🌺ಅವಿಮಾರಕದ ಸುಂದರ ಸುಮ:🌺
*ಅತ್ಯುಷ್ಣಾ ಜ್ವರಿತೇವ ಭಾಸ್ಕರಕರೈರಾಪೀತಸಾರಾ ಮಹೀ ಯಕ್ಷ್ಮಾರ್ತಾ ಇವ ಪಾದಪಾ: ಪ್ರಮುಷಿತಚ್ಛಾಯಾ ದವಾಗ್ನ್ಯಾಶ್ರಯಾತ್| ವಿಕ್ರೋಶನ್ತ್ಯವಶಾದಿವೊಚ್ಛ್ರಿತಗುಹಾ ವ್ಯಾತ್ತಾನನಾ: ಪರ್ವತಾ: ಲೋಕೋಯಂ ರವಿಪಾಕನಷ್ಟಹೃದಯ: ಸಂಯಾತಿ ಮೂರ್ಛಾಮಿವ||*
_ರಾತ್ರಿಯಾಗುತ್ತಿದ್ದಂತೆ ನಾಯಕನಿಗೆ ಪ್ರಿಯಳ ನೆನಪು ಕಾಡುತ್ತಿದೆ. ಅವಳನ್ನು ಬಿಟ್ಟಿರಲು ಸಾಧ್ಯವಾಗುತ್ತಿಲ್ಲ. ಹಾಗೇ ರಾತ್ರಿಯು ಎಷ್ಟು ಕ್ರೂರ ಸೂರ್ಯನ ಪ್ರತಾಪ ಎಂಥಹದ್ದು ಎಂದೆಲ್ಲ ಬಡಬಡಿಸುತ್ತಿರುವನು.ಸೂರ್ಯನ ಬಿಸಿ ಕಿರಣಗಳು ಭೂಮಿಯ ನೀರನ್ನೆಲ್ಲ ಹೀರಿ ಅದರ ಮೂಲಕ ಸಾರವನ್ನು ಕುಡಿದು ಈಗ ಬಿಸಿಯಾದ ನೆಲ ಜ್ವರ ಬಂದವರಂತೆ ಇದೆ.( ಒಳಗಿನ ಸಾರವೆಲ್ಲ ಬರಿದಾದಾಗ ಜ್ವರ ಅಡರುವಂತೆ) ಈ ರಾತ್ರಿ ಪ್ರಿಯಳ ವಿರಹವು ಎಲ್ಲೆಡೆ ಬಿಸಿಯನ್ನೇ ಉಂಟುಮಾಡುತ್ತಿದೆ. ಕಾಡ್ಗಿಚ್ಚು ವ್ಯಾಪಿಸಿ ಮರಗಳ ಎಲೆ ಹೂವು ಉದುರಿ ನೆರಳಿಲ್ಲದಂತೆ ಆಗಿ ಯಕ್ಷ್ಮವೆಂಬ ರೋಗದಿಂದ ನರಳುತ್ತಿವೆ. ( ಇದಕ್ಕೆ ಸೂರ್ಯನ ಬಿಸಿಲೇ ಕಾರಣ) ಪರ್ವತಗಳು ಬಿಸಿ ತಾಳಲಾಗದೇ ಗುಹೆಗಳೆಂಬ ಬಾಯಿಗಳಿಂದ ಜೋರಾಗಿ ಕೂಗುತ್ತಾ ಅಳುತ್ತಿರುವಂತೆ ಇದೆ. ( ಗುಹೆಗಳಿಂದ ಹೊರಬರುವ ವಿಧ ವಿಧದ ಶಬ್ದಗಳು ಕವಿಗೆ ಅಳುವಂತೆ ತೋರುತ್ತಿದೆ.ನಮಗೆ ರಾತ್ರಿ ಭೂತ ದೆವ್ವಗಳ ಧ್ವನಿ ಕೇಳಿದಂತೆ) ಹೀಗೆ ಸೂರ್ಯನ ಕಿರಣಗಳಿಂದ ಬಳಲಿದ ಈ ಜಗತ್ತು ಮೂರ್ಛೆ ಹೊಂದುವಂತೆ ತೋರುವುದು. ಬಿಸಿಲಿಗೆ ನೀರೆಲ್ಲ ಒಣಗಿ ಭೂಮಿ ಬಿರುಕುಬಿಡುತ್ತಿದೆ. ಬಿಸಿಗಾಳಿ ಹರಡುತ್ತಿದೆ ಅದು ಭೂಮಿಗೆ ಆವರಿಸಿದ ಜ್ವರದಂತೆ,ಮರಗಳ ಎಲೆಗಳೆಲ್ಲ ಉದುರುವ ಪ್ರಕ್ರಿಯೆ ಕ್ಷಯ ಪೀಡಿತರಾದಂತೆ,ಕಾಡ್ಗಿಚ್ಚು ಹಬ್ಬಿ ಅದರಿಂದ ಕ್ಷಯ ವ್ಯಾಪಿಸಿದಂತೆ, ಬಿಸಿಲಿಗೆ ಕಾದು ಕೆಂಪಾದ ಬಂಡೆಗಳಿರುವ ಪರ್ವತಗಳಿಂದ ಹೊರಡುವ ನಿನಾದ ಜೋರಾಗಿ ಅಳುವಂತೆ, ರಾತ್ರಿಯಾಯಿತೆಂದು( ಇಹದ ಪರಿವೆಯಿಲ್ಲದೆ) ಎಲ್ಲರೂ ಮಲಗಿರುವುದು ಮೂರ್ಛೆ ಬಿದ್ದಂತೆ ಕವಿಗೆ ವಿಭಿನ್ನವಾಗಿ ಕಾಣುತ್ತಿದೆ. ನಾಯಕನಿಗೆ ತಡರಾತ್ರಿಯಾದರೂ ಪ್ರಿಯಳ ನೆನಪು ಮರೆಯಾಗದೇ ಸೂರ್ಯನನ್ನು ದೂಷಿಸುತ್ತಾ ಅವನಂತೆ ಬಿಸಿಯುಸಿರು ಬಿಡುತ್ತಿರುವನು._
ಸಂಗ್ರಹ 📜✍ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ