🌹ಶಾಕುಂತಲದ ಸುಂದರ ಕುಸುಮ.🌹
*ಅಧ್ಯಾಕ್ರಾಂತಾ ವಸತಿರಮುನಾಪ್ಯಾಶ್ರಮೇ ಸರ್ವಭೋಗ್ಯೇ ರಕ್ಷಾಯೋಗಾದಯಮಪಿ ತಪ: ಪ್ರತ್ಯಹಂ ಸಂಚಿನೋತಿ/ಅಸ್ಯಾಪಿ ದ್ಯಾಂ ಸ್ಪೃಶತಿ ವಶಿನಶ್ಚಾರಣದ್ವಂದ್ಚಗೀತ: ಪುಣ್ಯ: ಶಬ್ದೋ ಮುನಿರಿತಿ ಮುಹು: ಕೇವಲಂ ರಾಜಪೂರ್ವ://*
_ರಾಜನ ಬಗ್ಗೆ ಋಷಿಗಳಾಡುವ ಮಾತು. ಈ ದುಷ್ಯಂತನು ಎಲ್ಲ ಭೋಗಗಳಿಗೂ ಅನುಕೂಲವಾದ ಗೃಹಸ್ಥಾಶ್ರಮದಲ್ಲಿ ಇದ್ದಾನೆ. ( ಆಶ್ರಮಗಳಲ್ಲಿ ಶ್ರೇಷ್ಠ. ಏಕೆಂದರೆ ಬ್ರಹ್ಮಚಾರಿಗಳು ಸನ್ಯಾಸಿಗಳು ಭಿಕ್ಷೆಗಾಗಿ ಅವಲಂಬಿಸಿರುವ ಆಶ್ರಮ. ಸಕಲ ಭೋಗಗಳನ್ನು ಅನುಭವಿಸಲು ಇಲ್ಲಿ ಮಾತ್ರ ಅವಕಾಶ. ಉಳಿದ ಆಶ್ರಮಗಳಲ್ಲಿ ವಿಧಿ ನಿಷೇಧಗಳು ಹೆಚ್ಚು) ಪ್ರಜೆಗಳ ರಕ್ಷಣೆಯಲ್ಲಿ ನಿರತನಾಗಿ ಪ್ರತಿದಿನವೂ ತಪಸ್ಸಿನ ಫಲವನ್ನು ಸಂಗ್ರಹಿಸುತ್ತಾನೆ.( ಪ್ರಜಾರಂಜಕಾತ್ ರಾಜ: ಎಂಬಂತೆ ರಾಜ ಶಬ್ದವು ಸಾರ್ಥಕವಾಗುವುದು ಪ್ರಜೆಗಳನ್ನು ಸರಿಯಾಗಿ ಸಲಹಿದಾಗ. ಪ್ರಜೆಗಳ ಆದಾಯದಲ್ಲಿ ಹಾಗೂ ತಪಸ್ಸಿನ ಆರನೇ ಒಂದಂಶ ರಾಜನಿಗೆ ಸೇರುತ್ತದೆ. ಅದರಿಂದಲೇ ಅವನ ಬದುಕು. ) ಜಿತೇಂದ್ರಿಯನಾದ ಇವನ ಕೀರ್ತಿಯು ಹೊಗಳುಭಟರಿಂದ ಜೋರಾಗಿ ಹಾಡಲ್ಪಡುತ್ತಾ ಸ್ವರ್ಗದ ತುದಿಯವರೆಗೂ ಕೇಳಲ್ಪಡುತ್ತದೆ. ಇವನು ರಾಜ ಎಂಬ ವಿಶೇಷಣದಿಂದ ಕೂಡಿರುವ ವಿಶಿಷ್ಟವಾದ ಮುನಿ ಎಂಬ ಹೆಸರನ್ನು ಪಡೆದು ಸಾರ್ಥಕನಾಗಿದ್ದಾನೆ. ( ರಾಜನಾಗಿಯೂ ಋಷಿಯಂತೆ ಲೋಕರಕ್ಷಣೆ ಮಾತ್ರ ಬಯಸುವ ಉತ್ತಮ ರಾಜರ್ಷಿ ಇವನು ಹೌದು.ಹಾಗಾಗಿ ರಾಜನೂ ಹೌದು ಮುನಿಯೂ ಹೌದು. )_
📜ಸಂಗ್ರಹ. ✍ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ