🌺ಅವಿಮಾರಕದ ಒಂದು ಸುಮ🌺
*ವ್ಯಾಮೃಷ್ಟ ಸೂರ್ಯತಿಲಕೊ ವಿತತೊಡುಮಾಲೊ ನಷ್ಟಾತಪೋ ಮೃದುಮನೋಹರ ಶೀತವಾತ: / ಸಂಲೀನಕಾಮುಕಜನ: ಪ್ರವಿಕೀರ್ಣಶೂರೊ ವೇಷಾಂತರಂ ರಚಯತೀವ ಮನುಷ್ಯಲೋಕ:||*
_ನಾಯಕನು ರಾತ್ರಿಯ ಕಾಲವನ್ನು ವರ್ಣಿಸುತ್ತಿರುವನು. ಅಂಬರವು ಸೂರ್ಯನೆಂಬ ಕೆಂಪು ತಿಲಕವನ್ನು ಅಳಿಸಿಕೊಂಡಿದೆ. ( ಯಾರೊ ಒಬ್ಬಳು ಕಾಮಿನಿ ಪ್ರಿಯನನ್ನು ಭೇಟಿಯಾಗಲು ಹಣೆ ಕುಂಕುಮವನ್ನು ಅಳಿಸಿ ಹೊರಟಿದ್ದಾಳೆ) ಗಗನವು ನಕ್ಷತ್ರಗಳ ಮಾಲೆಯನ್ನು ಧರಿಸಿದೆ. ( ಪ್ರಿಯೆಯೊಬ್ಬಳು ಹಾರ ಮುಂತಾದವುಗಳನ್ನು ಧರಿಸಿ ಪ್ರಿಯನಿಗಾಗಿ ಹೊರಟಿದ್ದಾಳೆ. ) ಪ್ರಕೃತಿಯು ಸಹಕಾರಿಯಾಗಿದೆ. ಬಿಸಿಲು ಕಳೆದು ತಂಪಾದ ಮಂದಮಾರುತ ಬೀಸುತ್ತಿದೆ.( ಸಮಾಗಮಕ್ಕೆ ಪೂರಕ ವಾತಾವರಣ) ನಾನಾ ಬಯಕೆಗಳನ್ನು ಹೊಂದಿದ ಪ್ರಾಣಿ ಸಮೂಹ ಮನೆ ಗೂಡು ಮುಂತಾದವುಗಳನ್ನು ಸೇರಿಕೊಂಡಿತು. ( ಹೊರಗೆ ತೆರಳಿದವರು ತಮ್ಮ ತಮ್ಮ ಜನರನ್ನು ಸೇರಿ ಕೃತಾರ್ಥರಾದರು. ) ಹೀಗೆ ಈ ಮನುಷ್ಯರ ಲೋಕವು ಒಂದು ವೇಷವನ್ನು ಕಳಚಿ ಇನ್ನೊಂದು ವೇಷವನ್ನು ಧರಿಸಿದೆ ಆಕಾಶದಂತೆ. ನಾವು ಪ್ರತಿದಿನವೂ ಅನೇಕ ವೇಷಗಳನ್ನು ತಾಳಿ ವಿಶ್ವವೆಂಬ ನಾಟಕರಂಗದಲ್ಲಿ ಅಭಿನಯಿಸುವ ಪ್ರಯತ್ನ ಮಾಡುತ್ತೇವೆ ಅಲ್ಲವೇ!_
📜ಸಂಗ್ರಹ ✍ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ