🌺ಅವಿಮಾರಕದ ಒಂದು ರಸಶ್ಲೋಕ:🌺

 *ನೇತ್ರೇ ಬಾಷ್ಪಪರಿಪ್ಲುತೇ ಕರಧೃತೌ ವ್ಯಾವಲ್ಗಮಾನೌ ಸ್ತನೌ ಶ್ರೋಣೀ ಚಾಧಿಕಭಾರಿಕಾ ನ ವಿಶದೌ ಪಾದೌ ಹ್ರಿಯಾ ಸ್ಯಂದಿನೌ / ಏತತ್ ಸಪ್ತಪದಪ್ರಮಾಣಮಿಹ ಭೋ: ಸಂಪಾದ್ಯತೇ ಯೋಜನಾ ಯದ್ಯೇಷಾ ಕ್ಷಣದಾ ಭವೇತ್ ಯುಗಶತಂ ಧನ್ಯೋ ಮದನ್ಯ: ಕುತ: ||*

 _ಸಖಿಯರು ಅವಿಮಾರಕ ಮತ್ತು ಕುರಂಗಿಯರ ಮಿಲನಕ್ಕೆ ವೇದಿಕೆ ಕಲ್ಪಿಸಿಕೊಟ್ಟು ತಾವು ತೆರಳಿದ್ದಾರೆ. ಆ ಸಮಯದಲ್ಲಿ ನಾಯಕನಾಡುವ ಮಾತು.ಇಂದು ನಾನು ಯೌವ್ವನದ ಋಣವನ್ನು ತೀರಿಸಿದೆ.ಈ ಸಂದರ್ಭದಲ್ಲಿ ಪ್ರಿಯೆಯೊಡನೆ ಕೈ ಹಿಡಿದು ನಡೆಯುತ್ತಾ ಅವಳವರ್ಣನೆಗೆ ತೊಡಗಿದ್ದಾನೆ. ಅವಳ ಕಣ್ಣುಗಳು ಆನಂದ ಬಾಷ್ಪವನ್ನು ಹೊರಹಾಕುತ್ತಿವೆ.ಸಂತೋಷದ ಭರದಲ್ಲಿ ಹಸ್ತಗತವಾದ ಸ್ತನಗಳು ಕಂಪಿಸುತ್ತಿವೆ.ಕಟಿಯ ಇಕ್ಕೆಲಗಳಲ್ಲಿ ಭಾರ ತಡೆಯದಾಗದಾಗಿದೆ. ನಾಚಿ ನೀರಾದ ಕಾಲುಗಳು ಸ್ಪಷ್ಟವಾಗಿ ಕಾಣುತ್ತಿಲ್ಲ. ಇದೇ ನಮ್ಮ ಸಪ್ತಪದಿ. ಮನದಲ್ಲಿ ಕಲ್ಪಿಸಿದ್ದೆಲ್ಲವನ್ನು ಆಚರಿಸುತ್ತಿದ್ದೇವೆ. ( ಏಳು ಹೆಜ್ಜೆ ಒಟ್ಟಿಗೆ ನಡೆಯುವುದೆ ಸಪ್ತಪದಿ. ಅಲ್ಲಿ ವಿವಾಹಾಂಗ ಇಲ್ಲಿ ವಿಹಾರಾಂಗ ಅಷ್ಟೇ.ಪ್ರತ್ಯೇಕ ವಿವಾಹದ ಕಾರ್ಯ ಬೇಕಿಲ್ಲ ಎನ್ನುವ ಅಭಿಪ್ರಾಯ. ) ಈ ಕ್ಷಣಿಕ ( ಮೂರು ಯಾಮದಷ್ಟು ಸಣ್ಣ ಸಮಯದ) ರಾತ್ರಿಯು ನೂರಾರು ಯುಗಗಳಲ್ಲಿ ನನಗೆ ಸಿಗುವುದಾದರೆ ನನಗಿಂತ ಧನ್ಯ ಅದೃಷ್ಟಶಾಲಿ ಯಾರಿದ್ದಾರೆ?  ನಾನೇ ಧನ್ಯ. ಆದರೆ ಸಮಯ ಅಲ್ಪ.ಪ್ರಿಯೆಯ ಜೊತೆ ಇರುವ ನೂರಾರು ನಿಮಿಷಗಳು ಮೂರು ನಿಮಿಷದಂತೆ ಕಳೆದುಹೋಗುತ್ತವೆ ಎನ್ನುವ ಅಲ್ಪ ದು:ಖ ಹೆಚ್ಚಿನ ಸುಖ.ಇದಕ್ಕಾಗಿಯೇ ನುಡಿದದ್ದೇನೋ ಸುಖವು ದು:ಖರ್ಚು ಜೊತೆಗೆ ಬರುವುದು ಎಂದು._

📜ಸಂಗ್ರಹ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩