🌹ಶಾಕುಂತಲದ ಕುಸುಮ:🌹
*ಸುತನು ಹೃದಯಾತ್ಪ್ರತ್ಯಾದೇಶವ್ಯಲೀಕಮಪೈತು ತೇ/ ಕಿಮಪಿ ಮನಸ: ಸಂಮೋಹೊ ಮೇ ತದಾ ಬಲವಾನಭೂತ್// ಪ್ರಬಲತಮಸಾಮೇವಂ ಪ್ರಾಯಾ: ಶುಭೇಷು ಪ್ರವೃತ್ತಯ: / ಸ್ರಜಮಪಿ ಶಿರಸ್ಯಂಧ: ಕ್ಷಿಪ್ತಾಂ ಧುನೋತ್ಯಹಿಶಂಕಯಾ||*
_ದುಷ್ಯಂತನು ತಾನು ಹಿಂದೆ ಮಾಡಿದ ತಪ್ಪಿಗೆ ಶಕುಂತಲೆಯ ಕಾಲಿಗೆ ಬಿದ್ದು ಕ್ಷಮೆ ಕೇಳುತ್ತಿರುವನು. ಕೋಮಲಾಂಗಿ - ತಿರಸ್ಕಾರದ ಆ ಕಳಂಕವನ್ನು ನಿನ್ನ ಮನದಿಂದ ತೊಡೆದುಹಾಕು. ಆ ಸಮಯದಲ್ಲಿ ನನ್ನ ಮನಸ್ಸಿಗೆ ಯಾವುದೊ ಬಲವಾದ ಮಾಂದ್ಯವು ( ಮಂಕು) ಕವಿದಿತ್ತು. ಬುದ್ಧಿಮಾಂದ್ಯತೆ ಪ್ರಬಲವಾಗಿದ್ದಾಗ ಒಳ್ಳೆಯವರ ವಿಷಯದಲ್ಲಿಯೂ ಇಂತಹ ನಡತೆ ಉಂಟಾಗುತ್ತದೆ. ಹೇಗೆಂದರೆ ಕುರುಡನು ತನ್ನ ತಲೆಯ ಮೇಲೆ ಹಾರ ಬಿದ್ದರೂ ಹಾವೆಂದು ಭಯಪಟ್ಟು ತಲೆ ಜಾಡಿಸುವನು. ನಾನೂ ಆ ಸಮಯದಲ್ಲಿ ನಿನ್ನ ಪ್ರೀತಿಯ ಬಗ್ಗೆ ಕುರುಡಾಗಿದ್ದೆ. ದುಷ್ಯಂತನ ಈ ಮಾತಿನಲ್ಲಿ ಪಶ್ಚಾತ್ತಾಪ ಕಾಣುತ್ತಿದೆ ಹಾಗೆಯೇ ಅರಿಯದೇ ಮಾಡಿದ್ದರಿಂದ ತಾನು ನಿರಪರಾಧಿ ಕ್ಷಮೆಗೆ ಯೋಗ್ಯ ಎನ್ನುವ ಭಾವನೆಯೂ ಇದೆ._
📜ಸಂಗ್ರಹ : ✍ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ