🌹ಶಾಕುಂತಲದ ಮತ್ತೊಂದು ಸುಮ:🌹

 *ಯಥಾ ಗಜೋ ನೇತಿ ಸಮಕ್ಷರೂಪೆ ತಸ್ಮಿನ್ನಪಕ್ರಾಮತಿ ಸಂಶಯ: ಸ್ಯಾತ್/ ಪದಾನಿ ದೃಷ್ಟ್ವಾ ತು ಭವೇತ್ಪ್ರತೀತಿ: ತಥಾವಿಧೋ ಮೇ ಮನಸಿ ವಿಕಾರ: ||*

 _ದುಷ್ಯಂತನು ತನ್ನ ಕೃತ್ಯದ ಬಗ್ಗೆ ಪಶ್ಚಾತ್ತಾಪಪಡುತ್ತಾ ಹೀಗೆ ಹೇಳುತ್ತಿದ್ದಾನೆ. ನನ್ನ ಬುದ್ಧಿ ವಿಕಾರಕ್ಕೆ ಒಳಗಾಗಿತ್ತು.ಅದು ಹೇಗೆಂದರೆ ಆನೆಯು ಎದುರಿಗಿದ್ದರೂ ಅದು ಇಲ್ಲವೆನ್ನುವುದು. ಮುಂದೆ ಹೋದಾಗ ಉಂಟೋ ಇಲ್ಲವೋ ಎಂದು ಸಂಶಯಪಡುವುದು.ಅದರ ಹೆಜ್ಜೆಗಳನ್ನು ಕಂಡು ಉಂಟೆಂದು ನಂಬುವುದು ಎಂಬಂತೆ ನನ್ನ ಮನವು ವಿಕಾರಗೊಂಡಿತು.ಇಲ್ಲಿ ದುಷ್ಯಂತನ ಮೂರು ಹಂತದ ಬುದ್ಧಿಯ ವಿಕಾರಗಳಿಗೆ ಜ್ಞಾನದ ಮೂರು ಅವಸ್ಥೆಗಳನ್ನು ಹೋಲಿಸಲಾಗಿದೆ.ಶಕುಂತಲೆ ಎದುರಿಗೆ ಬಂದಾಗ ಗುರುತಿಸದಿರುವುದು.ಶಕುಂತಲೆ ಹೋದ ನಂತರ ಮನದಲ್ಲಿ ಸಂಶಯ ಪಡುವುದು.ಆನೆಯ ಹೆಜ್ಜೆ ಕಂಡು ಸಂಶಯಪಟ್ಟಂತೆ ಉಂಗುರವನ್ನು ನೋಡಿ ಸ್ಮರಣೆ. ಈ ಹಂತದಲ್ಲಿ ಅವಳ ನೆನಪು ಬಂತೆಂದು ದು:ಖಪಡುತ್ತಿದ್ದಾನೆ. ನಿದರ್ಶನ ಅಲಂಕಾರ._

 📜ಸಂಗ್ರಹ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩