🌹ಅವಿಮಾರಕದ ಸುಂದರ ಕುಸುಮ🌹
*ಗೋಷ್ಠೀಷು ಹಾಸ್ಯ: ಸಮರೇಷು ಯೋಧ: ಶೋಕೇ ಗುರು: ಸಾಹಸಿಕ: ಪರೇಷು | ಮಹೋತ್ಸವೋ ಮೇ ಹೃದಿ ಕಿಂ ಪ್ರಲಾಪೈ: ದ್ವಿಧಾ ವಿಭಕ್ತಂ ಖಲು ಮೇ ಶರೀರಮ್ ||*
_ಅವಿಮಾರಕನು ತನ್ನ ಮಿತ್ರನನ್ನು ನೆನೆದು ಅವನ ಬಗೆಗೆ ಹೇಳಿಕೊಳ್ಳುವ ಪರಿ. ಸಭೆಯಲ್ಲಿ ಸದಾ ಹಾಸ್ಯದಿಂದ ನನ್ನನ್ನು ನಗಿಸುತ್ತಿದ್ದ,ಯುದ್ಧದಲ್ಲಿ ಯೋಧನಾಗಿ ಜೊತೆಗೆ ಕಾದಾಡುತ್ತಿದ್ದ, ನಾನು ದು:ಖದಲ್ಲಿದ್ದಾಗ ಉಪದೇಶಗಳಿಂದ ಸಾಂತ್ವನ ಹೇಳಿ ಗುರುವಿನ ಕಾರ್ಯ ಮಾಡುತ್ತಿದ್ದ,ಶತ್ರುಗಳು ಇದಿರಾದಾಗ ಸಾಹಸ ಮೆರೆಯುತ್ತಿದ್ದ, ನನ್ನ ಪಾಲಿಗೆ ಮಹೋತ್ಸವದಂತಿದ್ದ ,ಹೆಚ್ಚೇನು ಹೇಳಲಿ ನನ್ನ ಇನ್ನೊಂದು ಶರೀರದಂತಿರುವ ಅಥವಾ ಈ ಶರೀರದ ಇನ್ನೊಂದು ಭಾಗದಂತಿರುವ ಈ ವಿದೂಷಕ ಈಗ ಎಲ್ಲಿರುವನೋ ಕಾಣೆ! ಇಲ್ಲಿ ವಿದೂಷಕನಿಗೂ ರಾಜಪುತ್ರನಿಗೂ ಇರುವ ಆತ್ಮೀಯತೆ ತೋರುತ್ತದೆ. ರಾಜನ ಜೊತೆಗೆ ಎಲ್ಲಾ ಸಂದರ್ಭಗಳಲ್ಲಿ ಭಾಗಿಯಾಗಿದ್ದ ಅವನಿಗೆ ಆಪ್ತ ಮಿತ್ರನಾಗಿದ್ದ ವಿದೂಷಕ ಕಾಣದಾದಾಗ ರಾಜ ಚಡಪಡಿಸಿದ ರೀತಿ. ಸಭೆ ನಡೆಯುತ್ತಿದ್ದಾಗ ತನ್ನ ತೀಕ್ಷ್ಣ ಹಾಗೂ ಮೊನಚಾದ ಮಾತುಗಳಿಂದ ಹಾಸ್ಯ ಮಾಡುತ್ತಾ ಸಭ್ಯರನ್ನು ಎಚ್ಚರಿಸುತ್ತಿದ್ದ,ರಾಜನು ಯುದ್ಧಕ್ಕೆ ಹೊರಟರೆ ಜಾತಿಯಿಂದ ಬ್ರಾಹ್ಮಣನಾದರೂ ಹೋರಾಡುತ್ತಿದ್ದ, ರಾಜನು ಶೋಕದಲ್ಲಿದ್ದಾಗ ಸಾಂತ್ವನ ಹೇಳಿ ಗುರುವಿನಂತೆಯೇ ಸಂತೈಸುತ್ತಿದ್ದ,ಆಕಸ್ಮಿಕವಾಗಿ ಶತ್ರುಗಳು ಎದುರಾದಾಗ ರಾಜನ ಜೊತೆಗೂಡಿ ಸಾಹಸ ಪ್ರದರ್ಶಿಸುತ್ತಿದ್ದ,ರಾಜನ ಪಾಲಿಗೆ ಸದಾ ಒಂದು ಆನಂದದ ಚಿಲುಮೆಯಂತೆ ಅಥವಾ ದೊಡ್ಡ ಉತ್ಸವದಂತೆ ಇದ್ದನು ವಿದೂಷಕ. ಇನ್ನೂ ಹೇಳಬೇಕೆಂದರೆ ರಾಜನ ಶರೀರದ ಎರಡನೆಯ ಭಾಗದಂತಿದ್ದ. ರಾಜನ ಪಾಲಿಗೆ ಎಲ್ಲವೂ ಆಗಿದ್ದನು. ಇಲ್ಲಿ ಅವರ ಸ್ವಚ್ಛ ಮೈತ್ರಿಯನ್ನು ಕಾಣಬಹುದು. ರಾಜನಿಗೆ ತಾನು ಉನ್ನತ ಸ್ಥಾನದಲ್ಲಿ ಇರುವವನು ಎಂಬ ಅಹಂಕಾರವಿಲ್ಲ.ಹಾಗೆಯೇ ಮೈತ್ರಿ ಗಾಢವಾಗಿರುವುದರಿಂದ ವಿದೂಷಕನಿಗೆ ಉಳಿದವರಿಗಿಂತ ಹೆಚ್ಚು ಸಲಿಗೆ ಇದೆ ರಾಜನಲ್ಲಿ. ರಾಜನ ಸಂತೋಷಕ್ಕಾಗಿ ಅವನು ಏನನ್ನಾದರೂ ಮಾಡಲು ಸಿದ್ಧನಿದ್ದಾನೆ. ಇಂತಹ ಅಪರೂಪದ ಗೆಳೆತನ ನಮಗೂ ಯಾರಲ್ಲಾದರೂ ಸಿಕ್ಕೀತೇ! ಗೆಳೆತನಕ್ಕೆ ಸಾಟಿ ಬೇರೊಂದಿಲ್ಲ. ಅರ್ಜುನ ಕೃಷ್ಣರ ಗೆಳೆತನವೂ ಹೀಗೆ ಇತ್ತು._
ಸಂಗ್ರಹ📜✍ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ