🌺ಅವಿಮಾರಕದ ಒಂದು ಸುಂದರ ಶ್ಲೋಕ🌺
*गर्भस्था इव मोहमभ्युपगता: सर्वा: प्रजा निद्रया प्रासादा: सुखसुप्तनीरवजना: ध्यानं प्रविष्टा इव। प्रग्रस्ता इव संचितेन तमसा स्पर्शानुमेया नगा अन्तर्धानमिवोपयाति सकलं प्रच्छन्नरूपं जगत्।।*
_ಅವಿಮಾರಕದ ಮತ್ತೊಂದು ಸುಮ- ನಾಯಕನು ಮಧ್ಯರಾತ್ರಿಯ ನೀರವತೆಯನ್ನು ಚಂದದ ಪದಗಳಲ್ಲಿ ವರ್ಣಿಸುತ್ತಿದ್ದಾನೆ. ಎಲ್ಲ ಪ್ರಜೆಗಳು ಈ ಸಮಯದಲ್ಲಿ ಗರ್ಭದಲ್ಲಿರುವ ಮಕ್ಕಳಂತೆ ಪ್ರಜ್ಞೆಯಿಂದ ವಿಮುಖರಾಗಿದ್ದಾರೆ. (ಗಾಢ ನಿದ್ರೆಯ ಕಾರಣದಿಂದ) ರಾಜನ ಮನೆಗಳಲ್ಲಿ ಸುಖದಿಂದ ಮಲಗಿದ ಜನರಿಂದಾಗಿ ಆ ಮನೆಗಳು ಧ್ಯಾನ ಮಾಡುವಂತೆ ತೋರುತ್ತಿವೆ. ( ಧ್ಯಾನ ಮಾಡುವ ಪ್ರದೇಶದ ಶಾಂತ ಸ್ಥಿತಿ ಇಲ್ಲಿದೆ) ಗುಂಪು ಗುಂಪಾಗಿ ಓಡಾಡುವ ಕತ್ತಲೆಯಿಂದ ಮರಗಿಡಗಳೆಲ್ಲವೂ ನುಂಗಿಹಾಕಲ್ಪಟ್ಟು ಮುಟ್ಟಿದರೆ ಮಾತ್ರ ಗುರುತು ಸಿಗುವಂತಿವೆ. ( ಕತ್ತಲು ಅಷ್ಟು ಗಾಢವಾಗಿ ವ್ಯಾಪಿಸಿದೆ) ಹೀಗೆ ಜಗವೆಲ್ಲವೂ ಕತ್ತಲೆಯ ಪರಿಣಾಮ ಮಾಯವಾಗಿದೆಯೇನೋ ಅಥವಾ ಅಡಗಿ ಕುಳಿತಿರುವುದೋ ಎಂಬಂತಿದೆ ಈ ಸಮಯ. ಎಷ್ಟೊಂದು ನೈಜ ಚಿತ್ರಣ ಭಾಸನ ಮಾತುಗಳಲ್ಲಿ._
📜ಸಂಗ್ರಹ ✍ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ