🌺ಅವಿಮಾರಕದ ಒಂದು ಸುಮ:🌺

 *ಬಹುತ್ವಾದ್ ದೂರಸಂಸ್ಥೊಪಿ ಸಮೀಪ ಇವ ವರ್ತತೇ/ ಸತ್ಸು ಹೇತುಸಹಸ್ರೇಷು ಕುರಂಗ್ಯಾಂ ಶಂಕತೇ ಮತಿ: ||*

 _ಕುಂತೀಭೋಜ ತಾನು ಕೂತಲ್ಲೇ ದೊಡ್ಡ ಶಬ್ದವೊಂದನ್ನು ಕೇಳಿ ಆಲೋಚಿಸುತ್ತಿರುವನು.ದೂರದಿಂದ ಕೇಳಿಬರುತ್ತಿರುವ ಈ ಶಬ್ದ ಗಂಭೀರವಾಗಿ ಇರುವುದರಿಂದ ಸಮೀಪದಲ್ಲೇ ಧ್ವನಿಸಿದಂತೆ ಕಾಣುತ್ತಿದೆ. ಶಬ್ದವಾಗಲು ಕಾರಣಗಳು ಸಾವಿರಾರು ಇದ್ದರೂ ಮಗಳಿಗೇನಾದರೂ ಅಪಾಯ ಉಂಟಾಯಿತೇ ಎಂದು ನನ್ನ ಮನ ಶಂಕಿಸುತ್ತಿದೆ. ತಂದೆ ಮಗನಂತೆ ಸಾಕಿಬೆಳೆಸಿದ ಒಬ್ಬಳೇ ಮಗಳು. ಅವಳ ಚಿಂತೆಯೇ ಸದಾ ಅಪ್ಪನಿಗೆ. ಹೀಗಾಗಿ ಏನೇ ಶಬ್ದವಾದರೂ  ಕುಂತೀಭೋಜನಿಗೆ ಮಗಳ ಬಗ್ಗೆಯೇ ಚಿಂತೆ.ಅತಿಸ್ನೇಹ: ಪಾಪಶಂಕೀ ಎಂಬ ಕವಿವಾಣಿಯಂತೆ ಹೆಚ್ಚಿನ ಮಮತೆ ಅನರ್ಥವನ್ನೇ ಯೋಚಿಸುತ್ತದೆ._

📜ಸಂಗ್ರಹ ✍ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩