🌺ಅವಿಮಾರಕದ ಒಂದು ಶ್ಲೋಕ : 🌺

*ಛನ್ನಾ ಭವಂತಿ ಭುವಿ ಸತ್ಪುರುಷಾ: ಕಥಂಚಿತ್ ಸ್ವೈ: ಕಾರಣೈರ್ಗುರುಜನೈಶ್ಚ ನಿಯಮ್ಯಮಾನಾ:| ಭೂಯ: ಪರವ್ಯಸನಮೇತ್ಯ ವಿಮೋಕ್ತುಕಾಮಾ ವಿಸ್ಮೃತ್ಯ ಪೂರ್ವನಿಯಮಂ ವಿವೃತಾ ಭವಂತಿ||*

_ಭಾಸನು ಸಜ್ಜನರ ಗುಣವನ್ನು ವರ್ಣಿಸಿದ ರೀತಿ.ಸತ್ಪುರುಷರು ಕೆಲವೊಮ್ಮೆ ತಮ್ಮದೇ ಕಾರಣಗಳಿಂದ ಇರುವಿಕೆಯನ್ನು ತೋರಿಸಿಕೊಳ್ಳುವುದಿಲ್ಲ.ಕೆಲವೊಮ್ಮೆ ತಮ್ಮ ತಂದೆತಾಯಿಗಳ ನಿಯಂತ್ರಣದಿಂದಾಗಿಯೋ ಅಥವಾ ಶಾಪಾದಿಗಳಿಂದ ಲೋಕದಲ್ಲಿ ಗುಪ್ತರಾಗಿ ಇರುತ್ತಾರೆ.ಆದರೆ ಯಾವಾಗ ಇನ್ನೊಬ್ಬರ ಕಷ್ಟವನ್ನು ನೋಡುತ್ತಾರೆಯೋ ಆ ಕೂಡಲೇ ಅದರ ಪರಿಹಾರಕ್ಕಾಗಿ ಹಿಂದಿನ ನಿಯಮವನ್ನೂ ಮರೆತು ಪ್ರಕಟರಾಗುತ್ತಾರೆ. ತಮ್ಮ ನಿಯಮವೇನಿದ್ದರೂ ಅದನ್ನೆಲ್ಲಾ ಬಿಟ್ಟು ಧಾವಿಸಿಬರುವ ಆಪತ್ಕಾಲಕ್ಕೆ ಒದಗುವ ಬುದ್ಧಿ ಸಜ್ಜನರದ್ದು ಎಂಬುದು ಕವಿಯ ಭಾವ.ಇಲ್ಲಿ ಪ್ರಕೃತ ಆನೆಯಿಂದ ದಾಳಿಗೊಳಗಾದ ರಾಜಕುವರಿಯ ರಕ್ಷಣೆಗೆ ಅವಿಮಾರಕನು ಶಾಪಗ್ರಸ್ತನಾಗಿದ್ದರೂ ಧಾವಿಸಿ ಬಂದು ಕಾಪಾಡುತ್ತಾನೆ. ಅದು ನಿಜವಾದ ಸಜ್ಜನಿಕೆ._

📜ಸಂಗ್ರಹ ✍ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩