🌺ಅವಿಮಾರಕದ ಒಂದು ಕುಸುಮ:🌺

 *ಜಾಮಾತೃಸಂಪತ್ತಿಮಚಿಂತಯಿತ್ವಾ ಪಿತ್ರಾ ತು ದತ್ತಾ ಸ್ವಮನೋಭಿಲಾಷಾತ್/ ಕುಲದ್ವಯಂ ಹಂತಿ ಮದೇನ ನಾರೀ ಕೂಲದ್ವಯಂ ಕ್ಷುಬ್ದಜಲಾ ನದೀವ||*

 _ಕುಂತೀಭೋಜನ ಮನೋಗತ- ಅಳಿಯನಾಗುವವನ ರೂಪ ಗುಣ ವರ್ತನೆ ಉದ್ಯೋಗ ಮುಂತಾದ ಸಂಪತ್ತು ಅಥವಾ ಮನೆತನ ಶ್ರೀಮಂತಿಕೆ ಇವುಗಳ ಬಗ್ಗೆ ವಿಚಾರಿಸದೇ ತನಗೆ ಅನ್ನಿಸಿದ ಹಾಗೆ  ತಂದೆ ಯಾರು ಯಾರಿಗೋ ಮಗಳನ್ನು ನೀಡಿ ಮದುವೆ ಮಾಡಿದರೆ ಆ ಸ್ತ್ರೀ ಎರಡು ಕುಲದ ಶಾಂತಿಯನ್ನು ಹಾಳುಮಾಡುವಳು.ಗಂಡನ ದುರ್ವರ್ತನೆಯಿಂದ ನೊಂದು ಸಾವನ್ನು ವಿಚ್ಛೇದನೆಯನ್ನೊ ಬಯಸಿ ಅಥವಾ ಅವನ ಅಸಾಮರ್ಥ್ಯದ ದುರುಪಯೋಗದಿಂದ ಇವಳೇ ದಾರಿತಪ್ಪಿ ಕುಲ ಕೆಟ್ಟುಹೋಗುತ್ತದೆ.ಉದಾಹರಣೆಗೆ ತುಂಬಿ ಹರಿಯುವ ನದಿ ಎರಡೂ ಕಡೆಯ ದಂಡೆಗಳನ್ನು ನಾಶಪಡಿಸುವಂತೆ ಸ್ತ್ರೀಯು ಕೂಡ. ಪ್ರವಾಹ ಹೆಚ್ಚಾದಾಗ ನದಿಯ ಇಕ್ಕೆಲಗಳು ಕೊಚ್ಚಿಹೋಗುವಂತೆ ಕುಲಗಳೆರಡರ ಮನಶ್ಶಾಂತಿಯೂ ಕೂಡ.ಈ ಕಾರಣದಿಂದಲೇ ಮದುವೆಯನ್ನು ತುಂಬಾ ವಿಚಾರಿಸಿ ಮಾಡಬೇಕು.ಭಾಸನ ಈ ಶ್ಲೋಕ ಇಂದಿಗೂ ಪ್ರಸ್ತುತ._

📜ಸಂಗ್ರಹ ✍ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩