🌹ಶಾಕುಂತಲದ ನುಡಿಮುತ್ತು.🌹
*ಪ್ರಥಮೋಪಕೃತಂ ಮರುತ್ವತ: ಪ್ರತಿಪತ್ಯಾ ಲಘು ಮನ್ಯತೇ ಭವಾನ್ / ಗಣಯತ್ಯವದಾನ ವಿಸ್ಮಿತೋ ಭವತ: ಸೋಪಿ ನ ಸತ್ಕ್ರಿಯಾಗುಣಾನ್||*
_ಇಂದ್ರನು ಮಾಡಿದ ಸತ್ಕಾರದ ಮಾನದಿಂದ ದುಷ್ಯಂತನು ತಾನು ಮಾಡಿದ ಉಪಕಾರ ಕಡಿಮೆಯಾಯಿತೆಂದು ಭಾವಿಸಿದನು. ಆದರೆ ದುಷ್ಯಂತನ ಉಪಕಾರವನ್ನು ಕಂಡ ಇಂದ್ರನು ತಾನು ಮಾಡಿದ ಸತ್ಕಾರ ಸಾಲದೆಂದು ಭಾವಿಸಿದನು. ದೇವತೆಗಳ ಕೋರಿಕೆಯಂತೆ ರಾಕ್ಷಸರನ್ನು ಮಟ್ಟಹಾಕಿ ಇಂದ್ರನಿಂದ ಅರ್ಧಾಸನದಲ್ಲಿ ಕುಳ್ಳಿರಿಸಿ ನಾನಾವಿಧವಾಗಿ ಸತ್ಕೃತನಾದ ದುಷ್ಯಂತನು ತಾನು ಅಷ್ಟೊಂದು ಸತ್ಕಾರ ಪಡೆದು ಹೆಚ್ಚು ಪ್ರಯೋಜನ ಮಾಡಿಕೊಡಲಿಲ್ಲವಲ್ಲಾ ಎಂದು ಮಾತಲಿಯೆದುರು ಹೇಳಿದಾಗ ಮಾತಲಿ ಹೇಳುವ ಮಾತು. ನಾವು ಹೆಚ್ಚು ಕಾರ್ಯ ಮಾಡದೇ ಹೆಚ್ಚಿನ ಗೌರವವನ್ನು ಸತ್ಕಾರವನ್ನು ಅಪೇಕ್ಷಿಸುತ್ತೇವೆ. ನಮ್ಮ ಮೇಲಿನವರು ಎಷ್ಟು ಮಾಡಿದರೂ ನಮ್ಮನ್ನು ಉಪೇಕ್ಷಿಸುತ್ತಾರೆ .ಇಂತಹ ಮನಸ್ಥಿತಿ ಇಬ್ಬರಲ್ಲೂ ಹೊರಟುಹೋದಾಗ ನಾವು ಉನ್ನತಿಯನ್ನು ಗಳಿಸಲು ಸಾಧ್ಯವೇನೋ? ನಮ್ಮ ಕೆಲಸ ನಾವು ಮಾಡುತ್ತಾ ನಿರೀಕ್ಷೆಗಳನ್ನು ನಿಯಂತ್ರಣ ಮಾಡಿದರೆ ದುಷ್ಯಂತ ಮತ್ತು ಇಂದ್ರರ ವಿಶಾಲಮನೋಭಾವ ನಮ್ಮದಾಗಬಹುದು._
📜ಸಂಗ್ರಹ ✍ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ