🌹ಶಾಕುಂತಲದ ಸೌರಭ:🌹

 *ಸ್ಮೃತಿಭಿನ್ನಮೋಹತಮಸೋ ದಿಷ್ಟ್ಯಾ ಪ್ರಮುಖೇ ಸ್ಥಿತಾಸಿ ಮೇ ಸುಮುಖಿ/ ಉಪರಾಗಾಂತೇ ಶಶಿನ: ಸಮುಪಗತಾ ರೋಹಿಣೀ ಯೋಗಮ್||*

_ದುಷ್ಯಂತನು ಶಕುಂತಲೆಯನ್ನು ಕಂಡು ಈ ಮಾತನ್ನು ನುಡಿಯುತ್ತಿದ್ದಾನೆ. ಸುಂದರಿ ಅದೃಷ್ಟದಿಂದ ನೆನಪು ಬಂದು ಬುದ್ಧಿಮಾಂದ್ಯ ಕಳೆದುಕೊಂಡ ನನ್ನ ಎದುರಲ್ಲಿ ನಿಂತಿರುವಿ, ಗ್ರಹಣಮುಗಿದ ಮೇಲೆ ರೋಹಿಣಿ ನಕ್ಷತ್ರ ಚಂದ್ರನನ್ನು ಸೇರಿದಂತೆ. ಮೋಹವೆಂಬ ರಾಹುವು ನಿನ್ನ ಸ್ಮರಣೆಯನ್ನು ದೂರಮಾಡಿ ನನ್ನ ಬುದ್ಧಿಗೆ ಗ್ರಹಣ ತಂದಿದ್ದನು,ಈಗ ಅದು ಕಳೆದು ರೋಹಿಣಿಯಂತೆ ನೀನು ಕಾಣುತ್ತಿರುವೆ ನಿನ್ನನ್ನು ಗುರುತಿಸುತ್ತಿರುವೆ.ನಿದರ್ಶನ ಅಲಂಕಾರ. ಕಾಳಿದಾಸನಿಗೆ ಕೇವಲ ಉಪಮೆಯ ಪ್ರಯೋಗ ಮಾತ್ರ ಸಿದ್ಧಿಸಿದ್ದಲ್ಲ ಬೇರೆ ಅಲಂಕಾರಗಳನ್ನು ಸುಂದರವಾಗಿ ಬಳಸುವ ಕಲೆ ಅವನಿಗೆ ಸ್ವಭಾವವೇ ಆಗಿದೆ._

.📜ಸಂಗ್ರಹ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩