🌺ಅವಿಮಾರಕದ ಮತ್ತೊಂದು ಆಕರ್ಷಕ ಶ್ಲೋಕ :🌺
*ಸಂಪೀಡ್ಯತೆ ಪರಿಜನೇನ ಶನೈರ್ವದೇತಿ ಸಂವಿಗ್ನವದ್ಬವತಿ ಭೂಷಣನಿಸ್ವನೇನ/ ಸಂಗಂ ವದತ್ಯಸುಖದಂ ಮದನಾಭಿಭೂತ: ಸಂಕೇತಮಿಚ್ಛತಿ ಚ ನೇಚ್ಛತಿ ನಾಭಿಗಂತುಮ್||*
_ಅವಿಮಾರಕನು ರಾತ್ರಿ ಸಂಚರಿಸುತ್ತಾ ನಿಧಾನಕ್ಕೆ ಗುಟ್ಟಾಗಿ ಮಾತನಾಡುತ್ತಿರುವ ಒಬ್ಬ ಬ್ರಹ್ಮಚಾರಿಯನ್ನು ನೋಡಿ ನುಡಿಯುವ ಮಾತು. ಸೇವಕರಿಂದ ನಿಧಾನಕ್ಕೆ ಮಾತನಾಡು ಯಾರಾದರೂ ಕೇಳಿಸಿಕೊಂಡಾರೆಂದು ಒತ್ತಾಯಿಸಲ್ಪಟ್ಟಿದ್ದಾನೆ. ( ಸೇವಕರೊ ಸ್ನೇಹಿತರೊ) ಕಾಮಿನಿಯ ಭೂಷಣಗಳಾದ ಬಳೆ, ಗೆಜ್ಜೆ ಮುಂತಾದವುಗಳ ಧ್ವನಿಯು ಅವನಿಗೆ ಉದ್ವಿಗ್ನತೆಯನ್ನು ಉಂಟುಮಾಡುತ್ತಿದೆ. ಆದರೆ ಪರವನಿತೆಯ ಸಂಗವು ಅಹಿತವೆಂದು ಮನವು ಎಚ್ಚರಿಸುತ್ತಿದೆ. ಮನ್ಮಥ ಪೀಡಿತನಾದ ಅವನು ಅವಳನ್ನು ಭೇಟಿಯಾಗಲು ಸಂಕೇತವನ್ನು ಬಯಸುತ್ತಿದ್ದಾನೆ. ಯಾವುದಾದರೂ ಪ್ರದೇಶವನ್ನು ಹುಡುಕುತ್ತಿದ್ದಾನೆ. ಆದರೆ ಅಲ್ಲಿಗೆ ಹೋಗಲೊಲ್ಲನು. ಒಬ್ಬ ಹೇಡಿ ಕಾಮುಕನ ವರ್ಣನೆ ಸಂ ಎಂದು ನಾಲ್ಕು ಪಾದಗಳಲ್ಲಿಯೂ ಆರಂಭಿಸಿ ಸುಂದರವಾಗಿ ಮಾಡಿದ್ದಾನೆ ಭಾಸ._
📜ಸಂಗ್ರಹ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ