🌹ಶಾಕುಂತಲದ ಒಂದು ಸುಮ:🌹
*ಸಹಜಂ ಕಿಲ ಯದ್ವಿನಿಂದಿತಂ ನ ಖಲು ತತ್ಕರ್ಮ ವಿವರ್ಜನೀಯಮ್ ಪಶುಮಾರಣಕರ್ಮದಾರುಣೋ ಅನುಕಂಪಾಮೃದುರೇವ ಶ್ರೋತ್ರಿಯ: ||*
_ಮೀನುಗಾರನು ತನ್ನ ವೃತ್ತಿಯ ಬಗ್ಗೆ ಭಟರು ನಿಂದಿಸಿದಾಗ ನುಡಿಯುವ ಮಾತು. ಮೀನು ಹಿಡಿಯುವ ನನ್ನ ವೃತ್ತಿಯನ್ನು ನಿಂದಿಸಬೇಡಿ. ಅವರವರಿಗೆ ಸಹಜವಾದ ಕಾರ್ಯವು ನಿಂದ್ಯವಾಗಿದ್ದರೂ ಬಿಡಬಾರದು. ಉ: ಶ್ರೋತ್ರಿಯನಾದ ಬ್ರಾಹ್ಮಣನು ಅನುಕಂಪದಿಂದ ಕೂಡಿದ ಮೃದು ಸ್ವಭಾವದವನಾದರೂ ಯಜ್ಞದಲ್ಲಿ ಪಶುವನ್ನು ಕೊಲ್ಲುವ ದಾರುಣ ಕರ್ಮ ಮಾಡುವನು. ಅದು ಆ ಸಂದರ್ಭದಲ್ಲಿ ಅವನಿಗೆ ಸಹಜ.ನನಗೆ ಮೀನು ಹಿಡಿಯುವುದು ಕುಲಪರಂಪರೆಯಾಗಿ ಬಂದಿರುವ ವೃತ್ತಿ. ಅವರವರ ಕರ್ತವ್ಯ ಅವರವರ ಧರ್ಮ ಎಂಬ ಗೀತೆಯ ಜೀವನದೃಷ್ಟಿ ಕಂಡುಬರುತ್ತದೆ . ಜನ್ಮನಾ ಬ್ರಾಹ್ಮಣೋ ಜ್ಞೇಯ: ಸಂಸ್ಕಾರಾದ್ವಿಜ ಉಚ್ಯತೆ ವಿದ್ಯಯಾ ಯಾತಿ ವಿಪ್ರತ್ವಂ ತ್ರಿಭಿ: ಶ್ರೋತ್ರಿಯ ಏವ ಚ/ ಜೀವನೋಪಾಯಕ್ಕಾಗಿ ತಾನು ಮಾಡುವ ವೃತ್ತಿ ಸಮರ್ಥಿಸುತ್ತಿದ್ದಾನೆ. ಸಂಸ್ಕಾರ ಮತ್ತು ವಿದ್ಯೆಯಿಂದ ಕೂಡಿದ ಶ್ರೋತ್ರಿಯನೇ ಹಾಗೆ ಮಾಡುವುದು ಅಪರಾಧವಲ್ಲ. ಹಾಗಾಗಿ ತನ್ನ ವೃತ್ತಿ ಶ್ರೇಷ್ಠ ಎಂದು ಅಭಿಪ್ರಾಯ. ಧರ್ಮವ್ಯಾಧನು ಮಾಂಸ ಮಾರುತ್ತಲೇ ಧರ್ಮದಿಂದ ಜೀವನ ನಡೆಸಿ ಕೌಶಿಕನೆಂಬ ಅಹಂಕಾರಿ ತಪಸ್ವಿಗೆ ಧರ್ಮ ಬೋಧಿಸಿದ ಕಥೆ ಇದಕ್ಕೆ ಪೂರಕ._
📜ಸಂಗ್ರಹ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ