🌹ಶಾಕುಂತಲದ ಒಂದು ಸುಮ🌹
*ತವ ಕುಸುಮಶರತ್ವಂ ಶೀತರಶ್ಮಿತ್ವಮಿಂದೋ: ದ್ವಯಮಿದಮಯತಾರ್ಥಂ ದೃಶ್ಯತೇ ಮದ್ವಿಧೇಷು | ವಿಸೃಜತಿ ಹಿಮಗರ್ಭೈರಗ್ನಿಮಿಂದುರ್ಮಯೂಖೈ: ತ್ವಮಪಿ ಕುಸುಮಬಾಣಾನ್ ವಜ್ರಸಾರೀಕರೋಷಿ ||*
*_ಶಕುಂತಲೆಯನ್ನು ನೆನೆಯುತ್ತಾ ರಾಜ ದುಷ್ಯಂತ ನಿಟ್ಟುಸಿರು ಬಿಡುತ್ತಿದ್ದಾನೆ.ಮನ್ಮಥನ ಪೀಡೆಗೊಳಗಾಗಿ ಅವನನ್ನು ಪ್ರಶ್ನಿಸುತ್ತಿರುವನು ಈ ಶ್ಲೋಕದಲ್ಲಿ. ನೀನು ಮತ್ತು ಚಂದ್ರರಿಬ್ಬರೂ ವಿಶ್ವಾಸಿಗಳೆಂದು ನಾನು ನಂಬಿದರೆ ನನ್ನಂತಹ ಕಾಮಿಜನರನ್ನು ನೀನು ಮೋಸಗೊಳಿಸುತ್ತಿರುವೆ. ಹೂವು ನಿನ್ನ ಬಾಣ.( ಅರವಿಂದ, ಅಶೋಕ,ಮಾವು,ಮಲ್ಲಿಗೆ, ನೀಲೋತ್ಪಲ ಅಥವಾ ನೈದಿಲೆ ಮನ್ಮಥನ ಐದು ಕುಸುಮಶರಗಳು) ಚಂದ್ರನ ಕಿರಣ ಎಂದಿಗೂ ತಂಪು. ಇವೆರಡೂ ನನ್ನ ವಿಷಯದಲ್ಲಿ ಸುಳ್ಳಾಗಿದೆ. ರಾತ್ರಿ ಆದ ಹಾಗೆ ಉಂಟಾಗುವ ಚಂದ್ರನ ಬೆಳದಿಂಗಳನ್ನು ನೋಡುತ್ತಾ ನನ್ನ ಪ್ರಿಯೆಯ ನೆನಪು ಒತ್ತರಿಸಿ ಬರುತ್ತಿದೆ.ಆ ವಿರಹದಿಂದ ಚಂದ್ರನ ಕಿರಣಗಳು ಬೆಂಕಿಯನ್ನು ಸುರಿಸುತ್ತಿವೆಯೇನೋ ಎಂಬಂತೆ ಕಾಮಾಗ್ನಿ ಮೈಯೆಲ್ಲ ಆವರಿಸಿ ಸುಡುತ್ತಿದೆ. ಹಾಗಾಗಿ ಚಂದ್ರನ ಬೆಳದಿಂಗಳು ನನ್ನ ಪಾಲಿಗೆ ಬೆಂಕಿಯಂತಿದೆ. ಇನ್ನು ಪುಷ್ಪಗಳನ್ನು ನೋಡುತ್ತಾ ಅಥವಾ ನಿನ್ನ ಪ್ರಭಾವದಿಂದ ನೋಡಿ ಮತ್ತೆ ಆ ನನ್ನ ಮನದನ್ನೆಯ ಕೋಮಲ ಅಂಗಾಂಗಗಳ ಹಾಗೂ ಸುಂದರ ಮುಖದ ಸ್ಮರಣೆ ಬಂದು ನನ್ನ ವಿರಹ ವೇದನೆ ಹೆಚ್ಚುವುದೇ ಹೊರತು ಕಡಿಮೆಯಾಗುತ್ತಿಲ್ಲ. ಹೀಗಾಗಿ ಆ ನಿನ್ನ ಹೂವಿನ ಬಾಣಗಳು ನನ್ನ ಪಾಲಿಗೆ ವಜ್ರಾಯುಧದಂತೆ ಕಠೋರವಾಗಿ ನನ್ನೆದೆಯನ್ನು ಇರಿಯುತ್ತಿವೆ. ಕಾಮನನ್ನೂ ಚಂದ್ರನನ್ನೂ ನಿಂದಿಸುವ ನೆಪದಿಂದ ತನ್ನ ವಿರಹ ತಾಪವನ್ನು ದುಷ್ಯಂತನ ಮಾತು ಸೂಚಿಸುತ್ತಿದೆ. ಉಪಮಾ,ಕಾವ್ಯಲಿಂಗ,ರೂಪಕ,ಯಥಾಸಂಖ್ಯ ಹೀಗೆ ನಾಲ್ಕು ಅಲಂಕಾರಗಳು. ಅವನ ಮನವಿಡೀ ತುಂಬಿರುವ ಶಕುಂತಲೆ ದುಷ್ಯಂತನಿಂದ ಹೀಗೆ ಹೇಳಿಸುತ್ತಿರುವಳೇನೊ!_
📜ಸಂಗ್ರಹ ✍ಲೇಖನ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ