🌹ಶಾಕುಂತಲದ ಒಂದು ಪುಷ್ಪ:🌹

 *ಸ್ವಪ್ನೊ ನು ಮಯಾ ನು ಮತಿಭ್ರಮೊ ನು ಕ್ಲಿಷ್ಟಂ ನು ತಾವತ್ಫಲಮೇವ ಪುಣ್ಯಮ್/ ಅಸಂನಿವೃತ್ಯೈ ತದತೀತಮೇತೆ ಮನೋರಥಾ ನಾಮ ತಟಪ್ರಪಾತಾ:||*

 _ದುಷ್ಯಂತನು ಶಕುಂತಲೆಯನ್ನು ನೆನೆದು ದು:ಖಿಸುತ್ತಿರುವನು. ಅದೇನು ನಾ ಕಂಡ ಕನಸೋ! ಅಥವಾ ಮಂತ್ರವಾದಿಯ ಮಾಯಾಜಾಲವೋ! ಅಥವಾ ಬುದ್ಧಿಭ್ರಮಣೆಯೋ! ಅಥವಾ ಪುಣ್ಯದ ಫಲ ಅಲ್ಲಿಗೆ ಮುಗಿದುಹೋಯಿತೇ! ಆ ಅಪರೂಪದ ವಸ್ತು ಇನ್ನು ತಿರುಗಿ ದೊರೆಯದಂತೆ ಕಳೆದುಹೋಯಿತಲ್ಲ. ಈ ನಮ್ಮ ಮನದ ಬಯಕೆಗಳು ನದಿಯ ದಂಡೆಗಳು ಉರುಳಿದಂತೆ ಉರುಳುವಂಥವು.ಕನಸಲ್ಲಿ ಕಂಡದ್ದು ಎದುರಿಗಿರುವುದಿಲ್ಲ. ವಸ್ತು ಇಲ್ಲದಿದ್ದರೂ ಇದ್ದಂತೆ ತೋರುವುದು ಮಂತ್ರವಾದಿಯ ಕೈಚಳಕ.ಒಂದು ವಸ್ತುವನ್ನು ನೋಡಿ ಮತ್ತೊಂದೆಂದು ಭ್ರಮೆ ಪಡುವುದು. ಹಿಂದಿರುಗಿ ಬರಲು ಅಸಾಧ್ಯವೇನೋ ಅವಳು.ನದಿಯ ದಡಗಳು ಪ್ರವಾಹಕ್ಕೆ ಕೊಚ್ಚಿ ಹೋಗುವಂತೆ ಕುಸಿಯತಕ್ಕಂತಹ ಅಥವಾ ದಂಡೆಯಿಲ್ಲದೆ ಹರಿಯುವ ಪ್ರವಾಹದಂತೆ ನಿಯಂತ್ರಣವಿಲ್ಲದವು. ಶಕುಂತಲೆಯನ್ನು ಕಂಡದ್ದು ಓಡಾಡಿದ್ದು ಪ್ರೀತಿಸಿದ್ದು ಎಲ್ಲವೂ ಈಗ ಕನಸಾಗಿಯೇ ಕಾಣುತ್ತಿದೆ. ಮನಸ್ಸು ಒತ್ತಡಕ್ಕೊಳಗಾದಾಗ ಹೇಗೆ ಆಲೋಚಿಸುತ್ತದೆ ಎಂಬುದನ್ನು ಮನೋವಿಜ್ಞಾನಿಯಂತೆ ನಿರೂಪಿಸಿದ್ದಾನೆ ಕಾಳಿದಾಸ._

.📜ಸಂಗ್ರಹ ✍ಶ್ರೀನಿಧಿ ಅಭ್ಯಂಕರ್

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩