🌹ಶಾಕುಂತಲದ ಸುಂದರ ಮಾತು🌹

 *ಆಲಕ್ಷ್ಯದಂತಮುಕುಲಾನನಿಮಿತ್ತಹಾಸೈ: ಅವ್ಯಕ್ತವರ್ಣರಮಣೀಯ ವಚ: ಪ್ರವೃತ್ತೀನ್ /ಅಂಕಾಶ್ರಯಪ್ರಣಯಿನಸ್ತನಯಾನ್ವಹಂತೋ ಧನ್ಯಾಸ್ತದಂಗರಜಸಾ ಮಲಿನೀಭವಂತಿ||*

 _ಋಷ್ಯಾಶ್ರಮದಲ್ಲಿ ಆಡುತ್ತಿದ್ದ ಮಗುವನ್ನು ಕಂಡು ದುಷ್ಯಂತನು ಹೇಳುವ ಮಾತು- ಕಾರಣವಿಲ್ಲದೆಯೂ ನಗುತ್ತಾ ಎಳೆಮೊಗ್ಗುಗಳಂತಹ ಹಲ್ಲುಗಳನ್ನು ತೋರುತ್ತಿರುವ(ಸ್ವಲ್ಪ ಮಾತ್ರ ಕಾಣುತ್ತಿರುವ ಹಲ್ಲುಗಳು)  ತೊದಲುನುಡಿಗಳಿಂದ ಆಕರ್ಷಕವಾಗಿ ಮಾತನಾಡಲು ಪ್ರಯತ್ನಿಸುತ್ತಿರುವ( ಅಕ್ಷರ ಅಸ್ಪಷ್ಟ ವಾದರೂ ಪ್ರಯತ್ನ ಸುಂದರ)ಯಾವಾಗಲೂ ತಂದೆತಾಯಿಗಳ ತೊಡೆಯಮೇಲೆ ಕುಳಿತುಕೊಳ್ಳಲು ಬಯಸುವ ಮಕ್ಕಳನ್ನು ಎತ್ತಿಕೊಂಡ ಭಾಗ್ಯಶಾಲಿಗಳು ಮಾತ್ರ ಆ ಮಕ್ಕಳ ಮೈಯ ಧೂಳಿನಿಂದ ಮಲಿನರಾಗುತ್ತಾರೆ ( ಅವರ ಸಂಪರ್ಕ ದೇಹವನ್ನು ಮಲಿನ ಮಾಡಿದರೂ ಮನಸ್ಸಿಗೆ ಹೊಸತನವನ್ನು ತಂದುಕೊಡುತ್ತದೆ ಹೀಗಾಗಿ ಅವರೇ ಧನ್ಯರು ಎಂಬ ಭಾವ) ಅಪ್ರಸ್ತುತಪ್ರಶಂಸಾಲಂಕಾರ._


 📜ಸಂಗ್ರಹ ✍ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩