🌺ಅವಿಮಾರಕದ ಒಂದು ಸುಮ: 🌺
*ಧರ್ಮ: ಪ್ರಾಗೇವ ಚಿನ್ತ್ಯ: ಸಚಿವಮತಿಗತಿ: ಪ್ರೇಕ್ಷಿತವ್ಯಾ ಸ್ವಬುದ್ಧ್ಯಾ ಪ್ರಚ್ಛಾದ್ಯೌ ರಾಗದೋಷೌ ಮೃದುಪರುಷಗಣೌ ಕಾಲಯೋಗೆನ ಕಾರ್ಯೌ/ ಜ್ಞೇಯಂ ಲೋಕಾನುವೃತ್ತಂ ಪರಚರನಯನೈರ್ಮಂಡಲಂ ಪ್ರೇಕ್ಷಿತವ್ಯಂ ರಕ್ಷ್ಯೋ ಯತ್ನಾದಿಹಾತ್ಮಾ ರಣಶಿರಸಿ ಪುನ: ಸೋಪಿ ನಾವೇಕ್ಷಿತವ್ಯ:||*
_ರಾಜನ ಕರ್ತವ್ಯ ಜವಾಬ್ದಾರಿಗಳ ಬಗ್ಗೆ ಕುಂತಿಭೋಜನ ಸ್ವಗತ. ಸರಿ-ತಪ್ಪುಗಳ ಬಗ್ಗೆ ನಿರ್ಣಯಿಸುವ ಮೊದಲೇ ಪರಾಮರ್ಶೆ ಮಾಡಬೇಕು. ಅನಂತರ ತನ್ನ ಸೂಕ್ಷ್ಮಬುದ್ಧಿಯಿಂದ ಸಚಿವರ ಮನದಿಂಗಿತವನ್ನು ಅರಿಯಬೇಕು. ಅವರು ಸಜ್ಜನರಾ ದುರ್ಜನರಾ ಎಂಬುದನ್ನು ಹೀಗೆ ಪರೀಕ್ಷಿಸಬೇಕು. ಕೆಲವರ ಮೇಲೆ ತನಗಿರುವ ಅಕ್ಕರೆ ಕೆಲವರ ಮೇಲಿರುವ ದ್ವೇಷಭಾವವನ್ನು ಹೊರಗೆಂದೂ ಪ್ರಕಟಗೊಳಿಸದೆ ರಹಸ್ಯವಾಗಿರಿಸಬೇಕು. ಇದು ಗುಂಪುಗಾರಿಕೆ ತಡೆಯುವ ತಂತ್ರ. ಸಮಯ ಬಂದಾಗ ಮೃದು ಅಥವಾ ಕ್ರೂರವರ್ತನೆಯನ್ನು ತೋರಬೇಕು. ಲೋಕದ ಆಗುಹೋಗುಗಳನ್ನು ಗಮನಿಸುತ್ತಿರಬೇಕು.ಎಲ್ಲಿ ಏನಾದರೆ ತನಗೇನು ಎಂಬ ಉದಾಸೀನತೆ ಇರಬಾರದು. ಶ್ರೇಷ್ಠರಾದ ಗುಪ್ತಚರರ ಕಣ್ಣುಗಳಿಂದ ಪ್ರಜಾಸಮೂಹವನ್ನು ಅವಲೋಕಿಸಬೇಕು. ಗುಪ್ತಚರವಿಭಾಗ ಬಲಿಷ್ಠವಿರಬೇಕು. ಹೀಗೆ ಲೋಕದಲ್ಲಿ ತನ್ನನ್ನು ತಾನು ರಕ್ಷಿಸಿಕೊಳ್ಳಬೇಕು.ಅಷ್ಟಲ್ಲದೆ ತನ್ನ ಪ್ರಾಣದಾಸೆಯನ್ನೂ ತ್ಯಜಿಸಿ ಯುದ್ಧದಲ್ಲಿ ರಾಷ್ಟ್ರಕ್ಕಾಗಿ ಹೋರಾಡಬೇಕು. ಏಕೆಂದರೆ ಯುದ್ಧದ ಪರಾಜಯ ಮರಣಕ್ಕಿಂತಲೂ ಕೀಳು ರಾಜನಿಗೆ. ಇಷ್ಟೆಲ್ಲಾ ಭಾರಗಳಿರುವ ರಾಜನ ಪದವಿ ಮುಳ್ಳಿನ ಮೇಲೆ ಹಾಸಿರುವ ಹಾಸಿಗೆಯಂತೆ ಸರಿ. ಬರಿದೆ ಮೀಸಲಾತಿ ತುಷ್ಟೀಕರಣ ಭಾಗ್ಯವೆಂದು ಜನರನ್ನು ಒಡೆದು ಆಳುವ ಈಗಿನ ರಾಜಕಾರಣಿಗಳು ಯಾವಾಗ ಇಂತಹ ಆದರ್ಶ ಅನುಸರಿಸುವರೋ!_
📜ಸಂಗ್ರಹ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ