🌺ಅವಿಮಾರಕದ ಒಂದು ಉತ್ಸಾಹ ಉಂಟು ಮಾಡುವ ಶ್ಲೋಕ 🌺
*ಯತ್ನೇ ಕೃತೇ ಯದಿ ನ ಸಿಧ್ಯತಿ ಕೋತ್ರ ದೋಷ: ಕೋ ವಾ ನ ಸಿಧ್ಯತಿ ಮಮೇತಿ ಕರೋತಿ ಕಾರ್ಯಮ್/ ಯತ್ನೈ: ಶುಭೈ: ಪುರುಷತಾ ಭವತೀಹ ನೃಣಾಂ ದೈವಂ ವಿಧಾನಮನುಗಚ್ಛತಿ ಕಾರ್ಯಸಿದ್ಧಿ:||*
_ನಾಯಕನು ಪ್ರಯತ್ನದ ಬಗ್ಗೆ ನುಡಿಯುವ ಮಾತು. ನಾವು ಮಾಡಬೇಕಾದ ಕಾರ್ಯದಲ್ಲಿ ಎಷ್ಟು ಪ್ರಯತ್ನಪಟ್ಟರೂ ಕಾರ್ಯಸಿದ್ಧಿ ಆಗದೇ ಇದ್ದರೆ ಅದರಲ್ಲಿ ನಮ್ಮ ತಪ್ಪೇನಿಲ್ಲ. ಪ್ರಯತ್ನ ಮಾಡುವುದಷ್ಟೇ ಕರ್ತವ್ಯ. ಅಥವಾ ಯಾರಾದರೂ ನನ್ನ ಕೆಲಸ ಸರಿಯಾಗಲಾರದೆಂದು ಪ್ರಯತ್ನ ಪಡುವರೇ! ಸಮಯ ಸಂದರ್ಭದಲ್ಲಿ ಮಾಡುವ ಹೆಚ್ಚಿನ ಪರಿಶ್ರಮದ ಪ್ರಯತ್ನಗಳು ಪೌರುಷವನ್ನು ಸಾರುತ್ತವೆ. ಆದರೆ ಕಾರ್ಯಸಾಧನೆ ಮಾತ್ರ ಅದೃಷ್ಟವನ್ನು ಅವಲಂಬಿಸಿರುತ್ತದೆ. ತಮ್ಮ ಪ್ರಯತ್ನ ಹೆಚ್ಚಿದ್ದಾಗಲೂ ಕೆಲವೊಮ್ಮೆ ವೈಫಲ್ಯ ಅನುಭವಿಸಲು ವಿಧಿಯೇ ಕಾರಣ. ಹಾಗಂತ ಪ್ರಯತ್ನ ವಿಮುಖರಾಗಬಾರದೆಂಬ ಉತ್ತಮ ಸಂದೇಶ ಈ ಶ್ಲೋಕದಲ್ಲಿದೆ._
📜ಸಂಗ್ರಹ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ