🌺ಅವಿಮಾರಕದ ಒಂದು ನೀತಿ ಶ್ಲೋಕ :🌺

*एक: परगृह० गच्छेत् द्वितीयेन तु मन्त्रयेत्। बहुभि: समरं कुर्यात् इत्ययं शास्त्रनिर्णय:।।*

_ಇನ್ನೊಬ್ಬರ ಮನೆಗೆ ಏನಾದರೂ ಕಾರ್ಯಸಾಧನೆಗೆ ಹೊರಟಾಗ ಒಬ್ಬನೇ ಹೋಗಬೇಕು. ಜೊತೆಗಾರನಿಂದ ಹಾನಿಯಾಗದೆ ಕಾರ್ಯಸಾಧನೆ ಸುಲಭವಾಗಿ ಆಗುವುದು. ಕೆಲವು ವಿಷಯಗಳನ್ನು ಆಲೋಚನೆ ಮಾಡುವ ಸಮಯದಲ್ಲಿ ನಂಬಿಕಸ್ಥನಾದ ಇನ್ನೊಬ್ಬ ಇರಬೇಕು. ಅವನ ಉಪಾಯಗಳು ಪ್ರಯೋಜನಕ್ಕೆ ಬಂದೀತು. ಯುದ್ಧ ಮಾಡುವಾಗ ಎಷ್ಟು ಜನ ಬೆಂಬಲಿಗರು ಸಿಕ್ಕಿದರೂ ಅವರನ್ನೆಲ್ಲ ಸೇರಿಕೊಂಡು ಯುದ್ಧಕ್ಕೆ ತೆರಳಬೇಕು. ಶತ್ರು ನೋಡಿಯೇ ಹೆದರಿಯಾನು. ಹೀಗೆ ಶಾಸ್ತ್ರ ನಿರ್ಣಯಿಸುತ್ತದೆ. ಪ್ರಕೃತ ಅವಿಮಾರಕನು ರಾಜಕನ್ಯೆಯನ್ನು ಬಯಸಿ ಅರಮನೆಗೆ ಕಳ್ಳ ಮಾರ್ಗದಿಂದ ಹೋಗುತ್ತಿರುವಾಗ ಒಬ್ಬನೇ ತೆರಳುತ್ತಿರುವನು. ಇದಕ್ಕೆ ಅಪವಾದಗಳಿರಬಹುದು. ಹಾಗಿದ್ದರೂ ಕವಿಯ ಒಂದು ಅಭಿಪ್ರಾಯ._

📜ಸಂಗ್ರಹ ✍ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩