*🌺ಅವಿಮಾರಕದ ಒಂದು ಸುಮ🌺*

*ನಾಟಕರಚನೆಯಲ್ಲಿ ಉತ್ಕೃಷ್ಟತೆಯನ್ನು ತೋರಿದ ಕವಿಗಳಲ್ಲಿ ಭಾಸನೂ ಒಬ್ಬ. ಅವನ ಅವಿಮಾರಕವೆಂಬ ನಾಟಕದ ಮಂಗಲಶ್ಲೋಕ ದಶಾವತಾರಸ್ತುತಿಯೂ ಹೌದು.*

 _ಉತ್ಕ್ಷಿಪ್ತಾಂ ಸಾನುಕಂಪಂ ಸಲಿಲನಿಧಿಜಲಾದೇಕದಂಷ್ಟ್ರಾಗ್ರರೂಢಾಂ ಆಕ್ರಾಂತಾಮಾಜಿಮಧ್ಯೇ ನಿಹತದಿತಿ ಸುತಾಮೇಕಪಾದಾವಧೂತಾಮ್| ಸಂಭುಕ್ತಾಂ ಪ್ರೀತಿಪೂರ್ವಂ ಸ್ವಭುಜವಶಾಗತಾಮೇಕಚಕ್ರಾಭಿಗುಪ್ತಾಂ ಶ್ರೀಮಾನ್ ನಾರಾಯಣಸ್ತೇ ಪ್ರದಿಶತು ವಸುಧಾಮುಚ್ಛ್ರಿತೈಕಾತಪತ್ರಾಮ್||_

 *ಮತ್ಸ್ಯಾವತಾರದಲ್ಲಿ ಭಗವಂತನು ಸಮುದ್ರದಲ್ಲಿ ಮುಳುಗಿದ್ದ ಭೂಮಿಯನ್ನು ದಯೆಯಿಂದ ಮೇಲಕ್ಕೆತ್ತಿದನು. ವರಾಹಾವತಾರದಲ್ಲಿ ಮತ್ತೆ ಅದೇ ಭೂಮಿಯನ್ನು ತನ್ನ ಒಂದೇ ಕೋರೆಹಲ್ಲಿನಲ್ಲಿ ಎತ್ತಿ ಉದ್ಧರಿಸಿದನು.ಯುದ್ಧದಲ್ಲಿ  ರಾಕ್ಷಸರ ಕೈವಶವಾಗಿದ್ದ ಲೋಕಗಳನ್ನು ಉದ್ಧರಿಸಲು ನರಸಿಂಹಾವತಾರ ತಾಳಿ ದಿತಿಸುತನಿಗೆ ಗತಿಕರುಣಿಸಿ, ವಾಮನಾವತಾರದಲ್ಲಿ ಕೇವಲ ಒಂದು ಕಾಲಿನಿಂದಲೇ ಅಳೆದು, ರಾಮಾವತಾರದಲ್ಲಿ ಪ್ರೀತಿಯಿಂದ ಹನ್ನೊಂದು ಸಾವಿರವರ್ಷಗಳಷ್ಟು ಕಾಲ ಆಳು, ಚಕ್ರವೆಂಬ ಒಂದೇ ಅಸ್ತ್ರದಿಂದ ಕೃಷ್ಣಾವತಾರಕಾಲದಲ್ಲಿ ಶತ್ರುಗಳಿಲ್ಲದಂತೆ ಮಾಡಿಕಾಪಾಡಿದ ( ಭೂಭಾರವನ್ನು ಕಡಿಮೆಮಾಡಿದ) ಬಹುಕಾಲದಿಂದ ಭಗವಂತನೆಂಬ ಛತ್ರಿಯ ಅಡಿಯಲ್ಲಿ ರಕ್ಷಣೆ ಪಡೆಯುತ್ತಿರುವ ಈ ಭೂಮಿಯನ್ನು ಭಗವಂತನು ನಿನಗೆ ನೀಡಲಿ. ನಿನಗ್ಯಾರೂ ಶತ್ರುಗಳು ಅವನ ದಯೆಯಿಂದ ಇರದಿರಲಿ ಎಂದು ಆಶಿಸುವ, ರಾಜನಿಗೆ ದೇವರ ಅನುಗ್ರಹ ಕೇಳುವ ಶ್ಲೋಕ. ( ಕೂರ್ಮಾವತಾರ ಅಷ್ಟು  ಕಾಣುವುದಿಲ್ಲ.  ಪರಶುರಾಮ, ಬುದ್ಧ, ಕಲ್ಕಿ ಕಾರ್ಯಗಳು  ಸೂಚಿಸಲ್ಪಟ್ಟಿವೆ. ಹಾಗಾಗಿ ದಶಾವತಾರವೆಂದೆ.*

📜 ಸಂಗ್ರಹ: ✍ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩