ಸಂಸ್ಕೃತ ವಿಶೇಷ ಶ್ಲೋಕಗಳು ೩
🦚ಸಂಸ್ಕೃತ ಸಾಹಿತ್ಯದ ವಿಶಿಷ್ಟ ಶ್ಲೋಕಗಳು🦚
ಭಾಗ-೩
*दोषाणां च गुणानां च प्रमाणं प्रविभागतः । कश्चिदर्थमभिप्रेत्य सा सङ्ख्येत्युपधार्यताम् ।।*
_ದರ್ಶನಗಳ ಬಗ್ಗೆ ಸಾಕಷ್ಟು ಜನರಿಗೆ ಸಾಕಷ್ಟು ವಿಷಯಗಳು ಗೊತ್ತಿರುತ್ತವೆ. ಆಸ್ತಿಕ ನಾಸ್ತಿಕ ದರ್ಶನಗಳೆಂದು ವಿಭಾಗ ಮಾಡಿ ಸಾಂಖ್ಯವೂ ಆಸ್ತಿಕವೂ ನಾಸ್ತಿಕವೂ ಇದೆಯೆಂದು ಬಹಳ ಮಂದಿ ಸಾರುತ್ತಾರೆ. ಎಲ್ಲೋ ನಾರಾಯಣಾಚಾರ್ಯರಂತಹ ಕೆಲವರು ಸೇಶ್ವರ ಸಾಂಖ್ಯವೊಂದೇ ಇರುವುದು ಎಂದು ಪ್ರಮಾಣವನ್ನೂ ನೀಡುತ್ತಾರೆ. ಇರಲಿ ಶ್ಲೋಕ ಬರೆದು ಇವೆಲ್ಲ ತಲೆಹರಟೆ ಯಾಕೆ ಎಂದು ಯೋಚಿಸದಿರಿ. ಸಾಂಖ್ಯ ಅಂದರೆ ಸಾಮಾನ್ಯವಾಗಿ ಜನರ ಅಭಿಪ್ರಾಯ ಸಂಖ್ಯಾಶಾಸ್ತ್ರ ಎಂದು. ಆಂಗ್ಲದ statistics ಗೆ ಪರ್ಯಾಯ ಎಂಬುದಾಗಿ. ಇಪ್ಪತ್ತೈದು ತತ್ವಗಳನ್ನು ಪ್ರಧಾನವಾಗಿ ಪ್ರತಿಪಾದಿಸುವ ಶಾಸ್ತ್ರವೆಂದು ಅನೇಕ ವಿದ್ವಾಂಸರೂ ಹೀಗೆಯೇ ಹೇಳುತ್ತಾರೆ. ಆದರೆ ಅದು ಅರ್ಧ ಸತ್ಯ ಅಥವಾ ಸತ್ಯ ಬೇರೆಯದೇ ಆಗಿದೆ. ಮಹಾಭಾರತದ ಶ್ಲೋಕ ಇದು. ದೋಷಗಳು, ಗುಣಗಳು, ಪ್ರಮಾಣಗಳು, ಪ್ರಮೇಯಗಳು ಹೀಗೆ ಅನೇಕ ದಾರ್ಶನಿಕ ವಿಚಾರಗಳ ಪ್ರತಿಪಾದನೆಯೇ ಸಂಖ್ಯೆ. ಅದಕ್ಕೆ ಸಂಬಂಧಿಸಿದ ಶಾಸ್ತ್ರ ಸಾಂಖ್ಯ. ದರ್ಶನಗಳಲ್ಲಿ ಅತ್ಯಂತ ಪ್ರಾಚೀನವೆಂಬ ಹೆಗ್ಗಳಿಕೆಯೂ ಇದಕ್ಕಿದೆ. ಕಪಿಲ ಮಹರ್ಷಿ ಪ್ರಣೀತವಾದುದಿದು. ಬುದ್ಧನ ಗುರುಗಳಾದ ಆರಾಡಾಚಾರ್ಯರು ಸಾಂಖ್ಯ ಶಾಸ್ತ್ರದ ಪ್ರತಿಪಾದಕರು ಎಂದು ಅಶ್ವಘೋಷ ಅಭಿಪ್ರಾಯಪಡುತ್ತಾನೆ. ಸಂಸ್ಕೃತ ಭಾಷೆಯ ಶಬ್ದಗಳಿಗೆ ಮೇಲ್ನೋಟಕ್ಕೆ ಕಾಣುವ ಅರ್ಥವು ಹಾಗೂ ಮೂಲ ಅರ್ಥವು ಭಿನ್ನವಾಗಿರುವುದು ಭಾಷಾ ವೈಶಿಷ್ಟ್ಯ._
ಸಂಗ್ರಹ; ಶ್ರೀನಿಧಿ ಅಭ್ಯಂಕರ್.
ಎಲ್ಲಾ ಲೇಖನಗಳಿಗೆ ಅವಲೋಕಿಸಿ http://shreenidhiabhyankar.blogspot.in/
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ