🌹ಶಾಕುಂತಲದ ಸುಂದರ ಶ್ಲೋಕ:🌹
*ಪ್ರಾಣಾನಾಮನಿಲೇನ ವೃತ್ತಿರುಚಿತಾ ಸತ್ಕಲ್ಪವೃಕ್ಷೆ ವನೆ ತೋಯೇ ಕಾಂಚನಪದ್ಮರೇಣುಕಪಿಶೆ ಧರ್ಮಾಭಿಷೇಕಕ್ರಿಯಾ, ಧ್ಯಾನಂ ರತ್ನಶಿಲಾತಲೇಷು ವಿಭುಧಸ್ತ್ರೀಸನ್ನಿಧೌ ಯತ್ಕಾಂಕ್ಷಂತಿ ತಪೋಭಿರನ್ಯಮುನಯಸ್ತಸ್ಮಿನ್ತಪಸ್ಯನ್ತ್ಯಮೀ||*
_ದುಷ್ಯಂತನು ಮಾರೀಚಮಹರ್ಷಿಗಳ ಆಶ್ರಮದ ಸ್ಥಿತಿಯನ್ನು ಹೇಳುತ್ತಿದ್ದಾನೆ. ಕೇಳಿದ್ದೆಲ್ಲವನ್ನು ಕೊಡುವ ಕಲ್ಪವೃಕ್ಷಗಳಿಂದ ತುಂಬಿದ ವನಗಳಲ್ಲಿ ಜೀವಿಸಲು ಅಗತ್ಯವಿರುವಷ್ಟು ಗಾಳಿಯನ್ನು ಮಾತ್ರ ಸ್ವೀಕರಿಸಿ ತಪಸ್ಸು ಮಾಡುತ್ತಿರುವರು ಋಷಿಗಳು. ಬಂಗಾರದ ಕಮಲಗಳ ಧೂಳಿಯಿಂದ ಕೇಸರಿಬಣ್ಣವುಳ್ಳ ನೀರಿನಲ್ಲಿ ಧರ್ಮಾಚರಣೆಗಾಗಿ ಮಾತ್ರ ಸ್ನಾನ ಮಾಡುತ್ತಿರುವರು. ರತ್ನದ ಹಾಸುಗಲ್ಲಿನ ಮೇಲೆ ಕುಳಿತು ಧ್ಯಾನ ಮಾಡುತ್ತಿರುವರು ದೇವನನ್ನು, ಲೋಕಸ ಸೌಂದರ್ಯ ಕೇಂದ್ರೀಕೃತವಾದಂತಿರುವ ದೇವಸ್ತ್ರೀಯರು ಸಮೀಪದಲ್ಲಿದ್ದರೂ ಸಂಯಮದಿಂದಿರುವರು. ಬೇರೆಯವರು ತಪಸ್ಸಿನಿಂದ ಏನನ್ನು ಪಡೆಯಬೇಕೆಂದು ಅಪೇಕ್ಷಿಸುವರೋ ಅವೆಲ್ಲ ಸಮೀಪದಲ್ಲಿದ್ದರೂ ಇವರು ತಪಸ್ಸನ್ನೇ ಜೀವಿಕೆಯಾಗಿ ಮಾಡಿಕೊಂಡಿದ್ದಾರೆ. ನಿಜಕ್ಕೂ ಆಶ್ಚರ್ಯ. ಬಹುಶಃ ಎಲ್ಲವೂ ಸಿಕ್ಕಾಗ ವೈರಾಗ್ಯ ಸ್ವಭಾವ ತನ್ನಿಂದ ತಾನಾಗಿ ಬರುವುದೇನೋ. ನಮಗೆ ದೀರ್ಘಕಾಲನಿದ್ರಿಸಿದರೂ ಬಗೆಬಗೆಯ ಭಕ್ಷ್ಯ ಸವಿದರೂ ಸಾಕಷ್ಟು ರಮಿಸಿದರೂ ಬಯಸಿದ್ದೆಲ್ಲ ದೊರಕಿದರೂ ನಮ್ಮಯ ಆಸೆಗಳು ತಣಿಯುವುದಿಲ್ಲವೇನೋ. ಅಂತಹುದರಲ್ಲಿ ಎಲ್ಲ ಎದುರಿಗಿದ್ದರೂ ವೈರಾಗ್ಯ ತಾಳುವ ಮುನಿಗಳ ಮನಸ್ಥಿತಿ ಎಷ್ಟು ದೊಡ್ಡದು. ನಾವು ಬಯಕೆಗಳನ್ನು ನಿಯಂತ್ರಿಸಿ ಸಂತೋಷ ಅನುಭವಿಸೋಣ ನಿತ್ಯತೃಪ್ತರಾಗೋಣ._
📜ಸಂಗ್ರಹ.-✍ ಶ್ರೀನಿಧಿ ಅಭ್ಂಕರ್.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ