ ಓಡಿಸುತ್ತಿದ್ದರು. ಇದಕ್ಕೆ ಸಾರಥಿಯ ಚಾಕಚಕ್ಯತೆ ಹಾಗೂ ಅಶ್ವಗಳ ಗುಣಮಟ್ಟ ಎರಡೂ ಸಹಕಾರಿಯಾಗಿತ್ತು. ಪ್ರಕೃತ ವಿಕ್ರಮೋರ್ವಶೀಯ ನಾಟಕದಲ್ಲಿ ಕೇಶಿಯೆಂಬ ದೈತ್ಯನು ಅಪ್ಸರೆಯಾದ ಊರ್ವಶಿಯನ್ನು ಅಪಹರಿಸಿದ್ದಾನೆ. ರಂಭೆಯ ಕೋರಿಕೆಯ ಮೇರೆಗೆ ನಾಟಕದ ನಾಯಕ ಪಾತ್ರಧಾರಿ ಪುರೂರವ ಧಾವಿಸಿದ್ದಾನೆ. ಸಹಜವಾಗಿ ಅವನು ವೇಗದಿಂದ ರಾಕ್ಷಸನ ಮನೆಗೆ ಹೋಗುತ್ತಿದ್ದಾನೆ. ತನ್ನ ಸಾರಥಿಯು ಅತ್ಯಂತ ವೇಗದಿಂದ ರಥವನ್ನು ಚಲಾಯಿಸುವುದನ್ನು ಕಂಡು ಆನಂದದಿಂದ ವರ್ಣಿಸುತ್ತಿದ್ದಾನೆ._ _ರಥವು ಎಷ್ಟು ವೇಗದಿಂದ ಸಾಗುತ್ತಿದೆಯೆಂದರೆ ಆಕಾಶಮಾರ್ಗದಲ್ಲಿರುವ ಮೋಡಗಳು ರಥದ ಗಾಲಿಗೆ ಸಿಕ್ಕಿ ಪುಡಿಯಾಗಿ ಧೂಳು ಎಲ್ಲೆಡೆ ಹರಡಿದಂತಿದೆ. ರಥದ ಗಾಲಿಯ ಮಧ್ಯಭಾಗವು ಎರಡಾಗಿ ತೋರುತ್ತಿದೆ. ಚಕ್ರವು ವೇಗವಾಗಿ ಉರುಳುವಾಗ ಅ...

ಧಾರ್ಮಿಕ ವಿಷಯ

ದೌಹಿತ್ರಪ್ರತಿಪಚ್ಛ್ರಾದ್ಧ ಜಾತಮಾತ್ರೋಪಿ ದೌಹಿತ್ರೋ ವಿದ್ಯಮಾನೇಪಿ ಮಾತುಲೇ ಕುರ್ಯಾನ್ಮಾತಾಮಹಶ್ರಾದ್ಧಂ ಪ್ರತಿಪದ್ಯಾಶ್ವಿನೇ ಸತಿ. ಎಂಬ ನಿರ್ಣಯಸಿಂಧುವಿನ ಮಾತಿನಂತೆ ಮಾವ ಇದ್ದರೂ ಅಜ್ಜನ ಶ್ರಾದ್ಧ ಮಾಡಲೇಬೇಕು. ಉಪನಯನ ಆಗದವರು ಕೂಡ ಇದನ್ನು ಮಾಡಬಹುದು. ಚಂದ್ರಿಕಾಕಾರರು ಪಿಂಡ ಸಹಿತ ಎಂದರೆ ಕಮಲಾಕಾರನು ಪಿಂಡರಹಿತ ಎನ್ನುತ್ತಾನೆ. ಪ್ರತಿಪದೆಯ ಶ್ರಾದ್ಧದಲ್ಲಿ ಪಿಂಡದ ನಿಷೇಧ ಹೇಳಿರುವ ಕಾರಣ ಕಮಲಾಕರನ ಮಾತು ಸಮ್ಮತವೆನಿಸುತ್ತದೆ. ಅಲ್ಲದೆ ತಂದೆ ತಾಯಿ ಬದುಕಿದ್ದವರು ಪಿಂಡ ಕೊಡಬಾರದೆಂಬ ನಿಷೇಧವೂ ಇದಕ್ಕೆ ಪೂರಕ. ಪಿತೃಗಳು ಇದ್ದವರೇ ಇದನ್ನು ಮಾಡಬೇಕು.      ಗರ್ಭಾಚ್ಯುತೋ ಹಿ ದೌಹಿತ್ರಃ ಕುರ್ಯಾತ್ಪಿತರಿ ಜೀವತಿ. ಶ್ರಾದ್ಧಂ ಮಾತಾಮಹಾನಾಂ ಚ ಪಕ್ಷಾಂತಾದಪರೇಹನಿ.  ಪಕ್ಷಪಾಸದ ಮರುದಿನ ಈ ಶ್ರಾದ್ಧ ಮಾಡಬೇಕೆಂದು ಬಹು ಉಕ್ತಿಗಳು ಇವೆ.  ಪ್ರತಿಪದ್ಯಾಶ್ವಿನೇ ಶುಕ್ಲೇ ದೌಹಿತ್ರಸ್ವ್ತೇಕಪಾರ್ವಣಮ್ ಶ್ರಾದ್ಧಂ ಮಾತಾಮಹಂ ಕುರ್ಯಾತ್ಸಪಿತಾ ಸಂಗವೇ ಸದಾ.  ಇದನ್ನು ಕುತಪ ಕಾಲದಲ್ಲಿ ಅಲ್ಲದೇ ಸಂಗವ ಕಾಲ ಅಂದರೆ ದಿನದ ದ್ವಿತೀಯ ಭಾಗದಲ್ಲಿ ಮಾಡಬೇಕು. ತಂದೆ ಇದ್ದವರು ಸಂಗವ ಕಾಲ ಹೀಗೆ ಎರಡು ಅನ್ವಯ.  ಒಂದು ವೇಳೆ ತಂದೆ ಹೋಗಿಯೂ ಮಾಡುವುದಾದರೆ ಅಪರಾಹ್ನ ಮಾಡಬೇಕು.  ಕೌಸ್ತುಭಕಾರರು ಪಾರ್ವಣ ವಿಧಿಯಲ್ಲಿ ಜೀವತ್ಪಿತೃಕನು ಅಪರಾಹ್ಣವೇ ಮಾಡಬೇಕೆನ್ನುತ್ತಾನೆ.  ಪ್ರಯೋಗ: ಅಸ್ಮನ್ಮಾತಾಮಹ ....... ಏತೇಷಾಂ...

ರಾಮಾಯಣ ೧೮೩

📖🏝ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು ಭಾಗ-೧೮೩🏝📖 *ಇದಂ ತು ನೃಪಶಾರ್ದೂಲ ಪಾಯಸಂ ದೇವನಿರ್ಮಿತಮ್ | ಪ್ರಜಾಕರ ಗೃಹಾಣ ತ್ವಂ ಧನ್ಯಮಾರೋಗ್ಯವರ್ಧನಮ್ || ಭಾರ್ಯಾಣಾಮನುರೂಪಾಣಾಮಶ್ನೀತೇತಿ ಪ್ರಯಚ್ಛ ವೈ | ತಾಸು ತ್ವಂ ಪ್ರಾಪ್ಸ್ಯಸೇ ಪುತ್ರಾನ್ಯದರ್ಥಂ ಯಜಸೇ ನೃಪ||* _ದೇವಪುರುಷನ ಆವಿರ್ಭಾವದಿಂದ ಮುದಗೊಂಡ ದಶರಥನು ಏನು ಮಾಡಬೇಕೆಂದು ಕೇಳಿದಾಗ ಅವನಾಡುವ ಮಾತು- ರಾಜನೇ, ಅಶ್ವಮೇಧ ಪುತ್ರಕಾಮೇಷ್ಟಿ ಮೊದಲಾದ ಯಜ್ಞಗಳಿಂದ ದೇವತಾರಾಧನೆ ಮಾಡಿದ ಫಲರೂಪವಾದ ಪಾಯಸವಿದು. ನಿನ್ನ ಪತ್ನಿಯರಿಗೆ ಪಾನಮಾಡಲು ನೀಡಿ ಪುತ್ರರನ್ನು ಪಡೆ ಎಂದು. ಹೋಮಗಳಲ್ಲಿ ಪಾಯಸವನ್ನು ಅಹುತಿ ನೀಡುವ ಫಲವೂ ಸಂತತಿ ಅಥವಾ ಪ್ರಜಾವೃದ್ಧಿ. ಇಲ್ಲಿ ಪಾಯಸದ ಪಾನವೂ ಅದನ್ನೇ ನಿರೂಪಿಸಿದೆ. ಪಾಯಸದ ಸ್ವರೂಪ ಹೇಗೆಂದರೆ- ತುಪ್ಪದೊಂದಿಗೆ ಇಡೀ ಅಕ್ಕಿಯನ್ನು ಮಿಶ್ರಮಾಡಿ ಹಾಲಿನಲ್ಲಿ ಬೇಯಿಸಿದರೆ ಪಾಯಸ ಸಿದ್ಧವಾಗುತ್ತದೆ. ನಾವು ಪ್ರಕೃತ ಮಾಡುವಂತೆ ಸಕ್ಕರೆ ಅಥವಾ ಬೆಲ್ಲವನ್ನು ಹಾಕಬೇಕೆಂದಿಲ್ಲ. ಈ ಪಾಯಸದ ಸೇವನೆಯು ಕಫವನ್ನು ಹೆಚ್ಚಿಸುತ್ತದೆ, ಶಕ್ತಿಯನ್ನು ವೃದ್ಧಿಸುತ್ತದೆ,ಶೀತವನ್ನು ಉಂಟುಮಾಡುತ್ತದೆ ಹಾಗೂ ತಿನ್ನಲು ಬಹಳ ಮಧುರವಾಗಿರುತ್ತದೆ. ಭಗವಂತನ ಪ್ರಸಾದವೆನಿಸಿದಾಗ ಅದರ ದೋಷಗಳು ದೂರವಾಗಿ ಗುಣಗಳು ಹೆಚ್ಚಾಗಿ ನಮ್ಮನ್ನು ಇನ್ನಷ್ಟು ಗಟ್ಟಿಯಾಗಿಸುತ್ತದೆ. ರಾಜನೇ, ಇದರ ಸೇವನೆಯು ನಿಶ್ಚಿತವಾಗಿ ನಿನಗೆ ಫಲ ಕೊಡುವುದೆಂದು ನುಡಿದು ಆ ಪರಮಪುರುಷನು ಅಂತರ್ಧಾನನಾದನು._ *ಬಭೂವ ಪರಮಪ್...

ರಾಮಾಯಣ ೧೮೨

📖🏝ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು ಭಾಗ-೧೮೨🏝📖 *ತತೋ ವೈ ಯಜಮಾನಸ್ಯ ಪಾವಕಾದತುಲಪ್ರಭಮ್ | ಪ್ರಾದುರ್ಭೂತಂ ಮಹದ್ಭೂತಂ ಮಹಾವೀರ್ಯಂ ಮಹಾಬಲಮ್ || ಕೃಷ್ಣಂ ರಕ್ತಾಂಬರಧರಂ ರಕ್ತಾಸ್ಯಂ ದುಂದುಭಿಸ್ವನಮ್ | ಸ್ನಿಗ್ಧಹರ್ಯಕ್ಷತನುಜಶ್ಮಶ್ರುಪ್ರವರಮೂರ್ಧಜಮ್||* _ಭಗವಂತನು ಅವತಾರ ತಾಳಲೆಂದು ನಿಶ್ಚಯಿಸಿದ ಕಾಲದಲ್ಲಿ ದಶರಥನು ಪುತ್ರಕಾಮೇಷ್ಟಿ ಯಜ್ಞದಲ್ಲಿ ಪಾಲ್ಗೊಂಡಿದ್ದನು. ಯಜ್ಞದಲ್ಲಿ ದೇವತೆಗಳು ಆಹುತಿ ಸ್ವೀಕರಿಸಿ ಪೂರ್ಣಾಹುತಿಯೂ ನಡೆಯಿತು. ಆಗ ಆಹವನೀಯ ಯಜ್ಞ ಕುಂಡದ ಮಧ್ಯಭಾಗದಿಂದ ಅಪಾರ ತೇಜಸ್ಸಿನ-ಮಹಾಬಲಿಷ್ಠನಾದ-ಮಹಾಶಕ್ತಿಯಾಲಿಯೊಬ್ಬನು ಆವಿರ್ಭವಿಸಿದನು. ಇಲ್ಲಿ ಮಹದ್ಭೂತಂ ಎಂದಿದ್ದಾರೆ. ವಿಷ್ಣುವನ್ನೂ ಪುರಾಣಗಳು ಮಹದ್ಭೂತಂ ಎಂದೇ ಕರೆದಿದ್ದಾರೆ. ಭಗವಂತನ ತೇಜಸ್ಸನ್ನು ಅವನಲ್ಲದೆ ಬೇರಾರು ಧರಿಸಿಯಾರು! ಆ ತೇಜಸ್ವಿಯ ಬಣ್ಣ ಕಪ್ಪು, ಮುಖವು ಕೆಂಪು, ಧ್ವನಿಯು ನಗಾರಿಯಂತೆ ಘನಗಂಭೀರ, ಸಿಂಹದ ಕೇಸರದಂತೆ ಮುಖದಲ್ಲೂ-ಶಿರದಲ್ಲೂ ನೀಳಕೇಶರಾಶಿ, ನಾನಾ ಶುಭಲಕ್ಷಣಗಳು ಎದ್ದು ತೋರುವಂತಿದ್ದವು, ಅನೇಕ ದಿವ್ಯವಾದ ಆಭರಣಧಾರಿ,ಪರ್ವತದ ಶಿಖರದಂತೆ ಉನ್ನತ ಕಾಯ, ವ್ಯಾಘ್ರದಂತೆ ನಿಧಾನದ ನಡೆ, ಸೂರ್ಯನ ತೇಜಸ್ಸು, ಅಗ್ನಿಯ ಜ್ವಾಲೆಯೇ ಮೇಲೆದ್ದು ಬಂದಂತೆ ಹೊಳೆಯುವ ಆ ಪುರುಷನು ಚಿನ್ನದ ಪಾತ್ರೆಯಲ್ಲಿ ಬೆಳ್ಳಿಯ ಮುಚ್ಚಳ ಹೊಂದಿದ್ದ ದಿವ್ಯಪಾಯಸದಿಂದ ಕೂಡಿದ್ದ ಪಾತ್ರೆಯನ್ನು ತಂದು ಕೊಟ್ಟನು._ _ಭಗವಂತನ ಅವತಾರವೆಂದರೆ ಅದು ಪ್ರಕೃತಿಯಲ್ಲಿ ಪೂರ್ಣತೆ ಹೊ...

ಅನುವಾದಿತ ಕಥೆ ೩೫

अनूदितकथावलिः-३५            जीवनं सञ्जीवनम्  जीवने असन्तुष्टः एकः युवा आत्महत्यां कर्तुं चिन्तितवान् । मरणार्थं कः सुलभः उपायः इति ज्ञातुं किञ्चित् कालं अभवत् । सर्वेषु तादृशेषु  उपायेषु धूमशकटयानमार्गपतनं अत्यंतं सुलभं इति मत्वा लोहयानस्थानकम् गतवान् । तत्र बहुजनाः आसन् । तान् दृष्ट्वा चकितः सः एवं पृष्टवान् । भोः सर्वैः कुत्र प्रस्थानम् क्रियते ? इति। तैरुक्तम् - वयं तिरुवण्णामलै नगरं गमिष्यामः , तत्र रमणमहर्षेः दर्शनं भवति , तेन सर्वपापानि परिहृतानि  भवन्ति इति। एवं रीत्या सहस्राधिकाः तेषां दर्शनार्थं गच्छन्ति चेत् सः महान् पुरुषः  स्यादित्यालोच्य यूना चिन्तितम् - ज्ञानेन  वा अज्ञानेन मयापि पूर्वजन्मनि नानापापानि घटितानि स्युः , एतज्जन्मनि तेषां समेषां सकाशात् कष्टम् अनुभवन् अस्मि, आगामिजन्मनि सुखम् अनुभवितुं सर्वपापानां अपनोदनं कार्यम् , तथा च पापनाशार्थम्  अहमपि गमिष्यामि इति।  ततः तिरुवण्णामलै नगरं  गत्वा रमणमहर्षिं दृष्टवान् सः । अल्पश्मश्रुः , कृशकायः सः महर्षिः  तावता पलाशपत्रैः भोजनार्थं पत्रावलिं कुर्व...

ವಿಕ್ರಮೋರ್ವಶೀಯ ೧

📔👳‍♀️💛👩‍🦱📒 *ವಿಕ್ರಮೋರ್ವಶೀಯ*  ಪದ್ಯ-೧ *वेदान्तेषु यमाहुरेकपुरुषं व्याप्य स्थितं रोदसी यस्मिन्नीश्वर इत्यनन्यविषयः शब्दो यथार्थाक्षरः । अन्तर्यश्च मुमुक्षुभिर्नियमितप्राणादिभिर्मृग्यते स स्थाणुः स्थिरभक्तियोगसुलभो निःश्रेयसायास्तु वः।।* _ಸಂಸ್ಕೃತ ಕವಿಗಳಲ್ಲಿ ಕೀರ್ತಿಶಿಖರವನ್ನು ತಲುಪಿದ ಕವಿ ಎನಿಸಿದವನು ಕವಿಕುಲಗುರು ಕಾಳಿದಾಸ.ಅವನ ನಾನಾ ಕೃತಿಗಳಲ್ಲಿ ವಿಕ್ರಮೋರ್ವಶೀಯ ನಾಟಕವೂ ಒಂದು. ವೇದ ಹಾಗೂ ಪುರಾಣಗಳಲ್ಲಿ ಪ್ರಸಿದ್ಧವಾದ ಊರ್ವಶಿ ಹಾಗೂ ಪುರೂರವನ ಪ್ರಣಯ ಪ್ರಸಂಗವನ್ನು ಆಧರಿಸಿ ಬರೆದ ಸುಂದರ ನಾಟಕ. ನಾಟಕದ ಮಂಗಲಶ್ಲೊಕ ಹಾಗೂ ನಾಂದೀಪದ್ಯ ಇದು._ _ಇಲ್ಲಿ ಲಿಂಗರೂಪದಲ್ಲಿ ಸ್ಥಿರವಾಗಿ ನೆಲೆಸಿ ಸ್ಥಾಣು ಎಂದು ಪ್ರಸಿದ್ಧನಾದ ಶಿವನ ಸ್ತುತಿ ಇದೆ. ಸ್ವರ್ಗ-ಭೂಮಿಗಳಿಗೆ ಅಥವಾ ಭೂಮ್ಯಾಕಾಶಗಳಿಗೆ ವ್ಯಾಪಿಸಿ ನೆಲೆನಿಂತಿರುವ ಯಾರನ್ನು ವೇದಾಂತಗಳು ಮಹಾಪುರುಷ ಅಥವಾ ಅದ್ವಿತೀಯಪುರುಷನೆಂದು ಕರೆದವೋ,  ಈಶ್ವರ ಎಂಬ ಪದವು ಯಾವ ಒಬ್ಬನಲ್ಲಿ ಮಾತ್ರ ಅನ್ವಯಿಸುವುದೋ, ಅಕ್ಷರ ಎಂಬ ಪದಕ್ಕೆ ಅನ್ವರ್ಥದಂತಿರುವ, ಪ್ರಾಣಾಯಾಮದ ಮೂಲಕ ಇಂದ್ರಿಯಾದಿಗಳನ್ನು ನಿಯಂತ್ರಿಸಿ ಆಂತರ್ಯದಲ್ಲಿ ಮೋಕ್ಷಾರ್ಥಿಗಳು ಯಾರನ್ನು ಕಾಣಬಯಸುವರೋ, ದೃಢಭಕುತಿಗೆ-ಯೋಗಿಗಳಿಗೆ ಒಲಿವ ಅವನು ನಿಮ್ಮೆಲ್ಲರಿಗೂ ಮೋಕ್ಷವನ್ನು ಅಥವಾ ಮಂಗಳವನ್ನು ಕರುಣಿಸಲಿ._ _ಕಾಳಿದಾಸನ ಮನದ ಅಭಿಲಾಷೆಯೇ ಸರ್ವಜನಸುಖ. ಅದು ಕಾವ್ಯ ಓದ...

ಪದಶಕ್ತಿ ೪೫

ಪದಶಕ್ತಿ ೪೫🌄📔🖋️📕 *ಪವಮಾನ* _ಪೂಙ್ ಎಂಬ ಧಾತುವಿನಿಂದ ಹುಟ್ಟಿದ ಈ ಪದದ ಪ್ರಸಿದ್ಧ ಅರ್ಥ ವಾಯು. ಎಲ್ಲವನ್ನೂ ಶುದ್ಧೀಕರಿಸುವ ಗುಣ ಉಸಿರಿನಿಂದ ಹಸಿರಿನ ತನಕ ವಾಯುವಿಗಿರುವುದು ಪ್ರಕೃತಿ ಸಹಜ. ಹಾಗಾಗಿ ವಾಯುವೇ ಮುಖ್ಯ ಅರ್ಥ._ _ಮತ್ತೊಂದು ಅರ್ಥ ಗಾರ್ಹಪತ್ಯ ನಾಮಕ ಅಗ್ನಿ. ಗೃಹಸ್ಥನಿಗೆ  ಅಗ್ನಿಹೋತ್ರ ಮೊದಲಾದವನ್ನು ಆಚರಿಸಲು ಹಾಗೂ ಆರಾಧನೆ ಮಾಡಲು ಇರುವ  ಅಗ್ನಿಗಳು ಭಿನ್ನ ಭಿನ್ನ. ದಕ್ಷಿಣಾಗ್ನಿ-ಗಾರ್ಹಪತ್ಯಾಗ್ನಿ-ಆಹವನೀಯಾಗ್ನಿ ಎಂದು. ಇವುಗಳಲ್ಲಿ ವಿವಾಹದ ನಂತರ ಸಂಸ್ಕಾರಾದಿಗಳನ್ನು ಆಚರಿಸಲು ಇರುವ ಅಗ್ನಿ ಗಾರ್ಹಪತ್ಯಾಗ್ನಿ. ನಮ್ಮನ್ನು ಸದಾ ರಕ್ಷಿಸಿ ಪೊರೆಯುವುದು ಎಂಬ ಅರ್ಥದಲ್ಲಿ ಈ ಅಗ್ನಿಗೆ ಪವಮಾನ ಎಂದು ಹೆಸರಿದೆ. ಅಗ್ನಿಯ ಕಾರ್ಯವೂ ಶುದ್ಧೀಕರಣವೇ ಆಗಿದೆ._ _ಮೂರನೆಯ ಅರ್ಥ ಸೋಮ. ಋಗ್ವೇದದ ೬೧೦ ಮಂತ್ರಗಳು  ಪವಮಾನ ಮಂತ್ರಗಳು ಎಂದು ಪ್ರಸಿದ್ಧ. ಇಲ್ಲಿ ಪ್ರಧಾನ ದೇವತೆ ಪವಮಾನ ಅಥವಾ ಸೋಮ. ಸೋಮ ಶಬ್ದಕ್ಕೆ ಹತ್ತಾರು ಅರ್ಥಗಳಿದ್ದರೂ ನಮಗೆ ಪ್ರಕೃತ ವಿವಕ್ಷಿತವಾಗುವುದು ಓಷಧೀಶನಾದ ಚಂದ್ರ. ಸೋಮಲತೆಗೆ ಅಭಿಮಾನಿ ಅವನೇ ಆಗಿದ್ದಾನೆ.ಔಷಧದ ಕೆಲಸ ವಾತ-ಪಿತ್ತ-ಕಫಗಳಿಂದ ಉಂಟಾದ ದೋಷಗಳನ್ನು ನಿವಾರಿಸಿ ಅಂದರೆ ದೇಹದ ಕಲ್ಮಶಗಳನ್ನು ದೂರಮಾಡಿ ದೇಹವನ್ನು ಶುದ್ಧೀಕರಿಸುವುದು. ಹಾಗಾಗಿ ಈ ಅರ್ಥದಲ್ಲಿ ಸೋಮನೂ ಪವಮಾನ._ _ಈ ಪದ ಸಂಸ್ಕೃತ-ಕನ್ನಡ ಎರಡೂ ಭಾಷೆಯ ಮಂತ್ರ-ಪುರಾಣ-ಕೀರ್ತನೆ ಹೀಗೆ ಸಾವಿರಾರು ಕಡೆ ಪ್ರಸಿದ್ಧವಾಗಿದೆ‌....

ರಾಮಾಯಣ ೧೮೧

📖🏝ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು ಭಾಗ-೧೮೧🏝📖  *ತಮೇವ ಹತ್ವಾ ಸಬಲಂ ಸಬಾಂಧವಂ ವಿರಾವಣಂ ರಾವಣಮುಗ್ರಪೌರುಷಮ್ | ಸ್ವರ್ಲೋಕಮಾಗಚ್ಛ ಗತಜ್ವರಶ್ಚಿರಂ ಸುರೇಂದ್ರಗುಪ್ತಂ ಗತದೋಷಕಲ್ಮಷಮ್ ||* _ದೇವತೆಗಳ ಪ್ರಾರ್ಥನೆ ಮಹಾವಿಷ್ಣುವನ್ನು ಕುರಿತು- ಹೇ ದೇವದೇವ, ಸೈನ್ಯ ಹಾಗೂ ಬಂಧುಸಮೇತನಾದ, ಅತ್ಯುಗ್ರಪರಾಕ್ರಮಿಯಾದ, ಸರ್ವಜನರಿಗೂ ದುಃಖದಾಯಕನಾದ, ರಾವಣನ ವಧೆ ಮಾಡಿ ದೇವತೆಗಳ ಚಿರಕಾಲದ  ಜ್ವರವನ್ನು ನಿವಾರಿಸಿ ಇಂದ್ರನ ಆಳ್ವಿಕೆಯಲ್ಲಿ ರಕ್ಷಿತವಾದ ಈ ಸ್ವರ್ಗಕ್ಕೆ ಆಗಮಿಸು. ರಾವಣನ ಪರಾಕ್ರಮದ ಬಗೆಗೆ ದೇವತೆಗಳಿಗೆ ಪೂರ್ಣ ಅರಿವಿದೆ. ಉಗ್ರಪೌರುಷ ಎಂದು ಕರೆಯುತ್ತಾರೆ. ಅವನ ಪರಾಕ್ರಮ ಸಹಿಸಲು ಅಸಾಧ್ಯ. ಹಾಗಾಗಿಯೇ ಅವನಿಂದ ದೇವತೆಗಳಿಗೆ ಚಿರಕಾಲದ ಜ್ವರ ಅಥವಾ ಬಾಧೆ. ಬಹುಕಾಲ ಒಂದೇ ಸ್ಥಾನದಲ್ಲಿ ನೆಲೆನಿಂತ ಬಾಧಾಗ್ರಹದಂತಿರುವನು ಇ ದುಷ್ಟ. ಅವನನ್ನು ಬಲ ಹಾಗೂ ಬಂಧು ಎರಡರ ಸಹಿತ ಮುಗಿಸು ಎನ್ನುತ್ತಾರೆ. ಬಲ ಉಳಿದರೆ ಇನ್ನೊಬ್ಬ ಬಂದು ಪೀಡಿಸಿಯಾನು. ಬಂಧುಗಳು ಉಳಿದರೆ ಅದೇ ಮನಸ್ಥಿತಿ ಲೋಕಕ್ಕೆ ತೊಂದರೆ ಕೊಟ್ಟೀತು. ಹಾಗಾಗಿ ದುಷ್ಟತನಕ್ಕೆ ಬೆಂಗಾವಲಾದ ಬಲವನ್ನೂ-ಬಂಧವನ್ನೂ ಕಳಚಿಬಿಡಬೇಕು. ಯುದ್ಧದ ಪೂರ್ವದಲ್ಲಿ ಹನುಮಂತ ಸುಮಾರಾಗಿ ಈ ಕೆಲಸ ಮಾಡುತ್ತಾನೆ. ಇಷ್ಟೆಲ್ಲಾ ಮಾಡಿ ನೀನು ಅಲ್ಲೇ ವಾಸಮಾಡದಿರು. ಹರಿಯ ನೆಲೆ ಇಲ್ಲದಿರೆ ನಮ್ಮ ಅಧಿಕಾರ-ಸುಖಗಳು ಹರಿದುಹಂಚಿಹೋದೀತು. ಹಾಗಾಗಿ ಆದಷ್ಟು ಶೀಘ್ರ ಸುರಲೋಕಕ್ಕೆ ಬಂದುಬಿಡು ಎನ್ನುವರು ಅ...

ಅನೂದಿತಕಥಾವಲಿ ೩೪

अनूदितकथावलिः -३४            .........     सङ्घे शक्तिः    ............. एकस्मिन् जनपदे राज्ञा  एका स्पर्धा आयोजिता। वेगेन यः शीघ्रं धावन्  निर्दिष्टस्थलं गच्छति सः विजयी भवतीति । ये तत्र विजयं प्राप्नुवन्ति तेषां कृते आशा पारितोषकरूपेण दीयते इत्यपि उद्घोषितवान् । सर्वे$पि भागं ग्रहीतुं शक्नुवन्ति । तत्र विशेष नियमः आसीत् यत्  समूहरूपेण सर्ववयस्काः मिलित्वा तस्यां स्पर्धायां भागं ग्रहीतुं शक्नुवन्ति इति । एकैकस्य समूहस्य एकवारम् अवकाशः लभ्यते स्म । सर्वैः समूहसदस्यैरपि निर्धारितं दूरं यथाकथञ्चिदपि गन्तव्यम्  इति ।  विहितसमये स्पर्धा आरब्धा । प्रथमसमूहे अनेकजनाः आसन् । तेषु युवानः  अत्यन्तवेगेन धावमानाः  आसन् । किंतु तत्र समूहस्थाः  वृद्धाः, बालाः तेषां वेगेन गन्तुं  अशक्ताः  मध्ये एव पतिताः । समूहस्थैः सर्वैरपि न उद्देशः साधितः इति  ते  पराजिताः । द्वितीयसमूहस्यापि स्पर्धा यदा आरब्धा तदा तत्रस्थाः  पुरुषाः   मनसि एवं चिन्तितवन्तः । वयं वेगेन प्रथमं गमिष्यामः,...

ರಾಮಾಯಣ ೧೮೦

📖🏝ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು ಭಾಗ-೧೮೦🏝📖  *ತ್ವಂ ಗತಿಃ ಪರಮಾ ದೇವ  ಸರ್ವೇಷಾಂ ನಃ ಪರಂತಪ | ವಧಾಯ ದೇವಶತ್ರೂಣಾಂ ನೃಣಾಂ ಲೋಕೇ ಮನಃ ಕುರು ||* _ದೇವತೆಗಳ ಮಾತು ಪರಮಾತ್ಮನನ್ನು ಕುರಿತು- ಹೇ ಭಗವಾನ್ ನಮ್ಮೆಲ್ಲರಿಗೂ ಕೊನೇ ಗತಿ ನೀನೇ. ನಮ್ಮ ಶತ್ರುಗಳನ್ನು ನಾಶಮಾಡುವವನು ನೀನೇ ಆಗಿರುವಿ. ದೇವಶತ್ರುವೆನಿಸಿದ ರಾವಣನ ಸಂಚಾರಕ್ಕಾಗಿ ಮನುಜರ ಲೋಕದಲ್ಲಿ ಜನ್ಮ ತಾಳಲು ಮನಸ್ಸು ಮಾಡು. ದೇವತೆಗಳೇ ಅನನ್ಯಗತಿಕರಾಗಿ ಪ್ರಾರ್ಥಿಸುವಾಗ ಅವರ ದಶಾಂಶವೂ ಯೋಗ್ಯತೆ ಇರದ ನಮಗೆ *ನಾರಾಯಣ* ಎಂಬ ನಾಮ ಹತ್ತಾರು ಬಾರಿ ಪಠಿಸಲು ಏಕೆ ಹಿಂಜರಿಕೆ! ದೇವ ಶತ್ರುವೆಂದಲ್ಲಿ ಅಂತಹವರು ಲೋಕಕಂಟಕರು. ಅವರನ್ನು ಒಪ್ಪುವ, ತುಷ್ಟೀಕರಿಸುವ, ಹೊಗಳುವ ಮಂದಿಯೂ ಒಂದರ್ಥದಲ್ಲಿ ಲೋಕಕಂಟಕರೇ ಸರಿ. ರಾವಣನನ್ನು ಉತ್ತಮ ಆಡಳಿತಗಾರ, ಪರಾಕ್ರಮಿ ಎಂದೆಲ್ಲಾ ಬೊಗಳೆಬಿಡುವ ಅವನ ವಂಶಸ್ಥರು ಅಥವಾ ಅನುಯಾಯಿಗಳು ಲೋಕಕಂಟಕರೇ ಸರಿ. ಅವರನ್ನು ಬೇರೆ ಗತಿಯಿಲ್ಲ ಎಂದೋ, ನಮ್ಮ ಜಾತಿಯವರೆಂದೋ, ನಮಗೆ ಉಪಕಾರ ಮಾಡಿದಾರೆ ಎಂದೋ ಬೆಂಬಲಿಸುವುದು ಲೋಕದ ಅನಿಷ್ಟಗಳಿಗೆ ಬೆಂಬಲ ಕೊಟ್ಟಂತೆ. ಪರಮಾ ಗತಿಃ ಎಂಬ ದೇವತೆಗಳ ಮಾತು ಕೊನೇ ಗತಿ ಅವನೇ ಎಂಬ ಪ್ರಾರ್ಥನೆ. ನೀನಲ್ಲದೆ ನಮ್ಮನ್ನು ಕಾಯುವರಾರು ಎಂಬ ಭಾವ. ನಮ್ಮನ್ನು ಪೊರೆಯಲೆಂದಾದರೂ ಒಮ್ಮೆ ಈ ದುಃಖಭೂಯಿಷ್ಠವಾದ ಜನರ ಮಧ್ಯೆ ಅವತಾರ ತಾಳು ಎಂಬ ನಿವೇದನೆ._ *ಭಯಂ ತ್ಯಜತ ಭದ್ರಂ ವೋ ಹಿತಾರ್ಥಂ ಯುಧಿ ರಾವಣಮ್ |  ಸಪುತ್ರಪೌ...

ರಾಮಾಯಣ ೧೭೯

📖🏝ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು ಭಾಗ-೧೭೯🏝📖  *ನಾಕೀರ್ತಯದವಜ್ಞಾನಾತ್ತದ್ರಕ್ಷೋ ಮಾನುಷಾಂಸ್ತದಾ| ತಸ್ಮಾತ್ಸ ಮಾನುಷಾದ್ವಧ್ಯೋ ಮೃತ್ಯುರ್ನಾನ್ಯೋಸ್ಯ ವಿದ್ಯತೇ||* _ಋಷ್ಯಶೃಂಗನು ಅಥರ್ವ ಮಂತ್ರಗಳಿಂದ ಯಾಗ ಮಾಡಲು ತೊಡಗಿದಾಗ ಅಲ್ಲಿಯೇ ಸೂಕ್ಷ್ಮರೂಪದಲ್ಲಿ ನೆರೆದಿದ್ದ ದೇವತೆಗಳು ಬ್ರಹ್ಮನ ಬಳಿ ಪ್ರಾರ್ಥಿಸುತ್ತಾರೆ. ಲೋಕಕಂಟಕನಾದ ರಾವಣನು ಪ್ರಕೃತಿಸಹಜತೆಯನ್ನು ಮೀರಿ ವ್ಯವಸ್ಥೆಯನ್ನು ಹಾಳುಮಾಡುತ್ತಿರುವನು. ಸೂರ್ಯನು ತನ್ನ ಪ್ರಕಾಶ ಬೀರಲು, ಗಾಳಿ ಬೀಸಲು ಅವನಪ್ಪಣೆ ಪಡೆಯಬೇಕಾಗಿದೆ. ಹಾಗಾಗಿ ಅವನ ಮೃತ್ಯುವಿನ ಬಗೆಗೆ ಯೋಚಿಸು ಎಂದಾಗ ಬ್ರಹ್ಮನಾಡಿದ ಮಾತು. ನಾನು ವರ ನೀಡಿದಾಗ ಮಾನವರ ಮೇಲಿನ ತುಚ್ಛ ಭಾವನೆಯಿಂದ ಅವನು ಅವರನ್ನು ಬಿಟ್ಟಿರುವನು. ಹಾಗಾಗಿ ಮಾನವನಿಂದಲೇ ಸಾಯುವನು ಎಂದು. ದೇವ-ದಾನವ-ಗಂಧರ್ವ-ಯಕ್ಷ ಇವರೆಲ್ಲರಿಂದಲೂ ಅವಧ್ಯನೆಂದು ವರ ಕೊಟ್ಟಿರುವೆನು. ಆದರೆ ಮಾನವನ ವಿಷಯದಲ್ಲಿ ಮಾತ್ರ ವರವಿಲ್ಲ. ಇಲ್ಲಿ ಅನೇಕ ವಿಷಯಗಳಿವೆ. ಯಜ್ಞದಲ್ಲಿ ದೇವತೆಗಳು ಹೇಗೆ ಇರುವರೆಂದರೆ ಮಂತ್ರಗಳನ್ನು ಸ್ವರ ಸಹಿತವಾಗಿ ಶ್ರದ್ಧೆಯಿಂದ ನುಡಿದಾಗ ಆಯಾ ದೇವತೆಗಳು ಬಂದು ನೆಲೆಸುವರು. ಅಲ್ಲಿ ಮುಖ್ಯ ಕಾರಣ ಮಂತ್ರ. ಯಜ್ಞದಲ್ಲಿ ಬ್ರಹ್ಮನ ಸ್ಥಾನದಲ್ಲಿ ಕುಳಿತ ಯೋಗ್ಯ ವ್ಯಕ್ತಿಯಲ್ಲಿ ಬ್ರಹ್ಮನೇ ಸ್ವತಃ ಸೂಕ್ಷ್ಮವಾಗಿ ನೆಲೆಸಿರುತ್ತಾನೆ. ಇವರು ಪರಸ್ಪರ ಸಂಭಾಷಿಸುವದನ್ನೇ ಮಹರ್ಷಿಗಳು ಉಲ್ಲೇಖಿಸಿದ್ದಾರೆ. ದೇವತೆಗಳು ಎಂದಿಗೂ ಪ್ರತ್ಯಕ್ಷ ಬರುವುದ...

ರಾಮಾಯಣ ೧೭೮

📖🏝ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು ಭಾಗ-೧೭೮🏝📖  *ತತಃ ಪ್ರೀತಮನಾ ರಾಜಾ ಪ್ರಾಪ್ಯ ಯಜ್ಞಮನುತ್ತಮಮ್ | ಪಾಪಾಪಹಂ ಸ್ವರ್ನಯನಂ ದುಷ್ಕರಂ ಪಾರ್ಥಿವರ್ಷಭೈಃ ||* _ಯಜ್ಞವನ್ನು ನೋಡಲು ಬಂದವರೆಲ್ಲರಿಗೂ ಬಯಸಿದ ವಸ್ತುಗಳನ್ನು ಧಾರಾಳವಾಗಿ ದಾನ ಮಾಡಿದನು ರಾಜಾ ದಶರಥ. ಅವರ ಆಶೀರ್ವಾದ ಬಯಸಿ ದೀರ್ಘದಂಡ ನಮಸ್ಕಾರ ಮಾಡಿದನು. ಅವರೆಲ್ಲರೂ ಸಂತೋಷದಿಂದ ಪುತ್ರವಂತನಾಗು ಎಂದು ಹರಸಿದರು. ರಾಜನ ಯಜ್ಞದ ಮುಖ್ಯ ಸಂಕಲ್ಪವೇ ಅದು. ಬರೀ ಸಂತಾನ ಮಾತ್ರವಲ್ಲ, ಈ ಯಜ್ಞ ಎಂದಿಗೂ ಪಾಪವನ್ನು ತೊಳೆಯುವಂತಹದು. ಇದಕ್ಕಿಂತ ಉತ್ತಮವಾದ ಸಾಧನ ಪಾಪ ಕಳೆಯಲು ಮತ್ತೊಂದಿಲ್ಲ. ಸರಿಯಾಗಿ ಬದುಕಿದರೆ ಹೇಗೆ ಪಾಪ ಬಂದೀತು ಎಂದರೆ ಹುಲ್ಲಾಗಲಿ ಮಾಂಸವಾಗಲಿ ತಿಂದರೆ ಪ್ರಾಣಹಾನಿ ಮಾಡಿದ ಪಾಪ. ತಿನ್ನದಿದ್ದರೆ ಆತ್ಮಹತ್ಯೆಯ ಪಾಪ. ಹಾಗಾಗಿ ಕ್ಷಣ ಜೀವಿಸಿದರೂ ಆಗುವ ಪಾಪದ ರಾಶಿ ಸಾವಿರಾರು ಜನ್ಮಗಳಲ್ಲಿ ಕಳೆಯಲು ಆಗದಷ್ಟು. ತನು-ಮನ-ಧನಗಳ ಪೂರ್ಣತ್ಯಾಗವೇ ಪಾಪನಿವಾರಕ. ಅದು ಯಜ್ಞದಲ್ಲಿ ಸಾಕಾರಗೊಳ್ಳುತ್ತದೆ. ಸ್ವರ್ಗಸಾಧನವಾದುದೂ ಹೌದು ಈ ಅಶ್ವಮೇಧ. ಉಳಿದ ರಾಜರಿಂದ ಆಚರಿಸಲು ಅಸಾಧ್ಯವೆನಿಸಿದ ಅದ್ಭುತವಾದ ಈ ಯಜ್ಞದ ಮೂಲಕ ದಶರಥನು ಸಂತಾನಕ್ಕೆ ಪ್ರತಿಬಂಧಕವಾದ ಅನೇಕ ಪಾಪಗಳನ್ನು ಪರಿಹರಿಸಿಕೊಂಡನು. ಸುಮಂತ್ರನ ಮಾತನ್ನು ಮತ್ತೆ ನೆನಪಿಸಿಕೊಂಡು ಸಂತಾನ ಪಡೆಯಲು ಮಾಡಬೇಕಾದ ಕಾರ್ಯದ ಬಗೆಗೆ ಚಿಂತಿಸಿದನು. ಪ್ರತಿಬಂಧಕ ದೂರವಾದರೆ ಮತ್ತೇನು ಎಂದರೆ ಕೊಳೆತದ್ದನ್ನು ದೂರ ಮಾಡಿದ ಕ್ಷಣ...

ಪದಶಕ್ತಿ ೪೪

🏹*ಪದಶಕ್ತಿ* ---೪೪🌄 *ಪವನ* _ಪುನಾತಿ ಇತಿ ಪವನಃ ಎಂಬಂತೆ ಪವಿತ್ರಗೊಳಿಸುವುದು ಎಂಬ ಅರ್ಥದಲ್ಲಿ ಈ ಶಬ್ದ ಪ್ರಯೋಗ ಇದೆ. ಪೂಙ್ ಧಾತುವಿಗೆ ಲ್ಯುಟ್ ಪ್ರತ್ಯಯ ಶುದ್ಧೀಕರಿಸು ಎಂಬ ಅರ್ಥದಲ್ಲಿ ಬಂದು ಈ ಪದ ಸಿದ್ಧವಾಗುತ್ತದೆ._ _ಪವನ ಶಬ್ದಕ್ಕೆ ಪ್ರಸಿದ್ಧ ಅರ್ಥ ಗಾಳಿ. ಅನೇಕ ವಸ್ತುಗಳಿಗೆ ಗಾಳಿ ಹಾಯಿಸಿದಾಗ ಅವುಗಳು ಶುದ್ಧವಾಗುತ್ತವೆ. ನಮ್ಮ ದೇಹದೊಳಗೆ ಆಗಾಗ ಪ್ರಣಾಯಾಮದ ಮೂಲಕ ಗಾಳಿಯನ್ನು ವ್ಯವಸ್ಥಿತವಾಗಿ ಜೋಡಿಸಿದಾಗ ದೇಹವು ಶುದ್ಧವಾಗುವುದು. ಪಾಪದ ಪ್ರಾಯಶ್ಚಿತ್ತ ರೂಪವಾಗಿ ಪ್ರಾಣಾಯಾಮದ ವಿಧಾನವೂ ಇದೇ ಅರ್ಥದಲ್ಲಿ ವಿಹಿತವಾಗಿದೆ. ಹತ್ತು ಅಥವಾ ನೂರು ಅಥವಾ ಸಾವಿರ ಪ್ರಾಣಾಯಾಮ ಮಾಡಿದಾಗ ತನು-ಮನಗಳೆರಡರ ಶುದ್ಧಿ ಸಹಜವಾಗಿ ಆಗುತ್ತದೆ. ಒಗೆಯಲು ಅಸಾಧ್ಯವಾದ ಬಟ್ಟೆಗಳನ್ನು ಗಾಳಿಗೆ ಹರವಿದಾಗ  ಅದೇ ಅದನ್ನು ಶುದ್ಧಮಾಡುತ್ತದೆ.ಹಾಗಾಗಿ ವಾಯು ಪ್ರಧಾನ ಶುದ್ಧಿಕಾರಕ._ _ಎರಡನೆಯದಾಗಿ ಅಕ್ಕಿ ಅಥವಾ ಧಾನ್ಯಗಳನ್ನು ಬೀಸಲು ಉಪಯೋಗಿಸುವ ಮೊರ ಅಥವಾ ತಡ್ಪೆಯೂ ಪವನ. ಅದರ ಕೆಲಸವೂ ಧಾನ್ಯಗಳಲ್ಲಿನ ಧೂಳು-ಕಸ-ಕಡ್ಡಿ-ಕಲ್ಲು-ಹುಳುಗಳ ನಿವಾರಣೆ. ಹಾಗಾಗಿ ಲೋಹದ-ಬಳ್ಳಿಯ-ಪ್ಲಾಸ್ಟಿಕ್ ಮೊದಲಾದ ವಸ್ತುಗಳಿಂದ ತಯಾರಾದ ಬಗೆಬಗೆ ಗಾತ್ರದ ಮೊರದ ಕೆಲಸ ಒಂದೇ ಅದು ಶುದ್ಧೀಕರಿಸುವುದು. ಬಾಗಿನ ಕೊಡುವಾಗಲೂ ಬಹುಶಃ ಮುಂದೆ ಮನೆಯ ವಸ್ತುಗಳ ಸ್ವಚ್ಛತೆಗೆ ಉಪಯೋಗಕ್ಕೆ ಬಂದೀತು ಎನ್ನುವ ದೃಷ್ಟಿಯಿಂದಲೂ ಅದನ್ನೇ ಕೆಲವೆಡೆ ಕೊಡುತ್ತಾರೆ. (ಬೇರೆ ಕಾರಣವೂ ಇದೆ.)_ _ಮತ್ತ...

ಚಾರುದತ್ತ ೨೩

👳‍♀ಚಾರುದತ್ತ ಬೆಳಕು- ೨೩👳‍♀ *यः कश्चिच्चकितगतिर्निरीक्षते मां सम्भ्रान्तो द्रुतमुपसर्पति स्थितो वा । सर्वांस्तांस्तुलयति दोषतो मनो मे  स्वैर्दोषैरभवति हि शङ्कितो मनुष्यः ।।* _ಚಾರುದತ್ತನ ಮನೆಯಲ್ಲಿ ತನ್ನ ಪ್ರಿಯೆಗಾಗಿ ಭೂಷಣಗಳನ್ನು ಕದ್ದು ಪ್ರಿಯೆಗೆ ಒಪ್ಪಿಸಿದಾಗ ಅವಳ ಇಂಗಿತದಂತೆ ಮತ್ತೆ ಚಾರುದತ್ತನ ಬಳಿ ಹೋಗಲು ಹಿಂಜರಿದು ಅವನ ಪ್ರಿಯಳಾದ ವಸಂತಸೇನೆಯ ಬಳಿ ಬಂದಾಗ ಸಜ್ಜಲಕನಾಡುವ ಮಾತು._  _ನಮ್ಮ ಕುಕೃತ್ಯದ ಬಗೆಗಿನ ಹೆದರಿಕೆ ನಿಜಕ್ಕೂ ಕಷ್ಟ.ಏನೋ ಒಂದು ತಪ್ಪು ಮಾಡಿದಾಗ ನಮ್ಮ ಮನಸ್ಸು ಅದರ ಬಗ್ಗೆಯೇ ಚಿಂತಿಸಿ ಸದಾ ಹೆದರಿಕೆಯಿಂದ ನರಳಿಸುತ್ತದೆ. ಅದನ್ನು ಯಾರ ಬಳಿಯಲ್ಲಾದರೂ ನಿವೇದಿಸಿದರೆ ತಕ್ಕಮಟ್ಟಿಗೆ ಆ ಕಾಲದಲ್ಲಿ ದೂರವಾದೀತು. ಅದನ್ನೇ ಇವನು ಈ ಶ್ಲೋಕದಲ್ಲಿ ಮುಂದುವರೆಸುತ್ತಿದ್ದಾನೆ. ಯಾರಾದರೂ ಸಂಶಯದ ದೃಷ್ಟಿಯಿಂದ ನನ್ನನ್ನು ನೋಡಿದರೆ, ಚಂಚಲಕಣ್ಣುಗಳು ನನ್ನನ್ನೇ ಎವೆಯಿಕ್ಕದಂತೆ ನೋಡಿದರೆ, ಅವಸರದಲ್ಲಿ ನನ್ನನ್ನು ಸಮೀಪಿಸಿದರೆ ಅಂತಹವರನ್ನೆಲ್ಲ ನನ್ನ ಮನಸ್ಸು ನನ್ನ ತಪ್ಪು ತಿಳಿದು ದಂಡಿಸಲು ಬಂದವರೆಂದು ಭಾವಿಸುತ್ತದೆ. ತಪ್ಪು ಮಾಡಿದ ಸಮಯದಲ್ಲಿ ಬಂದ ಪ್ರತಿಯೊಬ್ಬರನ್ನೂ ನನ್ನ ತಪ್ಪು ವಿಚಾರಿಸಲು ಬಂದವರೆಂದೇ ಭಾವಿಸುವುದು ಮಾನವನ ಸಹಜಗುಣ. ನನ್ನ ಮನಸ್ಸೂ ಈ ಆಭರಣ ಕದ್ದ ಕಾರಣದಿಂದ ಯಾರನ್ನು ನೋಡಿದರೂ ಅವರೆಲ್ಲರನ್ನೂ ಒಂದೇ ತಕ್ಕಡಿಯಲ್ಲಿ ತೂಗುತ್ತಿದೆ. ಏಕೆಂದರೆ ಮಾನವನಾದವನು ತ...

ರಾಮಾಯಣ ೧೭೭

📖🏝ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು ಭಾಗ-೧೭೭🏝📖    *ನ ಭೂಮ್ಯಾ ಕಾರ್ಯಮಸ್ಮಾಕಂ ನ ಹಿ ಶಕ್ತಾಃ ಸ್ಮ ಪಾಲನೇ | ರತಾಃ ಸ್ವಾಧ್ಯಾಯಕರಣೇ ವಯಂ ನಿತ್ಯಂ ಹಿ ಭೂಮಿಪ||* *ನಿಷಯಂ ಕಿಂಚಿದೇವೇಹ ಪ್ರಯಚ್ಛತು ಭವಾನಿತಿ | ಮಣಿರತ್ನಂ ಸುವರ್ಣಂ ವಾ ಗಾವೋ ಯದ್ವಾ ಸಮುದ್ಯತಮ್||* _ಅಶ್ವಮೇಧದ ದಕ್ಷಿಣೆಯೆಂದು ದಶರಥನು ಪೂರ್ವದಿಕ್ಕಿನ ರಾಜ್ಯಗಳನ್ನು ಹೋತೃವಿಗೆ, ಪಶ್ಚಿಮದ ರಾಜ್ಯಗಳನ್ನು ಅಧ್ವರ್ಯುವಿಗೆ, ಉತ್ತರದಿಕ್ಕಿನ ರಾಜ್ಯಗಳನ್ನು ಉದ್ಗಾತೃವಿಗೆ, ಬ್ರಹ್ಮನಿಗೆ ದಕ್ಷಿಣದಿಕ್ಕಿನ ರಾಜ್ಯಗಳನ್ನು ದಾನವಾಗಿ ಕೊಟ್ಟಾಗ ಅವರಾಡಿದ ಮಾತು. ರಾಜನೇ, ಈ ಭೂಮಿಯನ್ನಾಳಲು ನೀನೇ ಸಮರ್ಥನು. ನಮಗೆ ಇದರಿಂದ ಯಾವ ಪ್ರಯೋಜನವೂ ಇಲ್ಲ. ನಾವು ಯಾವಾಗಲೂ ಅಧ್ಯಯನ-ಅಧ್ಯಾಪನಗಳಲ್ಲಿ ನಿರತರಾಗಿರುವೆವು. ಕೊಡುವುದೇ ನಿನ್ನ ನಿಶ್ಚಯವಾಗಿದ್ದರೆ ಅದರ ಬದಲಿಗೆ ಮಣಿ-ರತ್ನ-ಸುವರ್ಣ-ಗೋವು ಇವುಗಳಲ್ಲಿ ಯಾವುದಾದರೂ ಕೊಡು. ಗೋವುಗಳಿಗೆ ಆ ಕಾಲದಲ್ಲಿ ಇದ್ದ ಪ್ರಾಶಸ್ತ್ಯವನ್ನು ನಾವಿಲ್ಲಿ ಕಾಣಬಹುದು. ಸುವರ್ಣ ಅಥವಾ ರತ್ನಗಳಷ್ಟೇ ಮೌಲ್ಯವನ್ನು ಕೊಡುತ್ತಿದ್ದುದು ಕಾಣುವುದು.‌ ಭೂಮಿಗಾಗಿ ಕಾದಾಡಿದ ಲಕ್ಷಾಂತರ ಜನರ ನಡುವೆಯೂ ಋಷಿಗಳು ಅಥವಾ ಯಾಜ್ಞಿಕರು ಎದ್ದು ಕಾಣುವುದು ಇದೇ ಕಾರಣದಿಂದ. ರಾಜನೇ ಸ್ವತಃ ದಾನ ಮಾಡುತ್ತಿದ್ದರೂ ತಾವು ಸ್ವೀಕರಿಸದೇ ಉಳಿಯುವುದು ಅಥವಾ ಭೂಮಿಯ ಮೇಲಿನ ಆಸೆಯನ್ನು ಬಿಡುವುದು ಮಹಾತ್ಯಾಗ. ಒಂದೊಂದು ರಾಜ್ಯಗಳು ಅಪಾರ ಸಂಪತ್ತಿನಿಂದ ತುಳುಕುವ ಕಾಲದಲ್...

ಚಾರುದತ್ತ೨೨

👳‍♀ಚಾರುದತ್ತ ಬೆಳಕು- ೨೨👳‍♀ *त्वत्स्नेहबद्धहृदयो हि करोम्यकार्यं सन्तुष्टपूर्वपुरुषे$पि कुले प्रसूतः । रक्षामि मन्मथगृहीतमिदं शरीरं मित्रं च मां व्यपदिशस्यपरं च यासि ।।* _ವಸಂತಸೇನೆಯನ್ನು ಪ್ರೀತಿಸುವ ಸಜ್ಜಲಕನೆಂಬ ವಿಟನ ಮಾತು. ಪ್ರಿಯೆಯ ಪ್ರೀತಿಯನ್ನು ಸಂಪಾದಿಸಲು ಚಾರುದತ್ತನ ಮನೆಗೆ ಕನ್ನ ಹಾಕಿ ಆಭರಣಗಳನ್ನು ತಂದಿದ್ದಾನೆ. ಬರುವಾಗ ಯಾರನ್ನೋ ಕೊಂದೋ ಹೊಡೆದೋ ಬಂದಿಯಾ ಎಂದು ಚೇಟಿಯು ಪ್ರಶ್ನಿಸಿದಾಗ ಹಾಗೆಲ್ಲ ಮಾಡುವವನಲ್ಲ ಈ ಹೃದಯಚೋರ. ಕೇವಲ ನಿನ್ನ ಪ್ರೀತಿ ಬಯಸಿ ಈ ಭೂಷಣಗಳನ್ನು ಕದ್ದಿರುವೆನು ಎನ್ನುತ್ತಾನೆ. ಆಗ ಆ ವೇಶ್ಯೆಯು ತುಂಬಾ ಒಳ್ಳೆಯ ವಿಷಯ, ಇದು ನನಗೆ ಪ್ರಿಯ ಎನ್ನುವಳು. ಆಗ ಅವನಾಡುವ ಮಾತು- ನನ್ನ ಪೂರ್ವಜರು ತುಂಬಾ ಸಂತೋಷದಿಂದಿರುವ ಕಾರಣ ನನ್ನ ಜನ್ಮ ಶ್ರೇಷ್ಠವಾದ ವಂಶದಲ್ಲಿ ಉಂಟಾಯಿತು. ಪಿತೃಗಳು ದುಃಖತಪ್ತರಾಗಿದ್ದರೆ ಮಕ್ಕಳು ನಾನಾ ಕಾರಣಗಳಿಂದ ದುಃಖಿಸಬೇಕಾಗುತ್ತದೆ. ಆದರೆ ನನಗೆ ದುಃಖಕಾರಣ ಯಾವುದೂ ಇಲ್ಲ. ಉತ್ತಮ ವಂಶದಲ್ಲಿ ಜನನ, ಪಾಲನೆ ಪೋಷಣೆಗಳು ಸುಖಮಯವಾಗಿ ನಡೆದವು. ಆದರೂ ನಿನ್ನಂತಹ ಸುರಸುಂದರಿಯ ಬಯಸಿ ನಿನ್ನ ಪ್ರೀತಿಯಿಂದ ಬಂಧಿತನಾಗಿ ಈ ಅಕಾರ್ಯವನ್ನೆಲ್ಲಾ ಎಸಗುತ್ತಿರುವೆ. ಕಳ್ಳತನ ನಿಂದಿತಕರ್ಮವೆಂದು ಗೊತ್ತಿದ್ದರೂ ಪ್ರೇಮವೊಂದೇ ನನ್ನನ್ನು ಈ ಕಾರ್ಯದಲ್ಲಿ ತೊಡಗಿಸುತ್ತಿದೆ. ಕಾಮದಿಂದ ಸುಟ್ಟುಹೋಗುತ್ತಿರುವ ಈ ನನ್ನ ತನುವನ್ನು ಹೇಗೊ ರಕ್ಷಿಸಿಕೊಂಡಿದ್ದೇನೆ. ನರನಿಗೆ ಯಾ...

ರಾಮಾಯಣ ೧೭೬

📖🏝ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು ಭಾಗ-೧೭೬🏝📖   *ಕೌಸಲ್ಯಾ ತಂ ಹಯಂ ತತ್ರ ಪರಿಚರ್ಯ ಸಮಂತತಃ |ಕೃಪಾಣೈರ್ವಿಶಶಾಸೈನಂ* *ತ್ರಿಭಿಃ ಪರಮಯಾ ಮುದಾ||ಪತತ್ರಿಣಾ ತದಾ ಸಾರ್ಧಂ ಸುಸ್ಥಿತೇನ ಚ ಚೇತಸಾ *ಅವಸದ್ರಜನೀಮೇಕಾಂ ಕೌಸಲ್ಯಾ ಧರ್ಮಕಾಮ್ಯಯಾ||* _ಅಶ್ವಮೇಧ ಎಂದರೆ ಬರೀ ಕುದುರೆಯನ್ನಷ್ಟೇ ಬಲಿ ಕೊಡುವುದಲ್ಲ. ಐನೂರ ಹತ್ತೊಂಬತ್ತು ಬೇರೆ ಬೇರೆ ಪ್ರಾಣಿಗಳನ್ನು ಬಲಿ ಕೊಡುವ ಮಹಾಯಜ್ಞ. ಇಲ್ಲಿ ಪತ್ನಿಯ ಪಾತ್ರ ಎಂತಹದ್ದು ಎನ್ನುವುದಕ್ಕೆ ಈ ಶ್ಲೋಕ ಉತ್ತರ. ಪಟ್ಟಮಹಿಷಿಯಾದ ಕೌಸಲ್ಯೆಯು ಮೇಧಕ್ಕೆ ಸಿದ್ಧವಾದ ಯಜ್ಞವನ್ನು ಶಾಸ್ತ್ರೀಯ ರೀತಿಯಲ್ಲಿ ಪೂಜಿಸಿ-ನಮಸ್ಕರಿಸಿ ಅನಂತರ ಕೃಪಾಣದಿಂದ ಅದರ ಛೇದನಮಾರ್ಗವನ್ನು ಗುರುತು ಮಾಡಿ ಅನಂತರ ಧರ್ಮಕಾಮನೆಯಿಂದ, ಸ್ಥಿರಬುದ್ಧಿಯಿಂದ ಕೂಡಿ ಒಂದು ರಾತ್ರಿ ಬಳಿಯಲ್ಲೇ ಕಳೆದಳು. ಅಶ್ವವೆಂದರೆ ಪರಮಾತ್ಮನ ಒಂದು ರೂಪ ಎಂಬ ಭಾವನೆಯಲ್ಲಿ ಜಾಗರಣೆ ಮಾಡುತ್ತಾ ಭಗವಚ್ಚಿಂತನೆಯಲ್ಲಿ ತೊಡಗುವುದು. ಅನೇಕರು ದಶರಥನ ಪಟ್ಟಮಹಿಷಿ ಕೈಕೇಯಿಯಾಗಿದ್ದಳು, ಕೌಸಲ್ಯೆಯ ಮೇಲೆ ದಶರಥನಿಗೆ ಏನೂ ಪ್ರೀತಿ ಇರಲಿಲ್ಲ ಇತ್ಯಾದಿ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಆದರಿಲ್ಲಿ ವಾಲ್ಮೀಕಿಗಳು ಸ್ಪಷ್ಟವಾಗಿ ಕೌಸಲ್ಯೆಯನ್ನು ಉಲ್ಲೇಖಿಸಿದ್ದಾರೆ. ಮೂವರಲ್ಲಿ ಕೌಸಲ್ಯೆಯು ಪಟ್ಟದರಾಣಿಯಾಗಿದ್ದಳು. ಕೇವಲ ಕಾಮವು ಪಾಪಜನಕ. ಧರ್ಮಸಹಿತ ಕಾಮವು ಮಾತ್ರವೇ ಪುಣ್ಯಪ್ರದ. ಹಾಗಾಗಿ ಧರ್ಮಕಾಮನೆಯಿಂದ ಎಂಬ ಮಾತು ಬಹಳ ಸಾಧುವಾದುದು. ಧರ್ಮಕ್ಕೆ ಸಮ್...

ಧರ್ಮಾಚರಣೆ ೧೪೭

ಧರ್ಮಾಚರಣೆ-೧೪೮ ಸತ್ಯಾsಸತ್ಯಾನ್ಯಥಾಸ್ತೋತ್ರೈರ್ನ್ಯೂನಾಗೇಂದ್ರಿಯರೋಗಿಣಾಮ್| ಕ್ಷೇಮಂ ಕರೋತಿ ಚೇದ್ದಂಡ್ಯಃ ಪಣಾನರ್ಧತ್ರಯೋದಶಾನ್|| ಅಭಿಗಂತಾಸ್ಮಿ ಭಗಿನೀಂ ಮಾತರಂ ವಾ ತವೇತಿ ಹ | ಶಪಂತಂ ದಾಪಯೇದ್ರಾಜಾ ಪಂಚವಿಂಶತಿಕಂ ದಮಮ್ || ||ಯಾಜ್ಞವಲ್ಕ್ಯ ಸ್ಮೃತಿ|| ಯಾರಿಗಾದರೂ ವಿಕಲನಲ್ಲದಿದ್ದರೂ ಕುರುಡ-ಕುಂಟ-ಮೂಗ ಎಂದೆಲ್ಲಾ ನಿಂದಿಸುವುದು, ಉದ್ವೇಗ ಹೆಚ್ಚಾಗುವಂತೆ ಮಾತನಾಡುವುದು, ಅಶ್ಲೀಲ ವಾಕ್ಕನ್ನು ಪ್ರಯೋಗಿಸುವುದು, ಯಾವುದಾದರೂ ರೋಗದ ಹೆಸರಿನಿಂದ ನಿಂದಿಸುವುದು, ನಿನ್ನ ಭಗಿನಿ-ತಾಯಿಯೊಡನೆ ಅಭಿಗಮನ ಮಾಡುವೆನೆಂದು ಕೆಟ್ಟ ಪದಗಳನ್ನು ಪ್ರಯೋಗಿಸುವುದೇ ಮೊದಲಾದ ಮಾತಿನ ತಪ್ಪುಗಳಿಗೆ ಅವನ ಆದಾಯದ ಕೆಲವು ಭಾಗ ದಂಡ ವಿಧಿಸಬೇಕು. ಇಂತಹ ಕರ್ಮಗಳು ಇಹಕ್ಕೂ ಒಳ್ಳೆಯದಲ್ಲ, ಪರಕ್ಕೂ ಪಾಪಕರವೇ ಆಗುತ್ತವೆ. ಹಾಗಾಗಿ ವಿನಾಕಾರಣ ಯಾರನ್ನೂ ನಿಂದಿಸಲು,ಬಿರುನುಡಿಯಲು ತೊಡಗಬಾರದು. ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com

ಧರ್ಮಾಚರಣೆ ೧೪೬

ಧರ್ಮಾಚರಣೆ-೧೪೭ ಧರ್ಮಜ್ಞಾಃ ಶುಚಯೋsಲುಬ್ಧಾ ಭವೇಯುಃ ಕಾರ್ಯಚಿಂತಕಾಃ | ಕರ್ತವ್ಯಂ ವಚನಂ ತೇಷಾಂ ಸಮೂಹಹಿತವಾದಿನಾಮ್ ||ಯಾಜ್ಞವಲ್ಕ್ಯ ಸ್ಮೃತಿ|| ಒಂದು ಸಮೂಹಕ್ಕೆ ನಾಯಕನನ್ನು ಆರಿಸುವಾಗ ಧರ್ಮದ ನಡೆಯನ್ನು ಸರಿಯಾಗಿ ಅರಿತವರನ್ನು, ಬಾಹ್ಯ-ಅಂತರಗಳಲ್ಲಿ ಅಂದರೆ ಮೈ-ಮನಸ್ಸಿನ ಶುದ್ಧಿಯನ್ನು ಕಾಪಾಡಿಕೊಂಡವರನ್ನು, ಧನ-ಜನರ ವಿಷಯದಲ್ಲಿ ಲೋಭರಹಿತರನ್ನು ಆಯ್ಕೆ ಮಾಡಬೇಕು. ಅಂತಹವರ ಮಾತು ಇಡೀ ಸಮೂಹಕ್ಕೆ ಹಿತವಾದುದಾಗಿರುತ್ತದೆ. ಸಮೂಹದ ಸದಸ್ಯರು ಒಮ್ಮೆ ಆರಿಸಿದ ಮೇಲೆ ನಾಯಕನ ಮಾತನ್ನು ಅಕ್ಷರಶಃ ಅನುಸರಿಸಬೇಕು. ಆಯ್ಕೆ ಮಾಡುವ ಮುನ್ನ ಯೋಗ್ಯತೆ ಪರಿಶೀಲಿಸಿ ಆಯ್ಕೆ ಆದ ನಂತರ ಅನುಸರಿಸುವುದು ಎರಡೂ ಅವಶ್ಯಕ. ಇಂತಹ ನಡೆ ರಾಷ್ಟ್ರದ ಒಳಿತಿಗೆ ಸದಾ ಕಾರಣ. ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com

ಧರ್ಮಾಚರಣೆ ೧೪೫

ಧರ್ಮಾಚರಣೆ-೧೪೬ ಕರ್ತವ್ಯಂ ವಚನಂ ಸರ್ವೈಃ ಸಮೂಹಹಿತವಾದಿನಾಮ್ | ಯಸ್ತತ್ರ ವಿಪರೀತಃ ಸ್ಯಾತ್ಸದಾಪ್ಯಃ ಪ್ರಥಮಂ ದಮಮ್ || ಯಾಜ್ಞವಲ್ಕ್ಯ ಸ್ಮೃತಿ|| ಎಲ್ಲರಿಗೂ ಒಳಿತಾಗುವ ಯಾವುದಾದರೂ ಸಲಹೆಯನ್ನು ನಾಯಕನೊಬ್ಬನು ನೀಡಿದರೆ ಸಮೂಹವು ಅದನ್ನು ಅಂಗೀಕರಿಸಬೇಕು. ನಾಯಕನು ನಿಜಕ್ಕೂ ಒಳಿತುಮಾಡುವ ಮನಸ್ಸಿನವನಾಗಿದ್ದೂ ಅವನ ಮಾತನ್ನು ಕೇಳದೆ ವಿತಂಡ ಅಥವಾ ವಿರೋಧ ಮಾಡಿದರೆ ಅಂತಹವನಿಗೆ ರಾಜನು ದಂಡ ವಿಧಿಸಬೇಕು. ದೇಶಕ್ಕೆ-ರಾಜ್ಯಕ್ಕೆ- ಗ್ರಾಮಕ್ಕೆ ಒಳಿತನ್ನು ಬಯಸುವ ಯಾವ ಕಾರ್ಯವನ್ನೂ ವಿನಾಕಾರಣ ವಿರೋಧಿಸಬಾರದು. ಸಮೂಹದ ಶ್ರೇಯಸ್ಸೇ ನಮ್ಮ ಶ್ರೇಯಸ್ಸಿಗೂ ಕಾರಣವಾಗುವುದು.  ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com

ಧರ್ಮಾಚರಣೆ ೧೪೪

ಧರ್ಮಾಚರಣೆ-೧೪೫ ಸಾಹಸಸ್ತೇಯ ಪಾರುಷ್ಯಗೋಭಿಶಾಪಾತ್ಯಯೇ ಸ್ತ್ರಿಯಾಮ್ | ವಿವಾದಯೇತ್ಸದ್ಯ ಏವ ಕಾಲೋsನ್ಯತ್ರೇಚ್ಛಯಾ ಸ್ಮೃತಃ || ಯಾಜ್ಞವಲ್ಕ್ಯ ಸ್ಮೃತಿ|| ವಿಷ ಅಥವಾ ಶಸ್ತ್ರ ಮುಂತಾದವುಗಳಿಂದ ಹಿಂಸೆ ನೀಡುವುದು ಹಾಗೂ ಕೊಲ್ಲುವುದು, ಕಳ್ಳತನ, ಕೆಟ್ಟದಾಗಿ ನಿಂದಿಸುವುದು, ದನಕಳ್ಳತನ ಅಥವಾ ವಧೆ, ಸುಳ್ಳು ಆರೋಪ, ಅತಿಕ್ರಮಿಸುವುದು, ಸ್ತ್ರೀಯರ ಆಚರಣೆಯ ವಿಷಯದಲ್ಲಿ ಅಥವಾ ಸ್ತ್ರೀ  ಯಾರನ್ನು ವರಿಸಿದ್ದಾಳೆ ಮೊದಲಾದ ವಿವಾದಗಳಲ್ಲಿ ಎಷ್ಟು ಶೀಘ್ರವಾಗಿ ಉತ್ತರ ಪಡೆದುಕೊಳ್ಳಲು ಸಾಧ್ಯವೋ ಅಷ್ಟು ಬೇಗ ಆರೋಪಿಗಳಿಂದ ಉತ್ತರ ಪಡೆದು ಕಾಲವ್ಯಯ ಮಾಡದೆ ತೀರ್ಮಾನ ಕೊಡಬೇಕು. ಒಂದು ವೇಳೆ ವಿಚಾರಣೆ-ತೀರ್ಮಾನಗಳು ತಡವಾದರೆ ಪ್ರಾಣ-ಧನ-ಮಾನ ಹಾಗೂ ಸ್ವತ್ವ ಎಲ್ಲವೂ ನಾಶವಾದೀತು. ಹಾಗಾಗಿ ನ್ಯಾಯ ನಿರ್ಣಯಿಸುವಾಗ ಮೊದಲ ಆದ್ಯತೆ ಯಾವುದಕ್ಕೆ ಎಂಬುದನ್ನು ಮಹರ್ಷಿಗಳು ಸ್ಪಷ್ಟವಾಗಿ ಸಾರಿದ್ದಾರೆ. ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com

ಧರ್ಮಾಚರಣೆ ೧೪೩

ಧರ್ಮಾಚರಣೆ-೧೪೪ ವರ್ಣಿನಾಂ ಹಿ ವಧೋ ಯತ್ರ ತತ್ರ ಸಾಕ್ಷ್ಯನೃತಂ ಭವೇತ್ | ತತ್ಪಾವನಾಯ ನಿರ್ವಾಪ್ಯಶ್ಚರುಃ ಸಾರಸ್ವತೋ ದ್ವಿಜೈಃ || ಯಾಜ್ಞವಲ್ಕ್ಯ ಸ್ಮೃತಿ|| ಎಲ್ಲಾದರೂ, ಯಾವುದಾದರೂ ಸಂದರ್ಭದಲ್ಲಿ ನಾವು ಸತ್ಯ ಹೇಳುವುದರಿಂದ ನಾಲ್ಕು ವರ್ಣದವರಲ್ಲಿ ಯಾರದಾದರೂ ವಧೆಯಾಗುವ ಸಂದರ್ಭ ಬಂದರೆ ಅಂತಹ ಸಮಯದಲ್ಲಿ ಅಸತ್ಯ ನುಡಿಯಬೇಕು. ಅದರ ಪ್ರಾಯಶ್ಚಿತ್ತಕ್ಕಾಗಿ ತುಪ್ಪದ ಅನ್ನ ಬೇಯಿಸಿ ನಿವೇದಿಸಿ ಹಸಿದವರಿಗೆ ದಾನ ಮಾಡಬೇಕು. ಜಾತಿ-ಮತ ಯಾವುದೇ ಇರಲಿ ನಮ್ಮ ಒಂದು ನುಡಿ ಒಬ್ಬನ ಪ್ರಾಣ ತೆಗೆಯುವಂತೆ ಆಗಬಾರದು ಎನ್ನುವುದೇ ನಮ್ಮ ಸ್ಮೃತಿಕಾರರ ಆಶಯ. ಅವರು ಯಾರ ಪಕ್ಷಪಾತಿಯೂ ಆಗದೇ ಮಾನವಕುಲವೊಂದೇ ಎಂಬ ಆಶಯ ಹೊಂದಿದ್ದರು. ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com

ಧರ್ಮಾಚರಣೆ ೧೪೨

ದೈವೇ ಪುರುಷಕಾರೇ ಚ ಕರ್ಮಸಿದ್ಧಿರ್ವ್ಯವಸ್ಥಿತಾ | ತತ್ರ ದೈವಮಭಿವ್ಯಕ್ತಂ ಪೌರುಷಂ ಪೌರ್ವದೇಹಿಕಮ್ || ಯಾಜ್ಞವಲ್ಕ್ಯ ಸ್ಮೃತಿ|| ಕರ್ಮದ ಫಲವು ಇಷ್ಟ ಹಾಗೂ ಅನಿಷ್ಟರೂಪದಲ್ಲಿರುತ್ತದೆ. ಅದು ದೈವವನ್ನು ಹಾಗೂ ಪುರುಷಪ್ರಯತ್ನವನ್ನು ಅವಲಂಬಿಸಿರುತ್ತದೆ. ದೈವ ಎಂದರೆ ಕಣ್ಣೆದುರು ಕಂಡ ಫಲ. ಪೌರುಷ ಎಂದರೆ ಪೂರ್ವಜನ್ಮಾರ್ಜಿತ ಕರ್ಮದ ಫಲ. ಬರೀ ಈಗಿನ ಪ್ರಯತ್ನ ಅಥವಾ ಕರ್ಮವೊಂದೇ ನಿರ್ಣಾಯಕ ಅಲ್ಲ. ಈಗಿನ ಪ್ರಯತ್ನ ನಿರರ್ಥಕ ಎನಿಸಲು ಕೆಲವೊಮ್ಮೆ ದೈವ, ಕೆಲವೊಮ್ಮೆ ಪೂರ್ವಜನ್ಮದ ಕರ್ಮಫಲ ಕಾರಣವಾಗುವುದು. ಹಾಗಾಗಿಯೇ ಫಲಾಪೇಕ್ಷೆ ಬಿಟ್ಟು ಕರ್ಮ ಮಾಡಬೇಕು. ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com

ಧರ್ಮಾಚರಣೆ ೧೪೧

ನ ಯೋಷಿತ್ಪತಿಪುತ್ರಾಭ್ಯಾಂ ನ ಪುತ್ರೇಣ ಕೃತಂ ಪಿತಾ | ದದ್ಯಾದೃತೇ ಕುಟುಂಬಾರ್ಥಾನ್ನ ಪತಿಃ ಸ್ತ್ರೀಕೃತಂ ತಥಾ || ಯಾಜ್ಞವಲ್ಕ್ಯ ಸ್ಮೃತಿ|| ಕುಟುಂಬ ಪೋಷಣೆಯನ್ನು ಬಿಟ್ಟು ಬೇರೆ ಉದ್ದೇಶದಿಂದ  ಪತಿಯು ಮಾಡಿದ ಸಾಲವನ್ನು ಪತ್ನಿಯು, ಪುತ್ರನು ಮಾಡಿದ ಋಣವನ್ನು ತಾಯಿ-ತಂದೆಯರು, ಪತ್ನಿ ಮಾಡಿದ ಋಣವನ್ನು ಪತಿಯು ಹಿಂದಿರುಗಿಸಬಾರದು. ಒಂದು ವೇಳೆ ಕುಟುಂಬ ಪೋಷಣಾರ್ಥವಾಗಿ ಸಾಲ ಮಾಡಿದ್ದರೆ ಅದನ್ನು ಅವರ ಕಾಲದ ನಂತರ ಮಕ್ಕಳು ತೀರಿಸಬೇಕು. ಹಾಗಾಗಿ ಸಾಲ ಮಾಡುವ ಮುನ್ನ ನಮ್ಮ ಆಯುಷ್ಯ ಪ್ರಮಾಣ, ಉದ್ದೇಶ, ದೀರ್ಘಕಾಲದ ಪ್ರಯೋಜನ ಇವುಗಳನ್ನು ವಿಚಾರ ಮಾಡಿ ಮುಂದುವರೆಯಬೇಕು. ವಸ್ತು-ವಾಹನ-ಅಲಂಕಾರ ಮೊದಲಾದ ವಿಷಯಗಳಿಗೆ ಹೆಚ್ಚು ಋಣಭಾರ ಹೊಂದಿದಷ್ಟೂ ಅದು ಆಪತ್ತಿನಲ್ಲಿ ಎಲ್ಲರಿಗೂ ಹಾನಿ ತರುತ್ತದೆ.  ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com

ಧರ್ಮಾಚರಣೆ ೧೪೦

ಧರ್ಮಾಚರಣೆ-೧೪೧ ಪಿಂಡಾಂಸ್ತು ಗೋಜವಿಪ್ರೇಭ್ಯೋ ದದ್ಯಾದಗ್ನೌ ಜಲೇಪಿ ವಾ| ಪ್ರಕ್ಷಿಪೇತ್ಸತ್ಸು ವಿಪ್ರೇಷು ದ್ವಿಜೋಚ್ಛಿಷ್ಟಂ ನ ಮಾರ್ಜಯೇತ್ || ಯಾಜ್ಞವಲ್ಕ್ಯ ಸ್ಮೃತಿ|| ಪಿತೃಗಳಿಗೆ ಸಮರ್ಪಿಸಿದ ಪಿಂಡವನ್ನು ಗೋವುಗಳಿಗೆ ಅಥವಾ ಆಡಿಗೆ ಅಥವಾ ಅತ್ಯಂತ ಬಡವನಾದ ವಿಪ್ರನು ಬಯಸಿದಲ್ಲಿ ಅಥವಾ ಬೆಂಕಿಯಲ್ಲಿ ಅಥವಾ ನೀರಿನಲ್ಲಿ ಬಿಡಬೇಕು.  ಪಿಂಡವನ್ನು ಎಲ್ಲೆಲ್ಲೋ ಬಿಸಾಕುವ ಬದಲು ಈ ಮಾರ್ಗವನ್ನು ಅನುಸರಿಸಬೇಕು. ವಿಪ್ರರು ಊಟ ಮಾಡುತ್ತಿರುವಾಗ ಎಂದಿಗೂ ಉಚ್ಛಿಷ್ಟವನ್ನು ತೆಗೆಯಬಾರದು. ಒಬ್ಬರು ಕೂತಿದ್ದರೂ ಅವರು ಎದ್ದ ಮೇಲೆಯೇ ಎಲೆಗಳನ್ನು ತೆಗೆಯಬೇಕು.  ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com

ಧರ್ಮಾಚರಣೆ ೧೩೯

ಧರ್ಮಾಚರಣೆ-೧೪೦ ದಾತಾರೋ ನೋಭಿವರ್ಧಂತಾಂ ವೇದಾಃ ಸಂತತಿರೇವ ಚ | ಶ್ರದ್ಧಾ ಚ ನೋ ಮಾಗಮದ್ಬಹುದೇಯಂ ನೋ ಅಸ್ತ್ವಿತಿ || ಯಾಜ್ಞವಲ್ಕ್ಯ ಸ್ಮೃತಿ|| ಶ್ರಾದ್ಧದ ಅಂತ್ಯದಲ್ಲಿ ನಮ್ಮ ಪ್ರಾರ್ಥನೆ ಎಷ್ಟು ಉತ್ಕೃಷ್ಟವಾಗಿದೆಯೆಂದರೆ- ನಮ್ಮ ಮನೆಯಲ್ಲಿ, ಕುಟುಂಬದಲ್ಲಿ ದಾನಿಗಳು ಹೆಚ್ಚಾಗಲಿ. ದಾನ ಮಾಡಲು ಸಂಪತ್ತು ಹಾಗೂ ಉದಾರತೆ ಎರಡೂ ಇರುವವರು ಹೆಚ್ಚಲಿ. ಅಧ್ಯಯನ-ಅಧ್ಯಾಪನ ಮೊದಲಾದ ಸತ್ಕರ್ಮಗಳಲ್ಲಿ ತೊಡಗಿಕೊಳ್ಳುವವರ ಸಂತತಿ ಹೆಚ್ಚಾಗಲಿ. ನಮ್ಮ ಸಂತತಿ ಸಮಾಜಕ್ಕೆ ಹಾನಿ ತರದಿರಲಿ. ನಾವು ಮಾಡುವ ಯಾವ ಕರ್ಮದಲ್ಲೂ ಶ್ರದ್ಧೆ ಕಡಿಮೆಯಾಗದಿರಲಿ. ಕರ್ಮದ ಸಾಫಲ್ಯಕ್ಕೆ ಅದೇ ಕಾರಣ. ನಾವು ಇನ್ನೂ ಹೆಚ್ಚು ದಾನ ಮಾಡುವಂತೆ ಅನುಗ್ರಹಿಸಿರಿ. ಶ್ರಾದ್ಧದ ಫಲ ಸಿರಿಸಂಪತ್ತನ್ನೂ-ಆಮುಷ್ಮಿಕ ಫಲವನ್ನೂ ಕೊಡುವುದು. ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com

ಧರ್ಮಾಚರಣೆ ೧೩೮

ಧರ್ಮಾಚರಣೆ-೧೩೯ ಅಪರಾಹ್ನೇ ಸಮಭ್ಯರ್ಚ್ಯ ಸ್ವಾಗತೇನಾಗತಾಂಸ್ತು ತಾನ್ | ಪವಿತ್ರಪಾಣಿರಾಚಾಂತಾನಾಸನೇಷೂಪವೇಶಯೇತ್|| ಯಾಜ್ಞವಲ್ಕ್ಯ ಸ್ಮೃತಿ|| ಮನೆಯಲ್ಲಿ ಶ್ರಾದ್ಧ ಇದ್ದಾಗ ಹಿಂದಿನ ದಿನ ಆಮಂತ್ರಿಸಿದ ವಿಪ್ರರನ್ನು ಆ ದಿನ ಮಧ್ಯಾಹ್ನದ ಸಮಯದಲ್ಲಿ ಸ್ವಾಗತಿಸಿ ಪಾದ ತೊಳೆದು ಆಚಮನ ಮಾಡಿ ಪವಿತ್ರ ಧರಿಸಿ ಆಸನದಲ್ಲಿ ಕುಳ್ಳಿರಿಸಬೇಕು. ಶ್ರಾದ್ಧವನ್ನು ನಮ್ಮ ಅನುಕೂಲವೆಂದು ಅಥವಾ ಮಠಗಳ ಮಂದಿರಗಳ ಅನುಕೂಲಕ್ಕೆಂದು ಬೇಕುಬೇಕಾದ ಸಮಯಕ್ಕೆ ಮಾಡುವುದು ಎಂದಿಗೂ ಸರಿಯಲ್ಲ. ಈ ಸ್ಮೃತಿ ಹೇಳುವಂತೆ ನಿಮಂತ್ರಿತ ವಿಪ್ರರು ಬರಬೇಕಾದುದೇ ಮಧ್ಯಾಹ್ನ. ಕುತಪ ಕಾಲದಲ್ಲಿ ಅಂದರೆ ಸುಮಾರು ೧೨ ಗಂಟೆಯ ಮೇಲೆ ಆರಂಭಿಸಿ ಮುಂದಿನ ಎಂಟು ಗಳಿಗೆಯಲ್ಲಿ ಅಂದರೆ ಸುಮಾರು ನಾಲ್ಕು ಗಂಟೆಯ ಒಳಗೆ ಮುಗಿಸಬೇಕು. ನಮಗಾದರೂ ಸಮಯಕ್ಕೆ ಸರಿಯಾಗಿ ಊಟ ಕೊಟ್ಟರೆ ಹೊಟ್ಟೆ ತುಂಬುವುದು. ಮಧ್ಯರಾತ್ರಿ ಅಥವಾ ಬೆಳಿಗ್ಗೆ ನಾಲ್ಕು ಗಂಟೆಗೆ ಊಟಕ್ಕೆ ಬನ್ನಿ ಎಂದರೆ ಹೇಗಾಗುವುದು! ಹಾಗಾಗಿ ಶ್ರಾದ್ಧದಲ್ಲಿ ಶ್ರದ್ಧೆಯ ಜೊತೆಗೆ ಸಮಯವೂ ಮುಖ್ಯ. ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com

ಧರ್ಮಾಚರಣೆ ೧೩೭

ಧರ್ಮಾಚರಣೆ-೧೩೮ ವ್ಯತೀಪಾತೋ ಗಜಚ್ಛಾಯಾ ಗ್ರಹಣಂ ಚಂದ್ರಸೂರ್ಯಯೋಃ | ಶ್ರಾದ್ಧಂ ಪ್ರತಿರುಚಿಶ್ಚೈವ ಶ್ರಾದ್ಧಕಾಲಾಃ ಪ್ರಕೀರ್ತಿತಾಃ ||ಯಾಜ್ಞವಲ್ಕ್ಯ ಸ್ಮೃತಿ|| ವ್ಯತೀಪಾತಯೋಗ, ಸೂರ್ಯನು ಹಸ್ತಾನಕ್ಷತ್ರದಲ್ಲೂ-ಚಂದ್ರನು ಮಖಾನಕ್ಷತ್ರದಲ್ಲಿ ಇದ್ದಾಗ ಅದು ಗಜಚ್ಛಾಯಾಯೋಗ,  ಸೂರ್ಯ ಹಾಗೂ ಚಂದ್ರನ ಗ್ರಹಣಕಾಲ, ಯುಗಾದಿ, ಮನ್ವಾದಿತಿಥಿಗಳು ಹಾಗೂ ಒಂದು ವೇಳೆ ಶ್ರಾದ್ಧ ಮಾಡಬೇಕೆಂದು ಮನಸ್ಸಿಗೆ ಅನಿಸಿದರೆ ಆ ಕೂಡಲೇ ಶ್ರಾದ್ಧ ಮಾಡಬೇಕು. ಗ್ರಹಣದ ಸಮಯದಲ್ಲಿ ರಾತ್ರಿಶ್ರಾದ್ಧಕ್ಕೂ ಅವಕಾಶವಿದೆ. ಹಾಗಾಗಿ ಶ್ರದ್ಧೆಯೇ ಪ್ರಧಾನವಾಗಿ ನಿಯಮಗಳು ಪೂರಕವಾಗಿ ನಡೆಸುವ ಪಿತೃಕರ್ಮ ಶ್ರಾದ್ಧ. ಇಷ್ಟು ಕಾಲ ಹೇಳಿಯೂ ಒಮ್ಮೆಯೂ ಮಾಡದೇ ಹೋದಾಗ ಪಿತೃದೇವತೆಗಳ ಶಾಪಕ್ಕೆ ಗುರಿಯಾಗಬೇಕಾಗುತ್ತದೆ.  ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com

ಧರ್ಮಾಚರಣೆ ೧೩೬

ಧರ್ಮಾಚರಣೆ-೧೩೬ ದೇವಾತಿಥ್ಯರ್ಚನಕೃತೇ ಗುರುಭೃತ್ಯಾರ್ಥಮೇವ ಚ| ಸರ್ವತಃ ಪ್ರತಿಗೃಹ್ಣೀಯಾದಾತ್ಮವೃತ್ಯರ್ಥಮೇವ ಚ|| ಯಾಜ್ಞವಲ್ಕ್ಯ ಸ್ಮೃತಿ || ದೇವಪೂಜೆಯನ್ನು ನಿಯಮಿತವಾಗಿ ಮಾಡಲು, ಅತಿಥಿ ಸತ್ಕಾರಕ್ಕಾಗಿ, ಮಾತಾ-ಪಿತೃಗಳ ಪೋಷಣೆಗಾಗಿ, ಗುರುಗಳು-ಆಶ್ರಿತರು-ಭೃತ್ಯರು ಮೊದಲಾದವರ ಪೋಷಣೆಯ ಸಲುವಾಗಿ ಹಾಗೂ ಆತ್ಮರಕ್ಷಣೆಗಾಗಿ ಪ್ರತಿಗ್ರಹ ಎಂದರೆ ಇನ್ನೊಬ್ಬರು ಕೊಟ್ಟದ್ದನ್ನು ದಾನ ತೆಗೆದುಕೊಳ್ಳುವುದು ತಪ್ಪಲ್ಲ. ಹೀಗೆ ತೆಗೆದುಕೊಂಡದ್ದನ್ನು ಭೋಗಾರ್ಥವಾಗಿ ಅಂದರೆ ಅತಿಯಾದ ಸುಖಲೋಲುಪತೆಗೆ ಬಳಸಿದರೆ ಅದು ಪಾಪಕಾರಕವಾಗುವುದು. ಈ ಪ್ರತಿಗ್ರಹವನ್ನು ನಿಂದ್ಯರಿಂದ ಪಡೆಯುವುದು ಪಾಪಕಾರಕ.  ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com

ಧರ್ಮಾಚರಣೆ ೧೩೫

ಧರ್ಮಾಚರಣೆ-೧೩೫ ಪ್ರತಿಗ್ರಹಸಮರ್ಥೋಪಿ ನಾದತ್ತೇ ಯಃ ಪ್ರತಿಗ್ರಹಮ್ | ಯೇ ಲೋಕಾ ದಾನಶೀಲಾನಾಂ ತಾನ್ಸಪ್ರಾಪ್ನೋತಿ ಪುಷ್ಕಲಾನ್ || ಯಾಜ್ಞವಲ್ಕ್ಯ ಸ್ಮೃತಿ|| ಷಟ್ಕರ್ಮಗಳಲ್ಲಿ ದಾನ-ಪ್ರತಿಗ್ರಹ ಎರಡೂ ಸೇರಿದೆ. ಹಾಗಿದ್ದರೂ ಯಾರಾದರೂ ಕೊಟ್ಟದ್ದನ್ನು ಸ್ವೀಕರಿಸುವ ಅಂದರೆ ಪ್ರತಿಗ್ರಹದ ಬಗ್ಗೆ ಹೆಚ್ಚು ಆಸಕ್ತಿ ಇರಬಾರದು‌. ದಾನ ಕೊಟ್ಟದ್ದನ್ನು ಸ್ವೀಕರಿಸಲು ಯೋಗ್ಯತೆ ಇದ್ದರೂ ಯಾರು ಪ್ರತಿಗ್ರಹ ಮಾಡುವುದಿಲ್ಲವೋ ಅಂತಹವರು ದಾನ ಮಾಡುವ ವ್ಯಕ್ತಿ ಹೊಂದುವ ಉತ್ತಮಲೋಕಗಳನ್ನು ಪಡೆಯುವನು. ದಾನಿಯ ಪುಣ್ಯದಷ್ಟೇ ಪುಣ್ಯ ಅಂತಹ ವ್ಯಕ್ತಿಗೆ ಸಿಗುವುದು. ಹಾಗಾಗಿ ಯಾರಾದರೂ ಕೊಡುವರೆಂದ ಕೂಡಲೇ ನಮಗೆ ಅದರ ಅವಶ್ಯಕತೆ ಇದೆಯೋ? ಅದಿಲ್ಲದೆ ನಮ್ಮ ಬದುಕು ಕಷ್ಟವೋ? ಮುಂತಾದುದರ ಬಗೆಗೆ ಸ್ವಲ್ಪ ವಿಚಾರ ಮಾಡಿ ಪ್ರತಿಗ್ರಹ ಮಾಡುವುದು ಇಹ-ಪರ ಶ್ರೇಯಸ್ಕರ. ಎಲ್ಲವನ್ನೂ ನಾವೇ ಪ್ರತಿಗ್ರಹ ಮಾಡುವುದು ಅಥವಾ ಪ್ರತಿಗ್ರಹಕ್ಕಾಗಿ ಕಾಯುವುದು ಯಾವಾಗಲೂ ಒಳ್ಳೆಯದಲ್ಲ. 

ಧರ್ಮಾಚರಣೆ ೧೩೪

ಧರ್ಮಾಚರಣೆ-೧೩೪ ಕುಶಾಃ ಶಾಕಂ ಪಯೋ ಮತ್ಸ್ಯಾ ಗಂಧಾಃ ಪುಷ್ಪಂ ದಧಿ ಕ್ಷಿತಿಃ | ಮಾಂಸಂ ಶಯ್ಯಾಸನಂ ಧಾನ್ಯಾಃ ಪ್ರತ್ಯಾಖ್ಯೇಯಂ ನ ವಾರಿ ಚ || ಯಾಜ್ಞವಲ್ಕ್ಯ ಸ್ಮೃತಿ|| ದರ್ಭೆ-ತರಕಾರಿ-ಹಾಲು-ಮೀನು,ಮಾಂಸ( ಮಾಂಸಾಹಾರಿಗಳಾದ ಪಕ್ಷದಲ್ಲಿ) -ಗಂಧ-ಹೂವು-ಮೊಸರು-ಭೂಮಿ( ಉಳಿದುಕೊಳ್ಳಲು ಜಾಗ) - ಹಾಸಿಗೆ-ಚಾಪೆ, ಕುರ್ಚಿ ಮೊದಲಾದ ಆಸನ- ಧಾನ್ಯಗಳನ್ನು ಯಾರಾದರೂ ಪ್ರೀತಿ ಅಥವಾ ವಿಶ್ವಾಸದಿಂದ ಕೊಟ್ಟರೆ ಮರುಮಾತಿಲ್ಲದೆ ಸ್ವೀಕರಿಸಬಹುದು. ಅವುಗಳನ್ನು ಬೆಲೆ ಕೊಟ್ಟು ತೆಗೆದುಕೊಳ್ಳುವವುದಕ್ಕಿಂತ ಹೀಗೆ ಕೊಡುಕೊಳ್ಳುವಿಕೆ ಮೂಲಕ ಸ್ವೀಕರಿಸುವುದು ಉತ್ತಮ. ಆಹಾರ ಹಾಗೂ ಕೆಲವು ವಸ್ತುಗಳ ಬಗ್ಗೆ ಬೆಲೆ ಕಟ್ಟುವುದು ಅಥವಾ ತಾತ್ಸಾರ ಎಂದಿಗೂ ಸಲ್ಲದು.  ಪರಸಂತೋಷಾಚರಣೆಯೇ ಭಗವಂತನ ಅತಿದೊಡ್ಡ ಪೂಜೆ. ಸಮಯ ಸಂದರ್ಭ ನೋಡಿ ಪ್ರತಿಗ್ರಹ ಮಾಡುವುದು ಇವುಗಳ ವಿಷಯದಲ್ಲಿ ಪಾಪಕರ ಅಲ್ಲ.   ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com

ಧರ್ಮಾಚರಣೆ ೧೩೩

ಧರ್ಮಾಚರಣೆ-೧೩೩ ಗೃಹಧಾನ್ಯಾಭಯೋ ಪಾನಚ್ಛತ್ರ ಮಾಲ್ಯಾನುಲೇಪನಮ್ | ಯಾನಂ ವೃಕ್ಷಂ ಪ್ರಿಯಂ ಶಯ್ಯಾಂ ದತ್ವಾತ್ಯಂತಸುಖೀ ಭವೇತ್ || ಯಾಜ್ಞವಲ್ಕ್ಯ ಸ್ಮೃತಿ||  ವಸತಿ ಇಲ್ಲದವನಿಗೆ ಮನೆ ಕಟ್ಟಿಸಿಕಟ್ಟಿಕೊಡುವುದು, ಉಣ್ಣಲು ಕಷ್ಟ ಇದ್ದವನಿಗೆ ಧಾನ್ಯ ನೀಡುವುದು, ಭಯಪಡುವವರಿಗೆ ಅಭಯ ನೀಡುವುದು, ಪಿಪಾಸುವಿಗೆ ನೀರು ಅಥವಾ ಪಾನಕ ಕೊಡುವುದು,  ಉಳಿದುಕೊಳ್ಳಲು ಛತ್ರ ಅಥವಾ ಎಲ್ಲಾದರೂ ಜಾಗ ವ್ಯವಸ್ಥೆ ಮಾಡುವುದು, ಧರಿಸಲು ಉತ್ತಮ ಸುಗಂಧದ ಪುಷ್ಪದ ಹಾರ ನೀಡುವುದು, ಪೂಸಿಕೊಳ್ಳಲು ಗಂಧ-ಚಂದನ ನೀಡುವುದು, ವಾಹನಗಳನ್ನು ದಾನ ಮಾಡುವುದು, ಫಲಭರಿತ ಮರವೊಂದನ್ನು ನೆಟ್ಟು ಬಳಸಿಕೊಳ್ಳಲು ಬಿಡುವುದು, ಇದಾವುದೂ ಆಗದಿದ್ದರೂ ವ್ಯಕ್ತಿಗೆ ಯಾವುದು ಇಷ್ಟವೋ ಅದನ್ನು ನೀಡುವುದು ಅಥವಾ ಮಲಗಲು ಹಾಸಿಗೆ ನೀಡುವುದು. ಈ ಎಲ್ಲಾ ದಾನಗಳೂ ಇಹಪರಗಳಲ್ಲಿ ಜನ್ಮಜನ್ಮಗಳಲ್ಲಿ ಸುಖವನ್ನು ತಂದುಕೊಡುತ್ತವೆ. ಹೆಸರಿನ ಕೀರ್ತಿಯ ಅಪೇಕ್ಷೆ ಇಲ್ಲದೆ ಪ್ರತಿಫಲ ಅಥವಾ ಕೃತಜ್ಞತೆ ಬಯಸದೇ ದಾನ ಮಾಡುವುದು ಸರ್ವಥಾ ಶ್ರೇಷ್ಠ ಆಗಿದೆ.  ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com

ಧರ್ಮಾಚರಣೆ ೧೩೨

ಧರ್ಮಾಚರಣೆ-೧೩೨ ಭೂದೀಪಾಶ್ಚಾನ್ನವಸ್ತ್ರಾಂಭಸ್ತಿಲ ಸರ್ಪಿಃ ಪ್ರತಿಶ್ರಯಾನ್ | ನೈವೇಶಿಕಂ ಸ್ವರ್ಣಧುರ್ಯಂ ದತ್ತ್ವಾ ಸ್ವರ್ಗೇ ಮಹೀಯತೇ || ಯಾಜ್ಞವಲ್ಕ್ಯ ಸ್ಮೃತಿ||  ಧಾನ್ಯ ಮೊದಲಾದ ಫಲಕೊಡುವ ಭೂಮಿಯನ್ನು ದಾನಮಾಡುವುದರಿಂದ ಪಾಪ ನಿವಾರಣೆ, ದೀಪದಾನದಿಂದ ಉತ್ತಮ ದೃಷ್ಟಿ, ಅನ್ನದಾನದಿಂದ ಅಕ್ಷಯ ಸುಖ, ವಸ್ತ್ರದಾನದಿಂದ ಚಂದ್ರಸಾಲೋಕ್ಯ, ಜಲದಾನದಿಂದ ಬದುಕಿನಲ್ಲಿ ತೃಪ್ತಿ, ತಿಲದಾನದಿಂದ ಅನುಕೂಲ ಸಂತಾನ, ಘೃತದಾನದಿಂದ ದೀರ್ಘಾಯುಷ್ಯ, ಧರ್ಮಛತ್ರ ಕಟ್ಟಿಸುವುದರಿಂದ ಸದಾ ಉತ್ತಮ ಮನೆಯಲ್ಲಿ ವಾಸಿಸುವ ಭಾಗ್ಯ, ಅನಾಥ ಮಕ್ಕಳ ಪಾಲನೆ-ಪೋಷಣೆ ಮಾಡುವುದರಿಂದ ಅಪಾರ ಪುಣ್ಯ, ಚಿನ್ನದಂತಹ ಬೆಲೆಬಾಳುವ ವಸ್ತುವಿನ ದಾನದಿಂದ ಸ್ವರ್ಗಪ್ರಾಪ್ತಿ. ಆದರೆ ಯಾವ ದಾನವನ್ನೂ ನಾಲ್ಕು ಜನರಿಗೆ ಗೊತ್ತಾಗುವಂತೆ ಹೆಸರು ಹೇಳಿ ಮಾಡಬಾರದು.  ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com

ಧರ್ಮಾಚರಣೆ ೧೩೧

ಧರ್ಮಾಚರಣೆ-೧೩೧ ಶ್ರಾಂತಸಂವಾಹನಂ ರೋಗಿಪರಿಚರ್ಯಾ ಸುರಾರ್ಚನಮ್ | ಪಾದಶೌಚಂ ದ್ವಿಜೋಚ್ಛಿಷ್ಟಂ ಮಾರ್ಜನಂ ಗೋಪ್ರದಾನವತ್|| ಯಾಜ್ಞವಲ್ಕ್ಯ ಸ್ಮೃತಿ|| ಈಗಿನ ಕಾಲದಲ್ಲಿ ಗೋವನ್ನು ಪೋಷಿಸುವವರೇ ಕಡಿಮೆ. ‌ಅಂತಹುದರಲ್ಲಿ ಗೋದಾನ ಕೊಡುವುದಾದರೆ ತೆಗೆದುಕೊಳ್ಳಲು ಜನರೇ ಸಿಗುವುದಿಲ್ಲ. ಅದರ ಬದಲಿಗೆ ದೂರಪ್ರಯಾಣ ಮಾಡಿ ದಣಿದ ಮನುಷ್ಯನಿಗೆ ಆಸನ-ಅಶನ-ಶಯನದ ವ್ಯವಸ್ಥೆ ಮಾಡುವುದು, ಭಯಂಕರ ರೋಗದಿಂದ ಬಳಲುವ ವ್ಯಕ್ತಿಗೆ ಔಷಧ-ನೀರು ಮೊದಲಾದವನ್ನು ಕೊಟ್ಟು ಉಪಚರಿಸುವುದು, ದೇವರನ್ನು ಬಗೆಬಗೆಯಲ್ಲಿ ಪೂಜಿಸುವುದು, ಜ್ಞಾನಿಗಳ ಕಾಲು ತೊಳೆಯುವುದು, ಸಂತರ್ಪಣೆಗಳಲ್ಲಿ ಜನರ ಎಂಜಲೆಲೆಯನ್ನು ತೆಗೆಯುವುದು ಮೊದಲಾದ ಕಾರ್ಯಗಳು ಶ್ರದ್ಧೆಯಿಂದ ಮಾಡಿದಾಗ ಗೋದಾನದ ಪೂರ್ಣಫಲ ದೊರಕುವುದು‌.ಈಗಿನ ಆಧುನಿಕ ಧಾವಂತದ ಬದುಕಿನಲ್ಲಿ ಈ ಮಾರ್ಗ ಅತ್ಯಂತ ಸೂಕ್ತವಾಗಿದೆ.  ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com

ಧರ್ಮಾಚರಣೆ ೧೩೦

ಧರ್ಮಾಚರಣೆ-೧೩೦ ದಾನ ನೀಡಲು ಯಾರು ಅಯೋಗ್ಯರು ಎನ್ನುವುದನ್ನು ಮನುಸ್ಮೃತಿ ಹೀಗೆ ಹೇಳಿದೆ- ವಂಚನೆ ಮಾಡಿ ಬದುಕುವವನೂ, ವೇದವನ್ನು ಮನ್ನಿಸದವನೂ, ಯಾವೊಂದು ವ್ರತ ಮಾಡದವನೂ, ಮಂತ್ರಗಳನ್ನು ಪಠಿಸದವನೂ, ಕೇವಲ ಹುಟ್ಟಿನಿಂದ ಮಾತ್ರ ತಾನು ಈ ಜಾತಿಯವನೆಂದು ಹೇಳಿಕೊಳ್ಳುವವನು ( ಸಂಧ್ಯಾದಿ ಮಾಡದೆ ಹೆಸರಿಗೆ ಬ್ರಾಹ್ಮಣನಾದವನು) , ಅಗ್ನಿಹೋತ್ರ ಹಾಳುಮಾಡುವವನು, ಮಾತಾ-ಪಿತೃ ದ್ವೇಷಿಯೂ, ಪಾಪಕರ್ಮರತನೂ, ಅನರ್ಹರಿಗೂ ವೇದ ಬೋಧಿಸುವವನು, ಧೂರ್ತನು, ದಾನದ ಧನ ದುಷ್ಕರ್ಮಕ್ಕೆ ಬಳಸುವವನು, ಮೂರು ತಲೆಮಾರಿನಿಂದ ಮನೆಯಲ್ಲಿ ಪೂಜೆ ಆಗದೆ ವಾಸಿಸುವವನು, ನಿಂದ್ಯರನ್ನು ಸ್ತುತಿಸುವವನು, ಸಮಯಾನುಸಾರ ನಿತ್ಯಕರ್ಮ ಮಾಡದಿರುವವನಿಗೆ ಕೊಟ್ಟ ದಾನ ಎಲ್ಲಾ ರೀತಿಯಿಂದಲೂ ನಿಷ್ಫಲ. ಹಾಗಾಗಿ ಸುಮ್ಮನೆ ಗೌಜಿ ಆಗಲೆಂದು ಐವತ್ತು ಅಥವಾ ನೂರು ಜನರಿಗೆ  ದಾನ ಕೊಟ್ಟು ಪಾಪ  ಭಾಜನನಾಗಬಾರದು.  ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com

ಧರ್ಮಾಚರಣೆ ೧೨೯

ಧರ್ಮಾಚರಣೆ-೧೨೯ ಗೋ ಭೂ ತಿಲಹಿರಣ್ಯಾದಿ ಪಾತ್ರೇ ದಾತವ್ಯಮರ್ಚಿತಮ್ | ನಾಪಾತ್ರೇ ವಿದುಷಾ ಕಿಂಚಿದಾತ್ಮನಃ ಶ್ರೇಯ ಇಚ್ಛತಾ || ಯಾಜ್ಞವಲ್ಕ್ಯ ಸ್ಮೃತಿ||  ಗೋವು-ಭೂಮಿ-ಎಳ್ಳು-ಸುವರ್ಣ ಮೊದಲಾದವನ್ನು ದಾನ ಮಾಡುವ ಮುನ್ನ ವ್ಯಕ್ತಿಯನ್ನು ಸತ್ಕರಿಸಿ ಶಾಸ್ತ್ರೋಕ್ತವಾಗಿ ನೀಡಬೇಕು. ಯಾವ ದಾನವೇ ಇರಲಿ ಪಾತ್ರತೆ ಇದ್ದಲ್ಲಿ ಮಾತ್ರ ಫಲ ದೊರಕುತ್ತದೆ. ನೀರಿನ ಪಸೆಯೇ ಇರದ ಕಲ್ಲಿನ ಜಾಗದಲ್ಲಿ ಬೀಜ ಬಿತ್ತಿದರೆ ಮೊಳಕೆ ಎಂತು ಬಂದೀತು! ಇದರಂತೆ ವ್ಯಕ್ತಿಯ ಯೋಗ್ಯತೆಯನ್ನು ನೋಡಿ ಬುದ್ಧಿವಂತನಾದವನು ದಾನ ಮಾಡಬೇಕು. ಕೀರ್ತಿಕಾಮನೆಗಾಗಿಯೋ ಪ್ರತಿಫಲಾಪೇಕ್ಷೆಯಿಂದಲೋ ಉಪಕಾರಭಾವದಿಂದಲೋ ಅಪಾತ್ರರಿಗೆ ದಾನ ಮಾಡಿದರೆ ಅದರ ಫಲ ದುಷ್ಟವೇ ಆಗುತ್ತದೆ. ಹೀಗೆ ಕೊಡುವುದಕ್ಕಿಂತ ಕೊಡದಿದ್ದರೂ ತೊಂದರೆ ಇಲ್ಲ. ಪಾತ್ರಾಪಾತ್ರ ವಿವೇಚಿಸಿಯೇ ಎಂದಿಗೂ ದಾನ ಮಾಡಬೇಕು. ಇಲ್ಲದಿದ್ದರೆ ಮತ-ದಾನದಿಂದ ಆಯ್ಕೆಯಾದ ವ್ಯಕ್ತಿ ನಮ್ಮನ್ನೇ ನುಂಗಿದ ಕಥೆ ದಾನದ ವಿಷಯದಲ್ಲೂ ಪುನರಾವರ್ತನೆ ಆಗುತ್ತದೆ. ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com

ಧರ್ಮಾಚರಣೆ ೧೨೮

ಧರ್ಮಾಚರಣೆ-೧೨೮ ನ ವಿದ್ಯಯಾ ಕೇವಲಯಾ ತಪಸಾ ವಾಪಿ ಪಾತ್ರತಾ | ಯತ್ರ ವೃತ್ತಮಿಮೇ ಚೋಭೇ ತದ್ಧಿ ಪಾತ್ರಂ ಪ್ರಕೀರ್ತಿತಮ್ || ಯಾಜ್ಞವಲ್ಕ್ಯ ಸ್ಮೃತಿ|| ಕೇವಲ ಅಪಾರ ವಿದ್ಯೆಯನ್ನು ಗಳಿಸಿದ ಮಾತ್ರಕ್ಕೆ ಅಥವಾ ತುಂಬಾ ಅನುಷ್ಠಾನ-ತಪಸ್ಸು ಮಾಡುತ್ತಾರೆಂಬ ಕಾರಣಕ್ಕೆ ಮನುಷ್ಯನು ಪಾತ್ರತೆಯನ್ನು  ಪಡೆಯುವುದಿಲ್ಲ.  ಉತ್ತಮ ವಿದ್ಯೆ, ಉತ್ತಮ ಅನುಷ್ಠಾನದ ಜೊತೆಗೆ ನಮ್ಮ ನಡತೆಯೂ ಅದಕ್ಕೆ ಅನುಸಾರಿಯಾಗಿದ್ದಾಗ ಮಾತ್ರ ಇಹ-ಪರದಲ್ಲಿ ಪಾತ್ರನಾಗಲು ಅಂದರೆ ಯೋಗ್ಯನಾಗಲು ಸಾಧ್ಯ. ಅಪಾರ ವಿದ್ಯೆ ಗಳಿಸಿ ಯಾರಿಗೂ ಬೋಧಿಸದೇ ಅಹಂಕಾರದಿಂದ ಮೆರೆದರೆ ಅದೇ ಅವರಿಗೆ ಕೆಡುಕು. ಜ್ಞಾನದ ದಾಹ ಇಲ್ಲದೇ ಕೇವಲ ಕರ್ಮಮಾರ್ಗದಲ್ಲೇ ಮುಳುಗೇಳುತ್ತಿದ್ದರೆ ಅವರದ್ದೂ ಮೋಕ್ಷಗಾಮಿಯಾಗದ ಬದುಕು‌. ಇವೆರಡೂ ಇದ್ದೂ ಜೊತೆಗೆ ಸ್ವಜನ ಪಕ್ಷಪಾತ-ಆತ್ಮಪ್ರಶಂಸೆ-ಧನದಾಹ- ಕೀರ್ತಿಕಾಮನೆ-ದೋಷೈಕದರ್ಶನ  ಮೊದಲಾದ ಅವಗುಣಗಳು ಇಲ್ಲದಿದ್ದರೆ ಅವರು ಎಲ್ಲಾ ಬಗೆಯಿಂದಲೂ ಯೋಗ್ಯರೆನಿಸುವರು. ಇಂತಹವರಿಗೆ ನೀಡುವ ಮಾನ ಸನ್ಮಾನವಾಗುವುದು. ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com

ಧರ್ಮಾಚರಣೆ ೧೨೭

ಧರ್ಮಾಚರಣೆ-೧೨೭ ಸ್ನಾತ್ವಾ ಪೀತ್ವಾ ಕ್ಷುತೇ ಸುಪ್ತೇ ಭುಕ್ತ್ವಾ ರಥ್ಯೋಪಸರ್ಪಣೇ | ಆಚಾಂತಃ ಪುನರಾಚಾಮೇದ್ವಾಸೋ ವಿಪರಿಧಾಯ ಚ || ಯಾಜ್ಞವಲ್ಕ್ಯ ಸ್ಮೃತಿ|| ಸ್ನಾನ ಮಾಡಿದಾಗ, ಏನನ್ನಾದರೂ ಕುಡಿದಾಗ, ಸೀನಿದಾಗ, ಮಲಗಿ ಎದ್ದಾಗ, ಊಟದ ನಂತರ, ದೂರ ಎಲ್ಲಾದರೂ ಹೋಗಿ ಬಂದಾಗ, ಬಟ್ಟೆ ಬದಲಾಯಿಸಿದಾಗ ಹೀಗೆ ಇವಿಷ್ಟೂ ಸಂದರ್ಭದಲ್ಲಿ ಆಚಮನ ಮಾಡಬೇಕು. ಆಚಮನ ಮಾಡುವ ಉದ್ದೇಶ ಭಗವನ್ನಾಮ ಸ್ಮರಣೆಯೇ ಹೊರತು ಬಾಯಾರಿಕೆ ತಣಿಸುವುದು ಅಥವಾ ಕರ್ಮಬಿಡದಿರುವುದು ಅಲ್ಲ. ಆದಷ್ಟೂ ಎಲ್ಲಾ ಸಂದರ್ಭದಲ್ಲಿ ಭಗವಂತನ ನಾಮ ಪಠಿಸುತ್ತಾ ಪದ್ಮಪತ್ರದಂತೆ ಪಾಪವಿಮುಖರಾಗುತ್ತಿರಿ ಎಂಬುದೇ ಮುಖ್ಯ ಉದ್ದೇಶ.ನೀರು ಸಿಗದಿದ್ದಾಗ, ಮಡಿ ಆಗದಿದ್ದಾಗ, ಸ್ಥಳ-ಕಾಲ ಸರಿಯಿಲ್ಲದಿದ್ದಾಗ ದೇವರ ನಾಮ ಸ್ಮರಣೆಯೂ ಇದೇ ಫಲವನ್ನು ತಂದುಕೊಡುತ್ತದೆ. ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com

ಧರ್ಮಾಚರಣೆ ೧೨೬

ಧರ್ಮಾಚರಣೆ-೧೨೬ ಅಮೇಧ್ಯಾಕ್ತಸ್ಯ ಮೃತ್ತೋಯೈಃ ಶುದ್ಧಿರ್ಗಂಧಾದಿಕರ್ಷಣಾತ್ | ವಾಕ್ಯಸ್ತಮಂಬುನಿರ್ಣಿಕ್ತಮಜ್ಞಾತಂ ಚ ಸದಾ ಶುಚಿ || ಯಾಜ್ಞವಲ್ಕ್ಯ ಸ್ಮೃತಿ||  ನೊಣ-ವೀರ್ಯ- ರಕ್ತ- ಚರ್ಮದ ತುಂಡು- ಮೂತ್ರ- ಕಿವಿಯ ಮಲ-ಉಗುರು- ಕಣ್ಣೀರು- ಬೆವರು- ಮದ್ಯ-ಉಗುಳು-ಸೀನು  ಮೊದಲಾದವು ಅಮೇಧ್ಯಗಳು ಹಾಗಾಗಿ ಅಪವಿತ್ರ. ಇವುಗಳ ಸಂಸರ್ಗಕ್ಕೆ ಒಳಗಾದರೆ ಮಣ್ಣು ಹಚ್ಚುವುದು ಹಾಗೂ ನೀರಿನಿಂದ ತೊಳೆಯುವುದರ ಮುಖಾಂತರ ಶುದ್ಧಿ ಮಾಡಿಕೊಳ್ಳಬೇಕು. ಗಂಧ- ಚಂದನದ ಲೇಪನದಿಂದಲೂ ಶುದ್ಧಿ ಇದೆ. ಇದು ಆಗದಿದ್ದರೆ ಶ್ರೇಷ್ಠ ಜ್ಞಾನಿಗಳು ಇದು ಶುದ್ಧ ಎಂದು ನುಡಿದರೂ ಶುದ್ಧಿಯಾಗುವುದು. ನಮಗೆ ತಿಳಿಯದೇ ಇವುಗಳ ಸಂಪರ್ಕ ಉಂಟಾಗಿ ಉಪಯೋಗಿಸಿದ್ದರೆ ಅದು ಶುಚಿಯೇ ಸರಿ. ಅಮೇಧ್ಯವೆಂದು ತಿಳಿದೂ ಶುದ್ಧಿ ಮಾಡಿಕೊಳ್ಳದಿರುವುದು ರೋಗ-ಪಾಪ ಕಾರಕ. ಸಾಂಕ್ರಾಮಿಕ ರೋಗಗಳಿಗೆ ಇದೇ ಹೇತು. ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com

ಧರ್ಮಾಚರಣೆ ೧೨೫

ಧರ್ಮಾಚರಣೆ-೧೨೫ ಗೋಘ್ರಾತೇನ್ನೇ ತಥಾ ಕೇಶಮಕ್ಷಿಕಾಕೀಟ ದೂಷಿತೇ | ಸಲಿಲಂ ಭಸ್ಮಮೃದ್ವಾಪಿ ಪ್ರಕ್ಷೇಪ್ತವ್ಯಂ ವಿಶುದ್ಧಯೇ || ಯಾಜ್ಞವಲ್ಕ್ಯ ಸ್ಮೃತಿ||  ಅನ್ನವನ್ನು ಗೋವು ಮೊದಲಾದ ಪ್ರಾಣಿಗಳು ಮೂಸಿದ್ದಾಗ, ಕೂದಲು-ನೊಣ-ಕ್ರಿಮಿಕೀಟಗಳು ಆಹಾರ ಪದಾರ್ಥದ ಮೇಲೆ ಬಿದ್ದಿದ್ದಾಗ ನೀರು-ಭಸ್ಮ-ಮಣ್ಣು ಇವುಗಳ ಸಿಂಪಡಣೆಯಿಂದ ಶುದ್ಧವಾಗುತ್ತದೆ. ಭೋಜನದ ಮೊದಲು ಗಾಯತ್ರಿ ಅಥವಾ ಬೇರೆ ಶ್ಲೋಕಗಳನ್ನು ಪಠಿಸಿ ಆಹಾರದ ಮೇಲೆ ನೀರು ಚಿಮುಕಿಸುವುದು ಇದೇ ಉದ್ದೇಶದಿಂದ, ವೀರಶೈವ ಅಥವಾ ಲಿಂಗಾಯತ ಮಠಗಳಲ್ಲಿ ಭಸ್ಮದಿಂದ ಚಿಮುಕಿಸುವುದು ಇದೇ ಉದ್ದೇಶದಿಂದ, ವಿರಾಗಿಗಳು ಚಿಟಿಕೆಯಷ್ಟು ಶುದ್ಧ ಮಣ್ಣನ್ನು ಸೇರಿಸಿಕೊಳ್ಳುವುದು ಇದೇ ಉದ್ದೇಶದಿಂದ ಹೊರತು ಇದು ಮೂಢನಂಬಿಕೆ ಅಥವಾ ಸಂಪ್ರದಾಯದ ಆಚರಣೆ ಅಲ್ಲ. ಆಹಾರ ಶುದ್ಧವಿದ್ದರೆ ಮನಸ್ಸು ಶುದ್ಧವಿರುತ್ತದೆ. ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com

ಧರ್ಮಾಚರಣೆ ೧೨೪

ಧರ್ಮಾಚರಣೆ-೧೨೪ ಭೂಶುದ್ಧಿಮಾರ್ಜನಾದ್ದಾಹಾತ್ಕಾಲಾದ್ಗೋಕ್ರಮಣಾಸ್ತಥಾ | ಸೇಕಾದುಲ್ಲೇಪಾದ್ಗೃಹಂ ಮಾರ್ಜನಲೇಪನಾತ್ || ಯಾಜ್ಞವಲ್ಕ್ಯ ಸ್ಮೃತಿ|| ಭೂಶುದ್ಧಿ ಮಾಡಬೇಕಾದರೆ ಪೊರಕೆಯಿಂದ ಗುಡಿಸಬೇಕು. ಹೋಮ-ಹವನ ಮಾಡುವುದರಿಂದ ಶುದ್ಧವಾಗುತ್ತದೆ. ಉದಕಶಾಂತಿ ಮೊದಲಾದವುಗಳ ಜಲಪ್ರೋಕ್ಷಣೆಯಿಂದ ಶುದ್ಧವಾಗುವುದು. ಗೋ ಸಂಚಾರದಿಂದ ಸರ್ವಶುದ್ಧಿ ಉಂಟಾಗುವುದು. ಗೋಮೂತ್ರ-ಗೋಮಯದ ಸಿಂಪಡಣೆಯಿಂದ ಪವಿತ್ರವಾಗುವುದು. ಸೆಗಣಿ ಸಾರಿಸುವುದರಿಂದಲೂ ಇದನ್ನು ಸಾಧಿಸಬಹುದು. ಹೆರಿಗೆಯಾದಾಗ-ಮೃತರಾದಾಗ-ಸ್ನಾನ,ಪೂಜೆ ಮಾಡದೇ ಉಣ್ಣಾಗ- ನಾಯಿ,ಹಂದಿ, ಕತ್ತೆ ಪ್ರವೇಶಿಸಿದಾಗ- ಇದ್ದಿಲು,ತೌಡು, ಕೂದಲು, ಕೆಟ್ಟ ಬೂದಿಯಿಂದ- ಒಂಟೆ,ಕೋಳಿ ಮೊದಲಾದವುಗಳ ವಾಸದಿಂದ ಅಶುದ್ಧವೆನಿಸಿದಾಗ ಈ ಮೇಲಿನ ಉಪಾಯಗಳನ್ನು ಅನುಸರಿಸಬೇಕು. ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com

ಪದಶಕ್ತಿ ೪೩

🏹*ಪದಶಕ್ತಿ* ---೪೩🌄   *ಮಾತರಿಶ್ವಾ* _ಮಾತರಿ-ಅಂತರಿಕ್ಷೇ ಶ್ವಯತಿ ಎಂಬಂತೆ ತಾಯಿಯಲ್ಲೂ ಅಂತರಿಕ್ಷದಲ್ಲೂ ಸಂಚರಿಸುವಂತಹದ್ದು ಗಾಳಿ. ನಮ್ಮನ್ನು ತಾಯಿಯಂತೆ ಸದಾ ಪೊರೆಯುವಂತಹದು. ಗರ್ಭಾವಸ್ಥೆಯಲ್ಲಿ ಜೀವ ಮೊಳಕೆ ಒಡೆದ ಕ್ಷಣದಿಂದ ತಾಯಿಯೆಂಬ ಮಾಧ್ಯಮದ ಮೂಲಕ ನಮ್ಮನ್ನು ಅನುಕ್ಷಣವೂ ಬದುಕಿಸುವ ಶಕ್ತಿ._ _ಮಾತರಿ ಶ್ವಯತೇ ವರ್ಧತೇ ಎಂದರೆ ನಮ್ಮ ಜೀವಶಕ್ತಿಯನ್ನು ತಾಯಿಯ ಮೂಲಕ ಹೆಚ್ಚಿಸುತ್ತದೆ ಎನ್ನಬಹುದು._ _तनूनपादुच्यते गर्भं आसुरो नराशंसो भवति यद्विजायते । मातरिश्वा यदमिमीत मातरि वातस्य सर्गो अभवत् सरीमणि_ _ವೇದದ ಈ ಮಂತ್ರದಂತೆ ಬೆಂಕಿಯು ಅರಣಿಯಲ್ಲಿ ಗೂಢವಾಗಿದ್ದಾಗ ತನೂನಪಾತ್ ಎಂಬ ಹೆಸರು ಪಡೆದರೆ ಹೊರ ಬಂದಾಗ ಮಾತರಿಶ್ವಾ ಎಂಬ ಹೆಸರು ಪಡೆಯುತ್ತದೆ. ಹಾಗಾಗಿ ಅಗ್ನಿಯ ಪರ್ಯಾಯವೂ ಹೌದು._ ಋಗ್ವೇದದ ಬಹಳ ಕಡೆ ಈ ಶಬ್ದ ಸಿಗುತ್ತದೆ.  *आन्यं दिवो मातरिश्वाजभारामथ्नादन्यं परिश्येनो अद्रेः* ಇಲ್ಲೂ ಅಗ್ನಿ ಅಥವಾ ಅಗ್ನಿಗೆ ಸಹಾಯಕ ಎಂಬ ಅರ್ಥದಲ್ಲೇ ಇರುವುದು. ಅಗ್ನಿ-ವಾಯು ಪರಸ್ಪರ ಸಹಾಯಕ ದೇವತೆಗಳು ಅಥವಾ ಒಂದೇ ಶಕ್ತಿಯ ಎರಡು ರೂಪಗಳು ಎನ್ನಬಹುದು. _|ತಾವಕದಿ ನೀ ಮಾತರಿಶ್ವಾಖ್ಯನೆಂದೆನಿಸಿ ಸೇವಿಸುವೆ ಘರ್ಮೋಕ್ತದಿ ||ಜೀವ ಸಕಲೋತ್ತಮನೆ | ದಾವ ಶಿಖಿ ಭವವನಕೆದೇವ ಬಲಿಭುಜ ಮಾರುತೀ |ದೇವಾದಿ ವಂದ್ಯ ಗುರು | ಗೋವಿಂದ ವಿಠ್ಠಲನಭಾವದಲಿ ತೋರಿ ಪೊರೆಯೊ_ ಗುರುಗೋವಿಂದವಿಠಲರು ವಾಯುವನ್ನು ಸ್ತುತಿಸ...

ರಾಮಾಯಣ ೧೭೩

📖🏝ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು ಭಾಗ-೧೭೩🏝📖     *ಪ್ರವರ್ಗ್ಯಂ ಶಾಸ್ತ್ರತಃ ಕೃತ್ವಾ ತಥೈವೋಪಸದಂ ದ್ವಿಜಾಃ | ಚಕ್ರುಶ್ಚ ವಿಧಿವತ್ಸರ್ವಮಧಿಕಂ ಕರ್ಮ ಶಾಸ್ತ್ರತಃ ||* _ಸಾಂಗ್ರಹಣ ಯಜ್ಞವನ್ನು ಮಾಡಿ ವರ್ಷದ ನಂತರ ಸರಯೂನದಿಯ ಉತ್ತರದ ತೀರದಲ್ಲಿ ದಶರಥನು ಯಜ್ಞವನ್ನು ಆರಂಭಿಸಿದನು. ವೇದದ ಅರ್ಥವನ್ನು ತಿಳಿದ ಋತ್ವಿಜರು ಯಜ್ಞವನ್ನು ಮೀಮಾಂಸಾಶಾಸ್ತ್ರ ಹಾಗೂ ಕಲ್ಪಸೂತ್ರಕ್ಕನುಸಾರವಾಗಿ  ಉಪಕ್ರಮಿಸಿದರು.ಇಲ್ಲಿ ಒಮ್ಮೆ ದೀಕ್ಷೆ ಪಡೆದ ಮೇಲೆ ಋತ್ವಿಜರು ಸ್ವೇಚ್ಛೆಯಾಗಿ ತಿರುಗುವಂತಿಲ್ಲ. ಯಜ್ಞಶಾಲೆಯ ಒಳಗೇ ತಿರುಗಬೇಕು,  ಇಂತಹ ದಿಕ್ಕಿಗೇ ಕುಳಿತುಕೊಳ್ಳಬೇಕು, ಇಂತಹ ಆಹಾರವನ್ನು ಮಾತ್ರ ಸೇವಿಸಬೇಕು ಮೊದಲಾದ ಅನೇಕ ನಿಯಮಗಳಿವೆ. ಅದರಲ್ಲಿ ಒಂದು ಅಂಗವಾದ ಸೋಮಯಾಗ ಮುಗಿಯುವ ಮೊದಲು ಅಧ್ವರ್ಯುವು ಆ ಮಂಟಪದ ಪಶ್ಚಿಮಭಾಗವನ್ನು ದಾಟಿ ಹೋಗಬಾರದು. ಯಜ್ಞ ಎಂದರೆ ಅನೇಕ ನಿಯಮಗಳ ಒಂದು ಕರ್ಮ. ಹೇಗೆ ಒಂದು ಸಂಸ್ಥೆಗೆ ಸೇರಿದ ಮೇಲೆ ಅಲ್ಲಿಯ ನಿಯಮಗಳಿಗೆ ಬದ್ಧರಾಗಿ ಅಲ್ಲಿಯ ವಾತಾವರಣ ಬಿಟ್ಟು ಬೇರೆ ಕಡೆ ಕೆಲಸದ ವೇಳೆಯಲ್ಲಿ ಹೋಗುವಂತಿಲ್ಲವೋ ಅಂತೆಯೇ ಇಲ್ಲೂ ಅನೇಕ ನಿಯಮಗಳಿವೆ._ _ಋತ್ವಿಜರು ಮೊದಲು ಪ್ರವರ್ಗ್ಯವನ್ನು ನಂತರ ಉಪಸದ ಎಂಬ ಯಾಗವನ್ನು ನಿರ್ವಹಿಸಿದರು. ದೇಸೀ ತಳಿಯ ಗೋವಿನ ಹಾಲನ್ನು ಕಾಯಿಸಿ ಸುಮಾರು ಒಂದು ದೊಡ್ಡ ಲೋಟದಷ್ಟು ಪ್ರಮಾಣದಲ್ಲಿ ಅಶ್ವಿನೀ ದೇವತೆಗಳ ಪ್ರೀತ್ಯರ್ಥವಾಗಿ ಕೊಡುವುದು. ಹೀಗೆ ನೀಡಿದಾಗ ಆಕಾಶ...

ರಾಮಾಯಣ ೧೭೪

📖🏝ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು ಭಾಗ-೧೭೪🏝📖    *ನ ಚಾಹುತಮಭೂತ್ತತ್ರ ಸ್ಖಲಿತಂ ವಾಪಿ ಕಿಂಚನ | ದೃಶ್ಯತೇ ಬ್ರಹ್ಮವತ್ಸರ್ವಂ ಕ್ಷೇಮಯುಕ್ತಂ ಹಿ ಚಕ್ರಿರೇ ||* _ದಶರಥನ ಆ ಅಶ್ವಮೇಧದಲ್ಲಿ ಕೊಡಬೇಕಾದ ಆಹುತಿಗಳಾವುವೂ ಅಧ್ವರ್ಯುವಿನ ಅಥವಾ ಬ್ರಹ್ಮನ ಮರೆವು ಅಥವಾ ಗಮನಿಸದಿರುವ ಕಾರಣದಿಂದಾಗಿ ತಪ್ಪಿಹೋಗಲಿಲ್ಲ. ಬ್ರಹ್ಮನ ಕೆಲಸವೇ ಅದು. ಯಜ್ಞ ಪ್ರಕ್ರಿಯೆ ಸರಿಯಾಗಿ ನಡೆಯುತ್ತಿದೆಯೇ ಎಂಬುದನ್ನು ಆಮೂಲಾಗ್ರವಾಗಿ ಅವಲೋಕಿಸುವುದು. ಪ್ರಸ್ತುತ ಋಷ್ಯಶೃಂಗನೇ ಬ್ರಹ್ಮನಾಗಿ ಕಾರ್ಯನಿರ್ವಹಿಸುತ್ತಿದ್ದಾನೆ. ಬ್ರಹ್ಮನಾದವನಿಗೆ ಜ್ಞಾನ ಪೂರ್ಣತೆ ಇರಬೇಕಾಗುತ್ತದೆ. ವಯಸ್ಸಿನಲ್ಲಿ ಹಿರಿಯನು ಅಥವಾ ಕುಲಪುರೋಹಿತ ಅಥವಾ ಊರಿನ ಹಿರಿಯ ಅಥವಾ ಇಂತಹ ಮಠ-ದೇವಸ್ಥಾನದವನು ಇತ್ಯಾದಿ ಯಾವುದೂ ಬ್ರಹ್ಮತ್ವದ ಅರ್ಹತೆ ಅಲ್ಲ. ಮಾಡುವ ಕರ್ಮದ ಸಂಪೂರ್ಣ ಅರಿವಿದೆಯೋ ಇಲ್ಲವೋ ಎಂಬುದಷ್ಟೇ ಮುಖ್ಯ. ಲಕ್ಷಾಂತರ ಆಹುತಿಗಳಿದ್ದರೂ ಯಾವೊಂದೂ ತಪ್ಪದಂತೆ ಯಜ್ಞ ನಡೆಯುತ್ತಿತ್ತು. ಅಷ್ಟಲ್ಲದೇ ಯಾವ ಯಾವ ದೇವತೆಗೆ ಸಂಬಂಧಿಸಿದ ಮಂತ್ರ ಹೇಳುತ್ತಿದ್ದರೋ ತ್ಯಾಗವನ್ನು ಆಯಾ ದೇವತೆಗೇ ನೀಡುತ್ತಿದ್ದರು. ಇಂದ್ರನ ಮಂತ್ರ ಹೇಳಿ ಸೂರ್ಯನಿಗೆ ತ್ಯಾಗವನ್ನೋ ಅಥವಾ ವಿಷ್ಣುವಿನ ಮಂತ್ರ ಹೇಳಿ ರುದ್ರನಿಗೆ ತ್ಯಾಗವನ್ನೋ ನೀಡುತ್ತಿರಲಿಲ್ಲ. ಯಜ್ಞದಲ್ಲಿ ಇದು ಪ್ರಮುಖ ಅಂಗ. ಮಂತ್ರಗಳು ಯಾವ ದೇವತೆಗೆ ಪ್ರಸಕ್ತ ಯಜ್ಞದಲ್ಲಿ ಉಪಯೋಗಿಸಲ್ಪಡುತ್ತವೆ ಎಂಬುದರ ಅರಿವು ಇರಬೇಕು. ಅದಕ್ಕನುಸ...

ರಾಮಾಯಣ ೧೭೫

📖🏝ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು ಭಾಗ-೧೭೫🏝📖    *ನ ತೇಷ್ವಹಸ್ಸು ಶ್ರಾಂತೋ ವಾ ಕ್ಷುಧಿತೋ ವಾಪಿ ದೃಶ್ಯತೇ | ನಾವಿದ್ವಾಬ್ರಾಹ್ಮಣಸ್ತತ್ರ ನಾಶತಾನುಚರಸ್ತಥಾ || ವೃದ್ಧಾಶ್ಚ ವ್ಯಾಧಿತಾಶ್ಚೈವ ಸ್ತ್ರಿಯೋ ಬಾಲಾಸ್ತಥೈವ ಚ | ಅನಿಶಂ ಭುಂಜಮಾನಾನಾಂ ನ ತೃಪ್ತಿರುಪಲಭ್ಯತೇ ||* _ರಾಜನ ಯಜ್ಞ ನಡೆಯುತ್ತಿದ್ದ ಸಮಯದಲ್ಲಿ ಹಸಿವು-ಬಾಯಾರಿಕೆಯಿಂದ ಬಳಲುತ್ತಿರುವವರನ್ನು ಕಾಣಲು ಸಾಧ್ಯವಿರಲಿಲ್ಲ. ಎಲ್ಲಿ ನೋಡಿದರಲ್ಲಿ_ *ದೀಯತಾಮನ್ನಂ* _ಎಂದು ಅನ್ನದಾನ ಹೊತ್ತು ಹೊತ್ತಿಗೆ ನಡೆಯುತ್ತಲೇ ಇತ್ತು. ನಾಲ್ಕು ವರ್ಣದವರು ಮಾತ್ರವಲ್ಲದೆ ತಪಸ್ವಿಗಳೂ, ದಿಗಂಬರರೂ, ವ್ಯಾಧಿಪೀಡಿತರೂ, ವೃದ್ಧರೂ, ಬಾಲಕರೂ ಹೀಗೆ ಎಲ್ಲರೂ ಸಾಕಷ್ಟು ಉಂಡೂ ತೃಪ್ತಿಹೊಂದುತ್ತಿರಲಿಲ್ಲ. ಏಕೆಂದರೆ ಇನ್ನೊಂದಷ್ಟು ದಿನ ಈ ಯಜ್ಞದ ಪ್ರಸಾದದ ರುಚಿ ನಾಲಗೆಯಲ್ಲಿ ಇರಲಿ ಎಂಬ ಬಯಕೆಯನ್ನು ಹುಟ್ಟಿಸುವಂತಿತ್ತು ಪಾಕದ ರುಚಿ. ಅಲ್ಲಿನ ಪ್ರಸಾದದ ರುಚಿಯು ಸಾಕು ಎಂಬ ಮಾತನ್ನು ಬರಿಸುತ್ತಲೇ ಇರಲಿಲ್ಲ. ಅಲ್ಲಿ ವಿದ್ವಾಂಸನಲ್ಲದ ಬರೇ ಉಪವೀತಧಾರಣೆಗೆ ಯೋಗ್ಯನೆನಿಸಿದ ಬ್ರಾಹ್ಮಣನು ಒಬ್ಬನೂ ಇರಲಿಲ್ಲ. ಆ ಕಾಲದಲ್ಲಿ ಹುಟ್ಟು ಎನ್ನುವುದು ಒಂದು ನಿಮಿತ್ತ. ಬ್ರಾಹ್ಮಣ ಎಂದು ಕರೆಸಿಕೊಳ್ಳಬೇಕಾದರೆ ಸಾಕಷ್ಟು ವೇದ-ವೇದಾಂಗಗಳ ಅಧ್ಯಯನ ಅವಶ್ಯಕವಾಗುತ್ತಿತ್ತು. ಹಾಗೆ ಮಾಡದಿದ್ದರೆ ಸಮಾಜ ಅಂತಹವರನ್ನು ತಮಾಷೆ ಮಾಡುತ್ತಿತ್ತು ಹಾಗೂ ನಿಂದಿಸುತ್ತಿತ್ತು. ಯಾವೊಂದು ಶಾಸ್ತ್ರೋಕ್ತ ಕರ್ಮ ಮಾಡದೇ ...