🌺ಅವಿಮಾರಕದ ಒಂದು ಉತ್ತಮ ಶ್ಲೋಕ :🌺


 *ಕಾಮಾಹತ: ಕುಮತಿಭಿ: ಸಚಿವೈರ್ಗೃಹೀತೋ ರೋಗಾತುರ: ಸ್ವಜನರಾಗಮವೇಕ್ಷತೆ ವಾ / ಶಪ್ತೋ ದ್ವಿಜೈರ್ವ್ರತಮುಪೇತ್ಯ ಕರೋತಿ ಶಾಂತಿಂ ಕೋವಾ ಭವೇನ್ನರಪತೇರ್ಗೃಹರೋಧಹೇತು: ||*

_ಕುಂತೀಭೋಜನು ಸೌವೀರರಾಜನ ಅರಮನೆಗೆ ಸಾಮಾನ್ಯ ಜನರ ಪ್ರವೇಶ ನಿರ್ಬಂಧಿಸಿರುವ ಬಗ್ಗೆ ಹೀಗೆ ವಿಚಾರ ಮಾಡುತ್ತಿರುವನು. ರಾಜಪುತ್ರ ಕಾಣುತ್ತಿಲ್ಲ ಅಮಾತ್ಯರೇ ಎಲ್ಲವನ್ನೂ ನಿರ್ವಹಿಸುತ್ತಿರುವರು ಎಂದು ಮಂತ್ರಿ ನುಡಿದಾಗ ಹೇಳಿದ ಮಾತು. ಯಾವುದಾದರೂ ವನಿತೆಯ ಪ್ರೇಮಪಾಶದಲ್ಲಿ ಬಂಧಿಯಾಗಿರುವನೋ,ಅಥವಾ ಕೆಟ್ಟ ಬುದ್ಧಿಯ ಮಂತ್ರಿಗಳಿಂದ ಬಂಧನಕ್ಕೊಳಪಟ್ಟಿರುವನೇ,ಅಥವಾ ದೊಡ್ಡ ರೋಗದ ಪೀಡೆಗೊಳಗಾಗಿ ಕಾಣಿಸಿಕೊಳ್ಳುತ್ತಿಲ್ಲವೋ,ಅಥವಾ ತಮ್ಮ ಜನರ ಪ್ರೀತಿಯನ್ನು ಪರೀಕ್ಷಿಸುತ್ತಿರುವನೋ,( ತಾನಿಲ್ಲದಾಗ ಹೇಗೆ ವರ್ತಿಸಬಹುದೆಂದು), ಅಥವಾ ಬ್ರಹ್ಮಜ್ಞಾನಿಗಳಿಂದ ಶಾಪಕ್ಕೊಳಗಾಗಿ ನಿವೃತ್ತಿಗಾಗಿ ಯಾವುದಾದರೂ ವ್ರತದಲ್ಲಿ ತೊಡಗಿರುವನೇ, ಇದರಲ್ಲಿ ಯಾವ ಕಾರಣಗಳಿರಬಹುದು ರಾಜನ ಕಾಣಿಸದಿರುವಿಕೆಗೆ? ಸ್ವಲ್ಪ ಕಾಲ ಒಬ್ಬರು ಕಾಣದಿದ್ದಾಗ ಯಾವೆಲ್ಲ ಆಲೋಚನೆಗಳು ಬರಬಹುದೆಂಬ ಸುಂದರ ಕಲ್ಪನೆ ಇಲ್ಲಿದೆ._


📜ಸಂಗ್ರಹ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩