🌺ಅವಿಮಾರಕದ ಒಂದು ಸುಮ🌺

*ಪ್ರಚ್ಛನ್ನರೂಪಸ್ತ್ವಶನಿ: ಕಥಂಚಿತ್ ಖಡ್ಗೀಕೃತ: ಸ್ಯಾತ್ತು ತಡಿತ್ಕಲಾಪ: | ನಿರ್ಭರ್ತ್ಸಯನ್ ಸೂರ್ಯಕೃತಾಂ ಪ್ರದೀಪ್ತಿಂ ವನಂ ದವಾಗ್ನಿ: ಸಹಸಾಭ್ಯುಪೈತಿ ||*

_ಭಾಸನಂತಹ ಕವಿಗಳಿಗೆ ಒಂದೊಂದು ವಸ್ತುವಿನಲ್ಲಿಯೂ ಸಾಕಷ್ಟು ಮಹತ್ವ ಕಾಣುತ್ತದೆ. ಅದಕ್ಕೆ ನಿದರ್ಶನ ಈ ಶ್ಲೋಕ. ವಿದ್ಯಾಧರನನ್ನು ಭೇಟಿ ಮಾಡಿದ ಅವಿಮಾರಕನು ಅವನ ಕೋರಿಕೆಯಂತೆ ಆತ್ಮಹತ್ಯೆಯ ಪ್ರಯತ್ನ ಕೈ ಬಿಡುತ್ತಾನೆ. ಅವನಿಂದ ಮಾಯಾಶಕ್ತಿಯ ಉಂಗುರವನ್ನು ಪಡೆಯುತ್ತಾನೆ. ಹಾಗೆಯೇ ಅದರ ಪ್ರಭಾವವನ್ನು ಪರೀಕ್ಷಿಸುತ್ತೇನೆಂದು ಹೇಳಿದಾಗ ವಿದ್ಯಾಧರನು ತನ್ನ ಖಡ್ಗವನ್ನು ಹಿಡಿದುಕೊಳ್ಳಲು ಹೇಳುತ್ತಾನೆ. ಆಗ ನಾಯಕ ನುಡಿಯುವ ಸಾಲು. ಇದು ಸಾಮಾನ್ಯವಲ್ಲ. ಈ ಖಡ್ಗವು ಅಡಗಿರುವ ಅಥವಾ ವೇಷಾಂತರ ತಾಳಿರುವ ಇಂದ್ರನ ವಜ್ರಾಯುಧವೇ ಆಗಿದೆ. ಅಷ್ಟು ಬಲಿಷ್ಠವಾಗಿದೆ.ಅಥವಾ ಮಿಂಚನ್ನೆಲ್ಲಾ ಕಲೆಹಾಕಿ ಕಡೆದ ಪರಿಣಾಮ ಈ ಖಡ್ಗ ಹುಟ್ಟಿದೆಯೇನೋ! ಮಿಂಚಿನಂತೆ ಹೊಳೆಯುತ್ತಿದೆ.ಈ ಖಡ್ಗವು ಎಷ್ಟು ಹೊಳಪಿಂದ ಕೂಡಿದೆಯೆಂದರೆ ಸೂರ್ಯನ ಬೆಳಕನ್ನೂ ಮರೆಮಾಚುವ ಹೊತ್ತು ಉರಿಯುತ್ತಿರುವ ಕಾಡ್ಗಿಚ್ಚಿನಂತೆ ತೋರುತ್ತಿದೆ. ಬರಿಯ ಆಯುಧವಾಗದೇ ತುಂಬಾ ಪ್ರಭಾವಶಾಲಿಯಾಗಿಯೂ ಈ ಖಡ್ಗವು ನನ್ನನ್ನು ಆಕರ್ಷಿಸಿದೆ. ಹೀಗೆ ಸಾಮಾನ್ಯ ಖಡ್ಗವನ್ನೂ ಅಸಾಮಾನ್ಯವೆಂಬಂತೆ ವರ್ಣಿಸುವ ಭಾಸನ ಗುಣ ನಮಗೆ ಮಾದರಿ. ನಾವು ಗುಣವಂತರ ಗುಣವನ್ನೂ ಗುರುತಿಸದೆ ಕಣ್ಣಿದ್ದೂ ಕುರುಡರಾಗಿದ್ದೇವೆ. ಪ್ರತಿ ವ್ಯಕ್ತಿಯ ಉತ್ತಮ ಗುಣಗಳನ್ನು ಸ್ವೀಕರಿಸಿ ದುರ್ಗುಣಗಳನ್ನು ಗಮನಿಸದೇ ಮುನ್ನಡೆಯೋಣ ಎಂಬ ಸಂದೇಶವೂ ಅಡಕವಾಗಿದೆ. ಖಡ್ಗದ ಕೆಲಸ ಕೊಲ್ಲವುದು ಅದನ್ನು ಹೇಳದೇ ಭಾಸ ಉಳಿದ ಮಹಿಮೆಯನ್ನು ಮಾತ್ರ ಹೇಳಿರುವುದು ಅವನ ಗುಣಗ್ರಾಹಿತ್ವಕ್ಕೆ ಸಾಕ್ಷಿ._

📜ಸಂಗ್ರಹ✍ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩