🌹ಶಾಕುಂತಲದ ಸುಂದರ ಪುಷ್ಪ🌹  
 *ಕೃತ್ಯಯೋರ್ಭಿನ್ನದೇಶತ್ವಾತ್ ದ್ವೈಧೀಭವತಿ ಮೇ ಮನ: / ಪುರ: ಪ್ರತಿಹತಂ ಶೈಲೇ ಸ್ರೋತ: ಸ್ರೋತೋವಹೋ ಯಥಾ //*      

                   _ದುಷ್ಯಂತನು ನುಡಿಯುವ ಮಾತು. ಒಂದೆಡೆ ಋಷಿಗಳು ರಾಕ್ಷಸರ ತೊಂದರೆಯನ್ನು ನಿವಾರಿಸಲು ನಿವೇದಿಸಿಕೊಂಡಿದ್ದಾರೆ. ಇನ್ನೊಂದೆಡೆ ತಾಯಿ ಪುತ್ರಪಿಂಡಪಾಲನವೆಂಬ ವ್ತತಾಚರಣೆಗೆ ಶೀಘ್ರ ಹಿಂತಿರುಗಿ ಬರುವಂತೆ ಆಜ್ಞಾಪಿಸಿದ್ದಾಳೆ. ಹೀಗಿರಲಿ ಏನು ಮಾಡಲಿ ಎಂದೇ ತೋಚುತ್ತಿಲ್ಲ. ಮಾಡಬೇಕಾದ ಈ ಎರಡು ಕಾರ್ಯಗಳು ಬೇರೆ ಬೇರೆ ಪ್ರದೇಶಗಳಲ್ಲಿರುವುದರಿಂದ ನನ್ನ ಮನಸ್ಸು ಎದುರಿಗೆ ಬಂದ ಬಂಡೆಗೆ ಅಪ್ಪಳಿಸಿ ಎರಡಾದ ನದಿಯ ಪ್ರವಾಹದಂತೆ ಹೋಳಾಗಿದೆ. ಎರಡೂ ಮಾಡಲೇಬೇಕಾದ ಅವಶ್ಯಕ ಕಾರ್ಯಗಳು. ಯಾವುದನ್ನೂ ಬಿಡುವ ಹಾಗಿಲ್ಲ. ನದಿಯ ಪ್ರವಾಹವು ಎದುರಿಗೆ ದೊಡ್ಡ ಬಂಡೆ ಸಿಕ್ಕಿದಾಗ ಹೇಗೆ ಎರಡಾಗಿ ಹರಿಯುವುದೋ ನನಗೆ ಮನವು ಎರಡರ ಬಗೆಗೂ ಆಲೋಚಿಸುತ್ತಿದೆ.ನಮ್ಮ ಸ್ಥಿತಿಯೂ ಕೆಲವೊಮ್ಮೆ ದುಷ್ಯಂತನಂತೆಯೇ ಆಗುತ್ತದೆ. ಅಗತ್ಯ ಮಾಡಬೇಕಾದ ಕೆಲಸಗಳನೇಕವಿದ್ದಾಗ ಮನವು ಯೋಚಿಸುವುದನ್ನೇ ನಿಲ್ಲಿಸುತ್ತದೆ ಅಥವಾ ಎಲ್ಲದರ ಬಗ್ಗೆಯೂ ಯೋಚಿಸುತ್ತದೆ ಅಲ್ಲವೇ._                          

*ಸಂಗ್ರಹ ✍ಶ್ರೀನಿಧಿ ಅಭ್ಯಂಕರ್.*

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩