🌹ಶಾಕುಂತಲದ ಮಕರಂದ:🌹

 *ಪ್ರಾಹುರ್ದ್ವಾದಶಧಾ ಸ್ಥಿತಸ್ಯ ಮುನಯೋ ಯತ್ತೇಜಸ: ಕಾರಣಂ ಭರ್ತಾರಂ ಭುವನತ್ರಯಸ್ಯ ಸುಷುವೇ ಯದ್ಯಜ್ಞಭಾಗೇಶ್ವರಮ್/ ಯಸ್ಮಿನ್ನಾತ್ಮಭವ: ಪರೋಪಿ ಪುರುಷಶ್ಚಕ್ರೇ ಭವಾಯಾಸ್ಪದಂ ದ್ವಂದ್ವಂ ದಕ್ಷಮರೀಚಿಸಂಭವಮಿದಂ ತತ್ಸ್ರಷ್ಟುರೇಕಾಂತರಮ್||*

 _ದುಷ್ಯಂತನು ಕಶ್ಯಪದಂಪತಿಗಳ ಕುರಿತು ಹೇಳುವ ಮಾತು. ಯಾರನ್ನು ಮುನಿಗಳು ಹನ್ನೆರಡು ಭಾಗವಾಗಿ ನಿಂತ ತೇಜಸ್ಸಿನ ಕಾರಣವೆಂದು ಹೇಳುವರೋ,( ದ್ವಾದಶಾದಿತ್ಯರು ಕಶ್ಯಪ- ಅದಿತಿ ಪುತ್ರರು)  ಯಾರು ಯಜ್ಞ ಭಾಗವನ್ನು ಸ್ವೀಕರಿಸುವ ಮೂರು ಲೋಕಗಳ ಒಡೆಯನನ್ನು ಹಡೆದರೋ,( ಇಂದ್ರ ಯಜ್ಞಾಹುತಿ ಸ್ವೀಕರಿಸುವವ) ,ಯಾರಲ್ಲಿ ಬ್ರಹ್ಮನಿಗೂ ಮಿಗಿಲಾದ ಪರಮಪುರುಷನೂ ಕೂಡ ತನ್ನ ಅವತಾರಕ್ಕೆ ಆಸ್ಪದ ನೀಡಿದನೋ,(ವಾಮನಾವತಾರದ),ದಕ್ಷ ಮತ್ತು ಮರೀಚಿಗಳಿಂದ ಹುಟ್ಟಿದ ಪ್ರಜಾಪತಿಯ ನಂತರದ ಆ ಶ್ರೇಷ್ಠ ದಂಪತಿಗಳು ಇವರಲ್ಲವೇ?  ಅವರಿಗೆ ಅವರ ಶ್ರೇಷ್ಠತೆಗೆ ಸಾಟಿಯೇ ಇಲ್ಲ ಎನ್ನುವ ಭಾವ.( ದಕ್ಷನ ಮಗಳು ಅದಿತಿ,ಮರೀಚಿಯ ಮಗ ಕಶ್ಯಪ)  ಸೃಷ್ಟಿಕರ್ತನ ನಿಕಟ ಸಂಬಂಧ ಅವರ ಶ್ರೇಷ್ಠತೆಯ ಸೂಚಕ. ಉದಾತ್ತ ಮತ್ತು ವಿರೋಧಾಭಾಸ ಅಲಂಕಾರ._

 📜ಸಂಗ್ರಹ ✍ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩