🌺ಅವಿಮಾರಕದ ಸುಂದರ ಶ್ಲೋಕ : ನಾಯಕನು ಎವೆಯಿಕ್ಕದೆ ಮನದರಸಿಯ ಸೌಂದರ್ಯ ಆಸ್ವಾದಿಸುತ್ತಿದ್ದಾನೆ. ಆಗ ಬಂದ ನಾಯಕಿಯ ಸಖಿಯು ಇವಳನ್ನು ಎಬ್ಬಿಸಲೇ ಎಂದಾಗ ಹೇಳುವ ಶ್ಲೋಕ🌺

 *ಅಹಂ ದ್ವಿನೇತ್ರೋ ನ ಸಹಸ್ರನೇತ್ರೋ ಮತಿಶ್ಚ ಮೂಢಾ ಸುಚಿರಾಭಿಲಾಷಾತ್/ ಕಾಮಾರ್ಣವಸ್ಯಾದ್ಯ ತು ದೃಷ್ಟಪಾರಂ ಚೇಕ್ರೀಡ್ಯತಾಂ ಮೇ ಸುಖಮಕ್ಷಿಯುಗ್ಮಮ್||*

 _ನನಗೆ ಕಣ್ಣುಗಳೆರಡೇ ಇರುವುದು, ಸಾವಿರಕಣ್ಣುಗಳಿಲ್ಲ,ಇದ್ದರೆ ಒಂದೇ ಸಲ ಪ್ರಿಯೆಯ ರೂಪವನ್ನು ಕಣ್ತುಂಬಿಕೊಳ್ಳಬಹುದಿತ್ತು,ಏನು ಮಾಡಲಿ ಎರಡೂ ಎವೆಯಿಕ್ಕದೆ ದಿಟ್ಟಿಸುತ್ತಿವೆ. ತುಂಬಾ ಸಮಯದ ನಂತರ ಪ್ರಿಯೆಯ ದರ್ಶನವು ಬುದ್ಧಿಗೆ ಮಂಕು ಬಡಿಯುವಂತೆ ಮಾಡಿದೆ.ಸಂತೋಷದ ಭರದಲ್ಲಿ ಏನು ಮಾಡಬೇಕೆಂದೇ ತೋಚುತ್ತಿಲ್ಲ. ಬಯಕೆಯೆಂಬ ಸಮುದ್ರದ ತೀರವನ್ನು ಇಂದು ಕಂಡುಕೊಂಡೆ. ಇಷ್ಟು ದಿನ ಬಯಸುತ್ತಿದ್ದ ಪ್ರಿಯಳು ಅತ್ಯಂತ ಸಮೀಪದಲ್ಲೇ ಇರುವುದರಿಂದ ಬಯಕೆಯೆಂಬ ದೊಡ್ಡ ಸಮುದ್ರವನ್ನು ದಾಟಿದ್ದೇನೆ.ಇಂತಹ ಸಮಯದಲ್ಲಿ ಕಣ್ಣುಗಳೆರಡೂ ಅವಳ ರೂಪವೆಂಬ ಅಮೃತವನ್ನು ಯಥೇಚ್ಛವಾಗಿ ಕುಡಿದು ಆನಂದದಲ್ಲಿ ವಿಹರಿಸಲಿ. ಅವುಗಳ ಸುಖಕರವಾದ ವಿಹಾರಕ್ಕೆ ತೊಂದರೆ ಒಡ್ಡುವುದು ಬೇಡ.ಹಾಗಾಗಿ ಪ್ರಿಯೆ ನಿದ್ದೆಯಲ್ಲೇ ಇರಲಿ. ಎಬ್ಬಿಸುವುದು ಬೇಡ ಎನ್ನುವ ಭಾವ._

📜ಸಂಗ್ರಹ ✍ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩