🌺ಅವಿಮಾರಕದ ಮತ್ತೊಂದು ಆಕರ್ಷಣೆಯ ಶ್ಲೋಕ 🌺
*ರಾಗಂ ವಿಜೃಂಭಯತಿ ಸಂಶ್ರಯತೇ ಪ್ರಮಾದಂ ದೋಷಾನ್ ನ ಚಿಂತಯತಿ ಸಾಹಸಮಭ್ಯೈಪೈತಿ/ ಸ್ವಚ್ಛಂದತೋ ವ್ರಜತಿ ನೇಚ್ಛತಿ ನೀತಿಮಾರ್ಗಂ ಬುದ್ಧಿಂ ಶುಭಾಂ ಸುವಿದುಷಾಮವಶೀಕರೋತಿ ||*
_ತಾರುಣ್ಯದ ದಿನಗಳ ಕಷ್ಟವನ್ನು ವರ್ಣಿಸುತ್ತಿರುವನು ನಾಯಕ. ಈ ವಯಸ್ಸಿನಲ್ಲಿ ಪ್ರಿಯತಮೆಯ ಮೇಲಿನ ಪ್ರೀತಿ ದಿನದಿಂದ ದಿನಕ್ಕೆ ಹೆಚ್ಚುತ್ತಲಿದೆ. ಅವಸರದ ತೀರ್ಮಾನವನ್ನೆ ಅಪೇಕ್ಷಿಸುತ್ತಿದೆ. ನಿಧಾನವಾಗಿ ಕುಳಿತು ಆಲೋಚಿಸುವ ವ್ಯವಧಾನವಿಲ್ಲ. ಮುಂದೆ ಒದಗಬಹುದಾದ ಅನರ್ಥಗಳ ಬಗ್ಗೆ ಯೋಚಿಸುವುದೇ ಇಲ್ಲ. ಹೊಸ ಸಾಹಸ ಮಾಡಲು ಹವಣಿಸುತ್ತಿದೆ. ಸ್ವಚ್ಛಂದವಾಗಿ ವಿಹರಿಸುತ್ತಿದೆ. ಸಂಪ್ರದಾಯ ಶಾಸ್ತ್ರಗಳ ದಾರಿಯನ್ನು ಬಯಸುವುದಿಲ್ಲ. ತಾನು ನಡೆದಿದ್ದೇ ದಾರಿ ಎಂಬಂತೆ ವರ್ತಿಸುತ್ತಿದೆ. ಇಂತಹ ತಾರುಣ್ಯದ ಬುದ್ಧಿಯು ಒಳ್ಳೆಯ ಅಥವಾ ವಿದ್ವಾಂಸರ ,ತಿಳಿದವರನ್ನೂ ಕೂಡ ತನ್ನ ತೆಕ್ಕೆಯಲ್ಲಿ ಬಂಧಿಸುತ್ತದೆ. ಅವರ ಸ್ವತಂತ್ರ ಚಿಂತಿಸುವ ಶಕ್ತಿಯನ್ನು ಕಸಿಯುತ್ತದೆ. ಭಾಸನು ನೂರಾರು ವರ್ಷಗಳ ಹಿಂದೆಯೇ ಈ ಮಾತನ್ನು ಹೇಳಿ ತಾರುಣ್ಯದ ಪ್ರಭಾವವನ್ನು ವರ್ಣಿಸಿದ ಪರಿ ಇಂದಿಗೂ ನಮಗೂ ನಮ್ಮ ಮುಂದಿನವರಿಗೂ ಎಷ್ಟು ಪ್ರಸ್ತುತವಲ್ಲವೇ!_
📜ಸಂಗ್ರಹ ✍ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ