🌺ಅವಿಮಾರಕದ ಒಂದು ಶ್ಲೋಕ :🌺

 *ವ್ಯಾಯಾಮಸ್ಥಿರವಿಪುಲೋಚ್ಛ್ರಿತಾಯತಾಂಸ: ಜ್ಯಾಘಾತಪ್ರಚಿತಕಿಣೊಲ್ಬಣಪ್ರಕೋಷ್ಠ: ಪ್ರಚ್ಛನ್ನೊಪ್ಯನುಕೃತಿಲಕ್ಷ್ಯರಾಜಭಾವೋ ಮೇಘಾಂತರ್ಗತರವಿವತ್ ಪ್ರಭಾನುಮೇಯ: ||*

 _ಅವಿಮಾರಕನನ್ನು ಮಂತ್ರಿ ವರ್ಣಿಸುತ್ತಾನೆ. ನಿಯತವಾದ ವ್ಯಾಯಾಮದಿಂದ ಗಟ್ಟಿಯಾದ ಹಾಗೂ ಎದ್ದುನಿಂತ ಬಾಹುಗಳು ( ಮಸಲ್ಸ್ ಎದ್ದು ಕಾಣುತ್ತಿದೆ ಸಿಕ್ಸ್ ಪ್ಯಾಕ್ನಂತೆ) ಧನುಸ್ಸು ಹಿಡಿದು ಹೆದೆಯನ್ನು ಏರಿಸುವಾಗ ಆದ ಗಾಯಗಳಿಂದ ಭಯಂಕರವಾಗಿ ಕಾಣುತ್ತಿರುವ ಬಾಹುಗಳು, ಗುಪ್ತನಾಗಿದ್ದರೂ ( ಶಾಪಗ್ರಸ್ತನಾಗಿ ಅಂತ್ಯಜನಾಗಿದ್ದರೂ) ರಾಜಲಕ್ಷಣ ತೋರುತ್ತಿರುವ, ( ರಾಜಗಾಂಭೀರ್ಯ ತೋರುತ್ತಿರುವ) ಮೋಡದ ಒಳಗಿದ್ದರೂ ಪ್ರಭೆ ತೋರುತ್ತಿರುವ ಸೂರ್ಯನಂತೆ ಪ್ರಭಾವಿಯಾಗಿರುವನು ಈ ರಾಜಕುವರ. ಸೂರ್ಯನನ್ನು ಕಾಂತಿಯಿಂದ ಅನುಮಾನಿಸುವಂತೆ ಇವನ ಗಾಂಭೀರ್ಯ ರಾಜಲಕ್ಷಣಗಳು ದೇಹ ಪ್ರಕೃತಿ ಇದನ್ನು ನೋಡಿಯೇ ಅನುಮಾನಿಸಬಹುದು ರಾಜನೆಂದು._

📜ಸಂಗ್ರಹ ✍ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩