🌺ಅವಿಮಾರಕದ ಒಂದು ಅಲಂಕಾರಿಕ ಶ್ಲೋಕ 🌺
*ಕಾಂತಾಸಮೀಪಮುಪಗಮ್ಯ ಮನೋಭಿಲಾಷಾತ್ ಹರ್ಮ್ಯಾಧಿರೋಹಣಮತೇರ್ಮಮ ಕಾ ವಿಶಂಕಾ/ ಸಂಸಕ್ತನಾಲಗತಕಂಟಕಭೀತಚೇತಾ ತೃಷ್ಣಾರ್ದಿತ: ಕ ಇಹ ಪುಷ್ಕರಿಣೀಂ ಜಹಾತಿ||*
_ನಾಯಕನು ಪ್ರಿಯಳನ್ನು ಕಾಣುವ ಅತಿ ಕಾತರದಿಂದ ಅರಮನೆಯಲ್ಲಿ ಕಳ್ಳ ದಾರಿಯಲ್ಲಿ ಹೊರಟಿದ್ದಾನೆ. ಮಧ್ಯರಾತ್ರಿಯ ಸಮಯ. ತನ್ನಲ್ಲೇ ಈ ಮಾತನ್ನು ಹೇಳಿಕೊಳ್ಳುತ್ತಿದ್ದಾನೆ. ಮನದಲ್ಲಿ ಮೂಡಿದ ಹೆಚ್ಚಿನ ಪ್ರೀತಿಯಿಂದಾಗಿ ಪ್ರಿಯಳ ಸಮೀಪಕ್ಕೆ ಬಂದು ಈಗ ಉಪ್ಪರಿಗೆಯನ್ನು ಏರಿವುದೊ ಬಿಡುವುದೊ ಎಂಬ ಸಂಶಯ ಯಾಕೆ! ನಿಸ್ಸಂಶಯವಾಗಿ ಹತ್ತುವುದೇ ಸರಿ. ಬಾಯಾರಿದವನೊಬ್ಬ ನೀರನ್ನು ಹುಡುಕಿ ಕೊಳದಲ್ಲಿ ಇಳಿಯುವ ಮುಂಚೆ ಕೊಳದಲ್ಲಿ ಮುಳ್ಳಿದೆಯೆಂದು ಹೆದರಿದರೆ ನೀರು ಅವನಿಗೆ ದೊರಕೀತೆ? ಅವನು ಅದಕ್ಕೆಲ್ಲ ಹೆದರದೆ ಇಳಿದು ನೀರನ್ನು ಕುಡಿಯುತ್ತಾನೆ.ನನಗೂ ಪ್ರೀತಿಯ ದಾಹ ದೇಹವನ್ನು ಸುಡುತ್ತಿದೆ. ಈಗ ಹೆಚ್ಚು ಯೋಚಿಸದೇ ಪ್ರಿಯಳನ್ನು ಕಾಣಲು ಬೇಗ ಬೇಗ ಹತ್ತಿ ತೆರಳುತ್ತೇನೆ. ಬೀಳುವ ಜಾರುವ ಭಯವೆಲ್ಲ ಅವಳ ಯೋಚನೆಯ ಮುಂದೆ ಗೌಣ ಎನ್ನುವ ಅಭಿಪ್ರಾಯ._
📜ಸಂಗ್ರಹ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ