🌹ಶಾಕುಂತಲದ ಮತ್ತೊಂದು ಶ್ಲೋಕ🌹

*ಚಿತ್ರೇ ನಿವೇಶ್ಯ ಪರಿಕಲ್ಪಿತಸತ್ವಯೋಗಾ ರೂಪೋಚ್ಚಯೇನ ಮಹತಾ ವಿಧಿನಾ ಕೃತಾ ನು/ ಸ್ತ್ರೀರತ್ನಸೃಷ್ಟಿರಪರಾ ಪ್ರತಿಭಾತಿ ಮೇ ಧಾತುರ್ವಿಭುತ್ವಮನುಚಿಂತ್ಯ ವಪುಶ್ಚ ತಸ್ಯಾ:*

 _ಶಕುಂತಲೆಯನ್ನು ವರ್ಣಿಸುವ ಅನೇಕ ಶ್ಲೋಕಗಳಲ್ಲಿ ಇದೊಂದು ಸುಂದರ ಶ್ಲೋಕ. ದುಷ್ಯಂತನು ವಿದೂಷಕನ ಬಳಿ ಅವಳ ಸೌಂದರ್ಯವನ್ನು ವರ್ಣಿಸುತ್ತಾನೆ. ಸೃಷ್ಟಿಕರ್ತ ಬ್ರಹ್ಮ ಮೊದಲು ಚಿತ್ರದಲ್ಲಿ ಬರೆದು ನಂತರ ಜೀವಕಳೆಯನ್ನು ತುಂಬಿದನೋ? ಅಥವಾ ಸೌಂದರ್ಯದ ಅಂಶಗಳನ್ನೆಲ್ಲ ಮನದಲ್ಲಿ ತುಂಬಿಕೊಂಡು ಸೃಷ್ಟಿ ಮಾಡಿದನೋ? ಬ್ರಹ್ಮನ ಸರ್ವೋಚ್ಚ ಸಾಮರ್ಥ್ಯವನ್ನು, ಇವಳನ್ನೂ ನೋಡಿದಾಗ ಅಪೂರ್ವ ಸ್ತ್ರೀ ರತ್ನವೆಂದೆ ನನಗೆ ತೋರುತ್ತದೆ. ಚಿತ್ರದಲ್ಲಿ ಹೇಗಿರಬೇಕೆಂದು ಕಲ್ಪಿಸಿ ನಂತರ ಜೀವಕೊಟ್ಟಾಗ ಅಂದುಕೊಂಡ ಸೃಷ್ಟಿ ನಿಜವಾಗುತ್ತದೆ,ಹಾಗೆಯೇ ಬ್ರಹ್ಮನು ಮಾಡಿರಬೇಕೆಂದು ನನಗನಿಸುತ್ತದೆ. ಏಕೆಂದರೆ ಅವಳು ಅಪರೂಪದ ರೂಪಸಿ._

📃ಸಂಗ್ರಹ : ✍ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩