🌺ಅವಿಮಾರಕದ ಸುಂದರ ಶ್ಲೋಕ :   🌺

                           *ನ ತಥಾ ರತ್ನಮಾಸಾದ್ಯ ಸುಜನ: ಪರಿತುಷ್ಯತಿ| ಯಶಾ ತತ್ ತದ್ಗತಾಕಾಂಕ್ಷೇ ಪಾತ್ರೇ ದತ್ವಾ ಪ್ರಹೃಷ್ಯತಿ||*

 _ವಿದ್ಯಾಧರನು ನಾಯಕನಿಗೆ ಮಾಯಾ ಉಂಗುರವನ್ನು ನೀಡುತ್ತಾನೆ. ಸ್ವೀಕರಿಸಿದ ಅವಿಮಾರಕನು ಅನುಗೃಹೀತನಾದೆ ಎನ್ನುತ್ತಾನೆ. ಆಗ ವಿದ್ಯಾಧರನು ನಾನೇ ನಿನ್ನಿಂದ ಅನುಗ್ರಹಿಸಲ್ಪಟ್ಟೆ ಎನ್ನುತ್ತಾ ಈ ಸಾಲನ್ನು ನುಡಿಯುವನು. ಸಜ್ಜನರು ರತ್ನವನ್ನು ಪಡೆದರೂ ಅಷ್ಟು ಸಂತೋಷಪಡುವುದಿಲ್ಲ. ಎಷ್ಟೆಂದರೆ ಆ ರತ್ನದ ಮೇಲೆ ಆಸೆ ಇಲ್ಲದೆ ಅವಶ್ಯಕತೆ ಇರುವ ವ್ಯಕ್ತಿಗೆ ಕೊಟ್ಟಾಗ ಖುಷಿಪಡುವಷ್ಟು. ತಾವು ಪಡೆದು ಆನಂದಿಸುವುದಕ್ಕಿಂತಲೂ ಯೋಗ್ಯವ್ಯಕ್ತಿಗೆ ಅಥವಾ ಅವಶ್ಯಕತೆ ಇದ್ದವರನ್ನು ಇದು ಸೇರಿತಲ್ಲ ಎಂಬ ಆನಂದವೇ ಹೆಚ್ಚಿನ ಸುಖವನ್ನು ತಂದುಕೊಡುತ್ತದೆ. ಇದನ್ನೇ ಹೇಳಿದ್ದು 'ವೃದ್ಧಂ ಪಾತ್ರೇಷು ನಿಕ್ಷಿಪೇತ್„ ಎಂಬುದಾಗಿ. ನಮ್ಮಲ್ಲಿ ಹೆಚ್ಚಿರುವುದನ್ನು ಯೋಗ್ಯತೆ ಇರುವಲ್ಲಿ ಕೊಟ್ಟರೆ ಅದು ಆನಂದಜನಕವಾಗುತ್ತದೆ. ಇಲ್ಲಿ ಪ್ರಕೃತ ವಿದ್ಯಾಧರನ ಬಳಿ ಇದ್ದ ಅಮೂಲ್ಯ ರತ್ನ ಅಥವಾ ಉಂಗುರಕ್ಕೆ ಇಷ್ಟು ದಿನ ವಿಶೇಷವಾದ ಕಾರ್ಯ ವಾ ಪ್ರಯೋಜನ ಇರಲಿಲ್ಲ. ಆದರೆ ಅದು ಅವಿಮಾರಕನ ಪ್ರಿಯಳನ್ನು ಸೇರಲು ಸಹಾಯಕವಾಗಿ ಸಾರ್ಥಕವಾಯಿತು. ನಮ್ಮಲ್ಲಿ ಇಂತಹ ಗುಣ ಬೆಳೆಸಿಕೊಳ್ಳೊಣ. ನಮಗಿಂತ ಇನ್ನೊಬ್ಬರು ಏನಾದರೂ ಪ್ರಶಸ್ತಿ ಗೌರವ ಸನ್ಮಾನ ಪಡೆದರೆ ಯೋಗ್ಯರನ್ನು ಆಶ್ರಯಿಸಿತೆಂದು ಆನಂದಿಸೋಣ ಮತ್ಸರ ಬೇಡ. ನಮ್ಮಲ್ಲಿ ಇದ್ದ ವಿದ್ಯೆ ಧನ ವಸ್ತುಗಳನ್ನು ಇನ್ನೊಬ್ಬರ ಜೊತೆ ಹಂಚಿಕೊಂಡು ನಾವೂ ಅವರ ಜೊತೆ ಸಂತೋಷದಲ್ಲಿ ಭಾಗಿಯಾಗೊಣ ಎಂಬ ಭಾವ._      

                          📃ಸಂಗ್ರಹ ✍ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩