📃ಶಾಕುಂತಲದ ಒಂದು ಶ್ಲೋಕ :📃

 *ಇತ: ಪ್ರತ್ಯಾದೇಶಾತ್ಸ್ವಜನಮನುಗಂತುಂ ವ್ಯವಸಿತಾ ಮುಹುಸ್ತಿಷ್ಠೇತ್ಯುಚ್ಚೈರ್ವದತಿ ಗುರುಶಿಷ್ಯೇ ಗುರುಸಮೇ/ ಪುನರ್ದೃಷ್ಟಿಂ ಬಾಷ್ಪಪ್ರಸರಕಲುಷಾಮರ್ಪಿತವತೀ ಮಯಿ ಕ್ರೂರೇ ಯತ್ತತ್ಸವಿಷಮಿವ ಶಲ್ಯಂ ದಹತಿ ಮಾಮ್||*

 _ದುಷ್ಯಂತನು ತಾನು ಹಿಂದೆ ಶಕುಂತಲೆಯನ್ನು ಪರಿತ್ಯಜಿಸಿದ ಸಂದರ್ಭವನ್ನು ನೆನಪಿಸಿ ದು:ಖಪಡುತ್ತಿದ್ದಾನೆ. ನನ್ನಿಂದ ತಿರಸ್ಕೃತಳಾಗಿ ತನ್ನ ಜನರನ್ನು ಹಿಂಬಾಲಿಸಲು ತೊಡಗಿದಾಗ, ತಂದೆಗೆ ಸಮಾನನಾದ ಅವಳ ತಂದೆಯ ಶಿಷ್ಯನು 'ನಿಲ್ಲು' ಎಂದು ಗದರಿಸಲು, ತುಂಬುಗರ್ಭಿಣಿಯ ಪರಿತ್ಯಾಗವೆಂಬ ಕ್ರೂರಕರ್ಮದಲ್ಲಿ ತೊಡಗಿದ ನನ್ನ ಕಡೆಗೆ ತಿರುಗಿಸಿದ ಕಣ್ಣೀರು ತುಂಬಿದ ಅವಳ ದೃಷ್ಟಿ ವಿಷವನ್ನು ಹಚ್ಚಿದ ಬಾಣದ ಚೂರು ಘಾಸಿಗೊಳಿಸುವಂತೆ ನನ್ನನ್ನು ಇಂದಿಗೂ ಸುಡುತ್ತಿದೆ ಅಥವಾ ನನ್ನ ದು:ಖವನ್ನು ಹೆಚ್ಚಿಸುತ್ತಿದೆ.ಕಣ್ಣೀರು ಹರಿಯುತ್ತಿರುವುದರಿಂದ ದೃಷ್ಟಿ ಮಸುಕಾಗಿದೆ.ಶಕುಂತಲೆ ತನ್ನವರಿಂದಲೂ ದುಷ್ಯಂತನಿಂದಲೂ ತಿರಸ್ಕೃತಳಾದಾಗ ಅನುಭವಿಸಿದ ವೇದನೆಯ ದೃಶ್ಯವನ್ನು ಈ ಶ್ಲೋಕದಲ್ಲಿ  ಮನ ಕರಗುವಂತೆ ಕವಿ ಚಿತ್ರಿಸಿದ್ದಾನೆ.ದುಷ್ಯಂತನು ಇವಳು ತನ್ನ ಹೆಂಡತಿಯಲ್ಲವೆಂದು ತಿರಸ್ಕರಿಸುತ್ತಾನೆ.ಕಣ್ವಶಿಷ್ಯ ನೀನು ನಮ್ಮನ್ನು ಕೇಳಿ ವಿವಾಹವಾಗಿಲ್ಲ ಹಾಗಾಗಿ ನಿನಗೆ ಗಂಡನ ಮನೆಯಲ್ಲಿ ಕೆಲಸದವಳಾಗಿಯಾದರೂ ಇರಲೇಬೇಕು ಎಂದಾಗ ಚಿಕ್ಕಂದಿನಿಂದಲೂ ಕಣ್ವರ ಮುದ್ದಿನ ಮಗಳಾಗಿ ಬೆಳೆದ ಶಕುಂತಲೆಯ ಭಾವ ಹೇಗಿದ್ದಿರಬಹುದು.  ಶ್ಲೋಕ ಓದುವಾಗಲೇ ದು:ಖ ಒತ್ತರಿಸಿಬರುವ ರೀತಿಯ ನಿರೂಪಣೆ ಕಾಳಿದಾಸನ ರಸಪ್ರವಾಹಕ್ಕೊಂದು ನಿದರ್ಶನ._

📜ಸಂಗ್ರಹ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩