🌹ಶಾಕುಂತಲದ ಮತ್ತೊಂದು ಕುಸುಮ:🌹
*ಶೈಲಾನಾಮವರೋಹತೀವ ಶಿಖರಾದುನ್ಮಜ್ಜತಾಂ ಮೇದೀನೀ ಪರ್ಣಸ್ವಾಂತರಲೀನತಾಂ ವಿಜಹತಿ ಸ್ಕಂಧೋದಯಾತ್ಪಾದಪಾ: ಸಂತಾನೈಸ್ತನುಭಾವನಷ್ಟಸಲಿಲಾ ವ್ಯಕ್ತಿಂ ಭಜನ್ತ್ಯಾಪಗಾ: ಕೇನಾತ್ಯುತ್ಕ್ಷಿಪತೇವ ಪಶ್ಯ ಭುವನಂ ಮತ್ಪಾರ್ಶ್ವಮಾನೀಯತೆ||*
_ದುಷ್ಯಂತನು ದೇವಲೋಕದ ಕಾರ್ಯಗಳನ್ನು ಮುಗಿಸಿ ಇಂದ್ರನ ರಥದಲ್ಲಿ ಭೂಮಿಗೆ ಹಿಂದಿರುಗುತ್ತಿದ್ದಾಗ ಹೇಳುವ ಮಾತು ಕಾಳಿದಾಸ ಸ್ವತ: ವಿಮಾನದಲ್ಲಿ ಕೂತು ಅನುಭವಿಸಿದಂತೆ ಮಾಡಿದ ವರ್ಣನೆ. ಕೆಳಗಿಳಿದಂತೆ ಅಸ್ಪಷ್ಟವಾಗಿ ಕಾಣುತ್ತಿದ್ದ ಪರ್ವತದ ಶಿಖರಗಳು ಸರಿಯಾಗಿ ಕಂಡು ಭೂಮಿ ಪರ್ವತಗಳಿಂದ ಇಳಿಯುವಂತೆ ಕಾಣುತ್ತಿದೆ. ಮರಗಳು ರೆಂಬೆ ಕೊಂಬೆ ಗಳು ಮೇಲಿನಿಂದ ಹುದುಗಿಕೊಂಡಿರುವಂತೆ ಕಂಡದ್ದು ಈಗ ಎಲೆಗಳಿಂದ ಪ್ರತ್ಯೇಕವಾಗಿ ತೋರುತ್ತಿವೆ. ಕಿರಿದಾಗಿ ಕಾಣುತ್ತಿದ್ದುದರಿಂದ ನೀರಿಲ್ಲದಂತಿದ್ದ ನದಿಗಳು ಸ್ಫುಟವಾಗಿ ಗೋಚರಿಸುತ್ತಿವೆ. ಯಾರೋ ಮೇಲೆ ಹಾರುತ್ತ ನನ್ನೆಡೆಗೆ ಭೂಮಿಯನ್ನು ಹೊತ್ತುತರುವಂತಿದೆ. ವಿಮಾನಯಾನದ ಅನುಭವವನ್ನು ಪ್ರತ್ಯಕ್ಷವಾಗಿ ತಂದುಕೊಡುತ್ತಿದೆ ಕಾಳಿದಾಸನ ಈ ಶ್ಲೋಕ._
📜ಸಂಗ್ರಹ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ