🌹ತಪಸ್ವಿಗಳನ್ನು ಪ್ರಶಂಸಿಸುವ ಶಾಕುಂತಲದ ಒಂದು ಮಧುರ ಶ್ಲೋಕ 🌹

 *ಶಮಪ್ರಧಾನೇಷು ತಪೋಧನೇಷು ಗೂಢಂ ಹಿ ದಾಹಾತ್ಮಕಸ್ತಿ ತೇಜ: / ಸ್ಪರ್ಶಾನುಕೂಲಾ ಇವ ಸೂರ್ಯಕಾಂತಾಸ್ತದನ್ಯತೇಜೋಭಿಮಿವಾದ್ವಪಂತಿ ||*

 _ಶಾಂತಿಯೇ ಪ್ರಧಾನವಾದ ಅಥವಾ ಭಕ್ತಿಯೇ ಜೀವನದ ಧ್ಯೇಯವಾಗುಳ್ಳ ತಪಸ್ವಿಗಳಲ್ಲಿ ಸುಡುವ ಶಕ್ತಿಯುಳ್ಳ ಬೆಂಕಿಯಂತಹ ತೇಜಸ್ಸು ಅಡಗಿರುತ್ತದೆ. ಸಾಧಾರಣವಾಗಿ ಮುಟ್ಟಬಹುದಾದ ಸೂರ್ಯಕಾಂತಮಣಿಗಳಂತೆ ಬೇರೆ ತೇಜಸ್ಸು ಆಕ್ರಮಿಸಲು ಬಂದಾಗ ತನ್ನ ಪ್ರಭಾವವನ್ನು ಬೀರುತ್ತದೆ. ಅದ್ಭುತವಾದ ವರ್ಣನೆ. ಸಾಮಾನ್ಯವಾಗಿ ಸೂರ್ಯಕಾಂತಮಣಿಯನ್ನು ಮುಟ್ಟಿದರೆ ಬಿಸಿ ಅನುಭವಕ್ಕೆ ಬರುವುದಿಲ್ಲ. ಅದೇ ಸೂರ್ಯನ ಕಿರಣಗಳು ಅಥವಾ ಬೆಂಕಿಯ ಸಮೀಪವಿಟ್ಟರೆ ಕಾದ ಕಬ್ಬಿಣದಂತೆ ಸುಡುತ್ತದೆ.ತಪಸ್ವಿಗಳ ಶಕ್ತಿಯ ಹೀಗೆಯೇ ಇರುವುದು. ಸಾಧಾರಣವಾಗಿ ಸಮಚಿತ್ತರಾದ ತಪಸ್ವಿಗಳು ಕೋಪಗೊಂಡರೆ ಅಂದರೆ ಪರರು ಅವರ ನಿಯಮ ಮೀರಲು ಯತ್ನಿಸಿದಾಗ ಬೆಂಕಿಯಂತೆ ಎದಿರಾದವನನ್ನು ಸುಡುವರು.ಶೃಂಗಿಯ ತಂದೆಯನ್ನು ಪರೀಕ್ಷಿತನು, ದೂರ್ವಾಸರನ್ನು ಸಾಂಬನು ಕೆಣಕಿದಾಗ ಇಂತಹ ಪರಿಣಾಮಗಳು ಗೋಚರಿಸಿದವು. ಹೀಗಾಗಿ ನಾವೂ ಶ್ರೇಷ್ಠ ಗುಣಿಗಳನ್ನು ಎದುರಿಸುವ ಮೊದಲು ಅವರ ಅಂತಸ್ಸತ್ವವನ್ನು ಅರಿತು ಮುಂದಡಿ ಇಡಬೇಕು.ಇಲ್ಲದಿರೆ ತೊಂದರೆಗೆ ಒಳಗಾಗಬೇಕಾದಿತು._

📜ಸಂಗ್ರಹ : ✍ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩