🌺ಅವಿಮಾರಕದ ಮತ್ತೊಂದು ಕುಸುಮ:🌺
*ತಾನಸ್ತು ಮಂದೋ ವಿಶದಪ್ರವೃತ್ತೋ ಜಾತಶ್ಚ ನಾದೋ ಮುಖನಾಸಿಕೇನ / ಸ್ಥೂಲೋಪಿ ಹೇತು: ಕರತಾಲನಾದ: ಸಂಜಾಯತೇ ಸದ್ವಲಯಸ್ವನೇನ||*
_ನಾಯಕನು ಮಧ್ಯರಾತ್ರಿಯಲ್ಲಿ ರಾಜಕುವರಿಯನ್ನು ಭೇಟಿಯಾಗಲು ತೆರಳುತ್ತಿರುವನು. ಒಂದೆಡೆ ಗಮನ ಕೊಟ್ಟಾಗ ಮಧುರರವ ಕೇಳಿಬರುತ್ತಲಿದೆ. ಅದರ ವರ್ಣನೆ. ತಾನವು ಸ್ಪಷ್ಟವಾಗಿ ಆರಂಭಿಸಲ್ಪಟ್ಟು ಮಂದಧ್ವನಿಯಲ್ಲಿ ಕೇಳುತ್ತಲಿದೆ. ಮುಖ ಮತ್ತು ಮೂಗಿನ ಸಹಾಯದಿಂದ ನಾದವು ಹೊರಡುತ್ತಿದೆ. ಕೈಯಲ್ಲಿ ಹಾಕುತ್ತಿರುವ ತಾಳವು ದೀರ್ಘವಾಗಿದ್ದರೂ ಬಳೆಗಳ ಧ್ವನಿಯಿಂದ ಕೂಡಿರುವುದರಿಂದ ಇನ್ನಷ್ಟು ಮಾಧುರ್ಯವನ್ನು ತಂದುಕೊಡುತ್ತಿದೆ ಹಾಗೂ ಅಭ್ಯಾಸ ಮಾಡುತ್ತಿರುವವರು ಮೇಲಿನ ಲಕ್ಷಣಗಳಿಂದಾಗಿ ಸ್ತ್ರೀಯೆಂದೇ ತಿಳಿಯುತ್ತಿದೆ. ( ಆರಂಭದಲ್ಲಿ ನಿಧಾನಗತಿಯ ಸ್ವರ,ಮೂಗಿನ ಸಹಾಯ ಪಡೆಯುತ್ತಿರುವುದು,ಬಳೆಗಳ ಧ್ವನಿ, ಹೆಚ್ಚು ಗಂಭೀರವಲ್ಲದ ತಾಳ) ಹೀಗೆ ಅನುಮಾನಿಸುತ್ತಾನೆ ಮನದರಸಿಯನ್ನು ಅರಸಿ ಹೊರಟ ಅರಸಕುವರ._
📜ಸಂಗ್ರಹ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ