🌺ಅವಿಮಾರಕದ ಒಂದು ಪುಷ್ಪ 🌺

 *ಪ್ರಸಿದ್ಧೌ ಕಾರ್ಯಾಣಾಂ ಪ್ರವದತಿ ಜನ: ಪಾರ್ಥಿವಬಲಂ ವಿಪತ್ತೌ ವಿಸ್ಪಷ್ಟಂ ಸಚಿವಮತಿದೋಷಂ ಜನಯತಿ/ ಅಮಾತ್ಯಾ ಇತ್ಯುಕ್ತಾ: ಶ್ರುತಿಸುಖಮುದಾರಂ ನೃಪತಿಭಿ: ಸುಸೂಕ್ಷ್ಮಂ ದಂಡ್ಯಂತೇ ಮತಿಬಲವಿದಗ್ಧಾ: ಪುರುಷಾ: ||*

 _ಕುಂತೀಭೋಜನ ಮಂತ್ರಿ ಹೇಳುವ ಮಾತು. ಕೆಲಸಗಳು ಸುಸೂತ್ರವಾಗಿ ನಡೆದಾಗ ರಾಜನ ಸಾಮರ್ಥ್ಯವೆಂದು ಜನರು ಅವನನ್ನು ಹೊಗಳುವರು.ಏನಾದರೂ ವಿಪತ್ತು ಉಂಟಾದರೆ ಘಟಿಸಿದರೆ ಮಂತ್ರಿಯ ಅಚಾತುರ್ಯ ಅಜ್ಞಾನವೆಂದು ನಿಂದಿಸುತ್ತಾರೆ. ರಾಜರಿಂದ ಕೇಳಲು ಹಿತಕರವಾದ ಅಮಾತ್ಯ ಎಂಬ ಶಬ್ದದಿಂದ ನಾವು ಕರೆಸಲ್ಪಡುತ್ತೇವೆ. ಹೀಗೆ ಕರೆಯುತ್ತಲೇ ಸೂಕ್ಷ್ಮವಾಗಿ ಸ್ವಲ್ಪ ಬುದ್ಧಿತಿರುಗಿದ ಮಂತ್ರಿಗೂ ಕಠಿಣ ದಂಡನೆಯನ್ನೇ ನೀಡುತ್ತಾನೆ ನಮ್ಮ ರಾಜ.ಹಾಗಾಗಿ ಮಂತ್ರಿ ಪದವಿ ಕತ್ತಿಯ ಅಲಗಿನ ಮೇಲೆ ನಡೆದಂತೆ ತುಂಬಾ ಕಷ್ಟ ನಿಭಾಯಿಸಲು.ಯಶಸ್ಸಿನಲ್ಲಿ ರಾಜನ ಹೆಸರು ಅಪಯಶಸ್ಸಿನಲ್ಲಿ ಮಂತ್ರಿಯ ಹೆಸರು, ಸಭೆಯಲ್ಲಿ ಕೇಳಲು ಮಧುರ ತಪ್ಪಿದರೆ ಕಷ್ಟ ಕಷ್ಟ._

 📜ಸಂಗ್ರಹ ✍ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩