🌺ಅವಿಮಾರಕದ ಉತ್ತಮ ಶ್ಲೋಕ :🌺
*ಪ್ರತಿಚ್ಛಂದಂ ಧಾತ್ರಾ ಯುವತಿವಪುಷಾಂ ಕಿಂ ನು ರಚಿತಂ ಗತಾ ವಾ ಸ್ತ್ರೀರೂಪಂ ಕಥಮಪಿ ಚ ತಾರಾಧಿಪರುಚಿ:/ ವಿಹಾಯ ಶ್ರೀ: ಕೃಷ್ಣಂ ಜಲಶಯನಸುಪ್ತಂ ಕೃತಭಯಾ ಧೃತಾನ್ಯಸ್ತ್ರೀರೂಪಂ ಕ್ಷಿತಿಪತಿಗೃಹೇ ವಾ ನಿವಸತಿ||*
_ಅವಿಮಾರಕನು ಅವಳ ರೂಪವನ್ನು ನೆನೆಯುತ್ತಿರುವನು. ಬ್ರಹ್ಮನು ಯುವತಿಯರ ರೂಪ ಹೀಗೆ ಇರಬೇಕೆಂದು ಒಂದು ಆದರ್ಶ ಪ್ರತಿಕೃತಿಯೆಂಬಂತೆ ಇಂತಹ ಸುಂದರಿಯನ್ನು ಸೃಷ್ಟಿಸಿರುವನೆ! ಅಥವಾ ಚಂದ್ರನ ಚಂದದ ಕಾಂತಿಯು ಸ್ತ್ರೀ ರೂಪವನ್ನು ತಾಳಿ ನನ್ನೆದುರು ಬಂದಿತೇ! ಅಥವಾ ತ್ರಿಲೋಕಸುಂದರಿ ಸಮುದ್ರದಲ್ಲಿ ಜನ್ಮ ತಾಳಿದ ಲಕ್ಷ್ಮಿಯು ಕ್ಷೀರಸಾಗರದಲ್ಲಿ ಮಲಗಿದ ವಿಷ್ಣುವನ್ನು ಬಿಟ್ಟು (ವಿಷ್ಣುವು ಹುಡುಕಿಯಾನು)ಎಂಬ ಹೆದರಿಕೆಯಿಂದ ಬೇರೆ ಸ್ತ್ರೀ ರೂಪ ಧರಿಸಿ ಈ ರಾಜನ ಮನೆಯಲ್ಲಿ ವಾಸಮಾಡುತ್ತಿರುವಳೇ! ನಿಜವಾಗಲೂ ಅವಳ ರೂಪ ಅದ್ಭುತ ಅದಕ್ಕನುಗುಣವಾದ ಯೌವನ ಅದಕ್ಕನುಗುಣವಾದ ಕೋಮಲತೆ! ಇಲ್ಲಿ ಮೂರು ಉತ್ಪ್ರೇಕ್ಷೆಗಳು ಒಟ್ಟಿಗೆ ಕಂಡುಬರುತ್ತವೆ.ಶಿಖರಿಣೀ ವೃತ್ತ._
📜ಸಂಗ್ರಹ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ