🌹ಶಾಕುಂತಲದ ಒಂದು ಸುಮ🌹 *भानु: सकृद्युक्ततुरङ्ग एव रात्रिं दिवं गन्धवह: प्रयाति । शेष: सदैवाहितभूमिभार: षष्ठांशवृत्तेरपि धर्म एष: ।।* _ಕಂಚುಕಿಯು ರಾಜನ ಬಗ್ಗೆ ನುಡಿಯುವ ಮಾತು. ರಾಜನ ಕೆಲಸ ಅವಿಶ್ರಾಂತವಾದುದು ಎನ್ನುತ್ತಾ ಹೀಗೆ ನುಡಿಯುತ್ತಾನೆ. ಸೂರ್ಯನು ಒಮ್ಮೆ ಮಾತ್ರ ತನ್ನ ರಥಕ್ಕೆ ಕುದುರೆಗಳನ್ನು ಹೂಡಿದ್ದು.ಅನಂತರ ಅವನ ರಥ ಮೂರು ಲೋಕಗಳನ್ನು ನಿರಂತರವಾಗಿ ಬೆಳಗಿಸುತ್ತಾ ಸುತ್ತುತ್ತಿದೆ.ಅವನೆಂದೂ ವಿರಾಮ ಬಯಸಿಲ್ಲ. ವಾಯುದೇವನು ಅಹರ್ನಿಶಿ ಬೇಸರವಿಲ್ಲದೆ ಬೀಸುತ್ತಾನೆ.ಅವನ ಗತಿ ನಿಂತರೆ ಉಳಿದವರ ಗತಿ ನಿಲ್ಲುತ್ತದೆ.ದೇವನ ಆಣತಿಯಂತೆ ಭೂಮಿಯ ಭಾರವನ್ನು ಹೊತ್ತ ಆದಿಶೇಷನು ಶ್ರಮವೆಂದು ಎಂದಿಗೂ ಇಳಿಸಲಿಲ್ಲ. ಪ್ರಜೆಗಳ ಪಾಪ ಪುಣ್ಯ ಧನ ಮುಂತಾದವುಗಳ ಆರನೇ ಒಂದು ಭಾಗವನ್ನು ಸ್ವೀಕರಿಸುವ ರಾಜನ ಕರ್ತವ್ಯವೂ ಹೀಗೆಯೇ ಇದೆ.ಪ್ರಜೆಗಳಿಗಾಗಿ ಸದಾ ಕರ್ತವ್ಯದಲ್ಲೇ ಇರಬೇಕು. ಆ ಪದವಿ ಪಡೆದ ಮೇಲೆ ಅವನಿಗೆ ಒದಗಿ ಬಂದ ಜವಾಬ್ದಾರಿ. ಲೋಕಕಾರ್ಯ ನಿರ್ವಹಿಸುವ ಅವನ ಅಧಿಕಾರಕ್ಕೆ ವಿಶ್ರಾಂತಿ ನಿಷಿದ್ಧ.ಸೂರ್ಯ ವಾಯು ಶೇಷ ಮತಾದವರು ಹೇಗೆ ವಿಶ್ರಾಂತಿ ಇಲ್ಲದೇ ಕಾರ್ಯನಿರ್ವಹಿಸುವರೋ ಹಾಗೆಯೇ ರಾಜನೂ ವಿಶ್ರಾಂತಿ ಇಲ್ಲದೇ ಪ್ರಜಾ ರಕ್ಷಣೆಯ ಕಾರ್ಯದಲ್ಲಿ ನಿರತನಾಗಿರಬೇಕಾಗುವುದು ಎಂದು ಅಭಿಪ್ರಾಯ. ಮಾಲಾಪ್ರತಿವಸ್ತೂಪಮಾ ಅಲಂಕಾರ. ನಮ್ಮ ಈಗಿನ ಪ್ರಧಾನಿಯ ಕಾರ್ಯ ವೈಖರಿ ಕವಿಯ ಆಶಯಕ್ಕೆ ಅನುಗುಣವಾಗಿದೆ.ರಾಜನು ತನ್ನ ಕರ್ತವ್ಯ ನಿ...
ಪೋಸ್ಟ್‌ಗಳು
ನವೆಂಬರ್, 2016 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
💐ಪ್ರತಿಮಾನಾಟಕದ ಸುಂದರ ಸುಮ💐 *शरीरेsरि: प्रहरति हृदये स्वजनस्तथा । कस्य स्वजनशब्दो मे लज्जामुत्पादयिष्यति ।।* _ರಾಮನಾಡುವ ಮಾತು. ಕಂಚುಕಿ ಬಂದು ಅನರ್ಥವಾಯಿತು, ರಾಜನಿಗೆ ಎಂದು ಭೀತಿಯಿಂದ ನುಡಿದಾಗ ರಾಮನು ಯಾರಿಂದ ಎಂದು ಪ್ರಶ್ನಿಸುತ್ತಾನೆ.ಆಗ ತನ್ನವರಿಂದಲೇ ಅಂದರೇ ಸ್ವಜನರಿಂದಲೇ ಎನ್ನುತ್ತಾನೆ. ಆಗ ಹೇಳುವ ಮಾತು. ಶತ್ರುವು ಯುದ್ಧಭೂಮಿಯಲ್ಲಿ ಬಾಣಗಳಿಂದ ಅಥವಾ ಆಯುಧಗಳಿಂದ ಶರೀರವನ್ನು ಪ್ರಹರಿಸುತ್ತಾನೆ.ಆದರೆ ಸ್ವಜನರು ನಮ್ಮವರೆನಿಸಿಕೊಂಡವರು ಹೃದಯಕ್ಕೆ ಆಘಾತ ಕೊಡುತ್ತಾರೆ.ಹೃದಯಕ್ಕೆ ಹೊಡೆಯುತ್ತಾರೆ.ಮನಸ್ಸು ನೋಯಿಸುತ್ತಾರೆ.ಅಂತಹ ಆಘಾತ ಉಂಟುಮಾಡಿದ ರಾಜನ ಮನಸ್ಸನ್ನು ನೋಯಿಸಿದ ಯಾವ ವ್ಯಕ್ತಿಯನ್ನಾದರೂ ನಾನು ಸ್ವಜನ ಎಂಬ ಶಬ್ದದಿಂದ ಹೇಗೆ ಕರೆಯಲಿ! ಅದಕ್ಕೂ ನನಗೆ ನಾಚಿಕೆ ಆಗುತ್ತಿದೆ.ಅವರು ಸ್ವಜನರು ಹೌದೋ ಅಲ್ಲವೋ ಆ ಪದದಿಂದ ವ್ಯವಹಾರಕ್ಕೂ ಯೋಗ್ಯರಲ್ಲ. ರಾಜನ ಮನೋವೇದನೆಗೆ ಕಾರಣರಾದ ವ್ಯಕ್ತಿ ನಮ್ಮವರೆಂದು ಕರೆಸಿಕೊಳ್ಳಲು ಕೂಡ ಅನರ್ಹರು.ಅವರು ಶತ್ರುಗಳಿಗಿಂತಲೂ ಹೆಚ್ಚು ನಮ್ಮನ್ನು ಬಾಧಿಸುತ್ತಾರೆ.ಶತ್ರುಗಳ ಪ್ರಹಾರದ ಗಾಯ ದಿನಗಳೆದ ಹಾಗೆ ಮಾಸಬಹುದು.ಆದರೆ ಮನಕ್ಕಾದ ನೋವು ಆಪ್ತರೆನಿಸಿಕೊಂಡವರು ಕೊಟ್ಟ ವೇದನೆ ಅದು ಹೃದಯವನ್ನೇ ಸೀಳುವಂತಹದು.ನಮ್ಮ ಸುತ್ತಲೂ ಎಷ್ಟೋ ಸಲ ಇಂತಹ ಜನರಿರುತ್ತಾರೆ.ದಶರಥನಂತೆ ಮೈ ಮರೆತು ನಂತರ ದು:ಖಿಸುತ್ತೇವೆ.ಅವರು ಸ್ವಜನರೋ ಶ್ವಜನರೋ ಎಂಬ ಸಂಶಯ ಆ ಕಾಲದಲ್ಲಿ ಉದ್ಭವಿಸುತ್ತದೆ...
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
🌹ಶಾಕುಂತಲದ ಸುಂದರ ಕುಸುಮ🌹 *रम्याणि वीक्ष्य मधुरांश्च निशम्य शब्दान् पर्युत्सुकीभवति यत्सुखितोपि जन्तु: । तच्चेतसा स्मरति नूनमबोधपूर्वं भावस्थिराणि जननान्तरसौहृदानि ।।* _ದುಷ್ಯಂತನ ಮಧುರ ಮಾತು.ಹಂಸಪದಿಕೆಯ ಮಧುರಸ್ವರದಲ್ಲಿ ಗಾನವೊಂದನ್ನು ಆಲಿಸಿದ ರಾಜ ಚಿಂತಿಸುತ್ತಿದ್ದಾನೆ. ಈ ಹಾಡನ್ನು ಕೇಳಿ ಪ್ರಿಯರ ವಿರಹ ಇಲ್ಲದಿದ್ದರೂ ಉದ್ವಿಗ್ನನಾಗುತ್ತಿದ್ದೇನೆ.ಏನು ಕಾರಣ. "ಸುಂದರವಾದ ವಸ್ತುಗಳನ್ನು ನೋಡಿ ಅಥವಾ ಮಧುರವಾದ ಧ್ವನಿಯನ್ನು ಕೇಳಿ ಸುಖವಾಗಿರುವ ವ್ಯಕ್ತಿಯೂ ನನ್ನಂತೆ ತುಂಬ ಭಾವುಕನಾದರೆ ಅಥವಾ ಉದ್ವಿಗ್ನನಾದರೆ , ಬಹುಶ: ಅವನು ತನಗೆ ತಿಳಿಯದಂತೆ ಸಂಸ್ಕಾರ ರೂಪದಲ್ಲಿ ಮನದಲ್ಲಿ ಅಚ್ಚೊತ್ತಿದ ಜನ್ಮ ಜನ್ಮಾಂತರದ ಯಾವುದೋ ಸ್ನೇಹವನ್ನು ಸ್ಮರಿಸುತ್ತಿರುತ್ತಾನೆ.ದುಷ್ಯಂತನಿಗೆ ಅವನ ಭಾವುಕತೆಗೆ ಕಾರಣ ತಿಳಿಯುತ್ತಿಲ್ಲ.ಆದರೂ ಯಾರನ್ನೋ ಬಿಟ್ಟವನಂತೆ ಅವನಿಗೆ ತೋರುತ್ತಿದೆ.( ನಿಜಕ್ಕಾದರೆ ಶಕುಂತಲೆ ಪರಿತ್ಯಕ್ತಳು ಆದರೆ ದೂರ್ವಾಸರ ಶಾಪದಿಂದ ಅದು ರಾಜನಿಗೆ ನೆನಪಿಲ್ಲ.) ಸಂಗೀತ ಶಾಲೆಯ ಹಂಸಪದಿಕೆಯ ಧ್ವನಿಯನ್ನು ಕೇಳಿದೊಡನೆ ದುಷ್ಯಂತನಿಗೆ ಅದೇಕೋ ಕಳವಳವುಂಟಾಯಿತು. ಮಧುರವಾದ ಹಾಡನ್ನು ಕೇಳಿ ಮನದಲ್ಲಿ ಕಳವಳವೇಕೆಂದು ಅವನು ಚಿಂತಿಸುತ್ತಿದ್ದಾನೆ. ಯಾವುದೋ ಪೂರ್ವಜನ್ಮದ ಘಟನೆ ಈ ಕಳವಳಕ್ಕೆ ಕಾರಣವಿರಬಹುದೆಂದು ಅವನ ಸಂಶಯ. ಪ್ರೀತಿಸಿರುವ ಶಕುಂತಲೆಯನ್ನು ಶಾಪದಿಂದಾಗಿ ಮರೆತಿರುವುದರಿಂದ ಅದು ಪೂರ್ವಜ...
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
🌹ಶಾಕುಂತಲದ ಸುಂದರ *आचार इत्यवहितेन मया गृहीता या वेतृयष्टिरवरोधगृहेषु राज्ञ: । काले गते बहुतिथे मम सैव जाता प्रस्थानविक्लवगतेरवलम्बनार्था ।।* _ಕಾಳಿದಾಸನ ಒಂದು ಮಾರ್ಮಿಕ ಮಾತು. ಕಂಚುಕಿ ನುಡಿಯುತ್ತಿದ್ದಾನೆ. ರಾಜನ ಅಂತ:ಪುರದಲ್ಲಿ ನಿಯಮಿಸಲ್ಪಟ್ಟವರು ಹಿಡಿದುಕೊಳ್ಳಬೇಕೆಂಬ ಸಂಪ್ರದಾಯವನ್ನನುಸರಿಸಿ ಯಾವ ಬೆತ್ತದ ದಂಡ ಇಷ್ಟು ಕಾಲ ಹಿಡಿದೆನೋ ಅದೇ ದಂಡವು ಬಹಳ ಸಮಯದ ನಂತರ ಈಗ ನಡೆಯುವಾಗ ತಡವರಿಸುವ ನನಗೆ ಊರಿಕೊಳ್ಳಲು ಆಧಾರವಾಗಿ ಇಟ್ಟುಕೊಳ್ಳಲು ಬೇಕಾಗಿದೆ.ಬಿದಿರಿನ ಕೋಲು ಅಂತ:ಪುರದ ಅಧಿಕಾರಿ ಹಿಡಿಯುವುದು ರಾಜರ ಮನೆಯ ಪದ್ಧತಿ.ಈಗಲೂ ದೇವಸ್ಥಾನಗಳ ಉತ್ಸವಗಳಲ್ಲಿ ಇಬ್ಬರು ದಂಡಧಾರಿಗಳಿರುತ್ತಾರೆ. ಹೆಚ್ಚು ಸನಿಹ ಯಾರೂ ಬರದಂತೆ ತಡೆಯುವ ಕೋಲೂ ಹೌದದು. ಈಗ ನಡಿಗೆಯ ಕಂಪನದಿಂದಾಗಿ ( ಹೆಚ್ಚು ವಯಸ್ಸಾದದ್ದರಿಂದ) ಬೀಳುವೇನೋ ಎಂದೆನಿಸಿದಾಗ ಆಧಾರವಾಗಿ ಈ ಕೋಲೇ ಉಪಯೋಗಿ ಆಗಿದೆ. ಈಗ ಅದರ ಪ್ರಯೋಜನ ಅವಲಂಬನೆಯೇ ಆಗಿದೆ.ಹಿಂದೆ ಯಾರನ್ನಾದರೂ ಗದರಿಸಲು ಸಾಧ್ಯವಾಗುತ್ತಿತ್ತೇನೋ ಆದರೆ ಈಗ ನನ್ನ ಪರಿಸ್ಥಿತಿಗೆ ಸಹಾಯಕವಾಗಿ ನಿಂತಿದೆ ಈ ದಂಡ.ನಮ್ಮ ಆಚರಣೆಗಳನೇಕ ಕಂಚುಕಿಯ ದಂಡಧಾರಣೆಯಂತೆಯೇ ಇವೆ.ನಮಸ್ಕಾರ ಮಾಡುತ್ತೇವೆ.ಯಾರಿಗೆ ಮಾಡುವೆವೋ ಅವರ ಬಗ್ಗೆ ಯಾವ ಭಾವನೆಯೂ ಇಲ್ಲದೇ ಕಾಟಾಚಾರಕ್ಕೆಂಬಂತೆ ಮಾಡುತ್ತೇವೆ.ದೇವರಿಗೆ ನಮನ ಸಲ್ಲಿಸುವಾಗಲೂ ಭಕ್ತಿಯ ಕೊರತೆ ಕಾಡುತ್ತದೆ. ಪ್ರಸಾದದಲ್ಲಿ ರುಚಿ ಹುಡುಕುತ್ತೇವೆ, ಹೇಗೆ ಇರಲ...
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
💐ಪ್ರತಿಮಾನಾಟಕದ ಸುಂದರ ಸುಮ💐 *नारीणां पुरुषाणां च निर्मर्यादो यदा ध्वनि: । सुव्यक्तं प्रभवामीति मूले दैवेन ताडितम् ।।* _ಹಿನ್ನೆಲೆಯಲ್ಲಿ ಅಯ್ಯೋ ಮಹಾರಾಜ ಎಂಬ ಧ್ವನಿ ಕೇಳಿಬರುತ್ತಿದೆ. ರಾಮಾದಿಗಳು ಸಂತೋಷದಿಂದ ತಮಾಷೆ ಮಾಡುತ್ತಿರುವ ಸಂದರ್ಭದಲ್ಲಿ ಕೇಳಿಬರುವ ಈ ಮಾತು ಎಲ್ಲರಿಗೂ ಗಾಬರಿಯನ್ನುಂಟುಮಾಡುತ್ತದೆ. ಸ್ತ್ರೀಯರ ಹಾಗೂ ಪುರುಷರ ಧ್ವನಿ ಯಾವಾಗ ಸೀಮೆಯನ್ನು ದಾಟುವುದೋ ಆಗ ಖಂಡಿತವಾಗಿ ಮೂಲದಲ್ಲಿಯೇ ಏನೋ ಅನಾಹುತ ಉಂಟಾಗಿದೆಯೆಂದು ಭಾವಿಸುವೆನು. ಜೋರಾದ ದು:ಖದ ಧ್ವನಿಯನ್ನು ಕೇಳಿದ ರಾಮನು ಹೀಗೆ ಅನುಮಾನ ಪಡುತ್ತಾನೆ. ಸ್ತ್ರೀಯರಾಗಲಿ ಅಥವಾ ಪುರುಷರಾಗಲಿ ತುಂಬಾ ಗಾಬರಿಯಿಂದ ಜೋರಾಗಿ ಅರಚಿದರೆ ಅಥವಾ ಕೂಗಿದರೆ ಏನೋ ಮಹತ್ತರವಾದ ಅನಾಹುತ ಸಂಭವಿಸಿದೆಯೆಂದು ಶಂಕಿಸುತ್ತೇನೆ ಅಥವಾ ತರ್ಕಿಸುತ್ತೇನೆ. ಅದಕ್ಕೆ ಕಾರಣ ವಿಧಿ.ಹಾಗಾಗಿಯೇ ದೈವೇನ ತಾಡಿತಮ್ ಎನ್ನುವ ಮಾತು. "ಸರ್ವಸಾಮರ್ಥ್ಯಶಾಲೀ ಮತ್ಪ್ರಭಾವ:" ಎನ್ನುವ ವಿಧಿಯ ಮಾತು ರಾಮನ ನಿರೂಪಣೆಯಲ್ಲಿ ಕಂಡುಬರುತ್ತದೆ. ರಾಮನಾಗಲಿ ಕೃಷ್ಣನಾಗಲಿ ವಿಧಿಯ ನಿರ್ಣಯದ ಮುಂದೆ ನಿಂತವರಲ್ಲ.ನಾವು ನೀವು ಯಾವ ಲೆಕ್ಕ ವಿಧಿಗೆ. ರಾಜನಿಗೆ ಏನೋ ಆಪತ್ತು ನಡೆದಿರುವ ಶಂಕೆ ಸೂಕ್ಷ್ಮವಾಗಿ ಕಂಡುಬರುತ್ತದೆ.ನಿರ್ಮರ್ಯಾದೋ ಎನ್ನುವ ಪದ ದು:ಖದಾಯಕ, ಕಳವಳದ ಸಂಕೇತ ಇತ್ಯಾದಿ ಅರ್ಥ ತಂದುಕೊಡುತ್ತದೆ.ನಾವೂ ಯಾರ ಕೂಗಿಗಾದರೂ ಒಂದು ಕ್ಷಣ ಓಗೊಟ್ಟು ಗಾಬರಿ ಪಡುವುದಿಲ್ಲವೇ ಹಾಗೆಯೇ ...