🌹ಶಾಕುಂತಲದ ಒಂದು ಸುಮ: 🌹

*ಸಾಕ್ಷಾತ್ಪ್ರಿಯಾಮುಪಗತಾಮಪಹಾಯ ಪೂರ್ವಂ ಚಿತ್ರಾರ್ಪಿತಾಂ ಪುನರಿಮಾಂ ಬಹು ಮನ್ಯಮಾನ: / ಸ್ರೋತೋವಹಾಂ ಪಥಿ ನಿಕಾಮಜಲಾಮತೀತ್ಯ ಜಾತ: ಸಖೇ ಪ್ರಣಯವಾನ್ಮೃಗತೃಷ್ಣಿಕಾಯಾಮ್||*

_ದುಷ್ಯಂತನು ಶಕುಂತಲೆಯನ್ನು ಚಿಂತಿಸುತ್ತಾ ನುಡಿಯುವ ಮಾತು. ಮೊದಲು ಸಾಕ್ಷಾತ್ತಾಗಿ ಎದುರಿಗೆ ಬಂದ ಪ್ರೇಯಸಿಯನ್ನು ಪರಿತ್ಯಜಿಸಿ ಈಗ ಚಿತ್ರದಲ್ಲಿ ಬರೆದ ಅವಳನ್ನು ಆದರಿಸುತ್ತಿರುವ ನಾನು ಮಾರ್ಗದಲ್ಲಿ ತುಂಬಿ ಹರಿಯುವ ನದಿಯನ್ನು ಬಿಟ್ಟು ಬಿಸಿಲುಗುದುರೆಯಲ್ಲಿ ಆಸಕ್ತಿ ಪಡುವವನಂತೆ ಆಗಿದ್ದೇನೆ. ಸಮೃದ್ಧ ನೀರುಳ್ಳ ನದಿಯನ್ನು ಬಿಟ್ಟು ಮೃಗಗಳಿಗೆ ಬಾಯಾರಿಕೆಯ ಆಸೆಯನ್ನು ಹುಟ್ಟಿಸುವ ಬಿಸಿಲ್ಗುದುರೆ ಅಥವಾ ಮರೀಚಿಕೆಯನ್ನು ನೋಡಿ ನೀರು ಸಿಗದೆ ಹತಾಶರಾಗುವಂತೆ ತಾನೇ ಸ್ವತಃ ಬಂದ ಶಕುಂತಲೆಯನ್ನು ಬಿಟ್ಟು ಮೂರ್ಖನಾಗಿದ್ದೇನೆ.ಹೇತು ಮತ್ತು ನಿದರ್ಶನ ಅಲಂಕಾರ. ನಾವು ಎಷ್ಟೋ ಸಲ ಎದುರಿಗೆ ಕಂಡದ್ದನ್ನು ಬಿಟ್ಟು ದುಷ್ಯಂತನಂತೆ ಪರಿತಪಿಸುತ್ತೇವೆ ಆದರೆ ಆಗ ಸಮಯ ಮೀರಿಹೋಗಿರುತ್ತದೆ._

📜ಸಂಗ್ರಹ ✍ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩