🌺ಅವಿಮಾರಕದ ಸುಂದರ ಶ್ಲೋಕ 🌺

*ತಿಮಿರಮಿವ ವಹಂತಿ ಮಾರ್ಗನದ್ಯ: ಪುಲಿನನಿಭಾ: ಪ್ರತಿಭಾಂತಿ ಹರ್ಮ್ಯಮಾಲಾ:/ ತಮಸಿ ದಶ ದಿಶೋ ನಿಮಗ್ನರೂಪಾ: ಪ್ಲವತರಣೀಯ ಇವಾಯಮಂಧಕಾರ:||*

 _ರಾತ್ರಿಯ ಗಾಢತೆಯ ವರ್ಣನೆ. ದಾರಿಗಳೆಂಬ ಬೇರೆ ಬೇರೆ ನದಿಗಳು ಕತ್ತಲೆಂಬ ಸಮುದ್ರವನ್ನು ಸೇರುತ್ತಲಿವೆ. ಅಥವಾ ಕತ್ತಲೆಂಬ ಸಮುದ್ರ ಸೇರಲು ಹೋಗುತ್ತಿವೆ.  (ಎಲ್ಲೆಡೆ ದಾರಿಯಲ್ಲಿ ಕತ್ತಲು ತುಂಬಿದೆ) ಮಾರ್ಗದ ಇಕ್ಕೆಲಗಳಲ್ಲಿ ಇರುವ ಮನೆಗಳು ನದಿಯ ತೀರದಂತೆ ಕಾಣುತ್ತಿವೆ.ಹತ್ತು ದಿಕ್ಕುಗಳು ತಮ್ಮ ರೂಪವನ್ನು ಕಳಚಿ ಕತ್ತಲಲ್ಲಿ ಮುಳುಗಿ ಒಂದಾಗಿವೆ. ( ಹತ್ತು ವೇಷ ಧರಿಸಿದ ಒಬ್ಬ ಪಾತ್ರಧಾರಿ ವೇಷ ಕಳಚಿದಂತೆ) ಹೀಗೆ ಬೆಳಕೆಂಬ ನಾವೆಯ ಬೆನ್ನೇರಿ ದಾಟಬಹುದಷ್ಟೇ ಈ ಭಯಂಕರ ಕತ್ತಲೆಯನ್ನು. ಸುತ್ತಮುತ್ತಲೆಲ್ಲ ಏನೂ ಕಾಣದ ಕತ್ತಲೆಯ ವರ್ಣನೆ ಕವಿಗೆ ನದಿ ಸಮುದ್ರದ ಉಪಮೆಗೆ ವಿಷಯವಾಗಿದೆ. ಹಾಗಾಗಿಯೇ ಕವಿಗೆ ಎಲ್ಲವೂ ಸ್ವರಸ._

📜ಸಂಗ್ರಹ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩