🌺ಅವಿಮಾರಕದ ಒಂದು ಕುಸುಮ:🌺

_ನ ತ್ವಂ ಪ್ರಿಯೇ ಮಮ ನವಾಸಿ ಮನೋಭಿಯೋಗಾತ್ ಕಿಂ ಕಂಪಸೆ ಪವನವೇಗಹತಾ ಲತೇವ/ ಭದ್ರೆ ಭಯಂ ತ್ಯಜ ಕುರುಷ್ವ ಮಯಿ ಪ್ರಸಾದಂ ಕಿಂ ವಾ ಪ್ರಲಪ್ಯ ಬಹುಧಾ ಶರಣಾಗತೋಸ್ಮಿ||

 _ಅವಿಮಾರಕನು ಪ್ರಿಯೆಯನ್ನು ಸಮೀಪಿಸಿದ್ದಾನೆ. ಅವಳಾದರೋ ಕನಸಿನಲ್ಲಿ ವಿಹರಿಸುತ್ತಿರುವಳು. ಅಕಸ್ಮಾತ್ತಾಗಿ ಎಚ್ಚರಗೊಂಡು ಸಖಿಗೆ ಆಲಂಗಿಸಿಕೊಂಡು ಸಮಾಧಾನಿಸುವಂತೆ ಹೇಳುವಳು.ಸಖಿಯು ನಾಯಕನಿಗೆ ಆ ಅವಕಾಶ ಬಿಟ್ಟುಕೊಡುತ್ತಾಳೆ. ಪೂರ್ತಿ ಎಚ್ಚರಗೊಂಡ ನಾಯಕಿ ನಾಚಿನೀರಾಗುತ್ತಾಳೆ ತನ್ನ ಕೃತ್ಯಕ್ಕಾಗಿ. ಆಗ ನಾಯಕ ನುಡಿಯುವ ಮಾತು. ಪ್ರಿಯೆ ಹೆದರಬೇಡ. ನೀನೆನೂ ನನಗೆ ಹೊಸಬಳಲ್ಲ. ಮನದಲ್ಲಿ ಎಂದೋ ಮೂಡಿರುವ ಪ್ರೇಮದ ಕಾರಣದಿಂದ ತುಂಬಾ ಪರಿಚಿತಳಾಗಿದ್ದಿ.ನನ್ನನ್ನು ನೋಡಿ ಜೋರಾಗಿ ಬೀಸುವ ಗಾಳಿಗೆ ನಡುಗುವ ಬಳ್ಳಿಯಂತೆ ಏಕೆ ನಡುಗುವಿ? ಶುಭಳೇ ಭಯವನ್ನು ಬಿಡು.ನನ್ನಲ್ಲಿ ಕೃಪೆ ತೋರು.ಹೆಚ್ಚೇನು ಹೇಳಲಿ ನಿನ್ನಲ್ಲಿ ಶರಣಾಗತನಾಗಿದ್ದೇನೆ.ಶರಣು ಬಂದವರನ್ನು ಸಲಹುವುದು ಕ್ಷತ್ರಿಯರ ಸ್ವಭಾವ. ಹಾಗಾಗಿ ನನ್ನ ಪ್ರೀತಿಯನ್ನು ಅಂಗೀಕರಿಸಿ ನನ್ನನ್ನು ರಕ್ಷಿಸು.ನಿನ್ನನ್ನು ರಕ್ಷಿಸಿಕೊ.ಅಂಜದಿರು ಅಳುಕದಿರು. ಆಲಿಂಗಿಸಿದ್ದು ನಿನ್ನ ಬಹುಕಾಲದ ಮನದ ಅರಸ ಎಂಬ ಭಾವ._

📜ಸಂಗ್ರಹ ✍ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩