🌺ಅವಿಮಾರಕದ ಒಂದು ಶೃಂಗಾರ ಶ್ಲೋಕ :🌺
*ಉರ: ಸ್ತನತಟಾಲಸಂ ಜಘನಭಾರಖಿನ್ನಾ ತನು: ಮುಖಂ ನಯನವಲ್ಲಭಂ ಪ್ರಕೃತಿತಾಮ್ರಬಿಂಬಾಧರಮ್ // ಭಯೇಪಿ ಯದಿ ತಾದೃಶಂ ನಯನಪಾತ್ರಪೇಯಂ ವಪು: ಕಥನ್ನು ಸುರತಾಂತರಪ್ರಚುರವಿಭ್ರಮಂ ತದ್ ಭವೇತ್||*
_ಅವಿಮಾರಕನು ಕುರಂಗಿಯನ್ನು ವರ್ಣಿಸುತ್ತಿದ್ದಾನೆ. ಎದೆ ಸ್ತನಗಳ ಭಾರದಿಂದ ಆಲಸ್ಯ ಹೊಂದಿದೆ. ಶರೀರವು ಜಘನ ಅಥವಾ ನಿತಂಬದ ಭಾರದಿಂದ ಖಿನ್ನವಾಗಿದೆ. ( ಭಾರ ತಡೆಯಲು ಅಸಾಧ್ಯವಾಗಿದೆ) ಅವಳ ಮೊಗ ಕಣ್ಣುಗಳಿಗೆಂದಿಗೂ ಚಂದ, ತುಟಿ ಯಾವ ಪ್ರಸಾಧನ ಸಾಮಗ್ರಿಗಳ ಲೇಪನವಿಲ್ಲದೆ ಸಹಜವಾಗಿ ಕೆಂಪು. ಆನೆಯ ದಾಳಿಯಿಂದ ಭೀತಳಾದ ಅವಳ ಮುಖ ಆಗಲೇ ಆಕರ್ಷಣೀಯ ಅಂದಮೇಲೆ ಸುರತಕಾಲದಲ್ಲಿ ನಾನಾ ವಿಲಾಸಗಳನ್ನು ತೋರುವ ಅವಳ ಮುಖದ ಆಕರ್ಷಣೆ ಹೇಗಿರಬಹುದು! ಹೆದರಿದಾಗಲೂ ಕಿಂಚಿತ್ತೂ ಕುಂದದ ಸೌಂದರ್ಯ ಸುರತದ ಸಮಯದಲ್ಲಿ ಇನ್ನೆಷ್ಟು ಭಾವನೆಗಳನ್ನು ವ್ಯಕ್ತಪಡಿಸಬಹುದು! ಪೃಥ್ವೀ ವೃತ್ತ._
📜ಸಂಗ್ರಹ ✍ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ