🌺ಅವಿಮಾರಕದ ಸುಂದರ ಸುಮ🌺

*ದೃಷ್ಟಿರ್ನತೃಪ್ಯತಿ ಪರಿಷ್ವಜತೀವ ಸಾಂಗಂ ಬುದ್ಧಿಸ್ತ್ವರಾಂ ವ್ರಜತಿ ಬೋಧಯತೀವ ಸುಪ್ತಾಮ್ / ರಾಗೋಭಿಚೋದಯತಿ ಸಾದಯತೀವ ಚಾಂಗಂ ಹರ್ಷಾತ್ ಪ್ರಸೀದತಿ ವಿಮುಹ್ಯತಿ ಚಾಂತರಾತ್ಮಾ||*

 _ನಾಯಕನು ನಡುರಾತ್ರಿ ಕಳ್ಳ ದಾರಿಯಲ್ಲಿ ರಾಜಪುತ್ರಿಯ ವಾಸಸ್ಥಾನ ತಲುಪಿದ್ದಾನೆ. ಅವಳನ್ನು ನೋಡುತ್ತಾ ತನ್ನನ್ನು ತಾನು ಮರೆಯುತ್ತಿದ್ದಾನೆ. ಎಷ್ಟು ಸಲ ನೋಡಿದರೂ ಕಣ್ಣುಗಳು ತೃಪ್ತಿಯನ್ನು ಹೊಂದುತ್ತಿಲ್ಲ.ಆ ದೃಷ್ಟಿಯೇ ಪ್ರಿಯಳ ಶರೀರವನ್ನು ಆಲಿಂಗಿಸುವಂತಿದೆ. ( ಕೆಲವರ ನೋಟ ಕುಡಿದುಬಿಡುವಂತಿದೆ ಎಂದು ಹೇಳುವಂತೆ) ಬುದ್ಧಿಯು ಅವಸರದಿಂದ ಪ್ರಚೋದಿಸುತ್ತಿದೆ ಸುಖನಿದ್ರೆಯಲ್ಲಿರುವ ಪ್ರಿಯೆಯನ್ನು ಎಚ್ಚರಿಸುವಂತೆ. ಅವಳ ಮೇಲಿನ ಅನುರಾಗವು ಅಲೆ ಅಲೆಯಾಗಿ ಆವರಿಸುತ್ತಿದೆ. ಅಂಗಾಂಗಗಳ ನಿಯಂತ್ರಣ ಕಳೆದುಹೋಗಿ ಅವುಗಳು ಕಷ್ಟವನ್ನನುಭವಿಸುತ್ತಿವೆ. ಅತಿಯಾದ ಸಂತೋಷವು ಮನದಲ್ಲಿ ಭಾವನೆಗಳನ್ನು ಬಡಿದೆಬ್ಬಿಸುತ್ತಿದೆ. ಹಾಗೆಯೇ ಅತಿ ಆನಂದವು ಮೋಹವನ್ನು ಅಥವಾ ಮೂರ್ಛೆಯನ್ನೂ ತಂದುಕೊಡುತ್ತಲಿದೆ. ಬಹಳ ಸಮಯದ ನಂತರ ಅನುಭವಿಸಿದ ಪ್ರಿಯಳ ದರ್ಶನವು ನಾಯಕನ ಮೇಲೆ ಬೀರಿದ ಪರಿಣಾಮ ಕವಿಯ ಪದಗಳಲ್ಲಿ ಮೂಡಿಬಂದ ರೀತಿ ಇದು. ಏನು ಮಾಡಬೇಕೆಂದು ತೋಚದೇ ಮಂಕುಬಡಿದಿರುವನಂತೆ ನಿಂತಿರುವನು ಅವಿಮಾರಕ._


📜ಸಂಗ್ರಹ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩