🌺ಶಾಕುಂತಲದ ಸುಂದರ ಶ್ಲೋಕ : 🌺

*ಶಾಪಾದಸಿ ಪ್ರತಿಹತಾ ಸ್ಮ್ಮತಿರೋಧಪಕ್ಷೇ ಭರ್ತರ್ಯಪೇತತಮಸಿ ಪ್ರಭುತಾ ತವೈವ/ ಛಾಯಾ ನ ಮೂರ್ಛತಿ ಮಲೋಪಹತಪ್ರಸಾದೇ ಶುದ್ಧೇ ತು ದರ್ಪಣತಲೇ ಸುಲಭಾವಕಾಶಾ||*

 _ಮಾರೀಚರು ಶಕುಂತಲೆಗೆ ಸಮಾಧಾನ ಮಾಡುತ್ತಿದ್ದಾರೆ. ಮಗಳೇ - ನಿನ್ನ ಪತಿಯು ಶಾಪದಿಂದ ನಿನ್ನ ನೆನಪಿಲ್ಲದೆ ನಿಷ್ಠುರನಾದಾಗ ಅವನಿಂದ ತಿರಸ್ಕಾರಕ್ಕೆ ಒಳಗಾದೆ. ಅವನ ಬುದ್ಧಿಮಾಂದ್ಯತೆ ಹೋದಮೇಲೆ ನಿನ್ನ ಅಧಿಕಾರ ಉಂಟಾಯಿತು. ಕನ್ನಡಿಯು ಕೊಳೆಯಿಂದ ಕೂಡಿದಾಗ ಅದರಲ್ಲಿ ಪ್ರತಿಬಿಂಬ ಮೂಡುವುದಿಲ್ಲ.ಆದರೆ ಶುದ್ಧವಾದ ಕನ್ನಡಿಯಲ್ಲಿ ಸುಲಭವಾಗಿ ಮೂಡುತ್ತದೆ. ಹಿಂದೆ ಸ್ಮರಣೆ ಇಲ್ಲದೆ ಕ್ರೂರನಾಗಿದ್ದ.ಈಗ ಕತ್ತಲೆ ಕಳೆದು ಬೆಳಕು ಬಂದಂತೆ ನಿನ್ನ ನೆನಪು ಬಂದಿದೆ. ಕೊಳೆಯನ್ನು ತೆಗೆದಾಗ ಕನ್ನಡಿ ಸ್ವಚ್ಛವಾದ ಬಿಂಬ ತೋರುವಂತೆ ಶಾಪವೆಂಬ ಕೊಳೆ ಈಗ ಹೊರಟುಹೋಗಿ ನಿನ್ನನ್ನು ಬಯಸುತ್ತಿದ್ದಾನೆ .ಇದರಲ್ಲಿ ಅವನದೇನೂ ತಪ್ಪಿಲ್ಲವೆಂಬ ಭಾವ ಕವಿಯದ್ದು. ದೃಷ್ಟಾಂತ ಅಲಂಕಾರ._

 📜ಸಂಗ್ರಹ ✍ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩