🌺ಅವಿಮಾರಕದ ಒಂದು ಕುಸುಮ:🌺

 *ಅದ್ಯಾಪಿ ಹಸ್ತಿಕರಶೀಕರಶೀತಲಾಂಗೀಂ ಬಾಲಾಂ ಭಯಾಕುಲವಿಲೋಲವಿಷಾದನೇತ್ರಾಮ್/ ಸ್ವಪ್ನೇಷು ನಿತ್ಯಮುಪಲಭ್ಯ ಪುನರ್ವಿಬೋಧೆ ಜಾತಿಸ್ಮರ: ಪ್ರಥಮಜಾತಿಮಿವ ಸ್ಮರಾಮಿ||*

_ಅವಿಮಾರಕನು ಅವಳ ಅಂದಿನ ಭೇಟಿಯನ್ನು  ನೆನಪುಮಾಡಿಕೊಳ್ಳುತ್ತಾನೆ. ಇಂದಿಗೂ ಆನೆಯ ಸೊಂಡಿಲಿನಿಂದ ನೀರು ಚಿಮ್ಮಿಸಿ ಒದ್ದೆಮಾಡಲ್ಪಟ್ಟ ಅಂಗವುಳ್ಳ ( ಆನೆಯು ಸೊಂಡಿಲಿನಿಂದ ನೀರು ಚೆಲ್ಲಿ ಅವಳನ್ನು ಒದ್ದೆಮಾಡಿತು ಅಂತಹ) ಭಯ, ಕಳವಳ, ಒತ್ತಡದಿಂದ ಕೂಡಿ ಚಂಚಲವಾದ ಕಣ್ಣುಗಳುಳ್ಳ, ಅವಳನ್ನು ಕನಸಿನಲ್ಲಿ ನಿತ್ಯವೂ ಪಡೆಯುತ್ತಿದ್ದರೂ ಎಚ್ಚರವಾದಾಗ ನೆನಪು ಮಾತ್ರವಿದೆ.ಹೇಗೆಂದರೆ ಹಿಂದಿನ ಜನ್ಮದ ಜಾತಿಯ ಸ್ಮರಣೆ ಉಳ್ಳವನು ಸ್ಮರಣೆ ಮಾತ್ರ ಹೊಂದಿರುತ್ತಾನೆ ಆದರೆ ಅದೇ ಜಾತಿಯನ್ನಲ್ಲ. ನನಗೂ ಹಾಗೆಯೇ ಅವಳ ನೆನಪು ಮಾತ್ರ ಆದರೆ ಅವಳು ಪ್ರತ್ಯಕ್ಷ ಕಾಣುತ್ತಿಲ್ಲ. ಉಪಮಾ ಅಲಂಕಾರ._

📜 ಸಂಗ್ರಹ ✍ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩